ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 5+5=11, 7+7=17 ಆದ್ರೆ, 9+9= ಎಷ್ಟು? ಗಣಿತದಲ್ಲಿ ನೀವು ಪಂಟರಾದ್ರೆ ಥಟ್ಟಂತ ಉತ್ತರ ಹೇಳಿ

Brain Teaser: 5+5=11, 7+7=17 ಆದ್ರೆ, 9+9= ಎಷ್ಟು? ಗಣಿತದಲ್ಲಿ ನೀವು ಪಂಟರಾದ್ರೆ ಥಟ್ಟಂತ ಉತ್ತರ ಹೇಳಿ

ಗಣಿತದ ಸೂತ್ರಗಳಿಗೆ ಉತ್ತರ ಕಂಡುಹಿಡಿಯುವಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲಿದೆ ಒಂದು ಮೆದುಳಿಗೆ ಹುಳ ಬಿಡುವ ಪಜಲ್‌. ಈ ಬ್ರೈನ್‌ ಟೀಸರ್‌ನಲ್ಲಿ 5+5=11 ಆದ್ರೆ 9+9 ಎಷ್ಟು ಎಂಬುದನ್ನು ನೀವು ಕಂಡುಹಿಡಿಯಬೇಕು.

5+5=11, 7+7=17 ಆದ್ರೆ, 9+9= ಎಷ್ಟು? ಗಣಿತದಲ್ಲಿ ನೀವು ಪಂಟರಾದ್ರೆ ಥಟ್ಟಂತ ಉತ್ತರ ಹೇಳಿ
5+5=11, 7+7=17 ಆದ್ರೆ, 9+9= ಎಷ್ಟು? ಗಣಿತದಲ್ಲಿ ನೀವು ಪಂಟರಾದ್ರೆ ಥಟ್ಟಂತ ಉತ್ತರ ಹೇಳಿ

ಗಣಿತ ಸೂತ್ರಗಳು ಮೇಲ್ನೋಟಕ್ಕೆ ಇದೇನು ಮಹಾ, ಎನ್ನಿಸಿದರೂ ಉತ್ತರ ಕಂಡುಹಿಡಿಯಲು ಹೊರಟಾಗ ತಲೆಯಲ್ಲಿ ಹುಳ ಹರಿದಾಡಿದಂತೆ ಆಗುವುದು ಸುಳ್ಳಲ್ಲ. ಆದರೂ ಇದಕ್ಕೆ ಉತ್ತರ ಕಂಡುಹಿಡಿಯದೇ ನಮಗೆ ನೆಮ್ಮದಿ ದೊರಕುವುದಿಲ್ಲ. ಬ್ರೈನ್‌ಟೀಸರ್‌ನಲ್ಲಿನ ಗಣಿತ ಸೂತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತವೆ. ಆದ್ರೆ ಗಣಿತದಲ್ಲಿ ನಾವು ಎಕ್ಸ್‌ಪರ್ಟ್‌ ಆದ್ರೆ ಮಾತ್ರ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯ.

ಟ್ರೆಂಡಿಂಗ್​ ಸುದ್ದಿ

ಕೆಲವರಿಗೆ ಗಣಿತದ ಪಜಲ್‌ಗಳಿಗೆ ಉತ್ತರ ಕಂಡುಹಿಡಿಯುವುದು ನೆಚ್ಚಿನ ಹವ್ಯಾಸವಾಗಿರುತ್ತದೆ. ಅಂಥವರು ಪಜಲ್‌ಗಳಿಗೆ ಹುಡುಕಾಟ ನಡೆಸುತ್ತಿರುತ್ತಾರೆ. ನೀವು ಗಣಿತ ಪ್ರೇಮಿಯಾದ್ರೆ ಇಲ್ಲಿರುವ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸಿ. ನೀವು ಉತ್ತರ ಹೇಳಬೇಕಾಗಿರುವುದು 9+9 ಎಷ್ಟು ಎಂದು.

ಸಾಮಾಜಿಕ ಜಾಲತಾಣ ಎಕ್ಸ್‌ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿತ್ತು. ಉತ್ತರ ಏನು ಎಂದು ಬರೆದುಕೊಂಡು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿತ್ತು. “5+5 = 11,” “6+6 = 14,” ಆದರೆ 9+9 ಎಷ್ಟು ಎಂದು ಕಂಡುಹಿಡಿಯಬೇಕು.

ಈ ಬ್ರೈನ್‌ ಟೀಸರ್‌ ಪಜಲ್‌ ವೈರಲ್‌ ಆಗಿದ್ದು, ಹಲವರು ಈ ಪೋಸ್ಟ್‌ ಅನ್ನು ವೀಕ್ಷಿಸಿದ್ದಾರೆ. ಕೆಲವು ಗಣಿತ ಎಕ್ಸ್‌ಪರ್ಟ್‌ಗಳು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮಾಡುವ ಮೂಲಕ ತಿಳಿಸಿದ್ದಾರೆ.

ಕಾಮೆಂಟ್‌ಗಳು ಹೀಗಿವೆ

ʼಉತ್ತರ 23 ಎಂದು ನನಗೆ ಐಎ ತಿಳಿಸಿದೆ. ಇದು ಆಸಕ್ತಿದಾಯಕವಾಗಿದೆʼ ಎಂದು ಎಕ್ಸ್‌ ಬಳಕೆದಾರರೊಬ್ಬರು ತಿಳಿಸಿದ್ದಾರೆ.

ʼಈ ಪಜಲ್‌ಗೆ ಉತ್ತರ 24ʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼ18+5=23. ನನಗೆ ಈಗ ರಗಳೆ ಕೊಡುವುದು ನಿಲ್ಲಿಸಿʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼನಾನು ಬೇರೆಯವರ ಕಾಮೆಂಟ್‌ ನೋಡಲು ಬಂದಿದ್ದೇನೆʼ ಎಂದು ಇನ್ನೊಬ್ಬರು ಹಾಸ್ಯಸ್ಪದವಾಗಿ ಕಾಮೆಂಟ್‌ ಮಾಡಿದ್ದಾರೆ.

ಸರಿ 24 ಅಥವಾ 23 ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು?

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

 Brain Teaser: 3 ಸೇಬುಹಣ್ಣಿಗೆ 30 ಆದ್ರೆ, 1 ತೆಂಗಿನಕಾಯಿ, 1 ಸೇಬು, 3 ಬಾಳೆಹಣ್ಣಿಗೆ ಎಷ್ಟಾಗುತ್ತೆ? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ತೆಂಗಿನಕಾಯಿ, ಬಾಳೆಹಣ್ಣು ಹಾಗೂ ಸೇಬುಹಣ್ಣು ಇರುವ ಬ್ರೈನ್‌ ಟೀಸರ್‌ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದರಲ್ಲಿ ಗಣಿತದ ಪಜಲ್‌ ಇದ್ದು ಈ ಪಜಲ್‌ಗೆ ಉತ್ತರ ಕಂಡುಹಿಡಿಯಲು ಗಣಿತ ಎಕ್ಸ್‌ಪರ್ಟ್‌ಗಷ್ಟೇ ಸಾಧ್ಯ. ನೀವು ಗಣಿತಪ್ರಿಯರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕೆ ಪ್ರಯತ್ನ ಮಾಡಿ.

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ ನಿಮಗಾಗಿ ಇಲ್ಲದೆ ಒಂದು ಹೊಸ ಮ್ಯಾಥ್ಸ್‌ ಪಜಲ್‌. ಇಲ್ಲಿರುವ ಸುಲಭ ಗಣಿತಕ್ಕೆ ನೀವು ಕ್ಯಾಲ್ಕುಲೇಟರ್‌ ಬಳಸದೇ 10 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು...

ವಿಭಾಗ