ಬ್ರೈನ್ ಟೀಸರ್: ಚಿತ್ರದಲ್ಲಿ ಒಟ್ಟು ಎಷ್ಟು ಆಮೆಗಳಿವೆ; ನಿಮ್ಮ ಕಣ್ಣು ನಿಜಕ್ಕೂ ಸೂಕ್ಷ್ಮವಾಗಿದ್ರೆ 15 ಸೆಕೆಂಡ್ನಲ್ಲಿ ಸರಿ ಉತ್ತರ ಹೇಳಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್ ಚಿತ್ರವೊಂದು ನಿಮ್ಮ ಕಣ್ಣಿಗೆ ಪರೀಕ್ಷೆ ಒಡ್ಡುತ್ತದೆ. ಚಿತ್ರದಲ್ಲಿ ಒಟ್ಟು ಎಷ್ಟು ಆಮೆಗಳಿವೆ ಎಂಬುದನ್ನು ನೀವು 15 ಸೆಕೆಂಡ್ ಒಳಗೆ ಹೇಳಬೇಕು. ನಿಮ್ಮಿಂದ ಸಾಧ್ಯವೇ ಪ್ರಯತ್ನಿಸಿ.

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿವೆ. ಇವು ಜನರಿಗೆ ಸರಿಯಾದ ಉತ್ತರ ಹೇಳುವ ಸವಾಲು ನೀಡುತ್ತವೆ. ಈ ಚಿತ್ರಗಳಿಗೆ ಸರಿ ಉತ್ತರ ಹೇಳಲು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಆದರೆ ಇದರಿಂದ ಮಜಾ ಸಿಗುತ್ತದೆ. ಇದಕ್ಕಾಗಿ ನಾವು ಒಂದಿಷ್ಟು ಸಮಯ ವ್ಯಯಿಸುತ್ತೇವೆ. ಇದರಿಂದ ನಮ್ಮ ಮನಸ್ಸು ಹಗುರಾಗುತ್ತದೆ.
ಬ್ರೈನ್ ಟೀಸರ್ ಹಾಗೂ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ಇಷ್ಟಪಡುವವರಿಗಾಗಿ ಇಲ್ಲೊಂದು ಮೆದುಳಿಗೆ ಹುಳ ಬಿಡುವ ಚಿತ್ರವಿದೆ. ಇದಕ್ಕೆ ಸರಿ ಉತ್ತರ ಹೇಳುವುದು ಚಿತ್ರವನ್ನು ಮೇಲ್ನೋಟಕ್ಕೆ ನೋಡಿದಷ್ಟು ಸುಲಭವಲ್ಲ. ತಲೆ ಕರೆದುಕೊಂಡು ಚಿತ್ರವನ್ನು ನೋಡಿದರೆ ಸರಿಯಾದ ಉತ್ತರ ನಿಮ್ಮ ಕಣ್ಣಿಗೆ ಕಾಣಿಸಬಹುದು.
ಫೇಸ್ಬುಕ್ನಲ್ಲಿ ವೈರಲ್ ಆದ ಈ ಚಿತ್ರದಲ್ಲಿ ಒಂದಿಷ್ಟು ಆಮೆ ಹಾಗೂ ಆಮೆ ಮರಿಗಳಿವೆ. 3 ಸಾಲಿನಲ್ಲಿ ಉದ್ದದಿಂದ ಅಡ್ಡಕ್ಕೆ 9 ಆಮೆಗಳಿರುವಂತೆ ನಿಮ್ಮ ಕಣ್ಣಿಗೆ ಮೇಲ್ನೋಟಕ್ಕೆ ಕಾಣಿಸಬಹುದು. ಆದರೆ ಈ ಚಿತ್ರದಲ್ಲಿ ಇರುವುದು ಖಂಡಿತ 9 ಆಮೆಗಳಲ್ಲ.
ಈ ದೊಡ್ಡ ಆಮೆಗಳ ಒಳಗೆ ಚಿಕ್ಕ ಚಿಕ್ಕ ಆಮೆಗಳು ಅವಿತುಕೊಂಡಿವೆ. ಒಮ್ಮೆ ಕಂಡಾಗ ಕಾಣಿಸದ್ದು, ಇನ್ನೊಮ್ಮೆ ಕಂಡಾಗ ನಿಮ್ಮ ಕಣ್ಣು ಮುಂದೆ ಬರಬಹುದು. ಹೀಗೆ ಸೂಕ್ಷ್ಮವಾಗಿ ಈ ಚಿತ್ರವನ್ನು ಗಮನಿಸಿದಾಗ ಒಂದಿಷ್ಟು ಆಮೆಗಳು ಕಾಣಿಸುತ್ತವೆ. ಹಾಗಾದರೆ ಈ ಚಿತ್ರದಲ್ಲಿ ಒಟ್ಟು ಎಷ್ಟು ಆಮೆಗಳಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು.
ಈ ವೈರಲ್ ಚಿತ್ರಕ್ಕೆ ಹಲವರು ಉತ್ತರ ಹೇಳುವ ಪ್ರಯತ್ನ ಮಾಡಿದ್ದಾರೆ. ಕೆಲವರು ಇದಕ್ಕೆ 10 ಸರಿಯಾದ ಉತ್ತರ ಎಂದು ಹೇಳಿದರೆ, ಇನ್ನೂ ಕೆಲವರು 18 ಎಂದು ಹೇಳಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರ ನೀಡಿದ್ದಾರೆ.
‘ಮೊದಲು ನನಗೆ 9 ಕಾಣಿಸಿತು, ನಂತರ 12 ಕಾಣಿಸಿತು, ನಂತರ ಎಷ್ಟು ಕಾಣುತ್ತದೆ ಹೇಳಲು ಸಾಧ್ಯವಿಲ್ಲ‘ ಎಂದು ವ್ಯಕ್ತಿಯೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ‘ಇದೊಳ್ಳೇ ಕ್ರೇಜಿ ಇದೆ. ಕಂಡಷ್ಟು ಆಮೆಗಳು ಕಾಣಿಸುತ್ತಿವೆ. ನನಗೆ ನೋಡುವುದನ್ನು ನಿಲ್ಲಿಸಲು ಆಗುತ್ತಿಲ್ಲ‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಬ್ರೈನ್ ಟೀಸರ್ಗಳನ್ನೂ ಓದಿ
Brain Teaser: ಕಾಡಿನಲ್ಲಿ ಅಡಗಿರುವ ಜಿಂಕೆಯನ್ನು ಹುಡುಕಲು ನಿಮ್ಮಿಂದ ಸಾಧ್ಯವೇ? ನಿಮಗಿರೋದು 10 ಸೆಕೆಂಡ್ ಸಮಯ, ಟ್ರೈ ಮಾಡಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಜಿಂಕೆ ಹುಡುಕುವ ಸವಾಲನ್ನು ನಿಮಗೆ ನೀಡುತ್ತದೆ. ಇದರಲ್ಲಿ ಗೆಲ್ಲಲು ಸಾಧ್ಯವೇ ಪ್ರಯತ್ನಿಸಿ.
Brain Teaser: ಈ ಮೂವರಲ್ಲಿ ಹೆಚ್ಚು ಭಾರ ಹೊರುತ್ತಿರುವವರು ಯಾರು, ನೀವು ಬುದ್ಧಿವಂತರಾದ್ರೆ 5 ಸೆಕೆಂಡ್ನಲ್ಲಿ ಉತ್ತರ ಹೇಳಿ
ನಿಮ್ಮ ಐಕ್ಯೂ ಲೆವೆಲ್ ನಿಜಕ್ಕೂ ಹೈ ಇದೆ ಅಂತನ್ನಿಸಿದ್ರೆ ನಿಮಗಾಗಿ ಇಲ್ಲೊಂದು ಸವಾಲಿದೆ. ಈ ಮೂವರಲ್ಲಿ ಹೆಚ್ಚು ಭಾರ ಹೊತ್ತವರು ಯಾರು? 5 ಸೆಕೆಂಡ್ನಲ್ಲಿ ಹೇಳಿ.