Brain Teaser: ಆಮೆಗಳ ಹಿಂಡಿನಲ್ಲಿ ಹಾವೊಂದಿದೆ, ಅದನ್ನು 5 ಸೆಕೆಂಡ್‌ನಲ್ಲಿ ಕಂಡುಹಿಡಿಬೇಕು, ನಿಮ್ಮ ಕಣ್ಣಿಗಿದು ಚಾಲೆಂಜ್‌
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಆಮೆಗಳ ಹಿಂಡಿನಲ್ಲಿ ಹಾವೊಂದಿದೆ, ಅದನ್ನು 5 ಸೆಕೆಂಡ್‌ನಲ್ಲಿ ಕಂಡುಹಿಡಿಬೇಕು, ನಿಮ್ಮ ಕಣ್ಣಿಗಿದು ಚಾಲೆಂಜ್‌

Brain Teaser: ಆಮೆಗಳ ಹಿಂಡಿನಲ್ಲಿ ಹಾವೊಂದಿದೆ, ಅದನ್ನು 5 ಸೆಕೆಂಡ್‌ನಲ್ಲಿ ಕಂಡುಹಿಡಿಬೇಕು, ನಿಮ್ಮ ಕಣ್ಣಿಗಿದು ಚಾಲೆಂಜ್‌

ಆಮೆಗಳ ಹಿಂಡಿನಲ್ಲಿ ಇಣುಕಿ ನೋಡುತ್ತಿರುವ ಹಾವನ್ನು 5 ಸೆಕೆಂಡ್‌ನಲ್ಲಿ ಕಂಡು ಹಿಡಿಯಬೇಕು. ನೀವು ನಿಜಕ್ಕೂ ಶಾರ್ಪ್‌ ಅಂತಾದ್ರೆ ಇದಕ್ಕೆ ಉತ್ತರ ಹುಡುಕಲು ಟ್ರೈ ಮಾಡಿ. ಹಾವು ಎಲ್ಲಿದೆ ಹುಡುಕಿ, ನಿಮ್ಮ ಸಮಯ ಈಗ ಶುರು…

ಆಮೆಗಳ ಹಿಂಡಿನಲ್ಲಿ ಹಾವೊಂದಿದೆ, ಅದನ್ನು 5 ಸೆಕೆಂಡ್‌ ಕಂಡುಹಿಡಿಬೇಕು, ನಿಮ್ಮ ಕಣ್ಣಿಗಿದು ಚಾಲೆಂಜ್‌
ಆಮೆಗಳ ಹಿಂಡಿನಲ್ಲಿ ಹಾವೊಂದಿದೆ, ಅದನ್ನು 5 ಸೆಕೆಂಡ್‌ ಕಂಡುಹಿಡಿಬೇಕು, ನಿಮ್ಮ ಕಣ್ಣಿಗಿದು ಚಾಲೆಂಜ್‌

ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹುಡುಕಲು ನಮ್ಮ ಮೆದುಳು ಸಖತ್‌ ಶಾರ್ಪ್‌ ಇರಬೇಕು ಅನ್ನೋದು ಸುಳ್ಳಲ್ಲ. ಒಮ್ಮೆ ಇದನ್ನು ನೋಡಿದಾಗ ಉತ್ತರ ಹುಡುಕದೇ ಬಿಡುವುದು ಆಗುವುದಿಲ್ಲ. ಅಷ್ಟರ ಮಟ್ಟಿಗೆ ಮೆದುಳಿಗೆ ಹುಚ್ಚು ಹಿಡಿಸುತ್ತದೆ. ಇದು ಸವಾಲುಗಳನ್ನು ಬಿಡಿಸಲು ನಿಮಗೆ ಸಹಾಯ ಮಾಡುತ್ತದೆ. ಬ್ರೈನ್‌ ಟೀಸರ್‌ಗಳನ್ನು ಬಿಡಿಸುತ್ತಾ ಬಿಡಿಸುತ್ತಾ ನಿಮ್ಮಲ್ಲಿ ಸಮಸ್ಯೆ ಪರಿಹರಿಸಲು ಕೌಶಲವು ವೃದ್ಧಿಯಾಗುತ್ತದೆ.

ಇದೊಂದು ಅಂಥದ್ದೇ ಬ್ರೈನ್‌ ಟೀಸರ್‌ ಇದೆ. ಇದರಲ್ಲಿ ರಾಶಿ ಆಮೆಗಳಿವೆ. ಈ ಆಮೆಗಳ ನಡುವೆ ಹಾವೊಂದು ಇಣುಕಿ ನೋಡುತ್ತಿದೆ. ಆ ಹಾವು ಎಲ್ಲಿದೆ ಎಂದು 5 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು.

ರೆಡ್ಡಿಟ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ಬ್ರೈನ್‌ ಟೀಸರ್‌ಗೆ ʼಆಮೆಗಳ ನಡುವೆ ಇಣುಕುತ್ತಿರುವ ಹಾವನ್ನು ಹುಡುಕಿʼ ಎಂದು ಶೀರ್ಷಿಕೆ ಬರೆಯಲಾಗಿದೆ. ಚಿತ್ರದಲ್ಲಿ ಹಸಿರು, ಕಂದು ಬಣ್ಣ ಕತ್ತಿನ ಆಮೆಗಳ ರಾಶಿಯನ್ನು ಗುರುತಿಸಬಹುದು.

ಜೂನ್‌ 1 ರಂದು ಪೋಸ್ಟ್‌ ಮಾಡಲಾದ ಈ ಬ್ರೈನ್‌ ಟೀಸರ್‌ ಅನ್ನು ಈಗಾಗಲೇ ಹಲವರು ವೀಕ್ಷಿಸಿದ್ದಾರೆ. ಕೆಲವರು ಕಾಮೆಂಟ್‌ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.

ʼಕೆಳಗಿನಿಂದ ಎಡಭಾಗ ನಾಲ್ಕು ಆಮೆಗಳ ಮೇಲಿದೆʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಹಾವಿನ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಈ ಗುಂಪಿನಲ್ಲಿ ಒಬ್ಬ ಸಂಭಾವಿತ ವ್ಯಕ್ತಿಯನ್ನು ನಾನು ಗುರುತಿಸಿದ್ದೇನೆʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಇದು ಖಂಡಿತ, ಆಮೆಗಳ ನಡುವೆಯೇ ಇದೆʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಹಲವರು ಈ ಬ್ರೈನ್‌ ಟೀಸರ್‌ಗೆ ತಮ್ಮ ಮನಸ್ಸಿಗೆ ಬಂದಂತೆ ಕಾಮೆಂಟ್‌ ಮಾಡಿದ್ದಾರೆ. ಆದರೆ ಯಾರೂ ಉತ್ತರವನ್ನು ಕಾಮೆಂಟ್‌ ಮಾಡಿಲ್ಲ. ಸರಿ ಹಾಗಿದ್ರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ನಿಮಗೆ ಗೊತ್ತಾಯ್ತಾ, ಹಾವು ಎಲ್ಲಿದೆ ಎಂಬುದನ್ನು 5 ಸೆಕೆಂಡ್‌ನಲ್ಲಿ ಕಂಡುಹಿಡಿಯಲು ಸಾಧ್ಯವಾಯ್ತಾ?

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: 44ರ ಸಾಲಿನಲ್ಲಿ ಒಂದೇ ಒಂದು ಕಡೆ 45 ಇದೆ, ಅದು ಎಲ್ಲಿದೆ? ನಿಮ್ಮ ಕಣ್ಣು ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಬ್ರೈನ್‌ ಟೀಸರ್‌ ಹೆಸರೇ ಹೇಳುವಂತೆ ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುವ ಚಿತ್ರವಿದು. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬ್ರೈನ್‌ ಟೀಸರ್‌ ಚಿತ್ರಗಳು ವೈರಲ್‌ ಆಗುತ್ತವೆ. ಇಂತಹ ಬ್ರೈನ್‌ ಟೀಸರ್‌ಗಳು ನಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇಂದಿನ ಬ್ರೈನ್‌ ಟೀಸರ್‌ನಲ್ಲಿ 44ರ ರಾಶಿಯಲ್ಲಿರುವ 45 ಅನ್ನು ಕಂಡುಹಿಡಿಯಬೇಕು.

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

ಗಣಿತದ ಸೂತ್ರಗಳು ಕೆಲವೊಮ್ಮೆ ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇಲ್ಲೊಂದು ವೃತ್ತವಿದೆ, ಈ ವೃತ್ತದಲ್ಲಿ ಒಂದಿಷ್ಟು ಸಂಖ್ಯೆಗಳಿವೆ. ಒಂದು ಸಂಖ್ಯೆ ಮಾತ್ರ ಮಿಸ್‌ ಆಗಿದೆ. ಆ ನಂಬರ್‌ ಯಾವುದು ಎಂಬುದನ್ನು ಕಂಡುಹಿಡಿಯಬೇಕು. ಗಣಿತ ಪ್ರೇಮಿಗಳು ಉತ್ತರ ಹೇಳಲು ಟ್ರೈ ಮಾಡಿ.

Whats_app_banner