Brain Teaser: ಲಿವಿಂಗ್ ರೂಮ್‌ನ ಈ ಚಿತ್ರದಲ್ಲಿ 5 ಪದಗಳು ಅಡಗಿವೆ; ಅವು ಯಾವುವು, 70 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್‌-viral news brain teaser only genius can spot 5 hidden words in the living room picture within 70 seconds social media rs ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಲಿವಿಂಗ್ ರೂಮ್‌ನ ಈ ಚಿತ್ರದಲ್ಲಿ 5 ಪದಗಳು ಅಡಗಿವೆ; ಅವು ಯಾವುವು, 70 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್‌

Brain Teaser: ಲಿವಿಂಗ್ ರೂಮ್‌ನ ಈ ಚಿತ್ರದಲ್ಲಿ 5 ಪದಗಳು ಅಡಗಿವೆ; ಅವು ಯಾವುವು, 70 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗಿದು ಚಾಲೆಂಜ್‌

ಗಾಂಧಿ ಜಯಂತಿಗೆ ರಜೆ ಇರುವ ಕಾರಣ ಖಾಲಿ ಕೂತು ಬೋರ್ ಆಗ್ತಾ ಇದ್ಯಾ? ನಿಮ್ಮ ಮೆದುಳಿಗೆ ಕೆಲಸ ನೀಡಿ, ಮೋಜು ಸಿಗಬೇಕು ಅಂತಿದ್ರೆ ಬ್ರೈನ್ ಟೀಸರ್‌ಗೆ ಹುಡುಕುವ ಪ್ರಯತ್ನ ಮಾಡಿ. ಇಲ್ಲಿರುವ ಚಿತ್ರದಲ್ಲಿ 5 ಇಂಗ್ಲಿಷ್‌ ಪದಗಳಿವೆ. ಅವು ಯಾವುದು ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಸಿಕ್ಕಾಪಟ್ಟೆ ಬೋರಾದಾಗ, ರೀಲ್ಸ್ ನೋಡಿ ಬೇಸರವಾದಾಗ ಟೈಮ್‌ಪಾಸ್‌ಗೆ ಮುಂದೇನು ಮಾಡೋದಪ್ಪ ಅನ್ನೋ ಯೋಚನೆ ನಿಮಗಿದ್ರೆ ಬ್ರೈನ್ ಟೀಸರ್‌ಗಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಈ ಬ್ರೈನ್ ಟೀಸರ್‌ಗಳು ನಿಮ್ಮ ಮೆದುಳಿಗೆ ಸಾಕಷ್ಟು ಕೆಲಸ ನೀಡುತ್ತವೆ. ಕಣ್ಣು ಕೂಡ ಸುಮ್ಮನಿರಲಾರದೇ ಹೆಚ್ಚೇ ಕೆಲಸ ಮಾಡುತ್ತದೆ. ಟೈಮ್‌ಪಾಸ್ ಜೊತೆಗೆ ನಿಮ್ಮ ಏಕಾಗ್ರತೆಯನ್ನೂ ಹೆಚ್ಚಿಸುತ್ತವೆ ಈ ಮೈಂಡ್‌ಗೇಮ್‌ಗಳು.

‌ಇಂದಿನ ಬ್ರೈನ್ ಟೀಸರ್‌ಗೆ ಬುದ್ಧಿವಂತಿಕೆ ಅಷ್ಟೇ ಸಾಲುವುದಿಲ್ಲ, ಕಣ್ಣಿನ ದೃಷ್ಟಿಯೂ ಚುರುಕಾಗಿರಬೇಕು. ಯಾಕಂದರೆ ಈ ಚಿತ್ರದಲ್ಲಿ ಅಡಗಿರುವ ಪದ ಹುಡುಕುವುದು ನಿಜಕ್ಕೂ ಸುಲಭದ ಮಾತಲ್ಲ. ಇದಕ್ಕಾಗಿ ನೀವು ಸಾಕಷ್ಟು ಬುದ್ಧಿ ಉಪಯೋಗಿಸಬೇಕು. ಕಣ್ಣಲ್ಲಿ ಕಣ್ಣಿಟ್ಟು ಪ್ರತಿ ಅಂಶವನ್ನೂ ಗಮನಿಸಬೇಕು. ಆಗಷ್ಟೇ ನಿಮಗೆ ಚಿತ್ರದಲ್ಲಿರುವ ಪದಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

ಮನೆಯ ಲೀವಿಂಗ್ ಕೋಣೆ ಚಿತ್ರ ಇಲ್ಲಿದೆ. ಇದರಲ್ಲಿ ಒಬ್ಬಳು ಮಹಿಳೆ ಸೋಫಾ ಮೇಲೆ ಕುಳಿತು ಪುಸ್ತಕ ಓದುತ್ತಿದ್ದಾಳೆ, ಇನ್ನೊಬ್ಬ ಹುಡುಗ ಸೋಫಾ ಕುರ್ಚಿಯಲ್ಲಿ ಕೂತು ಆಟವಾಡುತ್ತಿದ್ದಾನೆ, ಫ್ಲೋರ್ ಮ್ಯಾಟ್ ಮೇಲೆ ನಾಯಿಯೊಂದು ಮಲಗಿದೆ. ಹೂಕುಂಡ, ಬೆಡ್‌ಲ್ಯಾಂಪ್, ಗಡಿಯಾದ ಈ ಎಲ್ಲವೂ ಚಿತ್ರದಲ್ಲಿದೆ. ಇದರಲ್ಲಿ 5 ಪದಗಳು ಕೂಡ ಅಡಗಿವೆ. ಆ ಪದಗಳು ಯಾವುದು ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.

ನಿಮಗಿರೋದು ಕೇವಲ 70 ಸೆಕೆಂಡ್ ಸಮಯ, ಅಷ್ಟರಲ್ಲಿ 5 ಪದಗಳನ್ನು ಹುಡುಕಿ ಹೇಳಬೇಕು. ಶೇ 3 ರಷ್ಟು ಜನಕ್ಕೂ ಉತ್ತರ ಹೇಳಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಮೆದುಳು ಸಾಕಷ್ಟು ಚುರುಕಾಗಿರಬೇಕು.

70 ಸೆಕೆಂಡ್ ಆದ ಮೇಲೆ ಚಿತ್ರದಲ್ಲಿ ಇರುವ ಪದಗಳನ್ನು ಗುರುತಿಸಲು ಸಾಧ್ಯವಾಗಿಲ್ಲ ಅಂದ್ರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಈ ಚಿತ್ರದಲ್ಲಿ ಇರುವ ಪದಗಳು ಯಾವುವು ಅಂತ ಇಲ್ಲಿದೆ ನೋಡಿ. Pet, Carpet, Leaves, Lamp, Couch. ಹಾಗಾದರೆ ಇಷ್ಟೆಲ್ಲಾ ಪದಗಳು ಇಲ್ಲಿದೆ ಅಂತ ನಿಮಗೆ ಅನ್ನಿಸಬಹುದು. ಖಂಡಿತ ಇದೆ, ಈ ಕೆಳಗಿನ ಚಿತ್ರ ನೋಡಿ.

ಇಂತಹ ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಇದರಿಂದ ನಮ್ಮ ಬೇಸರ ಕಳೆಯೋದು ಮಾತ್ರವಲ್ಲ, ಮನಸ್ಸು ಹಗುರಾಗಿ ಬುದ್ಧಿ ಚುರುಕಾಗುತ್ತದೆ. ಸರಿ ಉತ್ತರ ತಿಳಿಯಿತಿ ಅಲ್ವಾ, ಇದನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಕಳುಹಿಸಿ, ಅವರ ಐಕ್ಯೂ ಪರೀಕ್ಷೆ ಮಾಡಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ಚಿತ್ರದಲ್ಲಿ ಒಬ್ಬನೇ ಒಬ್ಬ ಭಿನ್ನವಾದ ಹುಡುಗ ಇದ್ದಾನೆ, ಅವನು ಎಲ್ಲಿದ್ದಾನೆ? 10 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ

ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತ ನಿಮಗೆ ಅನ್ನಿಸ್ತಾ ಇದ್ಯಾ, ಎಷ್ಟೇ ಸೂಕ್ಷ್ಮ ಇದ್ರೂ ಪಟ್ ಅಂತ ಕಂಡುಹಿಡಿತೀರಾ, ಹಾಗಾದ್ರೆ ಈ ಚಿತ್ರದಲ್ಲಿರುವ ಹುಡುಗರಲ್ಲಿ ಭಿನ್ನವಾಗಿರುವ ಹುಡುಗ ಎಲ್ಲಿದ್ದಾನೆ, 10 ಸೆಕೆಂಡ್ ಒಳಗೆ ಕಂಡುಹಿಡಿಯಿರಿ. ಇದು ನಿಮ್ಮ ಕಣ್ಣಿಗೆ ಚಾಲೆಂಜ್‌.

Brain Teaser: ಯಾವ ಪೈಪ್‌ನ ನೀರು ಬಕೆಟ್ ತುಂಬಿಸುತ್ತಿದೆ, ಬುದ್ಧಿ ಉಪಯೋಗಿಸಿ 15 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ನೀವು ಸಖತ್ ಬುದ್ಧಿವಂತರು ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಇರುವ 4 ಪೈಪ್‌ಗಳಲ್ಲಿ ಯಾವ ಪೈಪ್‌ನ ನೀರು ಬಕೆಟ್ ತುಂಬಿಸುತ್ತಿದೆ ಎಂಬುದನ್ನು ನೀವು 15 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗೆ ಕಂಡಿದ್ದೇ ಸತ್ಯವಲ್ಲ, ನೆನಪಿರಲಿ.

mysore-dasara_Entry_Point