ಕನ್ನಡ ಸುದ್ದಿ  /  Lifestyle  /  Viral News Brain Teaser This Viral Maths Brain Teaser Started A Debate On X Will You Be Able To Solve Social Media Rst

Brain Teaser: 6÷2...?; ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿರುವ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿರುವ ಗಣಿತ ಸೂತ್ರದ ಬ್ರೈನ್‌ ಟೀಸರ್‌ವೊಂದು ಇದೀಗ ಭಾರಿ ಚರ್ಚೆ ಹುಟ್ಟುಹಾಕಿದೆ. ಇಲ್ಲಿರುವ ಸಮೀಕರಣಕ್ಕೆ ನೀವು ಉತ್ತರ ಕಂಡುಹಿಡಿಯಬೇಕು, ಅಂದ್‌ ಹಾಗೆ ಪೆನ್ನು-ಪೇಪರ್‌, ಕ್ಯಾಲ್ಕುಲೇಟರ್‌ ಬಳಸುವಂತಿಲ್ಲ. ಬೋಡ್‌ಮಾಸ್‌ ನಿಯಮ ಗೊತ್ತಿದ್ರೆ ಖಂಡಿತ ಇದಕ್ಕೆ ಉತ್ತರ ಹುಡುಕೋದು ಬಲು ಸುಲಭ.

6÷2...?; ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿರುವ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು?
6÷2...?; ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿರುವ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು?

ಗಣಿತದ ಸಮೀಕರಣಗಳನ್ನು ಬಿಡಿಸುವುದು ಹಲವರಿಗೆ ಇಷ್ಟವಾಗುತ್ತದೆ. ಹಲವರಿಗೆ ಇದು ಉತ್ತಮ ಟೈಮ್‌ಪಾಸ್‌ ಕೂಡ ಹೌದು. ನೀವು ಗಣಿತಪ್ರೇಮಿಯಾಗಿದ್ದು, ಪಜಲ್‌ಗಳನ್ನು ಬಿಡಿಸುವುದು ನಿಮಗೆ ಇಷ್ಟ ಆದ್ರೆ, ನಾವು ನಿಮಗಾಗಿ ಆಗಾಗ ಗಣಿತದ ಪಜಲ್‌ಗಳ ಬ್ರೈನ್‌ ಟೀಸರ್‌ಗಳನ್ನು ಪ್ರಕಟ ಮಾಡುತ್ತಿರುತ್ತೇವೆ. ಇದೀಗ ಇಲ್ಲೊಂದು ಅಂಥಹದ್ದೇ ಬ್ರೈನ್‌ ಟೀಸರ್‌ ಇದೆ. ಈ ಬ್ರೈನ್‌ ಟೀಸರ್‌ ಅನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದ್ದು, ಉತ್ತರಕ್ಕಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಯಾಕೆಂದರೆ ಈ ಸಮೀಕರಣ ನೋಡಲು ಸುಲಭವಾಗಿದ್ದರೂ ಉತ್ತರ ಹುಡುಕುವುದು ನಿಜಕ್ಕೂ ಕಷ್ಟ. ಪೆನ್ನು-ಪೇಪರ್‌, ಕ್ಯಾಲ್ಕುಲೆಟರ್‌ ಬಳಸದೇ ಈ ಗಣಿತದ ಪಜಲ್‌ಗೆ ಉತ್ತರ ಕಂಡುಹಿಡಿಯಬೇಕು. ಸರಿ ಇನ್ನೇಕೆ ತಡ ಟ್ರೈ ಮಾಡಿ. ಉತ್ತರ ಏನು ಹೇಳಿ.

@iambuterastann ಎಂಬ ಎಕ್ಸ್‌ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಲಾಗಿದೆ. ʼವೈರಲ್‌ ಮ್ಯಾಥ್ಸ್‌ ಪಜಲ್‌: 6÷2 (1+2)ʼ ಎಂದು ಇದರಲ್ಲಿ ಬರೆಯಲಾಗಿದೆ. ಈ ಪಜಲ್‌ಗೆ ಉತ್ತರ ಹುಡುಕಲು ಹೊರಟ ಹಲವರು ಗೊಂದಲಕ್ಕೆ ಸಿಲುಕಿದ್ದಾರೆ. ನಿಮ್ಮಿಂದ ಈ ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕಲು ಸಾಧ್ಯವಾಗುತ್ತೆ ಎಂದು ನಿಮಗೆ ಅನ್ನಿಸ್ತಾ ಇದ್ಯಾ? ನಿಮ್ಮ ಸಮಯ ಈಗ ಶುರು...

ಕಳೆದ ಎರಡು ದಿನಗಳ ಹಿಂದೆ ಎಕ್ಸ್‌ನಲ್ಲಿ ಈ ಪೋಸ್ಟ್‌ ಹಂಚಿಕೊಳ್ಳಲಾಗಿತ್ತು. ಈಗಾಗಲೇ 15000ಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಹಲವರು ಲೈಕ್ಸ್‌, ಕಾಮೆಂಟ್‌ ಮಾಡಿದ್ದಾರೆ. ಪಜಲ್‌ ಪ್ರೇಮಿಗಳು ಉತ್ತರ ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್‌ ಮಾಡಿ ತಿಳಿಸಿದ್ದಾರೆ.

ಪಜಲ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ

ʼಉತ್ತರ 9. 6 ರಲ್ಲಿ 2ರನ್ನು ಭಾಗಿಸಿ ಉತ್ತರ 3. 1 ರಲ್ಲಿ 2 ಅನ್ನು ಕೂಡಿಸಿದ್ರೆ ಉತ್ತರ 3. 3 ಅನ್ನು 3 ರಲ್ಲು ಗುಣಿಸಿದ್ರೆ ಉತ್ತರ 9ʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಸರಿ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು ತಿಳಿಸಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: 2ಕ್ಕೆ 2 ಕೂಡಿಸಿ, 4 ಗುಣಿಸಿ, 2 ರಿಂದ ಭಾಗಿಸಿ, 4 ಕಳೆದ್ರೆ ಎಷ್ಟಾಗುತ್ತೆ? ಕ್ಯಾಲ್ಕುಲೆಟರ್‌ ಬಳಸದೇ ಉತ್ತರ ಹೇಳಿ

ಪ್ರಾಥಮಿಕ ಶಾಲಾ ಹಂತದ ಈ ಸುಲಭ ಗಣಿತ ಪಜಲ್‌ ಪ್ರೇಮಿಗಳ ಮೆದುಳಿಗೆ ಹುಳ ಬಿಟ್ಟಿರುವುದು ಸುಳ್ಳಲ್ಲ. ಬ್ರೈನ್‌ ಟೀಸರ್‌ ಪ್ರಿಯರು ಇದೀಗ ನಾನಾ ಉತ್ತರ ನೀಡುವ ಮೂಲಕ ಸರಿಯಾದ ಉತ್ತರಕ್ಕಾಗಿ ಹುಡುಕುತ್ತಿದ್ದಾರೆ. ನೀವೊಮ್ಮೆ ಟ್ರೈ ಮಾಡಿ, ಸರಿ ಉತ್ತರ ತಿಳಿಸಿ.

Brain Teaser: ಸುರೇಶನ ಮನೆಯಲ್ಲಿರುವುದು ಒಟ್ಟು ಎಷ್ಟು ಜನ? ಯೋಚ್ನೆ ಮಾಡಿ ಉತ್ತರ ಹೇಳಿ; ನಿಮ್ಮ ಜಾಣ್ಮೆಗೊಂದು ಸವಾಲು

ಸಾಮಾಜಿಕ ಜಾಲಾತಾಣದಲ್ಲಿ ವೈರಲ್‌ ಆಗಿರುವ ಬ್ರೈನ್‌ ಟೀಸರ್‌ವೊಂದಕ್ಕೆ ಉತ್ತರ ಹುಡುಕಲು ಜನ ಪರದಾಡುತ್ತಿದ್ದಾರೆ. ಸುರೇಶನ ಮನೆಯಲ್ಲಿ ಎಷ್ಟು ಜನ ಇದ್ದಾರೆ ಎಂಬುದನ್ನು ಕಂಡು ಹಿಡಿಯಲು ನಿಮ್ಮಿಂದ ಸಾಧ್ಯವಾಗುವುದೇ ನೋಡಿ. ಕೊಂಚ ಯೋಚಿಸಿದ್ರೆ ಉತ್ತರ ಸಿಗೋದು ಪಕ್ಕಾ. ಹಾಗಂತ ಗಡಿಬಿಡಿ ಉತ್ತರ ಹೇಳ್ಬೇಡಿ, ತಪ್ಪಾಗುತ್ತೆ.

ವಿಭಾಗ