Brain Teaser: ನಿಮ್ಮ ಕಣ್ಣು ಸಖತ್ ಶಾರ್ಪ್ ಇದ್ಯಾ, ಹಾಗಿದ್ರೆ ಆಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಹುಡುಕಿ; ನಿಮಗಿದು ಚಾಲೆಂಜ್
ನಿಮ್ಮ ಕಣ್ಣು ಸಖತ್ ಶಾರ್ಪ್ ಅಂತ ನಿಮಗೆ ಅನ್ನಿಸುತ್ತಾ, ಇದನ್ನ ಪರೀಕ್ಷೆ ಮಾಡೋದು ಹೇಗೆ ಅಂತ ಯೋಚ್ನೆ ಮಾಡ್ತೀರಾ, ಹಾಗಾದ್ರೆ ನಿಮಗಾಗಿ ಇಲ್ಲಿದೆ ಒಂದು ಬ್ರೈನ್ ಟೀಸರ್. ಚಿತ್ರದಲ್ಲಿರುವ ಆಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಹುಡುಕುವುದು ನಿಮಗಿರುವ ಸವಾಲು.

ಜರ್ಮನಿ ಮೂಲದ ಡಿಜಿಟಲ್ ಕಲಾವಿದ ಗೆರ್ಗೆಲಿ ಡುಡಾಸ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಬ್ರೈನ್ ಟೀಸರ್ ಚಿತ್ರಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇವರ ಚಿತ್ರಗಳು ನಿಮ್ಮ ಕಣ್ಣಿಗೆ ಮಾತ್ರವಲ್ಲ, ಮೆದುಳಿಗೂ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇವರ ಪಜಲ್ ಹಾಗೂ ಬ್ರೈನ್ ಟೀಸರ್ ಚಿತ್ರಗಳಿಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇತ್ತೀಚಿನ ಅವರ ಬ್ರೈನ್ ಟೀಸರ್‌ನಲ್ಲಿ ಆಕ್ಟೋಪಸ್‌ಗಳ ರಾಶಿಯ ನಡುವೆ ಇರುವ ಮೀನನ್ನು ಹುಡುಕುವ ಸವಾಲು ಹಾಕಿದ್ದಾರೆ. ಮೇಲ್ನೋಟಕ್ಕೆ ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವುದು ಸುಲಭ ಎನ್ನಿಸಿದರೂ ಕೂಡ ಮೀನನ್ನು ಹುಡುಕುವುದು ಖಂಡಿತ ಸುಲಭವಿಲ್ಲ. ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಸೂಕ್ಷ್ಮವಾಗಿದ್ದರೆ ಇದಕ್ಕೆ ಸುಲಭವಾಗಿ ಉತ್ತರ ಕಂಡುಹಿಡಿಯಬಹುದು.
ದುಡಾಲ್ಫ್ ಹಂಚಿಕೊಂಡ ಬ್ರೈನ್ ಟೀಸರ್‌ನಲ್ಲಿ ಸಮುದ್ರದಲ್ಲಿ ಕೆಂಪು ಬಣ್ಣದ ಆಕ್ಟೋಪಸ್‌ಗಳ ರಾಶಿ ಕಾಣಬಹುದು. ಒಂದು ಆಕ್ಟೋಪಸ್‌ಗೆ ಕಪ್ಪು ಬಣ್ಣದ ಟೋಪಿ ಕೂಡ ತೊಡಿಸಲಾಗಿದೆ. ಇನ್ನೊಂದಕ್ಕೆ ಮೀಸೆ ಇದೆ. ಆಕ್ಟೋಪಸ್‌ಗಳ ನಡುವೆ ಗಿಡಗಳನ್ನು ಕಾಣಬಹುದು. ಈ ಎಲ್ಲದರ ನಡುವೆ ಒಂದೇ ಒಂದು ಮೀನನ್ನು ಮರೆ ಮಾಚಲಾಗಿದೆ. ಆ ಮೀನು ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.
ಜೂನ್ 13ರಂದು ದುಡಾಲ್ಫ್ ಈ ಬ್ರೈನ್ ಟೀಸರ್ ಅನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿಯವರೆಗೆ ಹಲವು ಈ ಪೋಸ್ಟ್ ಅನ್ನು ವೀಕ್ಷಿಸಿದ್ದಾರೆ, ಕೆಲವರು ರೀ ಶೇರ್ ಮಾಡಿದ್ದಾರೆ. ಇನ್ನೂ ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ಹಂಚಿಕೊಂಡಿದ್ದಾರೆ.
ʼಇದು ಚೆನ್ನಾಗಿದೆ, ಇದು ಸ್ವಲ್ಪ ಟ್ರಿಕ್ಕಿಯಾಗಿರುವುದು ಸುಳ್ಳಲ್ಲ. ಬಹುಶಃ ಅಲ್ಲಿರುವುದು ಸ್ಟಾರ್ ಫಿಶ್, ನಾನು ಉತ್ತರಕ್ಕಾಗಿ ಎದುರು ನೋಡುತ್ತಿದ್ದೇನೆʼ ಎಂದು ಫೇಸ್‌ಬುಕ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಚಿತ್ರ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಮೀನು ಸಿಕ್ಕಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು? ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್ ಇದ್ರೆ ತಿಳಿಸಿ.
ಈ ಬ್ರೈನ್ ಟೀಸರ್‌ಗಳನ್ನು ಓದಿ
Brain Teaser: ಚಿತ್ರದಲ್ಲಿ ಒಂದೇ ಒಂದು ಲಾಕ್ ಓಪನ್ ಇದೆ, ಅದು ಎಲ್ಲಿದೆ? 11 ಸೆಕೆಂಡ್‌ನಲ್ಲಿ ಕಂಡುಹಿಡಿದು ಜಾಣತನ ತೋರಿ
ನಿಮ್ಮ ಗಮನಶಕ್ತಿ ಎಷ್ಟು ಶಾರ್ಪ್ ಇದೆ ಎಂದು ತಿಳಿಯುವ ಆಸೆ ನಿಮಗಿದ್ದರೆ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಟ್ರೈ ಮಾಡಿ. ಇಲ್ಲಿರುವ ಬೀಗಗಳ ಸಾಲಿನಲ್ಲಿ ಒಂದು ಬೀಗದ ಲಾಕ್ ಓಪನ್ ಇದೆ. ಆ ಬೀಗ ಯಾವುದು ಎಂದು 11 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ನಿಮ್ಮ ಕಣ್ಣು, ಮೆದುಳು ನಿಜಕ್ಕೂ ಶಾರ್ಪ್ ಇದ್ರೆ ಟ್ರೈ ಮಾಡಿ.
Brain Teaser: ಬುದ್ಧಿವಂತರಿಗೆ ಮಾತ್ರ! ಚಿತ್ರದಲ್ಲಿ ಅಡಗಿರುವ ನಂಬರ್ ಪತ್ತೆ ಮಾಡಲು ನಿಮ್ಮಿಂದ ಸಾಧ್ಯವೇ, ಪ್ರಯತ್ನಿಸಿ
ಕಣ್ಣು ಮಂಜಾಗಿಸುವ ಈ ಚಿತ್ರದಲ್ಲಿ ಗುಪ್ತ ಸಂಖ್ಯೆಯೊಂದು ಅಡಗಿದೆ. ಆ ಸಂಖ್ಯೆ ಯಾವುದು ಎಂದು ಕಂಡುಹಿಡಿಯಬೇಕು. ಇದಕ್ಕೆ ಕಣ್ಣಷ್ಟೇ ಅಲ್ಲ, ಮೆದುಳು ಕೂಡ ಚುರುಕಾಗಿರಬೇಕು. ನೀವು ಬುದ್ಧಿವಂತರಾದ್ರೆ ಟ್ರೈ ಮಾಡಿ.
