ಕನ್ನಡ ಸುದ್ದಿ  /  Lifestyle  /  Viral News Brain Teaser Maths Puzzle This Brain Teaser Might Leave You Perplexed. Can You Solve It Social Media Rsa

Brain Teaser: ಈ ಗಣಿತದ ಪಜಲ್‌ ನಿಮ್ಮ ತಲೆಗೆ ಹುಳ ಬಿಡುವುದು ಪಕ್ಕಾ; ಜಾಣರಾದ್ರೆ ಇದಕ್ಕೆ ಉತ್ತರ ಹುಡುಕಿ

ನಾವೆಷ್ಟೇ ಬುದ್ಧಿವಂತರಿದ್ದರೂ ಗಣಿತದ ಕೆಲವು ಸವಾಲುಗಳು ತಲೆಗೆ ಹುಳ ಬಿಟ್ಟು ಬಿಡುತ್ತವೆ. ಎಷ್ಟೇ ಗುಣಿಸಿ, ಭಾಗಿಸಿ, ಕೂಡಿಸಿ, ಕಳೆದರೂ ಸರಿಯಾದ ಉತ್ತರ ಮಾತ್ರ ಸಿಗೋದೇ ಇಲ್ಲ. ಆದರೆ ಕೆಲವರಿಗೆ ಗಣಿತ ಸವಾಲು ಎಂದರೆ ನೀರು ಕುಡಿದಷ್ಟೇ ಸುಲಭ, ಅಂತಹವರಿಗಾಗಿ ಇಲ್ಲಿದೆ ಒಂದು ಪಜಲ್‌.

ಈ ಗಣಿತದ ಪಜಲ್‌ಗೆ ಉತ್ತರವೇನು?
ಈ ಗಣಿತದ ಪಜಲ್‌ಗೆ ಉತ್ತರವೇನು?

ನಿಮ್ಮ ಮೆದುಳು ಚೆನ್ನಾಗಿ ಕೆಲಸ ಮಾಡುತ್ತೆ. ಎಂಥಹ ಸವಾಲನ್ನು ಕೊಟ್ಟರೂ ನಾನು ಅದನ್ನು ಬಗೆಹರಿಸಬಲ್ಲೆ ಎಂಬ ಆತ್ಮವಿಶ್ವಾಸ ನಿಮಗಿದೆಯೇ..? ಇದಕ್ಕೆಲ್ಲ ನಿಮ್ಮ ಉತ್ತರ ಹೌದು ಎಂದಾದರೆ ಈಗ ನಿಮ್ಮ ಮೆದುಳಿನ ಚುರುಕನ್ನು ಪರೀಕ್ಷೆ ಮಾಡೋಕೆ ನಾವೊಂದು ಚಾಲೆಂಜ್​​ ನೀಡುತ್ತೇವೆ. ಇದನ್ನು ಬಗೆಹರಿಸಲು ನೀವು ಸಿದ್ಧರಿದ್ದೀರಾ..? ನೀವೆಷ್ಟು ಚುರುಕಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳೋಕೆ ಇನ್​ಸ್ಟಾಗ್ರಾಮ್​ನಲ್ಲಿರುವ ಪ್ರೈಮ್​ ಮ್ಯಾಥ್ಸ್​ ಕ್ವಿಜ್​​ ಒಂದು ಸವಾಲನ್ನು ನೀಡಿದೆ. ಈ ಸವಾಲನ್ನು ನೀವು ಥಟ್​ ಅಂತಾ ಬಿಡಿಸಿ ಸರಿಯಾದ ಉತ್ತರವನ್ನು ನೀಡಿದರೆ ನಿಮ್ಮ ಮೆದುಳು ಅತೀ ಬುದ್ಧಿವಂತ ಎಂಬ ಪ್ರಮಾಣಪತ್ರವನ್ನು ನಿಮಗೆ ನೀವೇ ಕೊಟ್ಟುಕೊಳ್ಳಬಹುದು.

ಈ ಸವಾಲಿನಲ್ಲಿ ನೀವು ಗಣಿತದ ಲೆಕ್ಕವನ್ನು ಬಿಡಿಸಬೇಕಿದೆ. ಎರಡು ಬೈಕ್​ಗಳ ಮೌಲ್ಯದ 36, ಎರಡು ಸ್ಕೂಟರ್​ಗಳ ಮೌಲ್ಯ 6 ಹಾಗೂ ಎರಡು ಸೈಕಲ್​ಗಳ ಮೌಲ್ಯ 8 ಆಗಿದ್ದರೆ ಅಂತಿಮವಾಗಿ ನೀವು ಒಂದು ಬೈಕ್​, ಒಂದು ಸ್ಕೂಟರ್​ನ್ನು ಸೇರಿಸಿ ಇದಕ್ಕೆ ಒಂದು ಸೈಕಲ್​ನ ಮೌಲ್ಯದವನ್ನು ಗುಣಿಸಿದರೆ ಒಟ್ಟೂ ಮೌಲ್ಯ ಎಷ್ಟು ಬರುತ್ತೆ ಅನ್ನೋದನ್ನು ನೀವು ಬಗೆಹರಿಸಬೇಕಿದೆ. ಈ ಸವಾಲಿಗೆ ನಿಮಗೆ ಥಟ್​ ಅಂತಾ ಉತ್ತರ ಕೊಡೋಕೆ ಸಾಧ್ಯವೇ..?

ಪ್ರೈಮ್​ ಮ್ಯಾಥ್ಸ್​ ಕ್ವಿಜ್​ ಇಂಥದ್ದೊಂದು ಸವಾಲನ್ನು ನೆಟ್ಟಿಗರಿಗೆ ನೀಡುತ್ತಿದ್ದಂತೆಯೇ ಕಮೆಂಟ್​ ಬಾಕ್ಸ್​ ತುಂಬಿ ಹೋಗಿದೆ. ಅನೇಕರು ತಮ್ಮ ತಮ್ಮ ರೀತಿಯಲ್ಲಿಯೇ ಕೂಡಿಸಿ, ಕಳೆದು, ಗುಣಿಸಿ, ಭಾಗಿಸಿ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಕೆಲವರು ಈ ಸವಾಲಿಗೆ ಉತ್ತರ 42 ಎಂದು ಹೇಳಿದರೆ ಇನ್ನೂ ಕೆಲವರು ಅರವತ್ತು ಹಾಗೂ ಅರವತ್ತನಾಲ್ಕು ಉತ್ತರ ಆಗಿರಬಹುದು ಎಂದು ಅಂದಾಜಿಸಿದ್ದಾರೆ.ಇನ್ನೂ ಕೆಲವರು ಇನ್ನೂ ಏನೇನೋ ಉತ್ತರಗಳನ್ನು ಕಮೆಂಟ್​ ಬಾಕ್ಸ್​ನಲ್ಲಿ ಹರಿಬಿಟ್ಟಿದ್ದಾರೆ. ಅಂದಹಾಗೆ ಈ ಪ್ರಶ್ನೆಗೆ ನಿಮ್ಮ ಉತ್ತರ ಏನು..?

ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವ ಮುನ್ನ ನೀವು ಬೈಕ್​, ಸ್ಕೂಟರ್​ ಹಾಗೂ ಸೈಕಲ್​ಗಳ ಮೌಲ್ಯವನ್ನು ಕಂಡು ಹಿಡಿಯಬೇಕಿದೆ. ಪ್ರಶ್ನೆಯಲ್ಲಿ ಎರಡು ಸ್ಕೂಟರ್​, ಬೈಕ್​ ಹಾಗೂ ಬೈಸಿಕಲ್​ನ ಮೌಲ್ಯವನ್ನು ನೀಡಲಾಗಿದೆ. ಮೊದಲು ನೀವು ಒಂದು ಸೈಕಲ್​, ಬೈಕ್​ ಹಾಗೂ ಸ್ಕೂಟರ್​ನ ಮೌಲ್ಯವನ್ನು ಸರಿಯಾಗಿ ಕಂಡು ಹಿಡಿಯಲು ಶಕ್ತರಾದಲ್ಲಿ ಮಾತ್ರ ಕೊನೆಯಲ್ಲಿ ಕೇಳಲಾದ ಪ್ರಶ್ನೆಗೆ ಸರಿಯಾದ ಉತ್ತರ ನೀಡಲು ನಿಮ್ಮಿಂದ ಸಾಧ್ಯವಾಗಲಿದೆ.

ಕೆಲವು ದಿನಗಳ ಹಿಂದೆಯಷ್ಟೇ ಇಂಥದ್ದೇ ಒಂದು ಗಣಿತದ ಸವಾಲು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು,. “5+5 ÷ 5+5”, ಈ ಪ್ರಶ್ನೆಗೆ ಉತ್ತರವೇನು ಎಂದು ಕೇಳಲಾಗಿತ್ತು. ಈ ಪ್ರಶ್ನೆಗೆ ಎರಡು ಆಯ್ಕೆಗಳನ್ನೂ ನೀಡಲಾಗಿತ್ತು. 10 ಅಥವಾ 11 ಇವುಗಳಲ್ಲಿ ಈ ಪ್ರಶ್ನೆಗೆ ನಿಮ್ಮ ಉತ್ತರ ಏನು ಎಂದು ಕೇಳಲಾಗಿತ್ತು. ಈ ಪ್ರಶ್ನೆಗೂ ಸಹ ಕಮೆಂಟ್​ ಬಾಕ್ಸ್​​ನಲ್ಲಿ ಬಂದ ಕಮೆಂಟ್​ಗಳನ್ನು ನೋಡುತ್ತಿದ್ದರೆ ಅನೇಕರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ ಅನ್ನೋದಂತೂ ಧೃಡವಾದಂತೆ ಇತ್ತು.

ವಿಭಾಗ