Brain Teaser: 5-4=3, 7-16=3 ಆದ್ರೆ 3–9= ಎಷ್ಟು? ಗಣಿತದಲ್ಲಿ ನೀವು ಏಕ್ಸ್‌ಪರ್ಟ್ ಆದ್ರೆ ಈ ಪ್ರಶ್ನೆಗೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ-viral news brain teaser of 5 minus 4 equals 3 7 minus 16 equals to 3 then 3 minus 9 equals to how much rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 5-4=3, 7-16=3 ಆದ್ರೆ 3–9= ಎಷ್ಟು? ಗಣಿತದಲ್ಲಿ ನೀವು ಏಕ್ಸ್‌ಪರ್ಟ್ ಆದ್ರೆ ಈ ಪ್ರಶ್ನೆಗೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: 5-4=3, 7-16=3 ಆದ್ರೆ 3–9= ಎಷ್ಟು? ಗಣಿತದಲ್ಲಿ ನೀವು ಏಕ್ಸ್‌ಪರ್ಟ್ ಆದ್ರೆ ಈ ಪ್ರಶ್ನೆಗೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತದ ಸೂತ್ರಗಳು ನೋಡಲು ಸುಲಭ ಎನ್ನಿಸಿದರೂ ಸರಿಯಾದ ಉತ್ತರ ಕಂಡುಹಿಡಿಯಲು ಖಂಡಿತ ಕಷ್ಟ ಪಡಬೇಕಾಗುತ್ತದೆ. ಇದಕ್ಕಾಗಿ ಬ್ರೈನ್ ಟೀಸರ್‌ಗಳಲ್ಲಿ ಗಣಿತ ಸೂತ್ರಗಳು ಹೆಚ್ಚಿರುತ್ತವೆ. ಇಲ್ಲೊಂದು ಅಂಥದ್ದೇ ಸೂತ್ರವಿದೆ. ಇದಕ್ಕೆ 5 ಸೆಕೆಂಡ್ ಒಳಗೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ ನೋಡಿ.

ಬ್ರೈನ್ ಟೀಸರ್‌
ಬ್ರೈನ್ ಟೀಸರ್‌

ಮೆದುಳಿಗೆ ಹುಳ ಬಿಟ್ಕೊಳೋದು ಅಂದ್ರೆ ನಿಮಗೆ ಇಷ್ಟನಾ, ಹಾಗಾದ್ರೆ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿ. ಈ ಬ್ರೈನ್ ಟೀಸರ್‌ಗಳು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುತ್ತವೆ. ಗಣಿತದ ಲೆಕ್ಕಚಾರ ಇರುವ ಈ ಚಿತ್ರದಲ್ಲಿರುವ ಸೂತ್ರ ನಿಮಗೆ ಸುಲಭ ಎನ್ನಿಸಬಹುದು. ಆದರೆ ಇದಕ್ಕೆ ಉತ್ತರ ಹುಡುಕುತ್ತಾ ಹೊರಟರೆ ನಿಮ್ಮ ಮೆದುಳಿಗೆ ಹುಳ ಬಿಟ್ಟಂತಾಗುವುದು ಖಂಡಿತ.

ಕಳೆಯುವ ಲೆಕ್ಕ ಇರುವ ಈ ಬ್ರೈನ್ ಟೀಸರ್ ಒಂಥರಾ ಟ್ರಿಕ್ಕಿ ಆಗಿದೆ.ಇದೇನಪ್ಪಾ ಇಷ್ಟು ಸಿಂಪಲ್ ಲೆಕ್ಕಾಚಾರಕ್ಕೆ ಇಷ್ಟೆಲ್ಲಾ ಹೇಳ್ತಾ ಇದಾರೆ ಅಂದ್ಕೊಬೇಡಿ, ಇದಕ್ಕೆ ನೀವು ಕೇವಲ 5 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ಅದು ನಿಮಗಿರುವ ಚಾಲೆಂಜ್‌.

Pro Brain Teaser ಎಂಬ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾಗಿರುವ ಈ ಬ್ರೈನ್ ಟೀಸರ್‌ನಲ್ಲಿ ಮ್ಯಾಥ್ಸ್ ಪಜಲ್ ಎಂದು ಶೇರ್ ಮಾಡಲಾಗಿದೆ. ಅದರಲ್ಲಿ ಒಂದು ವೇಳೆ 5–4=3, 9–9=6, 7–16=3 ಆದರೆ, 3–9= ಎಷ್ಟು ಎಂದು ಪ್ರಶ್ನೆ ಕೇಳಲಾಗಿದೆ.

ಆಗಸ್ಟ್ 15 ರಂದು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿತ್ತು. ಈಗಾಗಲೇ 1200ಕ್ಕೂ ಅಧಿಕ ಮಂದಿ ಈ ಪೋಸ್ಟ್ ವೀಕ್ಷಿಸಿದ್ದಾರೆ. ಕೆಲವರು ಲೈಕ್ ಮಾಡಿದ್ದರೆ, ಇನ್ನೂ ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರ ಹೇಳಲು ಟ್ರೈ ಮಾಡಿದ್ದಾರೆ.

ಕೆಲವರು ಈ ಬ್ರೈನ್ ಟೀಸರ್‌ಗೆ ಉತ್ತರ 2 ಎಂದು ಕಾಮೆಂಟ್ ಮಾಡಿದ್ದರೆ ಇನ್ನೂ ಕೆಲವರು 6, 0, 4 ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಈ ಗಣಿತ ಸೂತ್ರಕ್ಕೆ ಸರಿಯಾದ ಉತ್ತರವೇನು, 5 ಸೆಕೆಂಡ್ ಹೇಳಿ ನಿಮ್ಮ ಜಾಣತನ ತೋರಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಚಿತ್ರದಲ್ಲಿ ಒಂದೇ ಒಂದು ಭಿನ್ನವಾಗಿರುವ ಬಲ್ಬ್ ಇದೆ, ಅದು ಎಲ್ಲಿದೆ ಹೇಳಿ? ನಿಮಗಿರೋದು 3 ಸೆಕೆಂಡ್ ಸಮಯ, ಟ್ರೈ ಮಾಡಿ

ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ನಮ್ಮ ಕಣ್ಣು ನಮಗೆ ಮೋಸ ಮಾಡುವಂತೆ ಅನ್ನಿಸುವ ಈ ಚಿತ್ರಗಳು ಮೆದುಳನ್ನು ಚುರುಕು ಮಾಡುತ್ತವೆ. ಇಲ್ಲೊಂದು ಅಂಥದ್ದೇ ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಭಿನ್ನವಾಗಿರುವ ಬಲ್ಬ್ ಯಾವುದು ಎಂಬುದನ್ನು 3 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು, ಉತ್ತರ ಹೇಳಲು ಪ್ರಯತ್ನ ಮಾಡಿ.