Brain Teaser: ನಿಮ್ಮ ಮೈಂಡ್ ನಿಜಕ್ಕೂ ಶಾರ್ಪ್ ಇದ್ರೆ ʼಎʼಗೂ ʼಡಿʼಗೂ ಏನು ಸಂಬಂಧ ಹೇಳಿ? ಈ ಪ್ರಶ್ನೆ ಮೆದುಳಿಗೆ ಹುಳ ಬಿಡೋದು ಪಕ್ಕಾ
ಇಲ್ಲೊಂದು ಮೆದುಳಿಗೆ ಹುಳ ಬಿಡುವ ಪ್ರಶ್ನೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರು ನೀವಾದ್ರೆ ಇಂತಹ ಪ್ರಶ್ನೆಗಳನ್ನು ನೀವು ಎದುರಿಸಿರುತ್ತೀರಿ. ಇದಕ್ಕೆ ಉತ್ತರ ಹೇಳಲು ನೀವು ಸಾಕಷ್ಟು ಯೋಚನೆ ಮಾಡಬೇಕಾಗುತ್ತೆ, ಹಾಗಾದರೆ ʼಎʼಗೂ ʼಡಿʼಗೂ ಏನು ಸಂಬಂಧ ಹೇಳಿ.
ಬ್ರೈನ್ ಟೀಸರ್ ಇದು ಹೆಸರಿನಂತೆ ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇದರಲ್ಲಿ ಕೇಳಲಾಗುವ ಪ್ರಶ್ನೆಗಳು ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ನೀಡುತ್ತವೆ. ಇದಕ್ಕೆ ಉತ್ತರ ಕಂಡುಹಿಡಿಯಲು ನಾವು ಪರದಾಡಬೇಕಾಗುತ್ತದೆ. ಇಂದಿನ ಬ್ರೈನ್ ಟೀಸರ್‌ನಲ್ಲಿ ಇರುವ ರೀತಿಯ ಪ್ರಶ್ನೆಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಇರುತ್ತವೆ. ಸಾಮಾನ್ಯಜ್ಞಾನಕ್ಕೆ ಸವಾಲು ಹಾಕುವಂತಿರುವ ಈ ಬ್ರೈನ್ ಟೀಸರ್‌ಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷೆಯನ್ನು ಮಾಡುತ್ತದೆ.
ಇಲ್ಲಿರುವ ಬ್ರೈನ್ ಟೀಸರ್‌ನಲ್ಲಿ ಒಂದು ಪ್ರಶ್ನೆ ಇದೆ. ಎಯು ಬಿಯ ಸಹೋದರಿ, ಸಿಯು ಬಿಯ ಅಮ್ಮ, ಡಿಯು ಸಿಯ ಅಪ್ಪ, ಹಾಗಾದರೆ ʼಎʼ ಗೂ ʼಡಿʼಗೂ ಇರುವ ಸಂಬಂಧವೇನು? ಎಂದು ಪ್ರಶ್ನೆ ಕೇಳಲಾಗಿದೆ. ಇದೊಂದು ಟ್ರಿಕ್ಕಿ ಪ್ರಶ್ನೆಯಾಗಿದ್ದು ಇದಕ್ಕೆ ಉತ್ತರ ಹೇಳುವುದು ಖಂಡಿತ ಸುಲಭವಲ್ಲ.
Pro Brain Teaser ಎಂಬ ಹೆಸರಿನ ಟ್ವಿಟರ್ ಪುಟ ನಿರ್ವಹಿಸುತ್ತಿರುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಆಗಸ್ಟ್ 13 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 2,700 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಆದರೆ ಶೇ 90ರಷ್ಟು ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡಿಲ್ಲ. ಹಾಗಾದರೆ ಇದಕ್ಕೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ? ಪ್ರಯತ್ನ ಮಾಡಿ. ಹಾಗಾದರೆ ಎಗೂ ಡಿಗೂ ಏನು ಸಂಬಂಧ ಹೇಳಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ವೃತ್ತದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ಗಣಿತ ಪ್ರೇಮಿಗಳು 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕೆ ಪ್ರಯತ್ನಿಸಿ
ಗಣಿತದ ಸೂತ್ರಗಳಿಗೆ ಉತ್ತರ ಹುಡುಕಲು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಆದರೆ ಕೆಲವು ಗಣಿತಪ್ರೇಮಿಗಳು ಈ ಸೂತ್ರಗಳಿಗೆ ಥಟ್ಟಂತ ಉತ್ತರ ಹೇಳುತ್ತಾರೆ. ಇಲ್ಲೊಂದು ಗಣಿತದ ಪಜಲ್ ಇದೆ. ಇದರಲ್ಲಿ ಒಂದು ನಂಬರ್ ಮಿಸ್ ಆಗಿದೆ. ಆ ನಂಬರ್ ಯಾವುದು ಎಂದು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು.
Brain Teaser: ಈ ಚಿತ್ರದಲ್ಲಿ ಯಾವ ನಂಬರ್ ಕಾಣುತ್ತಿದೆ? 8 ಸೆಕೆಂಡ್ ಒಳಗೆ ಉತ್ತರ ಹೇಳಿ, ನಿಮ್ಮ ಕಣ್ಣಿಗೊಂದು ಪರೀಕ್ಷೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಮಾತ್ರವಲ್ಲ, ಕಣ್ಣಿಗೂ ನೋವಾಗುವಂತೆ ಮಾಡುತ್ತದೆ. ಈ ಬ್ರೈನ್ ಟೀಸರ್‌ನಲ್ಲಿ ಅಡಗಿರುವ ನಂಬರ್ ಯಾವುದು ಎಂಬುದನ್ನು ನೀವು 8 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗಿದು ಚಾಲೆಂಜ್.