Brain Teaser: ಗಣಿತದಲ್ಲಿ ನೀವು ಪಂಟರಾಗಿದ್ರೆ ನಿಮಗಿದೆ ಇಲ್ಲೊಂದು ಚಾಲೆಂಜ್‌, ಈ ಬ್ರೈನ್ ಟೀಸರ್‌ಗೆ ಉತ್ತರವೇನು, 10 ಸೆಕೆಂಡ್‌ನಲ್ಲಿ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಗಣಿತದಲ್ಲಿ ನೀವು ಪಂಟರಾಗಿದ್ರೆ ನಿಮಗಿದೆ ಇಲ್ಲೊಂದು ಚಾಲೆಂಜ್‌, ಈ ಬ್ರೈನ್ ಟೀಸರ್‌ಗೆ ಉತ್ತರವೇನು, 10 ಸೆಕೆಂಡ್‌ನಲ್ಲಿ ಹೇಳಿ

Brain Teaser: ಗಣಿತದಲ್ಲಿ ನೀವು ಪಂಟರಾಗಿದ್ರೆ ನಿಮಗಿದೆ ಇಲ್ಲೊಂದು ಚಾಲೆಂಜ್‌, ಈ ಬ್ರೈನ್ ಟೀಸರ್‌ಗೆ ಉತ್ತರವೇನು, 10 ಸೆಕೆಂಡ್‌ನಲ್ಲಿ ಹೇಳಿ

ಶಾಲಾ ದಿನಗಳನ್ನ ನೆನಪಿಸುವ ಬ್ರೈನ್ ಟೀಸರ್ ಚಿತ್ರವೊಂದು ಇಲ್ಲಿದೆ. ಇದರಲ್ಲಿ ಒಂದಿಷ್ಟು ಆಕೃತಿಗಳಿದ್ದು ಅದಕ್ಕೆ ಇಂತಿಷ್ಟು ಮೊತ್ತ ಎಂದು ನಿಗದಿ ಮಾಡಲಾಗಿದೆ. ಈ ಎಲ್ಲಾ ಆಕೃತಿಗಳ ಒಟ್ಟು ಮೊತ್ತ ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು. ಅದು ನಿಮಗಿರುವ ಚಾಲೆಂಜ್.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಇತ್ತೀಚಿನ ದಿನಗಳಲ್ಲಿ ಬ್ರೈನ್ ಟೀಸರ್‌ಗಳು ಹಲವರಿಗೆ ಫೇವರಿಟ್ ಆಗಿವೆ. ಟೈಮ್‌ಪಾಸ್ ಮಾಡಲು ಇದಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಇದು ಮೆದುಳಿಗೆ ಸವಾಲು ಹಾಕುವ ಜೊತೆಗೆ ನಮಗೆ ಮೋಜು ಸಿಗುವಂತೆ ಮಾಡುತ್ತದೆ. ಇದಕ್ಕೆ ಉತ್ತರ ಕಂಡುಹಿಡಿಯಲು ನಾವು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ ಎಂಬುದು ಸುಳ್ಳಲ್ಲ.

ಇಲ್ಲೊಂದು ಮೆದುಳಿಗೆ ಹುಳ ಬಿಡುವಂತಹ ಬ್ರೈನ್ ಟೀಸರ್ ಪ್ರಶ್ನೆ ಇದೆ. ಇದನ್ನು ಮೇಲ್ನೋಟಕ್ಕೆ ನೋಡಿದಾಗ ಶಾಲಾ ದಿನಗಳಲ್ಲಿ ಇಂತಹ ಪ್ರಶ್ನೆಗಳು ಗಣಿತದಲ್ಲಿ ಇರುವುದು ನೆನಪಿಗೆ ಬರಬಹುದು, ಹಾಗಂತ ಇದಕ್ಕೆ ಸುಲಭವಾಗಿ ಉತ್ತರ ಕಂಡುಹಿಡಿಯಬಹುದು ಎಂದುಕೊಂಡರೆ ಬಹುಶಃ ಅದು ಸಾಧ್ಯವಿಲ್ಲ. ರೆಡ್ಡಿಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವುದು ನಿಜಕ್ಕೂ ಸುಲಭದ ಮಾತಲ್ಲ, ಬೇಕಿದ್ದರೆ ನೀವೂ ಟ್ರೈ ಮಾಡಿ.

ಚಿತ್ರದಲ್ಲಿ ಪ್ರಶ್ನೆ ಹೀಗಿದೆ. ಎರಡು ಬಾಕ್ಸ್‌ಗಳ ಮೊತ್ತ 10 ಆದ್ರೆ, ಎರಡು ಸ್ಟಾರ್ ಹಾಗೂ ಒಂದು ಬಾಕ್ಸ್‌ನ ಮೊತ್ತ 9, 1 ರೌಂಡ್‌, 1 ಬಾಕ್ಸ್ ಹಾಗೂ 1 ಸ್ಟಾರ್‌ನ ಒಟ್ಟು ಮೊತ್ತ 15 ಆದರೆ ತ್ರಿಭುಜ, ಸ್ಟಾರ್‌, ಬಾಕ್ಸ್ ಹಾಗೂ ವೃತ್ತ ಇವಿಷ್ಟೂ ಸೇರಿದ್ರೆ ಎಷ್ಟಾಗುತ್ತೆ, ಈ ಬ್ರೈನ್ ಟೀಸರ್‌ಗೆ ನೀವು ಕೇವಲ 10 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು.

ಕಳೆದ ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್‌ಗೆ 1000ಕ್ಕೂ ಅಧಿಕ ಮಂದಿ ಅಪ್‌ವೋಟ್ ಮಾಡಿದ್ದಾರೆ. ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.

‘ಇದಕ್ಕೆ ಉತ್ತರ ಕಂಡುಹಿಡಿಯಲು ನನ್ನಿಂದ ಸಾಧ್ಯವಾಗಿಲ್ಲ, ಆದರೆ ಇದಂತೂ ಸಖತ್ ಮಜಾ ಇರೋದು ಸುಳ್ಳಲ್ಲ‘ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ನಾನಂತೂ ಮೆದುಳಿಗೆ ಹುಳ ಬಿಟ್ಕೊಂಡೆ. ಆದರೆ ಇದಕ್ಕೆ ಉತ್ತರ ಕಂಡುಹಿಡಿಯಲು ನನ್ನಿಂದ ಸಾಧ್ಯವಾಗಿಲ್ಲ‘ ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ‘ನಾನು 10 ನಿಮಿಷಗಳಲ್ಲಿ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿದಿದ್ದೇನೆ. ನನಗೊಂದು ರಿವಾರ್ಡ್ ಕೊಟ್ಟ ಫೀಲ್ ಆಯ್ತು‘ ಎಂದು ಇನ್ನೊಬ್ಬರು ವ್ಯಕ್ತಿ ತಮ್ಮ ಖುಷಿಯನ್ನು ಕಾಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.

ಈ ಬ್ರೈನ್ ಟೀಸರ್ ಅನ್ನೂ ಓದಿ

Brain Teaser: ಜೇಮ್ಸ್‌ನ 4ನೇ ಮಗ ಜನಿಸಿದ್ದು ಯಾವಾಗ, ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ಗೆ ಉತ್ತರವೇನು ಹೇಳಿ

ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಟ್ರಿಕ್ಕಿ ಪ್ರಶ್ನೆ ಇದೆ. ಈ ಪ್ರಶ್ನೆಗೆ ನೀವು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಜೇಮ್ಸ್‌ನ 4ನೇ ಮಗ ಜನಿಸಿದ್ದು ಯಾವಾಗ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮ ಸಮಯ ಈಗ ಶುರು, ನಿಮ್ಮ ಉತ್ತರವೇನು ತಿಳಿಸಿ.

Brain Teaser: ಚಿತ್ರದಲ್ಲಿ ಖೈದಿ ಎಲ್ಲಿ ಅಡಗಿದ್ದಾನೆ, ನಿಮ್ಮ ಮೆದುಳು ಚುರುಕಿದ್ರೆ 15 ಸೆಕೆಂಡ್ ಒಳಗೆ ಕಂಡುಹಿಡಿಯಿರಿ, ನಿಮಗೊಂದು ಸವಾಲು

ಇಂದಿನ ಬ್ರೈನ್ ಟೀಸರ್ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ, ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧಾರಣದವರಿಗೆ ಸಾಧ್ಯವಿಲ್ಲ. ಯಾಕೆಂದರೆ ಇದು ಅಸಾಮಾನ್ಯ ಬ್ರೈನ್ ಟೀಸರ್. ಚಿತ್ರದಲ್ಲಿ ಮೂರು ಕಾರು ಹಾಗೂ ಎ,ಬಿ,ಸಿ ಮೂರು ಬಿಲ್ಡಿಂಗ್ ಇದ್ದು, ಇದರಲ್ಲಿ ಖೈದಿ ಎಲ್ಲಿದ್ದಾನೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮಿಂದ ಖೈದಿಯನ್ನು ಹುಡುಕಲು ಸಾಧ್ಯವೇ ನೋಡಿ.