Brain Teaser: A+A=2, B+B=4, ಆದರೆ A+B*2= ಎಷ್ಟು? ಗಣಿತದಲ್ಲಿ ನೀವು ಪಂಟರಾದ್ರೆ ಈ ಪಜಲ್‌ಗೆ 10 ಸೆಕೆಂಡ್‌ಗಳಲ್ಲಿ ಉತ್ತರ ಹೇಳಿ
ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಇಲ್ಲಿರುವ ಸುಲಭ ಗಣಿತಕ್ಕೆ ಉತ್ತರ ಹೇಳಲು ಸಾಧ್ಯವಾಗದೇ ಹಲವರು ತಲೆ ಕೆರೆದುಕೊಂಡಿದ್ದಾರೆ. ನೀವು ಗಣಿತದಲ್ಲಿ ಎಕ್ಸ್‌ಪರ್ಟ್ ಅಂತಾದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳು ಸಾಧ್ಯವೇ ಪ್ರಯತ್ನಿಸಿ. A+B*2= ಎಷ್ಟು ಎಂದು ನೀವು ಕಂಡುಹಿಡಿಯಬೇಕು.

ನೀವು ಬ್ರೈನ್ ಟೀಸರ್ ಪ್ರೇಮಿನಾ, ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕೋದು ನಿಮಗೆ ಒಂಥರಾ ಮಜಾ ನೀಡುತ್ತಾ, ಇವತ್ತು ಭಾನುವಾರ, ಎಲ್ಲಿಗೂ ಹೋಗದೆ ಮನೆಯಲ್ಲೇ ಕೂತಿದ್ರೆ ಇಲ್ಲಿರುವ ಬ್ರೈನ್ ಟೀಸರ್ ಅನ್ನು ಒಮ್ಮೆ ನೋಡಿ. ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವ ಪ್ರಯತ್ನ ಮಾಡಿ. ಇದರಿಂದ ನಿಮ್ಮ ಭಾನುವಾರದ ಬೇಸರ ಕಳೆಯೋದು ಮಾತ್ರವಲ್ಲ ನಿಮ್ಮ ಮೆದುಳು ಚುರುಕಾಗುತ್ತದೆ.
ಇಂದಿನ ಬ್ರೈನ್ ಟೀಸರ್‌ನಲ್ಲಿರುವುದು ಗಣಿತದ ಲೆಕ್ಕಾಚಾರ. ಮೇಲ್ನೋಟಕ್ಕೆ ಇದು ಕೂಡಿಸುವ ಸುಲಭ ಲೆಕ್ಕ. ಆದರೆ ಇದಕ್ಕೆ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸುಲಭವಲ್ಲ. ಯಾಕೆಂದರೆ ಎಕ್ಸ್‌ನಲ್ಲಿ ಹಲವರು ಸರಿಯಾದ ಉತ್ತರ ಹೇಳಲು ಸಾಧ್ಯವಾಗದೇ ತಲೆ ಕೆಡಿಸಿಕೊಂಡಿದ್ದಾರೆ.
@Brainy_Bits_Hub ಎನ್ನುವ ಎಕ್ಸ್ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದೆ. ಸರಳ ಗಣಿತದ ಸೂತ್ರ ಇರುವ ಈ ಬ್ರೈನ್ ಟೀಸರ್ ನಿಮ್ಮ ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ.
ಈ ಬ್ರೈನ್ ಟೀಸರ್‌ನಲ್ಲಿ A + A = 2, B + B = 4 ಆದರೆ "A + B × 2 = ? ಎಂದು ಪ್ರಶ್ನೆ ಕೇಳಲಾಗಿದೆ. ನೀವು "A + B × 2 = ಎಷ್ಟು ಎಂಬುದನ್ನು ಹೇಳಬೇಕು.
ಈ ಬ್ರೈನ್ ಟೀಸರ್‌ಗೆ ಕೆಲವು ಗಣಿತ ಎಕ್ಸ್‌ಪರ್ಟ್‌ಗಳು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಉತ್ತರ ಕಂಡುಹಿಡಿಯಲು ಸಾಧ್ಯವಾಗದೇ ತಲೆ ಕೆಡಿಸಿಕೊಂಡಿದ್ದಾರೆ. ಅವರ ಕಥೆ ಬಿಡಿ, ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾಗುವುದೇ ಪ್ರಯತ್ನಿಸಿ ನೋಡಿ.
ಇಂತಹ ಬ್ರೈನ್ ಟೀಸರ್‌ಗಳು ಮೆದುಳನ್ನು ಚುರುಕು ಮಾಡುತ್ತವೆ, ನಮ್ಮಲ್ಲಿ ಯೋಚನಾಶಕ್ತಿ ವೃದ್ಧಿಸುತ್ತದೆ. ಏಕಾಗ್ರತೆ ಹೆಚ್ಚಿ ಸಮಸ್ಯೆ ಪರಿಹರಿಸುವ ಗುಣವೂ ವೃದ್ಧಿಯಾಗುತ್ತದೆ. ಹಾಗಾದರೆ ಇನ್ನೇಕೆ ತಡ ಈ ಪ್ರಶ್ನೆಗೆ ಉತ್ತರ ಹುಡುಕಲು ಶುರು ಮಾಡಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಬೀಗದ ರಾಶಿ ಇರುವ ಈ ಚಿತ್ರದಲ್ಲಿ ಯಾವೆಲ್ಲಾ ಬೀಗಗಳು ತೆರೆದಿವೆ? 7 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗೊಂದು ಹೊಸ ಚಾಲೆಂಜ್
ಇಂದಿನ ಬ್ರೈನ್ ಟೀಸರ್ ಚಿತ್ರಕ್ಕೆ ಉತ್ತರ ಹೇಳಬೇಕು ಎಂದರೆ ನಿಮ್ಮ ಕಣ್ಣು ಸೂಕ್ಷ್ಮವಾಗಿರಬೇಕು. ಕೆಲವೇ ಕೆಲವು ಸೆಕೆಂಡುಗಳಲ್ಲಿ ಇಲ್ಲಿರುವ ಚಿತ್ರದಲ್ಲಿ ಎಷ್ಟು ಬೀಗಗಳು ತೆರೆದಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮಗಿರೋದು ಕೇವಲ 7 ಸೆಕೆಂಡ್ ಸಮಯ.
Brain Teaser: ಈ ಚಿತ್ರದಲ್ಲಿ ಒಂದು ತಪ್ಪಿದೆ, ಅದೇನು ಅಂತ 10 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು, ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್
ಇಂದಿನ ಬ್ರೈನ್ ಟೀಸರ್ ಚಿತ್ರವು ನಿಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇದರಲ್ಲಿ 1 ರಿಂದ 6ರವರೆಗೆ ಬರೆಯಲಾಗಿದ್ದು, ಅದರ ಎದುರುಗಡೆ ಇಂಗ್ಲಿಷ್‌ನಲ್ಲಿ ಪುನಃ ಅದನ್ನೇ ಬರೆಯಲಾಗಿದೆ. ಇದರಲ್ಲಿ ಎಲ್ಲವೂ ಸರಿ ಇದೆ. ಆದರೂ ಇದರಲ್ಲಿ ತಪ್ಪಿದೆ ಅಂತೆ. ಆ ತಪ್ಪು ಯಾವುದು ಎಂದು ನೀವು ಕಂಡುಹಿಡಿಯಬೇಕು.
