Brain Teaser: 2+3=10, 6+5=66, 7+2=63 ಆದ್ರೆ 4+7= ಎಷ್ಟು? ಲೆಕ್ಕದಲ್ಲಿ ಪಕ್ಕಾ ಇದ್ರೆ ಪಟ್ ಅಂತ ಉತ್ತರ ಹೇಳಿ
ಸಂಡೇ ಹೇಗಪ್ಪಾ ಟೈಮ್ ಪಾಸ್ ಮಾಡೋದು, ಹೊರಗಡೆ ಹೋಗೋಕು ಬೇಜಾರು ಅನ್ನೋರ ಲಿಸ್ಟ್‌ನಲ್ಲಿ ನೀವೂ ಇದ್ರೆ ನಿಮಗಾಗಿ ಇಲ್ಲಿದೆ ಒಂದು ಬೇಸರ ಕಳೆಯುವ ಪಜಲ್. ಇದೊಂದು ಕೂಡಿಸುವ ಲೆಕ್ಕವಾದ್ರೂ 4+7 ಎಷ್ಟು ಎಂದು ಹೇಳೋಕೆ ನೀವು ಖಂಡಿತ ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತೆ, ಗಣಿತಪ್ರೇಮಿಗಳು ಟ್ರೈ ಮಾಡಿ ನೋಡೋಣ.
ಗಣಿತದ ಪಜಲ್‌ಗಳು ನೋಡೋಕೆ ಸುಲಭದಂತೆ ಕಂಡರೂ ಇವುಗಳಿಗೆ ಉತ್ತರ ಹೇಳೋದು ಖಂಡಿತ ಸುಲಭದ ಮಾತಲ್ಲ. ಇಲ್ಲೊಂದು ಅಂಥದ್ದೇ ಬ್ರೈನ್ ಟೀಸರ್ ಇದೆ. ಇದರಲ್ಲಿರುವುದು ಕೇವಲ ಕೂಡಿಸುವ ಲೆಕ್ಕಾ, ಆದ್ರೂ ಇದರ ಉತ್ತರಗಳು ನಿಮಗೆ ಮೆದುಳಲ್ಲಿ ಹುಳ ಹರಿಯುವಂತೆ ಮಾಡುವುದು ಖಂಡಿತ.
ಭಾನುವಾರ ಖಾಲಿ ಕೂತವರಿಗೆ ಈ ಬ್ರೈನ್ ಟೀಸರ್ ಒಳ್ಳೆ ಟೈಮ್‌ಪಾಸ್ ಆಗೋದು ಖಂಡಿತ. ಯಾಕಂದ್ರೆ ಇದಕ್ಕಾಗಿ ನೀವು ಸಾಕಷ್ಟು ಯೋಚಿಸಬೇಕು, ಖಂಡಿತ ಸುಲಭವಾಗಿ ಇದಕ್ಕೆ ಉತ್ತರ ಹೇಳಲು ಸಾಧ್ಯವಿಲ್ಲ, ಹಾಗಂತ ಗಂಟೆಗಟ್ಟಲೆ ಯೋಚಿಸಿ ಉತ್ತರ ಹೇಳುವಂತೆಯೂ ಇಲ್ಲ. ಪಟ್ ಅಂತ ಉತ್ತರ ಹೇಳಿದ್ರೆ ನೀವು ಖಂಡಿತ ಜಾಣರು. ಹಾಗಾದ್ರೆ ಇಲ್ಲಿರುವ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?
ಟ್ವಿಟರ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್ ಅನ್ನು Brainy Bits Hub ಎಂಬ ಟ್ವಿಟರ್ ಪುಟ ನಿರ್ವಹಿಸುವವರು ಪೋಸ್ಟ್ ಮಾಡಿದ್ದಾರೆ. ‘ನಿಮ್ಮಿಂದ ಉತ್ತರ ಹೇಳಲು ಸಾಧ್ಯವೇ?‘ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಬ್ರೈನ್ ಟೀಸರ್ ಚಿತ್ರದಲ್ಲಿ 2+3=10, 6+5=66, 8+4=96, 7+2= 63, ಆದ್ರೆ 4+7= ಎಷ್ಟು ಎಂದಿ ಬರೆಯಲಾಗಿದೆ.
ಆಗಸ್ಟ್ 30 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 9 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 340 ಕ್ಕೂ ಹೆಚ್ಚು ಜನ ತಾವು ಕಂಡುಕೊಂಡ ಉತ್ತರ ಕಾಮೆಂಟ್ ಮಾಡಿದ್ದಾರೆ.
44 ಎಂದು ಬಹಳಷ್ಟು ಮಂದಿ ಈ ಬ್ರೈನ್ ಟೀಸರ್‌ಗೆ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು 36 ಎಂದಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ಯಾವುದು ಸರಿ ಉತ್ತರ, ನಿಮ್ಮ ಉತ್ತರ ಏನು ಕಾಮೆಂಟ್ ಮಾಡಿ.
ಈ ಬ್ರೈನ್ ಟೀಸರ್
Brain Teaser: ನಿಮ್ಮ ಕಣ್ಣು ಸಖತ್ ಶಾರ್ಪ್ ಇದ್ಯಾ? 4 ಸೆಕೆಂಡ್ ಒಳಗೆ ಚಿತ್ರದಲ್ಲಿ ಯಾವ ಮೀನು ಭಿನ್ನವಾಗಿದೆ ಕಂಡುಹಿಡಿಯಿರಿ
ನಿಮ್ಮ ಕಣ್ಣು ನಿಜಕ್ಕೂ ಹದ್ದಿನ ಕಣ್ಣಿನಷ್ಟೇ ಸೂಕ್ಷ್ಮವಾಗಿದೆ ಎಂದು ನಿಮಗೆ ಅನ್ನಿಸ್ತಾ ಇದ್ಯಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಇದರಲ್ಲಿ ಮೀನುಗಳು ಹಾಗೂ ಬಾಲ್‌ಗಳಿವೆ. ಇರುವ ಮೀನುಗಳಲ್ಲಿ ಒಂದೇ ಒಂದು ಭಿನ್ನವಾಗಿದೆ. ಅದು ಯಾವುದು ಎಂದು 4 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು.
Brain Teaser: ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು, ಥಟ್ಟಂತ ಅಂತ ಉತ್ತರ ಹೇಳಿ, ನೀವೆಷ್ಟು ಜಾಣರು ನೋಡೋಣ
ಮೆದುಳಿಗೆ ಸಾಕಷ್ಟು ಕೆಲಸ ಕೊಡೋಕೆ ನಿಮಗೆ ತುಂಬಾ ಇಷ್ಟನಾ, ನಿಮ್ಮ ಮೆದುಳು ತುಂಬಾ ಚುರುಕು ಅಂತ ಅನ್ನಿಸ್ತಾ ಇದ್ಯಾ, ಹಾಗಾದರೆ ಇಲ್ಲಿರುವ ಬ್ರೈನ್ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ. ನೀವು ಎಷ್ಟು ಜಾಣರು ಎಂಬುದನ್ನು ಚೆಕ್ ಮಾಡೋಣ.