ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಒಂದೇ ಒಂದು ಫುಟ್‌ಬಾಲ್‌ ಭಿನ್ನವಾಗಿದೆ, ಅದು ಯಾವುದು? 10 ಸೆಕೆಂಡ್‌ ಒಳಗೆ ಉತ್ತರ ಹೇಳಿ

Brain Teaser: ಚಿತ್ರದಲ್ಲಿ ಒಂದೇ ಒಂದು ಫುಟ್‌ಬಾಲ್‌ ಭಿನ್ನವಾಗಿದೆ, ಅದು ಯಾವುದು? 10 ಸೆಕೆಂಡ್‌ ಒಳಗೆ ಉತ್ತರ ಹೇಳಿ

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆದ ಬ್ರೈನ್‌ ಟೀಸರ್‌ವೊಂದು ನಮ್ಮ ಮೆದುಳನ್ನ ಪ್ರಶ್ನೆ ಮಾಡುವಂತಿರುವುದು ಸುಳ್ಳಲ್ಲ. ಇದು ನಮ್ಮ ಐಕ್ಯೂ ಹಂತ ಎಷ್ಟಿದೆ ಎಂಬುದನ್ನು ಪರೀಕ್ಷೆ ಮಾಡುತ್ತದೆ. ಚಿತ್ರದಲ್ಲಿರುವ ಫುಟ್‌ಬಾಲ್‌ಗಳಲ್ಲಿ ಯಾವುದು ಭಿನ್ನವಾಗಿದೆ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು.

ಚಿತ್ರದಲ್ಲಿ ಒಂದೇ ಒಂದು ಫುಟ್‌ಬಾಲ್‌ ಭಿನ್ನವಾಗಿದೆ, ಅದು ಯಾವುದು? 10 ಸೆಕೆಂಡ್‌ ಒಳಗೆ ಹೇಳಿ
ಚಿತ್ರದಲ್ಲಿ ಒಂದೇ ಒಂದು ಫುಟ್‌ಬಾಲ್‌ ಭಿನ್ನವಾಗಿದೆ, ಅದು ಯಾವುದು? 10 ಸೆಕೆಂಡ್‌ ಒಳಗೆ ಹೇಳಿ

ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್‌ ಮಾಡುವಾಗ ಮನಸ್ಸಿಗೆ ಮೋಜು ನೀಡುವ ಹಲವು ಬ್ರೈನ್‌ ಟೀಸರ್‌ಗಳು ಕಣ್ಣಿಗೆ ಬೀಳುತ್ತವೆ. ಇದಕ್ಕೆ ಉತ್ತರ ಕಂಡುಹಿಡಿಯುವುದು ನಿಮಗೆ ಸವಾಲು ಎನ್ನಿಸುವುದು ಸುಳ್ಳಲ್ಲ. ಯಾಕೆಂದರೆ ಇಂತಹ ಪಜಲ್‌ಗಳಿಗೆ ಸುಲಭವಾಗಿ ಉತ್ತರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೂ ಇವು ಒಂಥರಾ ಚಾಲೆಂಜಿಂಗ್‌ ಅನ್ನಿಸುವುದು ಸುಳ್ಳಲ್ಲ. ಇಂದಿನ ಬ್ರೈನ್‌ ಟೀಸರ್‌ ಅನ್ನು ಹೆಚ್ಚಿನ ಐಕ್ಯೂ ಹೊಂದಿರುವವರು ಮಾತ್ರ ಪರಿಹರಿಸಬಹುದು ಎಂದು ಹೇಳಲಾಗುತ್ತಿದೆ ಹೇಳುತ್ತದೆ. ನಿಮ್ಮ ಐಕ್ಯೂ ಲೆವೆಲ್‌ ಹೈ ಇದೆ ಎಂದು ನಿಮಗೆ ಅನ್ನಿಸಿದ್ದರೆ ಹತ್ತು ಸೆಕೆಂಡ್‌ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಇಲ್ಲಿರುವ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ರಿಷಬ್‌ ಬಾಜ್‌ಪೇಯಿ ಎನ್ನುವವರು ಇನ್‌ಸ್ಟಾಗ್ರಾಂನಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಉದ್ದಕ್ಕೆ ಅಡ್ಡಕ್ಕೆ ಒಂದಿಷ್ಟು ಫುಟ್‌ಬಾಲ್‌ಗಳಿವೆ. ಈ ಫುಟ್‌ಬಾಲ್ ಎಲ್ಲವೂ ಒಂದೇ ರೀತಿ ಕಂಡರೂ ಒಂದು ಮಾತ್ರ ಭಿನ್ನವಾಗಿದೆ. ಅದು ಯಾವುದು ಎಂಬುದನ್ನು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ಇದರಲ್ಲಿ 140ಕ್ಕಿಂತ ಹೆಚ್ಚು ಐಕ್ಯೂ ಹೊಂದಿರುವ ಜನರಷ್ಟೇ ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಕೊಳ್ಳಲು ಸಾಧ್ಯ ಎಂದು ಶೀರ್ಷಿಕೆ ಬರೆದುಕೊಳ್ಳಲಾಗಿದೆ.

ಮೇ 22 ರಂದು ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿರುವ ಈ ಚಿತ್ರದ ಇನ್‌ಸ್ಟಾಗ್ರಾಂ ಪೋಸ್ಟ್‌ ಅನ್ನು ಈಗಾಗಲೇ 4.7 ಮಿಲಿಯನ್‌ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕೆಲವರು ಕಾಮೆಂಟ್‌ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ʼನನಗೆ ಥಟ್‌ ಅಂತ ಕಾಣಿಸಿತು, ಬಹುಶಃ ನಾವು ತುಂಬಾ ಬುದ್ಧಿವಂತ ಇರಬಹುದುʼ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಎರಡು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ನಾನು ಭಿನ್ನವಾಗಿರುವ ಫುಟ್‌ಬಾಲ್‌ ಕಂಡುಕೊಂಡೆ ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.

ನಿಮ್ಮ ಕಣ್ಣಿಗೆ ಭಿನ್ನವಾಗಿರುವ ಫುಟ್‌ಬಾಲ್‌ ಎಷ್ಟು ಸೆಕೆಂಡ್‌ನಲ್ಲಿ ಕಾಣಿಸ್ತು, ನಿಮ್ಮ ಐಕ್ಯೂ ಲೆವೆಲ್‌ ಹೇಗಿದೆ ಪರೀಕ್ಷಿಸಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: ನಕ್ಷತ್ರಗಳಿಂದ ತುಂಬಿರುವ ಕಪ್‌ಕೇಕ್‌ ನಡುವೆ ಚಂದ್ರ ಅಡಗಿದ್ದಾನೆ, ಅವನು ಎಲ್ಲಿದ್ದಾನೆ ಎಂದು 8 ಸೆಕೆಂಡ್‌ನಲ್ಲಿ ಹುಡುಕಿ

ನಿಮ್ಮ ಮೆದುಳು ಎಷ್ಟು ಶಾರ್ಪ್‌ ಇದೆ ಎಂದು ತಿಳಿಬೇಕು ಅಂತಂದ್ರೆ ನೀವು ಬ್ರೈನ್‌ ಟೀಸರ್‌ ಚಾಲೆಂಜ್‌ ಸ್ವೀಕರಿಸಬೇಕು. ಇದು ನಿಮ್ಮ ಮೆದುಳಿನೊಂದಿಗೆ ಕಣ್ಣಿಗೂ ಸವಾಲು ಹಾಕುತ್ತದೆ. ಇಂದಿನ ಬ್ರೈನ್‌ ಟೀಸರ್‌ನಲ್ಲಿ ನಕ್ಷತ್ರಗಳಿರುವ ಕಪ್‌ ಕೇಕ್‌ ನಡುವಿನ ಚಂದ್ರನನ್ನು ಹುಡುಕುವುದು ನಿಮಗಿರುವ ಸವಾಲು.

Brain Teaser: ನಿಮ್ಮ ಕಣ್ಣು ಸಖತ್‌ ಶಾರ್ಪ್‌ ಇದ್ಯಾ, ಹಾಗಿದ್ರೆ ಆಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಹುಡುಕಿ; ನಿಮಗಿದು ಚಾಲೆಂಜ್‌

ನಿಮ್ಮ ಕಣ್ಣು ಸಖತ್‌ ಶಾರ್ಪ್‌ ಅಂತ ನಿಮಗೆ ಅನ್ನಿಸುತ್ತಾ, ಇದನ್ನ ಪರೀಕ್ಷೆ ಮಾಡೋದು ಹೇಗೆ ಅಂತ ಯೋಚ್ನೆ ಮಾಡ್ತೀರಾ, ಹಾಗಾದ್ರೆ ನಿಮಗಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌. ಚಿತ್ರದಲ್ಲಿರುವ ಆಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಹುಡುಕುವುದು ನಿಮಗಿರುವ ಸವಾಲು.