Brain Teaser: 888ರ ಸಾಲಿನಲ್ಲಿ ಒಂದೇ ಒಂದು ಕಡೆ 808 ಇದೆ, ಅದು ಎಲ್ಲಿದೆ ಎಂದು 10 ಸೆಕೆಂಡ್ನಲ್ಲಿ ಹುಡುಕಬೇಕು, ನಿಮಗಿದು ಚಾಲೆಂಜ್
ಮೇಲಿಂದ ಕೆಳಗೆ ಉದ್ದದಿಂದ ಅಡ್ಡಕ್ಕೆ 888 ಎಂದು ಬರೆಯಲಾಗಿರುವ ಈ ಚಿತ್ರದಲ್ಲಿ ಒಂದೇ ಒಂದು ಕಡೆ 808 ಸಂಖ್ಯೆ ಇದೆ. ಅದು ಎಲ್ಲಿದೆ ಎಂಬದನ್ನು ನೀವು 10 ಸೆಕೆಂಡ್ ಒಳಗೆ ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮ ಕಣ್ಣು ನಿಜಕ್ಕೂ ಚುರುಕಾಗಿದೆ ಅಂದ್ರೆ 808 ಎಲ್ಲಿದೆ ಹೇಳಿ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಬ್ರೈನ್ ಟೀಸರ್ ಚಿತ್ರ ನಿಮ್ಮ ಕಣ್ಣಿನ ದೃಷ್ಟಿಯನ್ನು ಪರೀಕ್ಷೆ ಮಾಡುವಂತೆ ಇರುವುದು ಸುಳ್ಳಲ್ಲ. ಯಾಕಂದರೆ ಕಣ್ಣು ಸೂಕ್ಷ್ಮವಾಗಿದ್ದು, ನಿಮ್ಮಲ್ಲಿ ಗ್ರಹಿಸುವ ಶಕ್ತಿ ಚೆನ್ನಾಗಿದ್ದರೆ ಮಾತ್ರ ಈ ಬ್ರೈನ್ ಟೀಸರ್ಗೆ ನೀವು ಉತ್ತರ ಹೇಳಲು ಸಾಧ್ಯವಾಗುತ್ತದೆ. ಮೇಲ್ನೋಟಕ್ಕೆ ಎಲ್ಲವೂ ಒಂದೇ ರೀತಿ ಕಾಣುವ ಈ ಚಿತ್ರದಲ್ಲಿ ಒಂದೇ ಒಂದು ವ್ಯತ್ಯಾಸವಿದೆ. ಅದು ಏನು ಎಂಬುದನ್ನು ನೀವು ಕಂಡುಹಿಡಿಯಬೇಕು.
ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ಉದ್ದಕ್ಕೆ ಅಡ್ಡಕ್ಕೆ 888 ಸಂಖ್ಯೆಯನ್ನು ಬರೆಯಲಾಗಿದೆ. ಇದರಲ್ಲಿ ಒಂದು ಕಡೆ ಮಾತ್ರ 808 ಸಂಖ್ಯೆ ಇದೆ. ಅದು ಎಲ್ಲಿದೆ ಎಂಬುದನ್ನು ಕೇವಲ 10 ಸೆಕೆಂಡ್ ಒಳಗೆ ಕಂಡುಹಿಡಿಯಬೇಕಾಗಿರುವುದು ನಿಮಗಿರುವ ಸವಾಲು.
ನೋಡಿ ನಿಮ್ಮ ಕಣ್ಣು ಶಾರ್ಪ್ ಅಂತಾದ್ರೆ ಈ ಬ್ರೈನ್ ಟೀಸರ್ಗೆ 10 ಸೆಕೆಂಡ್ ಒಳಗೆ ಉತ್ತರ ಹೇಳಿ, ಶಾರ್ಪ್ ಇಲ್ಲ ಅಂದ್ರೂ ಉತ್ತರ ಹೇಳುವ ಪ್ರಯತ್ನ ಮಾಡಿ. ನಿಮಗೆ ಎಷ್ಟು ಸೆಕೆಂಡ್ ಒಳಗೆ ಅಥವಾ ಎಷ್ಟು ನಿಮಿಷದೊಳಗೆ ಉತ್ತರ ಹೇಳಲು ಸಾಧ್ಯವಾಯ್ತು ಹೇಳಿ.
ಇಂತಹ ಬ್ರೈನ್ ಟೀಸರ್ಗಳಿಗೆ ಉತ್ತರ ಹುಡುಕುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ, ಕಣ್ಣಿನ ಸಾಮರ್ಥ್ಯವೂ ವೃದ್ಧಿಸುತ್ತದೆ. ನಮ್ಮಲ್ಲಿ ಏಕಾಗ್ರತೆ ಹಾಗೂ ಗಮನಶಕ್ತಿಯು ಹೆಚ್ಚುತ್ತದೆ. ಬ್ರೈನ್ ಟೀಸರ್ಗಳು ಕೇವಲ ಮೋಜು ನೀಡುವುದು ಮಾತ್ರವಲ್ಲ, ಇದರಿಂದ ಯೋಚನಾಶಕ್ತಿಯೂ ವೃದ್ಧಿಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಬ್ರೈನ್ ಟೀಸರ್ ಚಿತ್ರಗಳು ಸಾಕಷ್ಟು ವೈರಲ್ ಆಗುತ್ತಿದ್ದು ಇವುಗಳಿಗೆ ಉತ್ತರ ಹೇಳಲು ಜನ ಕಾಯುತ್ತಿರುತ್ತಾರೆ. ಇದು ಒಂಥರಾ ಮೋಜು ನೀಡಿ ಟೈಮ್ ಪಾಸ್ ಆಗುವಂತೆ ಮಾಡುತ್ತದೆ. ಇದನ್ನು ನೀವು ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರೊಂದಿಗೂ ಹಂಚಿಕೊಂಡು ಅವರಿಗೂ ಉತ್ತರ ಹೇಳುವ ಚಾಲೆಂಜ್ ನೀಡಬಹುದು.
ಈ ಬ್ರೈನ್ ಟೀಸರ್ಗಳನ್ನೂ ಓದಿ
Brain Teaser: ಶೇ 95ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ? 1+3=4 ಆದ್ರೆ 4+6=ಎಷ್ಟು?
‘ನನ್ ಮೆದುಳು ಯಾಕೋ ಇನ್ನೂ ಚುರುಕಾಗಬೇಕು‘ ಅಂದುಕೊಳ್ಳುವವರಿಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಈ ಬ್ರೈನ್ ಟೀಸರ್ಗೆ ಉತ್ತರ ಹೇಳುವಲ್ಲಿ ಶೇ 95 ರಷ್ಟು ಮಂದಿ ಸೋತಿದ್ದಾರೆ. ಇಲ್ಲಿರುವುದು ಸುಲಭ ಗಣಿತದ ಲೆಕ್ಕಾಚಾರ, ಆದ್ರೂ ಈ ಪ್ರಶ್ನೆಗೆ ಸರಿಯಾದ ಉತ್ತರ ಕಂಡುಹಿಡಿಯುವುದು ನಿಮಗಿರುವ ಸವಾಲು. ಟ್ರೈ ಮಾಡಿ, ಮೆದುಳಿಗೆ ಕೆಲಸ ಕೊಡಿ.
Brain Teaser: ರಾಶಿ ಕಾರುಗಳ ಮಧ್ಯೆ ಒಂದೇ ಒಂದು ಕಾರು ಭಿನ್ನವಾಗಿದೆ, ಅದು ಯಾವುದು? ನಿಮಗಿರೋದು 5 ಸೆಕೆಂಡ್ ಸಮಯ, ಥಟ್ಟಂತ ಹೇಳಿ
ನಿಮ್ಮ ಕಣ್ಣಿನ ದೃಷ್ಟಿಗೆ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಕಂಡುಹಿಡಿಯಲು ನಿಮಗಾಗಿ ಇಲ್ಲಿದೆ ಒಂದು ಬ್ರೈನ್ ಟೀಸರ್. ಒಂದೇ ರೀತಿ ಇರುವ ರಾಶಿ ಕಾರುಗಳ ಮಧ್ಯೆ ಒಂದೇ ಒಂದು ಕಾರು ಭಿನ್ನವಾಗಿದೆ. ಅದು ಯಾವುದು, 5 ಸೆಕೆಂಡ್ನಲ್ಲಿ ನೀವು ಕಂಡುಹಿಡಿಯಬೇಕು. ನಿಮಗಿದು ಚಾಲೆಂಜ್.