Brain Teaser: ಮಳೆಯಲ್ಲಿ ಕೊಡೆ ಇಲ್ಲದೇ ನಿಂತಿದ್ರು ಸುರೇಶನ ಕೂದಲು ಒದ್ದೆಯಾಗ್ತಿಲ್ಲ, ಕಾರಣ ಏನು; ಜಾಣರಾದ್ರೆ ಉತ್ತರ ಹೇಳಿ-viral news brain teaser suresh standing in the rain doesnt get his hair wet can you tell why social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಮಳೆಯಲ್ಲಿ ಕೊಡೆ ಇಲ್ಲದೇ ನಿಂತಿದ್ರು ಸುರೇಶನ ಕೂದಲು ಒದ್ದೆಯಾಗ್ತಿಲ್ಲ, ಕಾರಣ ಏನು; ಜಾಣರಾದ್ರೆ ಉತ್ತರ ಹೇಳಿ

Brain Teaser: ಮಳೆಯಲ್ಲಿ ಕೊಡೆ ಇಲ್ಲದೇ ನಿಂತಿದ್ರು ಸುರೇಶನ ಕೂದಲು ಒದ್ದೆಯಾಗ್ತಿಲ್ಲ, ಕಾರಣ ಏನು; ಜಾಣರಾದ್ರೆ ಉತ್ತರ ಹೇಳಿ

ಒಗಟು ಬಿಡಿಸುವುದರಲ್ಲಿ ನೀವು ಜಾಣರಾದ್ರೆ ನಿಮಗಾಗಿ ಇಲ್ಲಿದೆ ಒಂದು ಮೆದುಳಿಗೆ ಹುಳ ಬಿಡುವ ಸವಾಲು. ಪ್ರಶ್ನೆ ಏನೋ ಸರಳ ಇದೆ, ಆದ್ರೆ ಉತ್ತರ ಹೇಳೋಕೆ ನೀವು ಬುದ್ದಿ ಖರ್ಚು ಮಾಡಲೇಬೇಕು. ಕೊಡೆ, ಟೋಪಿ ಇಲ್ಲದೇ ಮಳೆಯಲ್ಲಿ ಹೊರಗಡೆ ನಿಂತಿದ್ರು ಸುರೇಶನ ಕೂದಲು ಸ್ವಲ್ಪವೂ ಒದ್ದೆಯಾಗ್ತಿಲ್ಲ, ಯಾಕೆ?

ಮಳೆಯಲ್ಲಿ ಕೊಡೆ ಇಲ್ಲದೇ ನಿಂತಿದ್ರು ಸುರೇಶನ ಕೂದಲು ಒದ್ದೆಯಾಗ್ತಿಲ್ಲ, ಕಾರಣ ಏನು
ಮಳೆಯಲ್ಲಿ ಕೊಡೆ ಇಲ್ಲದೇ ನಿಂತಿದ್ರು ಸುರೇಶನ ಕೂದಲು ಒದ್ದೆಯಾಗ್ತಿಲ್ಲ, ಕಾರಣ ಏನು

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವ ಪಜಲ್‌ಗಳು, ಬ್ರೈನ್‌ ಟೀಸರ್‌ಗಳು, ಆಪ್ಟಿಕಲ್‌ ಇಲ್ಯೂಷನ್‌ಗಳು ನಿಮ್ಮ ಕಣ್ಣು ಹಾಗೂ ಮೆದುಳಿಗೆ ಅಚ್ಚರಿ ಹುಟ್ಟಿಸುತ್ತವೆ. ಅಲ್ಲದೆ ಕೆಲ ಹೊತ್ತು ಕಣ್ಣು ಹಾಗೂ ಮೆದುಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಇವುಗಳಿಂದ ಉತ್ತರ ಹುಡುಕುವುದರಿಂದ ದೃಷ್ಟಿ ಹಾಗೂ ಬುದ್ಧಿಶಕ್ತಿ ಚುರುಕಾಗುತ್ತದೆ ಎಂಬುದು ಸುಳ್ಳಲ್ಲ. ಇವು ಮನಸ್ಸಿಗೂ ಖುಷಿ ಕೊಡುತ್ತವೆ. ಇದನ್ನು ನೀವು ಬೇರೆಯವರೊಂದಿಗೆ ಹಂಚಿಕೊಂಡು ಉತ್ತರ ಹುಡುಕಲು ಹೇಳಬಹುದು. ಬೇಸರ ಸಮಯದಲ್ಲ ಟೈಮ್‌ಪಾಸ್‌ ಮಾಡಲು ಬ್ರೈನ್‌ ಟೀಸರ್‌ಗಿಂತ ಉತ್ತಮವಾದುದಿಲ್ಲ.

ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಬ್ರೈನ್‌ ಟೀಸರ್‌ವೊಂದನ್ನು ಪೋಸ್ಟ್‌ ಮಾಡಲಾಗಿತ್ತು. Current Affairs by Testbook ಎಂಬ ಖಾತೆಯಿಂದ ಪೋಸ್ಟ್‌ ಆಗಿರುವ ಒಗಟಿನ ಬ್ರೈನ್‌ ಟೀಸರ್‌ ನಿಮ್ಮ ಬುದ್ಧಿಗೆ ಗುದ್ದು ಕೊಡುವುದರಲ್ಲಿ ಅನುಮಾನವಿಲ್ಲ. ಈ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಆಗಾಗ ಬ್ರೈನ್‌ ಟೀಸರ್‌, ಆಪ್ಟಿಕಲ್‌ ಇಲ್ಯೂಷನ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿನ ಬ್ರೈನ್‌ ಟೀಸರ್‌ನಲ್ಲಿನ ಪ್ರಶ್ನೆ ಹೀಗಿದೆ. ʼಜೋರಾಗಿ ಮಳೆ ಸುರಿಯುತ್ತಿರುವಾಗ ವ್ಯಕ್ತಿಯೊಬ್ಬ ಕೊಡೆ, ಟೋಪಿ ಏನೂ ಇಲ್ಲದೇ ಹೊರಗಡೆ ನಿಂತಿರುತ್ತಾನೆ. ಆದರೆ ಅವನು ಕೂದಲು ಮಾತ್ರ ಸ್ವಲ್ಪವೂ ಒದ್ದೆಯಾಗುವುದಿಲ್ಲ. ಇದು ಹೇಗೆ?

ಇಂದು ಬೆಳಿಗ್ಗೆ ಈ ಬ್ರೈನ್‌ ಟೀಸರ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಲಾಗಿತ್ತು. ಈಗಾಗಲೇ ಇದಕ್ಕೆ ಹಲವಾರು ಲೈಕ್ಸ್‌ ಹಾಗೂ ಕಾಮೆಂಟ್‌ಗಳು ಬಂದಿವೆ. ಹಲವರು ಆ ವ್ಯಕ್ತಿಗೆ ಕೂದಲೇ ಇಲ್ಲ, ಅವನು ಬೋಳ ತಲೆಯವನು ಎಂದು ಕಾಮೆಂಟ್‌ ಮಾಡಿದ್ದಾರೆ.

ಹಾಗಾದ್ರೆ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು?

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ಕಳ್ಳ ಕದ್ದಿದ್ದು 100 ರೂ, ಅಂಗಡಿಯವರು ಕೊಟ್ಟಿದ್ದು 30 ರೂ; ಹಾಗಾದ್ರೆ ಅಂಗಡಿಯವರಿಗಾದ ನಷ್ಟವೆಷ್ಟು; ಉತ್ತರ ಹೇಳಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಗಣಿತದ ಪಜಲ್‌ವೊಂದು ಗಣಿತ ಪ್ರೇಮಿಗಳ ತಲೆ ಕೆಡಿಸಿದೆ. ಮೇಲ್ನೋಟಕ್ಕೆ ಇದಕ್ಕೆ ಉತ್ತರ ಸರಳ ಎನ್ನಿಸಿದರೂ ಇದು ಮೆದುಳಿಗೆ ಹುಳ ಬಿಡುವಂತೆ ಮಾಡುವುದು ಖಂಡಿತ. ನೀವು ಗಣಿತದಲ್ಲಿ ಶಾರ್ಪ್‌ ಇದ್ರೆ ಉತ್ತರ ಕಂಡುಹಿಡಿಯೋಕೆ ಟ್ರೈ ಮಾಡಿ.

Brain Teaser: ಎಷ್ಟು ಮೊಟ್ಟೆ ಉಳಿದಿವೆ ಅಂತ ಹೇಳ್ತೀರಾ? ಶೇ 99ರಷ್ಟು ಜನ ತಪ್ಪು ಉತ್ತರನೇ ಹೇಳೋದು

Viral News: ಒಬ್ಬ ವ್ಯಕ್ತಿ ಹೇಳ್ತಾನೆ, ನನ್ನ ಬಳಿ 6 ಮೊಟ್ಟೆಗಳಿವೆ. 2 ಮೊಟ್ಟೆಯನ್ನು ಒಡೆದೆ, 2 ಮೊಟ್ಟೆಯನ್ನು ಫ್ರೈ ಮಾಡಿದೆ, 2 ಮೊಟ್ಟೆಯನ್ನು ತಿಂದೆ. ಹಾಗಾದ್ರೆ ನನ್ನ ಬಳಿ ಎಷ್ಟು ಮೊಟ್ಟೆ ಉಳಿಯಿತು ಎಂದು ಕೇಳ್ತಾನೆ. ಈ ಪ್ರಶ್ನೆಗೆ ನೀವೇ ಉತ್ತರ ಕೊಡಬೇಕು.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point