Brain Teaser: ಚಿತ್ರದಲ್ಲಿ ಒಂದೇ ಒಂದು ಭಿನ್ನವಾಗಿರುವ ಬಲ್ಬ್ ಇದೆ, ಅದು ಎಲ್ಲಿದೆ ಹೇಳಿ? ನಿಮಗಿರೋದು 3 ಸೆಕೆಂಡ್ ಸಮಯ, ಟ್ರೈ ಮಾಡಿ-viral news brain teaser optical illusion can you spot the odd bulb in 3 seconds eye test social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಒಂದೇ ಒಂದು ಭಿನ್ನವಾಗಿರುವ ಬಲ್ಬ್ ಇದೆ, ಅದು ಎಲ್ಲಿದೆ ಹೇಳಿ? ನಿಮಗಿರೋದು 3 ಸೆಕೆಂಡ್ ಸಮಯ, ಟ್ರೈ ಮಾಡಿ

Brain Teaser: ಚಿತ್ರದಲ್ಲಿ ಒಂದೇ ಒಂದು ಭಿನ್ನವಾಗಿರುವ ಬಲ್ಬ್ ಇದೆ, ಅದು ಎಲ್ಲಿದೆ ಹೇಳಿ? ನಿಮಗಿರೋದು 3 ಸೆಕೆಂಡ್ ಸಮಯ, ಟ್ರೈ ಮಾಡಿ

ಬ್ರೈನ್ ಟೀಸರ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ನಮ್ಮ ಕಣ್ಣು ನಮಗೆ ಮೋಸ ಮಾಡುವಂತೆ ಅನ್ನಿಸುವ ಈ ಚಿತ್ರಗಳು ಮೆದುಳನ್ನು ಚುರುಕು ಮಾಡುತ್ತವೆ. ಇಲ್ಲೊಂದು ಅಂಥದ್ದೇ ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಭಿನ್ನವಾಗಿರುವ ಬಲ್ಬ್ ಯಾವುದು ಎಂಬುದನ್ನು 3 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಸಮಯ ಈಗ ಶುರು, ಉತ್ತರ ಹೇಳಲು ಪ್ರಯತ್ನ ಮಾಡಿ.

ಚಿತ್ರದಲ್ಲಿ ಒಂದೇ ಒಂದು ಭಿನ್ನವಾಗಿರುವ ಬಲ್ಬ್ ಇದೆ, ಅದು ಎಲ್ಲಿದೆ ಹೇಳಿ?
ಚಿತ್ರದಲ್ಲಿ ಒಂದೇ ಒಂದು ಭಿನ್ನವಾಗಿರುವ ಬಲ್ಬ್ ಇದೆ, ಅದು ಎಲ್ಲಿದೆ ಹೇಳಿ? (PC: Jagranjosh )

ನಿಮ್ಮ ಕಣ್ಣು ಎಷ್ಟು ಶಾರ್ಪ್ ಇದೆ ಅಂತ ನೋಡ್ಬೇಕಾ. ಹಾಗಾದ್ರೆ ಬಲ್ಬ್‌ಗಳಿಂದ ತುಂಬಿರುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಪ್ರಯತ್ನಿಸಿ. ಪ್ರಶ್ನೆ ನಿಮಗೆ ಸರಳ ಅನ್ನಿಸಿದ್ರೂ ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕೋದು ಖಂಡಿತ ಸುಲಭವಲ್ಲ. ಯಾಕೆಂದ್ರೆ ಚಿತ್ರದಲ್ಲಿ ಇರುವ ಅಷ್ಟು ಬಲ್ಬ್‌ಗಳಲ್ಲಿ ಒಂದು ಬಲ್ಬ್ ಮಾತ್ರ ಭಿನ್ನವಾಗಿದೆ. ಆ ಬಲ್ಬ್ ಯಾವುದು ಎಂಬುದನ್ನು ನೀವು 3 ಸೆಕೆಂಡ್‌ ಒಳಗೆ ಕಂಡುಹಿಡಿಯಬೇಕು. ಯಾರ ಕಣ್ಣು ಹದ್ದಿನಕಣ್ಣಿನಷ್ಟೇ ಶಾರ್ಪ್ ಇರುತ್ತೋ ಅವರಿಗೆ ಮಾತ್ರ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ.

ಈ ಆಪ್ಟಿಕಲ್ ಇಲ್ಯೂಷನ್ ಬ್ರೈನ್ ಟೀಸರ್ ಚಿತ್ರವು ನಮ್ಮ ಮೆದುಳಿಗೂ ಕೆಲಸ ಕೊಡುತ್ತದೆ. ಅಷ್ಟು ಚುರುಕಾಗಿ ಮೆದುಳು ಭಿನ್ನವಾಗಿರುವ ಬಲ್ಬ್ ಅನ್ನು ಗ್ರಹಿಸಿದರೆ ಮಾತ್ರ ಕಣ್ಣು ಯಾವುದು ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಇಂತಹ ಬ್ರೈನ್ ಟೀಸರ್‌ಗಳು ನಿಮ್ಮ ಕಣ್ಣು ಹಾಗೂ ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇದು ನಿಮಗೆ ಮೋಜು ನೀಡುತ್ತದೆ. ನೀವು ಉತ್ತರ ಕಂಡುಹಿಡಿಯುವುದು ಮಾತ್ರವಲ್ಲ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಈ ಬ್ರೈನ್ ಟೀಸರ್ ಅನ್ನು ಶೇರ್ ಮಾಡಿ ಅವರ ಜಾಣತನವನ್ನೂ ಪರೀಕ್ಷೆ ಮಾಡಬಹುದು.

ಇಂದಿನ ಬ್ರೈನ್ ಟೀಸರ್‌ ಚಿತ್ರದಲ್ಲಿ ಒಟ್ಟು 24 ಬಲ್ಬ್‌ಗಳನ್ನು ಉದ್ದಕ್ಕೆ ಹಾಗೂ ಅಡ್ಡಕ್ಕೆ ಜೋಡಿಸಲಾಗಿದೆ. ಇದರಲ್ಲಿ ಒಂದು ಮಾತ್ರ ಭಿನ್ನವಾಗಿದೆ. ಆ ಭಿನ್ನವಾಗಿರುವ ಬಲ್ಬ್ ಯಾವುದು ಎಂಬುದನ್ನು 3 ಸೆಕೆಂಡ್ ಒಳಗೆ ಕಂಡುಹಿಡಿಯುವ ಪ್ರಯತ್ನ ಮಾಡಬೇಕು. ಮೇಲ್ನೋಟಕ್ಕೆ ಕಂಡಾಗ ಎಲ್ಲ ಚಿತ್ರಗಳು ಒಂದೇ ರೀತಿ ಕಾಣುತ್ತವೆ. ಆದರೆ ಇದರಲ್ಲಿ ಭಿನ್ನವಾಗಿರುವ ಬಲ್ಬ್ ಕೂಡ ಇದೆ ಎನ್ನುವುದು ಸುಳ್ಳಲ್ಲ.

ಈ ಬ್ರೈನ್ ಟೀಸರ್ ಅನ್ನೂ ಓದಿ

Brain Teaser: 4ಕ್ಕೆ 4 ಕೂಡಿಸಿ 4 ಗುಣಿಸಿ 4 ಕಳೆದು ನಾಲ್ಕರಿಂದ ಭಾಗಿಸಿದ್ರೆ ಉತ್ತರ ಎಷ್ಟು? ಥಟ್ಟಂತ ಹೇಳಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಗಣಿತದ ಪಜಲ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ. ಲೆಕ್ಕದಲ್ಲಿ ನೀವು ಎಷ್ಟೇ ಪಂಟರಾದ್ರೂ ಈ ಪ್ರಶ್ನೆ ನಿಮಗೆ ಗೊಂದಲ ಮಾಡಿಸುತ್ತೆ. ಕೂಡಿಸಿ, ಗುಣಿಸಿ, ಕಳೆದು ಭಾಗಿಸುವ ಪ್ರಶ್ನೆಗೆ ಉತ್ತರ ಎಷ್ಟು ಅಂತ ಥಟ್ಟಂತ ಹೇಳಿ.

Brain Teaser: ಈ ಚಿತ್ರದಲ್ಲಿ ಯಾವ ನಂಬರ್‌ ಕಾಣುತ್ತಿದೆ? 8 ಸೆಕೆಂಡ್‌ ಒಳಗೆ ಉತ್ತರ ಹೇಳಿ, ನಿಮ್ಮ ಕಣ್ಣಿಗೊಂದು ಪರೀಕ್ಷೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬ್ರೈನ್‌ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಮಾತ್ರವಲ್ಲ, ಕಣ್ಣಿಗೂ ನೋವಾಗುವಂತೆ ಮಾಡುತ್ತದೆ. ಈ ಬ್ರೈನ್‌ ಟೀಸರ್‌ನಲ್ಲಿ ಅಡಗಿರುವ ನಂಬರ್‌ ಯಾವುದು ಎಂಬುದನ್ನು ನೀವು 8 ಸೆಕೆಂಡ್‌ ಒಳಗೆ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗಿದು ಚಾಲೆಂಜ್‌.