Brain Teaser: 5ರ ನಡುವೆ ಒಂದು ಕಡೆ ಇಂಗ್ಲಿಷ್‌ನ S ಅಕ್ಷರ ಅಡಗಿದೆ; ಮೆದುಳು ಶಾರ್ಪ್ ಇದ್ರೆ 10 ಸೆಕೆಂಡ್‌ನಲ್ಲಿ ಎಲ್ಲಿದೆ ಹುಡುಕಿ
ಚಿತ್ರದಲ್ಲಿರುವ ಸಂಖ್ಯೆಗಳ ನಡುವೆ ಒಂದು ರಹಸ್ಯ ಅಡಗಿದೆ. ನಿಮ್ಮ ಮೆದುಳು ಶಾರ್ಪ್ ಆಗಿದ್ದು ಕಣ್ಣು ಚುರುಕಾಗಿದ್ರೆ ಈ ರಹಸ್ಯವನ್ನು ಕಂಡುಹಿಡಿಯಬಹುದು. 5ರ ನಡುವೆ ಒಂದೇ ಒಂದು ಕಡೆ S ಅಡಗಿದೆ. ಇದು ಎಲ್ಲಿದೆ ಎಂದು 10 ಸೆಕೆಂಡ್ ಒಳಗೆ ಹೇಳಬೇಕು.
ಮಳೆಗಾಲದ ಬೇಸರ ಕಳೆಯೋದು ಹೇಗಪ್ಪಾ ಅನ್ನೋ ಚಿಂತೆ ಕಾಡ್ತಾ ಇದ್ಯಾ, ಹಾಗಿದ್ರೆ ನಾವು ನಿಮಗೆ ಬ್ರೈನ್ ಟೀಸರ್‌ವೊಂದನ್ನು ತಂದಿದ್ದೇವೆ. ಇದು ನಿಮ್ಮ ಬೇಸರ ಕಳೆಯುವುದು ಮಾತ್ರವಲ್ಲ, ಮೆದುಳನ್ನು ಚುರುಕಾಗಿಸುತ್ತದೆ. ಕಣ್ಣು ಹಾಗೂ ಮೆದುಳು ಎರಡೂ ಶಾರ್ಪ್ ಇದ್ದರಷ್ಟೇ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ.
ಈ ಬ್ರೈನ್ ಟೀಸರ್‌ಗಳು ಮೆದುಳಿಗೆ ಸಾಕಷ್ಟು ಕೆಲಸ ಕೊಡುತ್ತವೆ. ಇದಕ್ಕೆ ಉತ್ತರ ಹುಡುಕಲು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಇಲ್ಲಿರುವ ಬ್ರೈನ್ ಟೀಸರ್‌ಗೂ ಕೂಡ ನೀವು ಥಟ್ ಅಂತ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ. ಯಾಕೆಂದರೆ ಇದು ಸಾಕಷ್ಟು ಗೊಂದಲಮಯವಾಗಿದೆ.
ಚಿತ್ರದಲ್ಲಿ ಸಾಕಷ್ಟು 5 ಸಂಖ್ಯೆಗಳಿವೆ. ಈ 5ರ ರಾಶಿಯ ನಡುವೆ ಒಂದು ಕಡೆ ಇಂಗ್ಲಿಷ್‌ನ S ಅಕ್ಷರ ಅಡಗಿದೆ. ಇದನ್ನು 10 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು ಎನ್ನುವುದು ನಿಮಗಿರುವ ಸವಾಲು. 5 ಹಾಗೂ S ಎರಡೂ ಒಂದೇ ರೀತಿ ಕಾಣುವ ಕಾರಣ ಇದನ್ನು ಕಂಡುಹಿಡಿಯುವುದು ಖಂಡಿತ ಸುಲಭವಲ್ಲ.
ಇಂತಹ ಹಲವು ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತವೆ. ಇಂಥವುಗಳನ್ನು ಪಬ್ಲಿಶ್ ಮಾಡಲೆಂದೇ ಕೆಲವು ಪುಟಗಳಿರುತ್ತವೆ. ಇವು ನಮಗೆ ಟೈಮ್‌ಪಾಸ್ ಮಾಡಿಸುವ ಜೊತೆಗೆ ಬುದ್ಧಿಯನ್ನೂ ಚುರುಕುಗೊಳಿಸುತ್ತವೆ. ಇದರಿಂದ ನಮ್ಮ ಯೋಚನಾಶಕ್ತಿ ವೃದ್ಧಿಸುತ್ತದೆ. ಏಕಾಗ್ರತೆ ಹಚ್ಚಿಸುವ ಕೆಲಸವನ್ನೂ ಮಾಡುತ್ತವೆ ಬ್ರೈನ್ ಟೀಸರ್‌ಗಳು.
ಸರಿ ಈ ಚಿತ್ರದಲ್ಲಿ S ಎಲ್ಲಿದೆ ಎಂದು 10 ಸೆಕೆಂಡ್‌ಗಳಲ್ಲಿ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಯ್ತಾ, ನಿಮ್ಮಿಂದ ಆಗಿಲ್ಲ ಅಂದ್ರೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಈ ಬ್ರೈನ್ ಟೀಸರ್ ಕಳುಹಿಸಿ, ಅವರಿಗೆ ಇದರಲ್ಲಿ S ಎಲ್ಲಿದೆ ಕಂಡುಹಿಡಿಯಲು ಹೇಳಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಹದ್ದಿನ ಕಣ್ಣು ನಿಮ್ಮದಾಗಿದ್ದರಷ್ಟೇ ಚಿತ್ರದಲ್ಲಿ ಅಡಗಿರುವ ನಂಬರ್ ಕಂಡುಹಿಡಿಯಲು ಸಾಧ್ಯ, ಪ್ರಯತ್ನಿಸಿ ನೋಡಿ
ಇನ್‌ಸ್ಟಾಗ್ರಾಂನಲ್ಲಿ ಶೇರ್ ಆಗಿರುವ ಬ್ರೈನ್ ಟೀಸರ್‌ವೊಂದರಲ್ಲಿ ಅಡಗಿರುವ ನಂಬರ್ ಅನ್ನು ಹುಡುಕುವ ಚಾಲೆಂಜ್ ನೀಡಲಾಗಿದೆ. ಈ ಚಿತ್ರ ಸಾಕಷ್ಟು ವೈರಲ್ ಆಗಿದ್ದು, ಚಿತ್ರದಲ್ಲಿನ ನಂಬರ್ ಹುಡುಕುವಲ್ಲಿ ಸಾಕಷ್ಟು ಮಂದಿ ಸೋತಿದ್ದಾರೆ. ನಿಮ್ಮದು ಹದ್ದಿನ ಕಣ್ಣಾಗಿದ್ದರೆ ಚಿತ್ರದಲ್ಲಿ ಇರುವ ಸಂಖ್ಯೆಯನ್ನು ಕಂಡುಹಿಡಿಯಿರಿ.
Brain Teaser: ನಿಮ್ಮ ಕಣ್ಣಿಗೊಂದು ಪರೀಕ್ಷೆ, ಈ ಚಿತ್ರದಲ್ಲಿ ಎಷ್ಟು ನಂಬರ್‌ಗಳಿವೆ ಹೇಳಿ; ನಿಮ್ಮ ಸಮಯ ಈಗ ಶುರು...
ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್, ಮೆದುಳು ಕೂಡ ಯಾವುದನ್ನಾದರೂ ಬೇಗ ಗ್ರಹಿಸುತ್ತೆ ಅನ್ನೋ ಫೀಲ್ ನಿಮಗಿದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಪ್ರಯತ್ನಿಸಿ. ಇಲ್ಲಿರುವ ಮುಖದ ಆಕಾರದಲ್ಲಿ ಎಷ್ಟು ನಂಬರ್‌ಗಳಿವೆ ಹೇಳಿ, ನಿಮ್ಮ ಸಮಯ ಈಗ ಶುರು.