Brain Teaser: 5ಕ್ಕೆ 5 ಕೂಡಿಸಿ 5 ರಿಂದ ಗುಣಿಸಿದ್ರೆ ಎಷ್ಟಾಗುತ್ತೆ? ಗಣಿತ ಇಷ್ಟ ಅನ್ನೋರು ಥಟ್ಟಂತ ಉತ್ತರ ಹೇಳಿ
ಗಣಿತ ಹಲವರಿಗೆ ಕಬ್ಬಿಣದ ಕಡಲೆ. ಇನ್ನೂ ಕೆಲವರಿಗೆ ಸಿಹಿಯಾದ ಪಾನಕದಂತೆ. ನಿಮಗೆ ಗಣಿತ ಫೇವರಿಟ್ ಸಬ್ಜೆಕ್ಟ್ ಆದ್ರೆ ಇಲ್ಲಿರುವ ಪಜಲ್‌ಗೆ ಥಟ್ಟಂತ ಉತ್ತರ ಹೇಳಿ. ಗಣಿತದಲ್ಲಿ ನೀವೆಷ್ಟು ಶಾರ್ಪ್ ನೋಡೋಣ. ಹಾಗಾದ್ರೆ 5ಕ್ಕೆ 5 ಕೂಡಿಸಿ 5 ರಿಂದ ಗುಣಿಸಿದ್ರೆ ಎಷ್ಟಾಗುತ್ತೆ?
ಸಾಮಾಜಿಕ ಮಾಧ್ಯಮಗಳಲ್ಲಿ ಬ್ರೈನ್ ಟೀಸರ್ ಹಾಗೂ ಆಪ್ಟಿಕಲ್ ಇಲ್ಯೂಷನ್‌ಗಳನ್ನು ಪೋಸ್ಟ್ ಮಾಡುವ ಹಲವು ಪುಟಗಳಿವೆ. ಇವುಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾದ, ಟ್ರಿಕ್ಕಿ ಎನ್ನಿಸುವ ಬ್ರೈನ್ ಟೀಸರ್‌ಗಳನ್ನ ಹಂಚಿಕೊಳ್ಳಲಾಗುತ್ತದೆ. ಇಂತಹ ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ನೀಡುವಂತಿರುವುದು ಸುಳ್ಳಲ್ಲ.
ಇಲ್ಲೊಂದು ಗಣಿತದ ಪಜಲ್ ಇರುವ ಬ್ರೈನ್ ಟೀಸರ್ ಇದೆ. ಮೇಲ್ನೋಟಕ್ಕೆ ನೋಡಲು ಸುಲಭ ಗಣಿತದಂತೆ ಕಂಡರೂ ಇದಕ್ಕೆ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸುಲಭವಲ್ಲ. ಈ ಚಿತ್ರದಲ್ಲಿ ಪ್ರಶ್ನೆಯೊಂದಿಗೆ ನಾಲ್ಕು ಉತ್ತರವನ್ನೂ ನೀಡಲಾಗಿದೆ. ಸರಿಯಾದ ಉತ್ತರ ಯಾವುದು ಎಂಬುದನ್ನು ನೀವು ಕಂಡುಹಿಡಿಯಬೇಕು.
Pro Brain Teaser ಎಂಬ ಟ್ವಿಟರ್ ಪುಟದಲ್ಲಿ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್‌ನಲ್ಲಿ 5+5*5*0=? ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ನಾಲ್ಕು ಉತ್ತರಗಳನ್ನು ನೀಡಲಾಗಿದ್ದು ಎ) 0, ಬಿ) 4, ಸಿ) 8 ಹಾಗೂ ಡಿ) 5 ಎಂದು ಉತ್ತರ ಹೇಳಲಾಗಿದೆ. ಇದಕ್ಕೆ ಸರಿಯಾದ ಉತ್ತರ ಯಾವುದು ಎಂದು ನೀವು ಹೇಳಬೇಕು.
ಆಗಸ್ಟ್ 13 ರಂದು ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಇದಾಗಿದ್ದು ಈಗಾಗಲೇ 20 ಸಾವಿರದಷ್ಟು ಮಂದಿ ವೀಕ್ಷಿಸಿದ್ದಾರೆ. 570 ಮಂದಿ ಕಾಮೆಂಟ್ ಮಾಡಿದ್ದಾರೆ.
ಬಹುತೇಕರು ಈ ಬ್ರೈನ್ ಟೀಸರ್‌ಗೆ 5 ಉತ್ತರ ಎಂದು ತಿಳಿಸಿದ್ದರೆ ಕೆಲವರು 0 ಎಂದಿದ್ದಾರೆ. ಹಾಗಾದರೆ ಇದಕ್ಕೆ ನಿಮ್ಮ ಉತ್ತರವೇನು?
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ನಿಮ್ಮ ಮೈಂಡ್ ನಿಜಕ್ಕೂ ಶಾರ್ಪ್ ಇದ್ರೆ ʼಎʼಗೂ ʼಡಿʼಗೂ ಏನು ಸಂಬಂಧ ಹೇಳಿ? ಈ ಪ್ರಶ್ನೆ ಮೆದುಳಿಗೆ ಹುಳ ಬಿಡೋದು ಪಕ್ಕಾ
ಇಲ್ಲೊಂದು ಮೆದುಳಿಗೆ ಹುಳ ಬಿಡುವ ಪ್ರಶ್ನೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರು ನೀವಾದ್ರೆ ಇಂತಹ ಪ್ರಶ್ನೆಗಳನ್ನು ನೀವು ಎದುರಿಸಿರುತ್ತೀರಿ. ಇದಕ್ಕೆ ಉತ್ತರ ಹೇಳಲು ನೀವು ಸಾಕಷ್ಟು ಯೋಚನೆ ಮಾಡಬೇಕಾಗುತ್ತೆ, ಹಾಗಾದರೆ ʼಎʼಗೂ ʼಡಿʼಗೂ ಏನು ಸಂಬಂಧ ಹೇಳಿ.
Brain Teaser: ವೃತ್ತದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ಗಣಿತ ಪ್ರೇಮಿಗಳು 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕೆ ಪ್ರಯತ್ನಿಸಿ
ಗಣಿತದ ಸೂತ್ರಗಳಿಗೆ ಉತ್ತರ ಹುಡುಕಲು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಆದರೆ ಕೆಲವು ಗಣಿತಪ್ರೇಮಿಗಳು ಈ ಸೂತ್ರಗಳಿಗೆ ಥಟ್ಟಂತ ಉತ್ತರ ಹೇಳುತ್ತಾರೆ. ಇಲ್ಲೊಂದು ಗಣಿತದ ಪಜಲ್ ಇದೆ. ಇದರಲ್ಲಿ ಒಂದು ನಂಬರ್ ಮಿಸ್ ಆಗಿದೆ. ಆ ನಂಬರ್ ಯಾವುದು ಎಂದು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು.