Brain Teaser: ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಕೂಡ ಶಾರ್ಪ್ ಅಂತಾದ್ರೆ ಚಿತ್ರದಲ್ಲಿ ಇರುವ ನಂಬರ್ ಯಾವುದು ಹೇಳಿ, ನಿಮಗೊಂದು ಸವಾಲ್
ಎರಡು ಬಣ್ಣದ ಬಾಕ್ಸ್ ಇರುವ ಈ ಚಿತ್ರದಲ್ಲಿ ಒಂದು ನಂಬರ್ ಬರೆಯಲಾಗಿದೆ. ಆ ನಂಬರ್ ಯಾವುದು ಎಂಬುದನ್ನು ನೀವು ಕಂಡುಹಿಡಿಯಬೇಕು. ಹದ್ದಿನ ಕಣ್ಣಿನಷ್ಟೇ ನಿಮ್ಮ ಕಣ್ಣು ಸೂಕ್ಷ್ಮವಾಗಿದ್ದರೆ ಮಾತ್ರ ನಿಮ್ಮಿಂದ ಈ ಪಜಲ್‌ಗೆ ಸರಿಯಾದ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ.
ಬ್ರೈನ್ ಟೀಸರ್‌ಗಳು ಸದಾ ಮನರಂಜನೆ ನೀಡುವ ಹಾಗೂ ಮೆದುಳಿಗೆ ಕೆಲಸ ಕೊಡುವ ಚಿತ್ರಗಳಾಗಿವೆ. ಈ ಚಿತ್ರಗಳನ್ನು ನೋಡಿದ ತಕ್ಷಣ ಗಮನ ಸೆಳೆಯುವಂತೆ ಇರುತ್ತವೆ. ಚಿತ್ರದಲ್ಲಿ ಸವಾಲುಗಳಿದ್ದು, ಇದಕ್ಕೆ ಉತ್ತರ ಹೇಳುವುದು ಖಂಡಿತವಾಗಿಯೂ ಸುಲಭವಾಗಿರುವುದಿಲ್ಲ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್ ಟೀಸರ್‌ಗಳು ಸಾಕಷ್ಟು ವೈರಲ್ ಆಗುತ್ತಿವೆ.
ಇನ್‌ಸ್ಟಾಗ್ರಾಂ ವೈರಲ್ ಆಗಿರುವ ಬ್ರೈನ್ ಟೀಸರ್ ಚಿತ್ರವೊಂದು ಇಲ್ಲಿದೆ. ಇದರಲ್ಲಿ ಕೇಸರಿ ಹಾಗೂ ಆಕಾಶ ನೀಲಿ ಬಣ್ಣದ ಬಾಕ್ಸ್ ಇದ್ದು ಎರಡನ್ನೂ ಒಟ್ಟಿಗೆ ಜೋಡಿಸಲಾಗಿದೆ. ಈ ಎರಡರಲ್ಲಿ ಅಸ್ಪಷ್ಟವಾಗಿ ಒಂದು ನಂಬರ್ ಅನ್ನು ಬರೆಯಲಾಗಿದೆ. ಆ ನಂಬರ್ ಯಾವುದು ಎಂದು 8 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ಮೇಲ್ನೋಟಕ್ಕೆ ನಿಮಗೆ ಕಾಣಿಸುವ ನಂಬರ್ ಬೇರೆಯದ್ದೇ ಇದ್ದರೂ ಇದರಲ್ಲಿ ಬರೆದಿರುವ ಸರಿಯಾದ ನಂಬರ್ ಅನ್ನು ಗುರುತಿಸಲು ಹದ್ದಿನ ಕಣ್ಣು ನಿಮ್ಮದಾಗಿರಬೇಕು.
@br4inteaserhub ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಳ್ಳಲಾಗಿರುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನೆಟ್ಟಿಗರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಕಣ್ಣು ಶಾರ್ಪ್ ಇದೆ ಎಂದವರು ಕೂಡ ಇದಕ್ಕೆ ಉತ್ತರ ಹೇಳುವಲ್ಲಿ ಸೋತಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮಿಂದ ಅದೂ 8 ಸೆಕೆಂಡ್ ಒಳಗೆ ಉತ್ತರ ಹೇಳಲು ಸಾಧ್ಯವೇ ನೋಡಿ.
ಈ ಬ್ರೈನ್ ಟೀಸರ್‌ಗೆ ಹಲವರು ಕಾಮೆಂಟ್ ಮಾಡಿದ್ದು, ತಾವು ಉತ್ತರ ಕಂಡುಕೊಂಡಿದ್ದೇವೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ‘ತಕ್ಷಣವೇ ನನಗೆ ಉತ್ತರ ಸಿಕ್ಕಿತು. ನನ್ನದು ಖಂಡಿತ ಹದ್ದಿನ ಕಣ್ಣು‘ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುತೇಕರು ಇದಕ್ಕೆ ಉತ್ತರ 838 ಎಂದು ಕಾಮೆಂಟ್ ಮಾಡಿದ್ದಾರೆ.
ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವುದು ಮಜವಾಗಿರುತ್ತದೆ, ಇದಕ್ಕೆ ನಾವು ಉತ್ತರ ಕಂಡುಕೊಂಡ ಮೇಲೆ ನಮ್ಮ ಸ್ನೇಹಿತರು ಆತ್ಮೀಯರ ಜೊತೆ ಹಂಚಿಕೊಂಡು ಅವರಿಗೆ ಸವಾಲು ಹಾಕಬಹುದು. ಇಷ್ಟೇ ಅಲ್ಲ, ಇದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ಗಮನಶಕ್ತಿ ಹೆಚ್ಚುತ್ತದೆ. ಸಮಸ್ಯೆ ಪರಿಹರಿಸುವ ಗುಣ ಬೆಳೆಯುತ್ತದೆ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ನಲ್ಲಿ 'ಎ'ಗೂ 'ಡಿ'ಗೂ ಇರುವ ಸಂಬಂಧವೇನು ಹೇಳಿ? ಬುದ್ಧಿ ಉಪಯೋಗಿಸಿ ಉತ್ತರಿಸಿ
ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆಯಂತಿರುವ ಈ ಬ್ರೈನ್ ಟೀಸರ್ ಸಂಬಂಧಗಳ ರಹಸ್ಯವನ್ನು ಬಿಚ್ಚಿಡುವಂಥದ್ದು. ಎ ಹಾಗೂ ಡಿ ನಡುವೆ ಇರುವ ಸಂಬಂಧ ಏನು ಎಂಬುದನ್ನು ನೀವು ಹೇಳಬೇಕು.
Brain Teaser: 888ರ ಸಾಲಿನಲ್ಲಿ ಒಂದೇ ಒಂದು ಕಡೆ 808 ಇದೆ, ಅದು ಎಲ್ಲಿದೆ ಎಂದು 10 ಸೆಕೆಂಡ್‌ನಲ್ಲಿ ಹುಡುಕಬೇಕು, ನಿಮಗಿದು ಚಾಲೆಂಜ್
ಮೇಲಿಂದ ಕೆಳಗೆ ಉದ್ದದಿಂದ ಅಡ್ಡಕ್ಕೆ 888 ಎಂದು ಬರೆಯಲಾಗಿರುವ ಈ ಚಿತ್ರದಲ್ಲಿ ಒಂದೇ ಒಂದು ಕಡೆ 808 ಸಂಖ್ಯೆ ಇದೆ. ಅದು ಎಲ್ಲಿದೆ ಎಂಬದನ್ನು ನೀವು 10 ಸೆಕೆಂಡ್ ಒಳಗೆ ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮ ಕಣ್ಣು ನಿಜಕ್ಕೂ ಚುರುಕಾಗಿದೆ ಅಂದ್ರೆ 808 ಎಲ್ಲಿದೆ ಹೇಳಿ.