Brain Teaser: ಚಿತ್ರದಲ್ಲಿ ಯಾವ ಟ್ರಕ್ ಚಲಿಸುತ್ತಿದೆ, ನಿಮ್ಮ ಕಣ್ಣಿಗೊಂದು ಪರೀಕ್ಷೆ, 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ-viral news brain teaser use logical reasoning to determine which of these trucks is moving social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಯಾವ ಟ್ರಕ್ ಚಲಿಸುತ್ತಿದೆ, ನಿಮ್ಮ ಕಣ್ಣಿಗೊಂದು ಪರೀಕ್ಷೆ, 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: ಚಿತ್ರದಲ್ಲಿ ಯಾವ ಟ್ರಕ್ ಚಲಿಸುತ್ತಿದೆ, ನಿಮ್ಮ ಕಣ್ಣಿಗೊಂದು ಪರೀಕ್ಷೆ, 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ನಿಮ್ಮ ಕಣ್ಣು ಹಾಗೂ ಮೆದುಳು ಎಷ್ಟು ಸೂಕ್ಷ್ಮವಾಗಿದೆ ಎಂದು ಪರೀಕ್ಷೆ ಮಾಡಬೇಕಾ, ಹಾಗಾದ್ರೆ ಈ ಚಿತ್ರದಲ್ಲಿರುವ 3 ಟ್ರಕ್‌ಗಳಲ್ಲಿ ಯಾವ ಟ್ರಕ್ ಚಲಿಸುತ್ತಿದೆ ಎಂಬುದನ್ನು ನೀವು ಕಂಡುಹಿಡಿಯಬೇಕು, ಅದು ಕೇವಲ 10 ಸೆಕೆಂಡ್‌ನಲ್ಲಿ. ಇನ್‌ಸ್ಟಾಗ್ರಾಂ ಥ್ರೆಡ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?

ಬ್ರೈನ್ ಟೀಸರ್
ಬ್ರೈನ್ ಟೀಸರ್

ಇತ್ತೀಚಿನ ಬ್ಯುಸಿ ಜಗತ್ತಿನಲ್ಲಿ ನಮ್ಮ ಮೆದುಳಿಗೆ ಮೋಜು ಎಂಬುದು ಇಲ್ಲದಂತಾಗಿದೆ. ನಮ್ಮ ದೈನಂದಿನ ಕೆಲಸವನ್ನಷ್ಟೇ ಮಾಡುವ ನಾವು ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಕಷ್ಟಸಾಧ್ಯವಾಗುತ್ತದೆ. ಇದರಿಂದ ಮೆದುಳಿಗೆ ಜಡ್ಡು ಹಿಡಿದಂತಾಗುವುದು ಸುಳ್ಳಲ್ಲ, ಅದಕ್ಕಾಗಿ ಮೆದುಳನ್ನು ಚುರುಕು ಮಾಡುವ ಕೆಲಸದಲ್ಲಿ ತೊಡಗಬೇಕು. ಅಂತಹ ಮೆದುಳು ಶಾರ್ಪ್ ಮಾಡುವ ಕೆಲಸ ಮಾಡುತ್ತವೆ ಬ್ರೈನ್ ಟೀಸರ್‌ಗಳು.

ಇದು ನಮ್ಮ ಮೆದುಳಿಗೆ ಸವಾಲು ಹಾಕುತ್ತದೆ, ಆ ಮೂಲಕ ನಾವೆಷ್ಟು ಬುದ್ಧಿವಂತರು ಎಂಬುದನ್ನು ಪರೀಕ್ಷೆ ಮಾಡುತ್ತದೆ. ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವಾಗ ಮನಸ್ಸು ಒಂದಿಷ್ಟು ಹೊತ್ತು ಬೇರೆ ಏನನ್ನೂ ಯೋಚಿಸದೇ ಇದರ ಬಗ್ಗೆಯೇ ಯೋಚಿಸುತ್ತದೆ. ಈ ಬ್ರೈನ್ ಟೀಸರ್‌ಗಳಿಂದ ಏಕಾಗ್ರತೆಯೂ ಬೆಳೆಯುತ್ತದೆ. ಜೊತೆಗೆ ನಮ್ಮ ಮನಸ್ಸು ಕೂಡ ಚೈತನ್ಯದಿಂದ ಕೂಡಿರುತ್ತದೆ. ಇಂದಿನ ಬ್ರೈನ್ ಟೀಸರ್ ನಿಮ್ಮ ಕಣ್ಣು ಹಾಗೂ ಮೆದುಳು ಎರಡಕ್ಕೂ ಕೆಲಸ ಕೊಡುವುದು ಸುಳ್ಳಲ್ಲ.

@rombesk ಎಂಬ ಥ್ರೆಡ್ ಪುಟ ನಿರ್ವಹಿಸುವವರು ಈ ಬ್ರೈನ್ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ‘ಇದನ್ನು ನಿಮ್ಮಿಂದ ಪರಿಹರಿಸಲು ಸಾಧ್ಯವೇ‘ ಎಂಬ ಶೀರ್ಷಿಕೆ ಬರೆದುಕೊಂಡು ಅವರು ಶೇರ್ ಮಾಡಿರುವ ಬ್ರೈನ್ ಟೀಸರ್‌ನಲ್ಲಿ ಎ, ಬಿ, ಸಿ ಎಂಬ 3 ಟ್ರಕ್‌ಗಳಿವೆ. ಅದರಲ್ಲಿ ಯಾವ ಯಾವ ಟ್ರಕ್‌ಗಳು ಚಲಿಸುತ್ತಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು. ಮೇಲ್ಗಡೆ ಡೈರೆಕ್ಷನ್ ಎಂದು ಬರೆದುಕೊಂಡ ಕೆಂಪು ಬಾಣದ ಗುರುತನ್ನು ನೀಡಲಾಗಿದೆ. ಹಾಗಾದರೆ ಇದರಲ್ಲಿ ಯಾವ ಟ್ರಕ್ ಚಲಿಸುತ್ತಿದೆ ಎಂದು ನಿಮಗೆ ಅನ್ನಿಸುತ್ತದೆ, 10 ಸೆಕೆಂಡ್ ಒಳಗೆ ಉತ್ತರ ಹೇಳಿ.

ಈ ಬ್ರೈನ್ ಟೀಸರ್‌ ಅನ್ನು ಹಲವರು ನೋಡಿದ್ದು, ಕೆಲವರು ಲೈಕ್ ಮಾಡಿದ್ದಾರೆ, ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ. ಬ್ರೈನ್ ಟೀಸರ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ.

"ಎ ರಿವರ್ಸ್ ಮಾಡಲು ಪ್ರಾರಂಭಿಸಿದೆ; ಬಿ ಚಾಲನೆ ಮಾಡುತ್ತಿದೆ; ಸಿ ಚಾಲನೆ ಮಾಡಲು ಪ್ರಾರಂಭಿಸಿದೆ" ಎಂದು ಥ್ರೆಡ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ವ್ಯಕ್ತಿ ಬರೆದಿದ್ದಾರೆ, "A ನಿಲ್ಲಿಸುತ್ತಿದೆ, C ವೇಗವನ್ನು ಹೆಚ್ಚಿಸುತ್ತಿದೆ, B ನಿರಂತರ ವೇಗದಲ್ಲಿ ಚಾಲನೆ ಮಾಡುತ್ತಿದೆ ಅಥವಾ ನಿಲ್ಲಿಸಿದೆ‘ ಎಂದು ಎರಡನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

ಹಾಗಾದರೆ ನಿಮ್ಮ ಮನಸ್ಸಿಗೆ ಯಾವ ಯಾವ ಟ್ರಕ್‌ಗಳು ಚಲಿಸುತ್ತಿವೆ ಎಂದು ನಿಮಗೆ ಅನ್ನಿಸುತ್ತಿದೆ. ಈ ಬ್ರೈನ್ ಟೀಸರ್‌ಗೆ ನೀವು ಉತ್ತರ ಹೇಳಲು ಮೆದುಳು ಮಾತ್ರವಲ್ಲ ಕಣ್ಣನ್ನು ಚುರುಕಾಗಿಸಿಕೊಳ್ಳಬೇಕು. ಇದಕ್ಕೆ ಉತ್ತರ ಸಿಕ್ಕರೆ ಇದನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಕಳುಹಿಸಿ, ಅವರ ಉತ್ತರ ಏನು ಕಂಡುಕೊಳ್ಳಿ.  

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ನಿಮ್ಮ ಐಕ್ಯೂ ಲೆವೆಲ್ ಪರೀಕ್ಷೆ ಮಾಡ್ಬೇಕಾ, ಕೇವಲ 5 ಸೆಕೆಂಡ್‌ನಲ್ಲಿ ಚಿತ್ರದಲ್ಲಿ ಏಲಿಯನ್ ಎಲ್ಲಿದೆ ಪತ್ತೆ ಮಾಡಿ

ನಿಮ್ಮ ಐಕ್ಯೂ ಲೆವೆಲ್ 100ಕ್ಕೂ ಹೆಚ್ಚಿದೆ ಎಂದು ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಲು ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಏಲಿಯನ್ ಒಂದು ಅಡಗಿದೆ. ಅದನ್ನು ಕೇವಲ 5 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು?

mysore-dasara_Entry_Point