ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌ ಅನ್ನಿಸಿದ್ರೆ 5 ಸೆಕೆಂಡ್‌ನೊಳಗೆ ಚಿತ್ರದಲ್ಲಿ C ಅಕ್ಷರ ಎಲ್ಲಿದೆ ಕಂಡು ಹಿಡಿಯಿರಿ

Brain Teaser: ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌ ಅನ್ನಿಸಿದ್ರೆ 5 ಸೆಕೆಂಡ್‌ನೊಳಗೆ ಚಿತ್ರದಲ್ಲಿ C ಅಕ್ಷರ ಎಲ್ಲಿದೆ ಕಂಡು ಹಿಡಿಯಿರಿ

ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾದ ಬ್ರೈನ್‌ ಟೀಸರ್‌ ಚಿತ್ರವೊಂದು ನಿಮ್ಮ ಕಣ್ಣಿನ ಸೂಕ್ಷ್ಮತೆಯನ್ನು ಪರೀಕ್ಷಿಸುತ್ತದೆ. ಚಿತ್ರದಲ್ಲಿ ಇಂಗ್ಲಿಷ್‌ನ C ಅಕ್ಷರ ಎಲ್ಲಿದೆ ಎಂಬುದನ್ನು 5 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ಇದು ನಿಮ್ಮ ಗಮನಶಕ್ತಿ ಹಾಗೂ ಕಣ್ಣನ್ನು ಪರೀಕ್ಷೆ ಮಾಡುವ ಚಿತ್ರವಾಗಿದೆ.

ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌ ಅನ್ನಿಸಿದ್ರೆ 5 ಸೆಕೆಂಡ್‌ನಲ್ಲಿ ಚಿತ್ರದಲ್ಲಿ C ಅಕ್ಷರ ಎಲ್ಲಿದೆ ಕಂಡು ಹಿಡಿಯಿರಿ
ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌ ಅನ್ನಿಸಿದ್ರೆ 5 ಸೆಕೆಂಡ್‌ನಲ್ಲಿ ಚಿತ್ರದಲ್ಲಿ C ಅಕ್ಷರ ಎಲ್ಲಿದೆ ಕಂಡು ಹಿಡಿಯಿರಿ

ಕಣ್ಣಿನ ದೃಷ್ಟಿ ಚುರುಕಾಗಿದ್ದವರು ಮಾತ್ರ ಉತ್ತರ ಕಂಡುಹಿಡಿಯಲು ಸಾಧ್ಯವಾಗುವ ಬ್ರೈನ್‌ ಟೀಸರ್‌ ಚಿತ್ರವೊಂದು ಇಲ್ಲಿದೆ. ಅದರಲ್ಲಿ ಇಂಗ್ಲಿಷ್‌ನ O ಅಕ್ಷರಗಳನ್ನು ಬರೆಯಲಾಗಿದ್ದು, ಒಂದೇ ಒಂದು ಕಡೆ ಮಾತ್ರ C ಅಕ್ಷರವಿದೆ. ಹದ್ದಿನ ಕಣ್ಣಿನಷ್ಟೇ ತಮ್ಮ ಕಣ್ಣು ಶಾರ್ಪ್‌, ಚಿಕ್ಕ ಕಣವನ್ನಾದ್ರೂ ಹುಡುಕಿ ತೆಗೆಯುವ ಸಾಮರ್ಥ್ಯ ಕಣ್ಣಿಗಿದೆ ಎನ್ನುವವರು ಇದನ್ನು 5 ಸೆಕೆಂಡ್‌ ಅಥವಾ ಅದಕ್ಕೂ ಮುಂಚೆ ಕಂಡುಹಿಡಿಯಬೇಕು.

@brainteaser_hub ಎಂಬ ಪುಟ ನಿರ್ವಹಿಸುವ ಇನ್‌ಸ್ಟಾಗ್ರಾಂ ಬಳಕೆದಾರೊಬ್ಬರು ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಂಡಿದ್ದಾರೆ. ʼO ಅಕ್ಷರಗಳ ರಾಶಿ ಇರುವ ಚಿತ್ರದಲ್ಲಿ C ಅಕ್ಷರ ಕಂಡುಹಿಡಿದವನೇ ಜಾಣʼ ಎಂಬರ್ಥ ಬರುವಂತೆ ಶೀರ್ಷಿಕೆ ಬರೆದುಕೊಳ್ಳಲಾಗಿದೆ. 5 ಸೆಕೆಂಡ್‌ ಒಳಗೆ ನಿಮಗೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡು ಹಿಡಿಯಲು ಸಾಧ್ಯವಾದರೆ ನಿಮ್ಮ ಕಣ್ಣು ನಿಜಕ್ಕೂ ಸಖತ್‌ ಶಾರ್ಪ್‌ ಅಂತ ಅರ್ಥ.

ಆದರೆ ಹಲವು ಇನ್‌ಸ್ಟಾಗ್ರಾಂ ಬಳಕೆದಾರರು ನಾವು ಸುಲಭವಾಗಿ C ಅಕ್ಷರವನ್ನು ಕಂಡುಹಿಡಿದ್ದೇವೆ ಎಂದು ಕಾಮೆಂಟ್‌ ಮಾಡಿದ್ದಾರೆ. ಕ್ಯಾಪ್ಷನ್‌ ಓದುವ ಮೊದಲೇ ನನ್ನ ಕಣ್ಣಿಗೆ ಸಿ ಅಕ್ಷರ ಕಂಡಿದೆ ಎಂದು ಹಲವರು ತಿಳಿಸಿದ್ದಾರೆ. ಹಾಗಾದರೆ ಸರಿ ನಿಮಗೂ ಈ ಬ್ರೈನ್‌ ಟೀಸರ್‌ನಲ್ಲಿ 5 ಸೆಕೆಂಡ್‌ಗೂ ಮೊದಲೇ C ಅಕ್ಷರ ಕಾಣಿಸ್ತಾ ಚೆಕ್‌ ಮಾಡಿ.

ಟ್ರೆಂಡಿಂಗ್​ ಸುದ್ದಿ

ಬ್ರೈನ್‌ ಟೀಸರ್‌ಗಳು ಕೇವಲ ಕಣ್ಣಿಗೆ ಮಾತ್ರವಲ್ಲ ಮೆದುಳಿಗೆ ಸಾಕಷ್ಟು ಕೆಲಸ ನೀಡುತ್ತವೆ. ಮೆದುಳು ಶಾರ್ಪ್‌ ಇದ್ದರಷ್ಟೇ ನಾವು ಇದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದು ಮೋಜು ನೀಡುವ ಜೊತೆಗೆ ನಮ್ಮ ಗಮನಶಕ್ತಿ ಹಾಗೂ ಯೋಚನಾಶಕ್ತಿಯನ್ನು ವೃದ್ಧಿಸುತ್ತದೆ.

ಇದನ್ನೂ ಓದಿ

Brain Teaser: 20+3=46 ಆದ್ರೆ 40+5= ಎಷ್ಟು? ಗಣಿತದಲ್ಲಿ ಎಕ್ಸ್‌ಪರ್ಟ್‌ ಅನ್ನೋರು 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಗಣಿತ ಸೂತ್ರಗಳನ್ನು ಬಿಡಿಸುವುದು, ಲಾಜಿಕಲ್‌ ಗಣಿತಕ್ಕೆ ಉತ್ತರ ಹುಡುಕುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಮೆದುಳು ಶಾರ್ಪ್‌ ಇದ್ದು, ಗಣಿತದಲ್ಲಿ ಎಕ್ಸ್‌ಪರ್ಟ್‌ ಇದ್ದವರಿಗಷ್ಟೇ ಇದಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನೀವು ಗಣಿತಪ್ರಿಯರಾದ್ರೆ ಈ ಬ್ರೈನ್‌ ಟೀಸರ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ.

Brain Teaser: ನಕ್ಷತ್ರಗಳಿಂದ ತುಂಬಿರುವ ಕಪ್‌ಕೇಕ್‌ ನಡುವೆ ಚಂದ್ರ ಅಡಗಿದ್ದಾನೆ, ಅವನು ಎಲ್ಲಿದ್ದಾನೆ ಎಂದು 8 ಸೆಕೆಂಡ್‌ನಲ್ಲಿ ಹುಡುಕಿ

ನಿಮ್ಮ ಮೆದುಳು ಎಷ್ಟು ಶಾರ್ಪ್‌ ಇದೆ ಎಂದು ತಿಳಿಬೇಕು ಅಂತಂದ್ರೆ ನೀವು ಬ್ರೈನ್‌ ಟೀಸರ್‌ ಚಾಲೆಂಜ್‌ ಸ್ವೀಕರಿಸಬೇಕು. ಇದು ನಿಮ್ಮ ಮೆದುಳಿನೊಂದಿಗೆ ಕಣ್ಣಿಗೂ ಸವಾಲು ಹಾಕುತ್ತದೆ. ಇಂದಿನ ಬ್ರೈನ್‌ ಟೀಸರ್‌ನಲ್ಲಿ ನಕ್ಷತ್ರಗಳಿರುವ ಕಪ್‌ ಕೇಕ್‌ ನಡುವಿನ ಚಂದ್ರನನ್ನು ಹುಡುಕುವುದು ನಿಮಗಿರುವ ಸವಾಲು.