ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನೀವು ಒಗಟು ಬಿಡಿಸೋದ್ರಲ್ಲಿ ಜಾಣರಾದ್ರೆ ಇಲ್ಲಿದೆ ಒಂದು ಸವಾಲು; ನಿಮಗಿರೋದು ಬರೀ 10 ಸೆಕೆಂಡ್‌ ಸಮಯ

Brain Teaser: ನೀವು ಒಗಟು ಬಿಡಿಸೋದ್ರಲ್ಲಿ ಜಾಣರಾದ್ರೆ ಇಲ್ಲಿದೆ ಒಂದು ಸವಾಲು; ನಿಮಗಿರೋದು ಬರೀ 10 ಸೆಕೆಂಡ್‌ ಸಮಯ

ಇಲ್ಲಿ ನಿಮಗೊಂದು ಚೆಂದದ ಒಗಟಿದೆ. ಇದು ನೀವೆಷ್ಟು ಜಾಣರು ಮತ್ತೂ ನಿಮ್ಮ ಸವಾಲು ಬಿಡಿಸುವ ವೇಗ ಎಷ್ಟು ಎಂಬುದನ್ನು ತೋರಿಸುತ್ತದೆ. ಈ ಒಗಟಿಗೆ 10 ಸೆಕೆಂಡ್‌ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಉತ್ತರ ಹುಡುಕಬಲ್ಲಿರಾ? ಇಲ್ಲಿದೆ ನೋಡಿ ಒಗಟು.

ಈ ಒಗಟಿಗೆ 10 ಸೆಕೆಂಡ್‌ನ ಒಳಗೆ ಉತ್ತರಿಸಿ; ನೀವೆಷ್ಟು ಜಾಣರೆಂದು ತೋರಿಸಿ.
ಈ ಒಗಟಿಗೆ 10 ಸೆಕೆಂಡ್‌ನ ಒಳಗೆ ಉತ್ತರಿಸಿ; ನೀವೆಷ್ಟು ಜಾಣರೆಂದು ತೋರಿಸಿ.

ನಿಮಗೆ ಒಂದೇ ರೀತಿಯ ಕೆಲಸ ಮಾಡಿ, ಮಾಡಿ ಬೋರ್‌ ಆಗ್ತಾ ಇದೆಯಾ? ನಿಮಗೊಂದಿಷ್ಟು ಚಿಕ್ಕ ಬ್ರೇಕ್‌ ಬೇಕು ಅಂತ ಅನಿಸುತ್ತಿದೆಯಾ? ಹಾಗಂತ ಸುಮ್ಮನೆ ಕುಳಿತುಕೊಳ್ಳಬೇಡಿ. ಕೆಲಸದಿಂದ ಸ್ವಲ್ಪ ಬಿಡುವು ಪಡೆಯುವುದರ ಜೊತೆಗೆ ನಿಮ್ಮ ಮೆದುಳಿಗೂ ಟಾನಿಕ್‌ ನೀಡಬಹುದು. ಹೇಗೆಂದರೆ ಇಲ್ಲಿ ಒಂದು ಒಗಟು ನೀಡಲಾಗಿದೆ. ಅದು ನಿಮ್ಮ ಕ್ರಿಯೇಟಿವಿಟಿ ಮತ್ತು ಸ್ಕಿಲ್‌ಗೆ ಸವಾಲು ಹಾಕುವಂತಿದೆ. ಸಾಮಾನ್ಯವಾಗಿ ಒಗಟುಗಳೆಲ್ಲವೂ ನಾವು ದಿನನಿತ್ಯ ಬಳಸುವ ಅಥವಾ ನೋಡುವ ವಸ್ತುಗಳಿಗೆ ಸಂಬಂಧಿಸಿದ್ದೇ ಆಗಿರುತ್ತದೆ. ಬಹಳ ಜಾಣ್ಮೆಯಿಂದ ಅವುಗಳನ್ನು ಪ್ರಶ್ನೆಯ ರೀತಿಯಲ್ಲಿ ನೀಡಿರುತ್ತಾರೆ. ಸೂಕ್ಷ್ಮವಾಗಿ ಗಮನಿಸಿದರೆ ಉತ್ತರ ನಿಮ್ಮದಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಒಗಟಿಗೆ ಉತ್ತರ ಕಂಡು ಹಿಡಿಯುವುದೆಂದರೆ ನಿಮ್ಮ ಮೆದುಳಿಗೆ ಮೇವು ನೀಡಿದಂತೆ. ನಿಮ್ಮ ಯೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ಒಗಟಿನಲ್ಲಿ ಬಹಳಷ್ಟು ಹಿಂಟ್‌ಗಳಿರುತ್ತವೆ. ಒಗಟು ಬಿಡಿಸುವವರು ಅದನ್ನು ಗಮನಿಸಬೇಕಷ್ಟೇ. ಕೆಲವು ಒಗಟುಗಳು ಅದೆಷ್ಟು ಮಜವಾಗಿರುತ್ತವೆ ಎಂದರೆ, ಉತ್ತರ ಕಂಡು ಹಿಡಿದ ಮೇಲೆ ಅದು ನಿಮ್ಮ ಮುಖದಲ್ಲಿ ನಗುವನ್ನು ಸಹ ತರಿಸಬಲ್ಲದು. ಇಲ್ಲೊಂದು ಬಹಳ ಸುಲಭದ ಒಗಟಿದೆ. ಇಂದಿನ ಕಾಲಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯತ್ನಿಸುತ್ತೀರಾ?

ಈ ಬ್ರೈನ್‌ ಟೀಸರ್‌ ಅನ್ನು @cl_ipm_bba ಇನ್‌ಸ್ಟಾಗ್ರಾಂ ಬಳಕೆದಾದರು ಹಂಚಿಕೊಂಡಿದ್ದಾರೆ. ಜೊತೆಗೆ ಇದಕ್ಕೊಂದು ಹಿಂಟ್‌ ಅನ್ನು ನೀಡಿದ್ದಾರೆ. ಈ ಒಗಟಿಗೆ ಉತ್ತರ ಕಂಡು ಹಿಡಿಯಲು ನಿಮಗಿರುವುದು ಕೇವಲ 10 ಸೆಕೆಂಡ್‌. ಇದಕ್ಕೆ ಉತ್ತರ ಕಂಡುಕೊಳ್ಳಲು ನಿಮಗೆ ಅಷ್ಟೊಂದು ಸಮಯ ಬೇಕೆಂದಿಲ್ಲ. ನಿಮ್ಮ ಬುದ್ಧಿ ಬಹಳ ಶಾರ್ಪ್‌ ಆಗಿದೆ ಎಂಬುದು ನಮಗೆ ತಿಳಿದಿದೆ. ಆ ಒಗಟು ಹೀಗಿದೆ, ‘ನನ್ನ ಹತ್ತಿರ ಕೀ ಇದೆ, ಆದರೆ ಅದು ಯಾವ ಬೀಗವನ್ನು ತೆಗೆಯುವುದಿಲ್ಲ, ನನಗೆ ಸ್ಪೇಸ್‌ ಇದೆ ಆದರೆ ಕೋಣೆಯಿಲ್ಲ, ನೀವು ಎಂಟರ್‌ ಆಗಬಹುದು, ಆದರೆ ಹೊರ ಹೋಗಲಾಗುವುದಿಲ್ಲ. ನಾನು ಯಾರು?’ ಇದಕ್ಕೆ ಅವರು ಹಿಂಟ್‌ ಒಂದನ್ನು ಸಹ ನೀಡಿದ್ದಾರೆ, ಅದೇನೆಂದರೆ, ಆ ವಸ್ತುವನ್ನು ನಾವು ಪ್ರತಿನಿತ್ಯ ಬಳಸುತ್ತೇವಂತೆ. ಹಾಗಾದ್ರೆ ಇನ್ನೇನು ಯೋಚಿಸುತ್ತಿದ್ದೀರಾ, ಉತ್ತರ ಕಂಡು ಹಿಡಿದೇ ಬಿಡಿ.

ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ಒಗಟು ಬಹಳಷ್ಟು ಲೈಕ್‌ ಮತ್ತು ಕಮೆಂಟ್‌ಗಳಿಸಿದೆ. ಅನೇಕ ನೆಟ್ಟಿಗರು ಇದಕ್ಕೆ ಸರಿಯಾದ ಉತ್ತರ ಕಂಡು ಹಿಡಿದು ತಮ್ಮ ಕಮೆಂಟ್‌ ಬರೆದು ಪೋಸ್ಟ್‌ ಮಾಡಿದ್ದಾರೆ. ಕಮೆಂಟ್‌ ವಿಭಾಗದಲ್ಲಿ ತುಂಬಿರುವ ಉತ್ತರಗಳನ್ನು ಗಮನಿಸಿದರೆ ಬಹಳಷ್ಟು ಜನರು ಇದಕ್ಕೆ ಸರಿಯಾದ ಉತ್ತರ ಕೀಬೋರ್ಡ್‌ ಎಂದು ಹೇಳಿದ್ದಾರೆ. ಈಗ ನಿಮ್ಮ ಸರದಿ, ನೀವೂ ಯೋಚಿಸಿ, ಒಗಟನ್ನು ಸರಿಯಾಗಿ ಗಮನಿಸಿ. ಕಮೆಂಟ್‌ ಮಾಡಿ, ಉತ್ತರ ಹೇಗೆ ಕಂಡುಹಿಡಿದಿರಿ ಎಂದು ಹೇಳಿ.

ವಿಭಾಗ