ಕನ್ನಡ ಸುದ್ದಿ  /  Lifestyle  /  Viral News Brain Teaser Puzzle Can You Find The Value Of Number 3 In This Maths Test Without Using Pen And Paper Rst

Brain Teaser: 9=90 ಆದ್ರೆ, 3= ಎಷ್ಟು? ಗಣಿತದಲ್ಲಿ ಪಂಟರಾದ್ರೆ ಪೆನ್ನು-ಪೇಪರ್‌ ಬಳಸದೇ ಈ ಪ್ರಶ್ನೆಗೆ ಉತ್ತರ ಹೇಳಿ

ಇತ್ತೀಚಿಗೆ ಥ್ರೆಡ್‌ನಲ್ಲಿ ಪೋಸ್ಟ್‌ ಮಾಡಲಾದ ಬ್ರೈನ್‌ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಇದರಲ್ಲಿ ಒಂದು ಗಣಿತದ ಸೂತ್ರವಿದ್ದು, 3ರ ಮೌಲ್ಯ ಎಷ್ಟು ಎಂಬುದನ್ನು ಕಂಡುಹಿಡಿಯಬೇಕಾಗಿರುವುದು ನಿಮಗಿರುವ ಸವಾಲು. ಪೆನ್ನು-ಪೇಪರ್‌ ಬಳಸದೇ ಅದಕ್ಕೆ ಉತ್ತರ ಕಂಡುಹಿಡಿಯಲಯ ಸಾಧ್ಯವೇ? ಟ್ರೈ ಮಾಡಿ.

9=90 ಆದ್ರೆ, 3= ಎಷ್ಟು?
9=90 ಆದ್ರೆ, 3= ಎಷ್ಟು?

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಹಲವಾರು ಬ್ರೈನ್‌ ಟೀಸರ್‌ಗಳನ್ನು ಪೋಸ್ಟ್‌ ಮಾಡಲಾಗುತ್ತದೆ. ಅದರಲ್ಲಿ ಕೆಲವು ಸಾಕಷ್ಟು ವೈರಲ್‌ ಆಗುತ್ತವೆ. ಇಲ್ಲೊಂದು ಅಂತಹದ್ದೇ ವೈರಲ್‌ ಬ್ರೈನ್‌ ಟೀಸರ್‌ ಚಿತ್ರವಿದೆ. ಇದರಲ್ಲಿ ಗಣಿತದ ಸೂತ್ರವಿದ್ದು, ಪೆನ್ನು, ಪೇಪರ್‌, ಕ್ಯಾಲ್ಕುಲೇಟರ್‌ ಬಳಸದೇ ಇದಕ್ಕೆ ಉತ್ತರ ಕಂಡುಹಿಡಿಯುವುದು ನಿಮಗಿರುವ ಸವಾಲು. 9 ರಿಂದ 6 ವರೆಗೆ ಮೌಲ್ಯ ಎಷ್ಟು ಎಂದು ತಿಳಿಸಲಾಗಿತ್ತು. ಆದರೆ 3ಕ್ಕೆ ಎಷ್ಟು ಮೌಲ್ಯ ಎಂಬುದನ್ನು ನೀವು ಕಂಡುಹಿಡಿಯಬೇಕು. ಮನಸ್ಸಿನಲ್ಲೇ ಲೆಕ್ಕಾಚಾರ ಮಾಡಿ ಈ ಗಣಿತದ ಸೂತ್ರಕ್ಕೆ ಉತ್ತರ ಕಂಡುಹಿಡಿಯಲು ನಿಮ್ಮಿಂದ ಸಾಧ್ಯವಾಗುವುದೇ?

Roman Beskostõi ಎಂಬ ಥ್ರೆಡ್‌ ಬಳಕೆದಾರರು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಿದ್ದರು. ಇವರು ಆಗಾಗ ಪಜಲ್‌, ಬ್ರೈನ್‌ ಟೀಸರ್‌ಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಈ ಪೋಸ್ಟ್‌ ಮಾಡಿರುವ ಪಜಲ್‌ ಹೀಗಿದೆ ʼ9=90, 8=72, 7=56, 6=42, ಆದರೆ 3 = ಎಷ್ಟು? ಎಂಬುದು ಪ್ರಶ್ನೆಯಾಗಿದೆ.

ಇಂದು ಬೆಳಿಗ್ಗೆ ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಹಲವರು ಲೈಕ್ಸ್‌ ಮಾಡಿದ್ದಾರೆ. ಹಲವು ಪಜಲ್‌ ಪ್ರೇಮಿಗಳು ಭಾರಿ ತಲೆ ಕೆಡಿಸಿಕೊಂಡು ಇದಕ್ಕೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಕೆಲವರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮೂಲಕ ತಿಳಿಸಿದ್ದಾರೆ.

ʼಇದರಲ್ಲಿ ಯಾವ ಸೂತ್ರವೂ ಸರಿಯಿಲ್ಲʼ ಎಂದು ವ್ಯಕ್ತಿಯೊಬ್ಬರು ತಮಾಷೆಯಾಗಿ ಕಾಮೆಂಟ್‌ ಮಾಡಿದ್ದಾರೆ.

12 ಅಥವಾ 18 ಎಂದು ಎರಡನೇ ವ್ಯಕ್ತಿ ತಮ್ಮ ಉತ್ತರ ತಿಳಿಸಿದ್ದಾರೆ.

3=12 10,9,8,7,....4 ರಿಂದ ಭಾಗಿಸಿದಾಗ ಈ ಉತ್ತರ ಸಿಗುತ್ತದೆʼ ಎಂದು ಮೂರನೇ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ಕಾಮೆಂಟ್‌ ವಿಭಾಗದಲ್ಲಿ ಹಲವರು ಈ ಪ್ರಶ್ನೆಗೆ 12 ಉತ್ತರ ಎಂದು ತಿಳಿಸಿದ್ದಾರೆ. ಇನ್ನೂ ಕೆಲವರು 18 ಎಂದು ಉತ್ತರಿಸಿದ್ದಾರೆ. ಸರಿ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು?

ಇದನ್ನೂ ಓದಿ

Brain Teaser: 9ರಲ್ಲಿ 5 ಗುಣಿಸಿ 8 ಕಳೆದು 6 ರಿಂದ ಭಾಗಿಸಿದ್ರೆ ಎಷ್ಟಾಗುತ್ತೆ? ಗಣಿತ ಸುಲಭ ಅನ್ನೋರು ಉತ್ತರ ಹೇಳಿ

ನಂಗೆ ಗಣಿತ ಅಂದ್ರೆ ಇಷ್ಟ, ಗಣಿತದ ಸೂತ್ರಗಳನ್ನು ಬಿಡಿಸೋದು ನೀರು ಕುಡಿದಷ್ಟೇ ಸುಲಭ ಅನ್ನೋರಿಗಾಗಿ ಇಲ್ಲೊಂದು ಪಜಲ್‌ ಇದೆ. ಇದಕ್ಕೆ ಉತ್ತರ ಹೇಳಿದ್ರೆ ನೀವು ಖಂಡಿತ ಗಣಿತದಲ್ಲಿ ಜಾಣರು ಅನ್ನೋದ್ರಲ್ಲಿ ಅನುಮಾನವಿಲ್ಲ. ಇನ್ಯಾಕೆ ತಡ ಪ್ರಶ್ನೆ ಇಲ್ಲಿದೆ ನೋಡಿ.

Brain Teaser: ಕೂಡಿಸುವ ಲೆಕ್ಕದಲ್ಲಿ ನೀವು ಪಕ್ಕಾ ಇದ್ರೆ ಇಲ್ಲಿರುವ ಪ್ರಶ್ನೆಗೆ ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಿ? ನಿಮಗಿದು ಚಾಲೆಂಜ್‌

ಗಣಿತಪ್ರೇಮಿಗಳು ನೀವಾದ್ರೆ ಈ ಬ್ರೈನ್‌ ಟೀಸರ್‌ ನಿಮ್ಮ ಜಾಣತನಕ್ಕೆ ಸವಾಲು ಹಾಕುವುದು ಸುಳ್ಳಲ್ಲ. ಇಲ್ಲಿರುವ ಸುಲಭ ಕೂಡಿಸುವ ಲೆಕ್ಕಾಚಾರ, ಇದಕ್ಕೆ ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಿದ್ರೆ ನಿಮ್ಮಷ್ಟ ಜಾಣರು ಯಾರಿಲ್ಲ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ