Brain Teaser: ಯಾವ ಟ್ಯಾಂಕ್‌ನಲ್ಲಿ ಮೊದಲು ನೀರು ತುಂಬುತ್ತೆ, ಉತ್ತರ ಕಂಡುಹಿಡಿಯಿರಿ; ಈ ಚಿತ್ರ ನಿಮ್ಮ ಮೆದುಳಿಗೆ ಹುಳ ಬಿಡುವುದು ಪಕ್ಕಾ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಯಾವ ಟ್ಯಾಂಕ್‌ನಲ್ಲಿ ಮೊದಲು ನೀರು ತುಂಬುತ್ತೆ, ಉತ್ತರ ಕಂಡುಹಿಡಿಯಿರಿ; ಈ ಚಿತ್ರ ನಿಮ್ಮ ಮೆದುಳಿಗೆ ಹುಳ ಬಿಡುವುದು ಪಕ್ಕಾ

Brain Teaser: ಯಾವ ಟ್ಯಾಂಕ್‌ನಲ್ಲಿ ಮೊದಲು ನೀರು ತುಂಬುತ್ತೆ, ಉತ್ತರ ಕಂಡುಹಿಡಿಯಿರಿ; ಈ ಚಿತ್ರ ನಿಮ್ಮ ಮೆದುಳಿಗೆ ಹುಳ ಬಿಡುವುದು ಪಕ್ಕಾ

Brain Teaser in Kannada: ಇಲ್ಲೊಂದು ಬ್ರೈನ್‌ ಟೀಸರ್‌ ಚಿತ್ರವಿದೆ. ಈ ಚಿತ್ರದಲ್ಲಿ ಎ ಯಿಂದ ಎಲ್‌ವರೆಗೆ ಒಂದಿಷ್ಟು ಟ್ಯಾಂಕ್‌ಗಳಿವೆ. ಇದಕ್ಕೆ ಮೇಲಿನಿಂದ ಕೊಳಾಯಿ ಸಹಾಯದಿಂದ ನೀರು ಬಿಡಲಾಗುತ್ತಿದೆ. ಈ ಟ್ಯಾಂಕ್‌ಗಳಲ್ಲಿ ಮೊದಲು ಯಾವ ಟ್ಯಾಂಕ್‌ ತುಂಬುತ್ತೆ ಎಂಬುದನ್ನು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಚಾಲೆಂಜ್‌.

ಚಿತ್ರದಲ್ಲಿ ಯಾವ ಟ್ಯಾಂಕ್‌ನಲ್ಲಿ ಮೊದಲು ನೀರು ತುಂಬುತ್ತೆ
ಚಿತ್ರದಲ್ಲಿ ಯಾವ ಟ್ಯಾಂಕ್‌ನಲ್ಲಿ ಮೊದಲು ನೀರು ತುಂಬುತ್ತೆ

ಕೆಲಸದ ಒತ್ತಡದ ಮಧ್ಯೆ ನಿಮ್ಮ ಮನಸ್ಸು ರಿಲ್ಯಾಕ್ಸ್‌ ಆಗಬೇಕು ಎಂದು ಬಯಸಿದರೆ ನೀವು ಬ್ರೈನ್‌ ಟೀಸರ್‌ಗಳತ್ತ ಗಮನ ಹರಿಸಬಹುದು. ಬ್ರೈನ್‌ ಟೀಸರ್‌ ಬಿಡಿಸಿದರೆ ಮನಸ್ಸಿಗೆ ಏನೋ ಖುಷಿ ಸಿಗುವುದು ಖಂಡಿತ. ಒಮ್ಮೆ ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕಲು ಹೊರಟರೆ ಅದೆಷ್ಟೇ ಕಷ್ಟ ಇದ್ದರೂ ಉತ್ತರ ಸಿಗುವವರೆಗೆ ಅದನ್ನು ಬಿಡಲು ಮನಸ್ಸಾಗುವುದಿಲ್ಲ.

ನೀವು ನಿಮ್ಮ ಮದುಳಿಗೆ ಸಖತ್‌ ಚಾಲೆಂಜ್‌ ಎನ್ನಿಸುವ ಬ್ರೈನ್‌ ಟೀಸರ್‌ ಅನ್ನು ಹುಡುಕುತ್ತಿದ್ದರೆ ನಿಮಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಈ ಬ್ರೈನ್‌ ಟೀಸರ್‌ ಒಂದಿಷ್ಟು ಹೊತ್ತು ನಿಮ್ಮ ಮನಸ್ಸನ್ನು ಸೆಳೆದಿಟ್ಟುಕೊಳ್ಳುವುದು ಖಂಡಿತ. ಇದನ್ನು ಕೇವಲ ನೀವು ಬಿಡಿಸುವುದು ಮಾತ್ರವಲ್ಲ, ಇದನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕಳುಹಿಸಿ, ಅವರಿಗೆ ಸವಾಲು ನೀಡುವ ಮೂಲಕ ಅವರನ್ನು ಯೋಚಿಸುವಂತೆ ಮಾಡಬಹುದು.

ಟ್ವಿಟರ್‌ನಲ್ಲಿ ಸೈನ್ಸ್‌ ಗರ್ಲ್‌ ಎಂಬ ಖಾತೆ ಹೊಂದಿರುವವರೊಬ್ಬರು ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. ಯಾವುದು? ಎಂದು ಅವರು ಶೀರ್ಷಿಕೆ ಬರೆದುಕೊಂಡಿದ್ದಾರೆ. ಈ ಬ್ರೈನ್‌ ಟೀಸರ್‌ನಲ್ಲಿ ಎ ಯಿಂದ ಎಲ್‌ವರೆಗೆ ಒಂದಿಷ್ಟು ಟ್ಯಾಂಕ್‌ಗಳಿವೆ. ಒಂದು ಕೊಳಾಯಿಯಿಂದ ಈ ಟ್ಯಾಂಕ್‌ಗಳಿಗೆ ನೀರು ತುಂಬಲಾಗುತ್ತಿದೆ. ಇದರಲ್ಲಿ ಕೆಲವು ಟ್ಯಾಂಕ್‌ಗಳನ್ನು ಬ್ಲಾಕ್‌ ಮಾಡಲಾಗಿದೆ. ಇನ್ನು ಕೆಲವಕ್ಕೆ ಪೈಪ್‌ಲೈನ್‌ ಕನೆಕ್ಟ್‌ ಮಾಡಿಲ್ಲ. ಮೊದಲು ಯಾವ ಟ್ಯಾಂಕ್‌ ತುಂಬಬಹುದು ಎಂಬುದನ್ನು ನಿಮ್ಮಿಂದ ಕಂಡು ಹಿಡಿಯಲು ಸಾಧ್ಯವೇ?

ಈ ಬ್ರೈನ್‌ ಟೀಸರ್‌ ಅಕ್ಟೋಬರ್‌ 16ರಂದು ಪೋಸ್ಟ್‌ ಮಾಡಲಾಗಿದೆ. ನಿನ್ನೆಯಿಂದ ಈ ಪೋಸ್ಟ್‌ ಸಾಕಷ್ಟು ವೈರಲ್‌ ಆಗುತ್ತಿದೆ. ಸುಮಾರು 1.1 ಮಿಲಿಯನ್‌ ಜನರು ಇದನ್ನು ವೀಕ್ಷಿಸಿದ್ದಾರೆ. ವೀಕ್ಷಕರ ಸಂಖ್ಯೆ ಇನ್ನು ಹೆಚ್ಚುತ್ತಲೇ ಇದೆ. ಕೆಲವರು ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡು ಹುಡುಕುವ ಪ್ರಯತ್ನ ಮಾಡುತ್ತಿದ್ದು, ತಮ್ಮ ಉತ್ತರವನ್ನು ಕಾಮೆಂಟ್‌ ಬಾಕ್ಸ್‌ನಲ್ಲಿ ತಿಳಿಸಿದ್ದಾರೆ.

ಮೆದುಳಿಗೆ ಹುಳ ಬಿಡುವ ಈ ಬ್ರೈನ್‌ ಟೀಸರ್‌ಗೆ ಬಂದ ಕಾಮೆಂಟ್‌ಗಳು ಹೀಗಿವೆ

ʼಕೆ ಮೊದಲು ತುಂಬುತ್ತದೆ. ಯಾವುದು ಬ್ಲಾಕ್‌ ಇದೆ ಗಮನಿಸಿʼ ಎಂದು ಎಕ್ಸ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಹರವಿನ ದರ. ಥಿಯರಿ ಪ್ರಕಾರ ಎ ಮೊದಲು ತುಂಬಬೇಕುʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಎಫ್‌ ಮೊದಲು ತುಂಬುತ್ತದೆ ಅನ್ನಿಸುತ್ತಿದೆʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಜಿ. ಎಯಿಂದ ಬಿ ತುಂಬುತ್ತದೆ. ಬಿಯಿಂದ ಸಿಗೆ ನೀರು ಸಾಗುತ್ತದೆ. ನಾನು ಸಿ ಮತ್ತು ಡಿ ತುಂಬಲು ಒಂದು ಹೋಲ್‌ ಮಾಡುತ್ತೇನೆ. ಆಗ ಜಿ ಗೆ ನೀರು ಹರಿದು ಹೋಗಿ, ಜಿ ಟ್ಯಾಂಕ್‌ನಲ್ಲಿ ನೀರು ತುಂಬುತ್ತದೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಹೀಗೆ ಅವರವರಿಗೆ ಅನ್ನಿಸಿದ್ದು, ತಾವು ಕಂಡುಕೊಂಡು ಉತ್ತರವನ್ನು ಕಾಮೆಂಟ್‌ ಮೂಲಕ ಬರೆದಿದ್ದಾರೆ ಎಕ್ಸ್‌ ಬಳಕೆದಾರರು. ಹಾಗಾದರೆ ನಿಮ್ಮ ಪ್ರಕಾರ ಈ ಟ್ಯಾಂಕ್‌ನಲ್ಲಿ ಯಾವ ಟ್ಯಾಂಕ್‌ಗೆ ಮೊದಲು ನೀರು ತುಂಬುತ್ತದೆ. ನಿಮ್ಮ ಜಾಣ್ಮೆ ಬಳಸಿ ಉತ್ತರ ಕಂಡುಹಿಡಿಯಿರಿ.

ಇದನ್ನೂ ಓದಿ

Brain Teaser: ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಚಿತ್ರದಲ್ಲಿನ 5 ವ್ಯತ್ಯಾಸಗಳನ್ನು ಗುರುತಿಸಿ

ಬ್ರೈನ್‌ ಟೀಸರ್‌ಗಳನ್ನು ಬಿಡಿಸುವುದು ನಿಜಕ್ಕೂ ಖುಷಿ ಕೊಡುವ ವಿಚಾರ. ಇವು ಮನಸ್ಸಿಗೆ ಒಂಥರಾ ಮಜಾ ಕೊಡುತ್ತವೆ. ಹಲವರು ಬ್ರೈನ್‌ ಟೀಸರ್‌ಗಾಗಿ ಕಾಯುತ್ತಾರೆ. ಇಲ್ಲೊಂದು ಚಿತ್ರವಿದೆ. ಒಂದು ಚಿತ್ರವನ್ನು ಎರಡು ವಿಭಾಗವಾಗಿ ವಿಂಗಡಿಸಲಾಗಿದೆ. ಮೇಲ್ನೋಟಕ್ಕೆ ಈ ಎರಡೂ ಚಿತ್ರಗಳು ಒಂದೇ ರೀತಿ ಕಾಣುತ್ತವೆ. ಆದರೆ ಈ ಚಿತ್ರದಲ್ಲಿ ಕೆಲವೊಂದು ವ್ಯತ್ಯಾಸಗಳಿವೆ. ಸೂಕ್ಷ್ಮವಾಗಿ ಗಮನಿಸಿದಾಗ ನಿಮಗೆ ಚಿತ್ರಗಳಲ್ಲಿನ ವ್ಯತ್ಯಾಸ ಅರಿವಿಗೆ ಬರುತ್ತದೆ.

Whats_app_banner