Brain Teaser: ಹದ್ದಿನ ಕಣ್ಣು ನಿಮ್ಮದಾಗಿದ್ದರಷ್ಟೇ ಚಿತ್ರದಲ್ಲಿ ಅಡಗಿರುವ ನಂಬರ್‌ ಕಂಡುಹಿಡಿಯಲು ಸಾಧ್ಯ, ಪ್ರಯತ್ನಿಸಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಹದ್ದಿನ ಕಣ್ಣು ನಿಮ್ಮದಾಗಿದ್ದರಷ್ಟೇ ಚಿತ್ರದಲ್ಲಿ ಅಡಗಿರುವ ನಂಬರ್‌ ಕಂಡುಹಿಡಿಯಲು ಸಾಧ್ಯ, ಪ್ರಯತ್ನಿಸಿ ನೋಡಿ

Brain Teaser: ಹದ್ದಿನ ಕಣ್ಣು ನಿಮ್ಮದಾಗಿದ್ದರಷ್ಟೇ ಚಿತ್ರದಲ್ಲಿ ಅಡಗಿರುವ ನಂಬರ್‌ ಕಂಡುಹಿಡಿಯಲು ಸಾಧ್ಯ, ಪ್ರಯತ್ನಿಸಿ ನೋಡಿ

ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಆಗಿರುವ ಬ್ರೈನ್‌ ಟೀಸರ್‌ವೊಂದರಲ್ಲಿ ಅಡಗಿರುವ ನಂಬರ್‌ ಅನ್ನು ಹುಡುಕುವ ಚಾಲೆಂಜ್‌ ನೀಡಲಾಗಿದೆ. ಈ ಚಿತ್ರ ಸಾಕಷ್ಟು ವೈರಲ್‌ ಆಗಿದ್ದು, ಚಿತ್ರದಲ್ಲಿನ ನಂಬರ್‌ ಹುಡುಕುವಲ್ಲಿ ಸಾಕಷ್ಟು ಮಂದಿ ಸೋತಿದ್ದಾರೆ. ನಿಮ್ಮದು ಹದ್ದಿನ ಕಣ್ಣಾಗಿದ್ದರೆ ಚಿತ್ರದಲ್ಲಿ ಇರುವ ಸಂಖ್ಯೆಯನ್ನು ಕಂಡುಹಿಡಿಯಿರಿ.

ಹದ್ದಿನ ಕಣ್ಣು ನಿಮ್ಮದಾಗಿದ್ದರಷ್ಟೇ ಚಿತ್ರದಲ್ಲಿ ಅಡಗಿರುವ ನಂಬರ್‌ ಕಂಡುಹಿಡಿಯಲು ಸಾಧ್ಯ, ಒಮ್ಮೆ ಪ್ರಯತ್ನಿಸಿ
ಹದ್ದಿನ ಕಣ್ಣು ನಿಮ್ಮದಾಗಿದ್ದರಷ್ಟೇ ಚಿತ್ರದಲ್ಲಿ ಅಡಗಿರುವ ನಂಬರ್‌ ಕಂಡುಹಿಡಿಯಲು ಸಾಧ್ಯ, ಒಮ್ಮೆ ಪ್ರಯತ್ನಿಸಿ

ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕುವುದು ಮೋಜು ನೀಡುತ್ತದೆ. ಇದು ಟೈಮ್‌ಪಾಸ್‌ಗೆ ಹೇಳಿ ಮಾಡಿಸಿದ್ದು. ಇದು ನಮ್ಮ ಕಣ್ಣು ಹಾಗೂ ಮೆದುಳು ಶಾರ್ಪ್‌ ಆಗುವಂತೆ ಮಾಡುತ್ತದೆ. ಸಮಸ್ಯೆಯನ್ನು ಪರಿಹರಿಸುವ ಕೌಶಲವನ್ನು ವೃದ್ಧಿಸುತ್ತದೆ. ನೀವು ಬ್ರೈನ್‌ ಟೀಸರ್‌ ಪ್ರಿಯರಾಗಿದ್ದರೆ ನಿಮಗಾಗಿ ಇಲ್ಲಿದೆ ಒಂದು ಸವಾಲು. ಈ ಬ್ರೈನ್‌ ಟೀಸರ್‌ ನಿಮ್ಮ ಕಣ್ಣಿಗೆ ಚಾಲೆಂಜ್‌ ಮಾಡುತ್ತದೆ.

ಇಲ್ಲಿರುವ ಚಿತ್ರದಲ್ಲಿ ಒಂದು ನಂಬರ್‌ ಅಡಗಿದೆ. ಆ ನಂಬರ್‌ ಯಾವುದು ಎಂಬುದನ್ನು ನೀವು ಕಂಡುಹಿಡಿಯಬೇಕು. ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಶಾರ್ಪ್‌ ಇದ್ದರಷ್ಟೇ ನೀವು ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯ. ಹಾಗಾದರೆ ಇಲ್ಲಿರುವ ಬ್ರೈನ್‌ ಟೀಸರ್‌ಗೆ ಉತ್ತರವೇನು ಹೇಳಿ. ನಿಮ್ಮ ಸಮಯ ಈಗ ಶುರು.

ಇನ್‌ಸ್ಟಾಗ್ರಾಂನಲ್ಲಿ ʼಕಣ್ಣಿಗೆ ಚಾಲೆಂಜ್‌, ಚಿತ್ರದಲ್ಲಿ ಕಾಣುತ್ತಿರುವ ನಂಬರ್‌ ಯಾವುದು?ʼ ಬ್ರೈನ್‌ ಟೀಸರ್‌ ಅನ್ನು ಕಾಣಬಹುದಾಗಿದೆ. ಕಪ್ಪು–ಬಿಳುಪಿನ ಚಿತ್ತಾರವಿರುವ ಚಿತ್ರ ಇದಾಗಿದೆ. ಇದರ ನಡುವೆ ಒಂದು ನಂಬರ್‌ ಬರೆಯಲಾಗಿದೆ. ಇದು ಯಾವುದು ಎಂಬುದನ್ನು ನೀವು ಕಂಡುಹಿಡಿಯಬೇಕು. ನೀವು ನಿಜಕ್ಕೂ ಬ್ರೈನ್‌ ಟೀಸರ್‌ ಪ್ರಿಯರಾಗಿದ್ದರೆ ಈ ಬ್ರೈನ್‌ ಟೀಸರ್‌ ನಿಮಗೆ ಖುಷಿ ನೀಡುವುದು ಖಂಡಿತ. ಯಾಕೆಂದರೆ ಇದಕ್ಕೆ ನೀವು ಉತ್ತರ ಕಂಡುಕೊಳ್ಳುವುದು ಮಾತ್ರವಲ್ಲ, ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಉತ್ತರ ಹುಡುಕುವ ಚಾಲೆಂಜ್‌ ನೀಡಬಹುದು.

ಇನ್ನೇಕೆ ತಡ ಈ ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕಲು ಟ್ರೈ ಮಾಡಿ. ಇದರಿಂದ ನಿಮ್ಮ ಮೆದುಳು ಚುರುಕಾಗುವ ಜೊತೆ ಚಾಲೆಂಜ್‌ ಫೇಸ್‌ ಮಾಡುವ ಧೈರ್ಯ ಕೂಡ ವೃದ್ಧಿಯಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಹಲವು ಬ್ರೈನ್‌ ಟೀಸರ್‌ಗಳು ಹರಿದಾಡುತ್ತವೆ. ಅವು ನನಗೆ ಮೋಜಿನ ಜೊತೆಗೆ ಸಮಸ್ಯೆ ಪರಿಹರಿಸುವ ಕೌಶಲ ವೃದ್ಧಿಸುವುದು ಸುಳ್ಳಲ್ಲ. ಟ್ರೈ ಮಾಡಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: ನಿಮ್ಮ ಕಣ್ಣಿಗೊಂದು ಪರೀಕ್ಷೆ, ಈ ಚಿತ್ರದಲ್ಲಿ ಎಷ್ಟು ನಂಬರ್‌ಗಳಿವೆ ಹೇಳಿ; ನಿಮ್ಮ ಸಮಯ ಈಗ ಶುರು...

ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌, ಮೆದುಳು ಕೂಡ ಯಾವುದನ್ನಾದರೂ ಬೇಗ ಗ್ರಹಿಸುತ್ತೆ ಅನ್ನೋ ಫೀಲ್‌ ನಿಮಗಿದ್ರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳಲು ಪ್ರಯತ್ನಿಸಿ. ಇಲ್ಲಿರುವ ಮುಖದ ಆಕಾರದಲ್ಲಿ ಎಷ್ಟು ನಂಬರ್‌ಗಳಿವೆ ಹೇಳಿ, ನಿಮ್ಮ ಸಮಯ ಈಗ ಶುರು.

Brain Teaser: ಗಣಿತದಲ್ಲಿ ನೀವು ಸಖತ್‌ ಶಾರ್ಪ್‌ ಅಂತಾದ್ರೆ ಮೆದುಳಿಗೆ ಹುಳ ಬಿಡುವ ಈ ಬ್ರೈನ್‌ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ

ಗಣಿತದಲ್ಲಿ ನೀವು ಸಖತ್‌ ಶಾರ್ಪ್‌ ಅಂತಾದ್ರೆ ಇಲ್ಲೊಂದು ಮೆದುಳಿಗೆ ಹುಳ ಬಿಡುವ ಬ್ರೈನ್‌ ಟೀಸರ್‌ ಇದೆ. ಇದಕ್ಕೆ ಉತ್ತರ ಹುಡುಕಲು ನೀವು ಖಂಡಿತ ಬುದ್ಧಿ ಉಪಯೋಗಿಸಬೇಕು. ನಿಮ್ಮ ಬುದ್ಧಿಮತ್ತೆ, ಕೌಶಲಕ್ಕೆ ಈ ಬ್ರೈನ್‌ ಟೀಸರ್‌ ಸವಾಲು ಹಾಕುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಉತ್ತರ ಹುಡುಕಲು ಟ್ರೈ ಮಾಡಿ.

Whats_app_banner