Brain Teaser: ಚಿತ್ರದಲ್ಲಿ ಒಂದೇ ಒಂದು ಲಾಕ್‌ ಓಪನ್‌ ಇದೆ, ಅದು ಎಲ್ಲಿದೆ? 11 ಸೆಕೆಂಡ್‌ನಲ್ಲಿ ಕಂಡುಹಿಡಿದು ಜಾಣತನ ತೋರಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಚಿತ್ರದಲ್ಲಿ ಒಂದೇ ಒಂದು ಲಾಕ್‌ ಓಪನ್‌ ಇದೆ, ಅದು ಎಲ್ಲಿದೆ? 11 ಸೆಕೆಂಡ್‌ನಲ್ಲಿ ಕಂಡುಹಿಡಿದು ಜಾಣತನ ತೋರಿ

Brain Teaser: ಚಿತ್ರದಲ್ಲಿ ಒಂದೇ ಒಂದು ಲಾಕ್‌ ಓಪನ್‌ ಇದೆ, ಅದು ಎಲ್ಲಿದೆ? 11 ಸೆಕೆಂಡ್‌ನಲ್ಲಿ ಕಂಡುಹಿಡಿದು ಜಾಣತನ ತೋರಿ

ನಿಮ್ಮ ಗಮನಶಕ್ತಿ ಎಷ್ಟು ಶಾರ್ಪ್‌ ಇದೆ ಎಂದು ತಿಳಿಯುವ ಆಸೆ ನಿಮಗಿದ್ದರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಟ್ರೈ ಮಾಡಿ. ಇಲ್ಲಿರುವ ಬೀಗಗಳ ಸಾಲಿನಲ್ಲಿ ಒಂದು ಬೀಗದ ಲಾಕ್‌ ಓಪನ್‌ ಇದೆ. ಆ ಬೀಗ ಯಾವುದು ಎಂದು 11 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ನಿಮ್ಮ ಕಣ್ಣು, ಮೆದುಳು ನಿಜಕ್ಕೂ ಶಾರ್ಪ್‌ ಇದ್ರೆ ಟ್ರೈ ಮಾಡಿ.

ಚಿತ್ರದಲ್ಲಿ ಒಂದೇ ಒಂದು ಲಾಕ್‌ ಓಪನ್‌ ಇದೆ, ಅದು ಎಲ್ಲಿದೆ?
ಚಿತ್ರದಲ್ಲಿ ಒಂದೇ ಒಂದು ಲಾಕ್‌ ಓಪನ್‌ ಇದೆ, ಅದು ಎಲ್ಲಿದೆ?

ಬ್ರೈನ್‌ ಟೀಸರ್‌ಗಳಿಗೆ ಮೆದುಳು ಒಂಥರಾ ಮಿನಿ ಪ್ಲೇ ಗ್ರೌಂಡ್‌ ಇದ್ದ ಹಾಗೆ. ಇವು ನಮ್ಮ ಯೋಚನಾಶಕ್ತಿಗೆ ಟ್ವಿಸ್ಟ್‌ ನೀಡುತ್ತವೆ. ನಮ್ಮ ಗ್ರಹಿಕೆಗೆ ಚಾಲೆಂಜ್‌ ಮಾಡುತ್ತವೆ. ಕೊನೆಯಲ್ಲಿ ನಾವು ಉತ್ತರ ಕಂಡುಕೊಂಡಾಗ ಸಂತೃಪ್ತಿಯ ಭಾವವೂ ನಮಗೆ ದೊರೆಯುತ್ತದೆ. ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹುಡುಕುವ ಕೆಲಸವು ನಮ್ಮ ಮೆದುಳು ಹಾಗೂ ಕಣ್ಣಿಗೆ ಸಾಕಷ್ಟು ಕೆಲಸ ನೀಡುವುದು ಮಾತ್ರವಲ್ಲ, ಅವುಗಳನ್ನು ಚುರುಕಾಗಿಸುವ ಕಾರ್ಯವನ್ನೂ ಮಾಡುತ್ತವೆ.

ಈ ಬ್ರೈನ್‌ ಟೀಸರ್‌ಗಳು ನಮಗೆ ಮೋಜು ನೀಡುವುದು ಮಾತ್ರವಲ್ಲ, ಸಮಸ್ಯೆ ಪರಿಹರಿಸುವ ಕೌಶಲ ವೃದ್ಧಿಯಾಗುವಂತೆಯೂ ಮಾಡುತ್ತವೆ. ಕ್ರಿಟಿಕಲ್‌ ಥಿಕಿಂಗ್‌ ಮಾಡಲು ನಮಗೆ ನೆರವಾಗುತ್ತವೆ. ಇವು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಲು ನೆರವಾಗುತ್ತದೆ. ಕ್ರಿಯಾತ್ಮಕ ಮನೋಭಾವಕ್ಕೂ ಇವು ಬ್ರೈನ್‌ ಟೀಸರ್‌ಗಳನ್ನು ಬಿಡಿಸುವುದು ಅವಶ್ಯ.

ಇಲ್ಲಿರುವ ಬ್ರೈನ್‌ ಟೀಸರ್‌ನಲ್ಲಿ ಉದ್ದಕ್ಕೆ, ಅಡ್ಡಕ್ಕೆ ಬೀಗಗಳ ಸಾಲು ಇದೆ. ಈ ಸಾಲಿನಲ್ಲಿ ಒಂದು ಬೀಗದ ಲಾಕ್‌ ಮಾತ್ರ ಓಪನ್‌ ಆಗಿದೆ. ಆ ಬೀಗ ಯಾವುದು ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ಆದರೆ ಕೇವಲ 11 ಸೆಕೆಂಡ್‌ನಲ್ಲಿ ಯಾವ ಬೀಗದ ಲಾಕ್‌ ಓಪನ್‌ ಇದೆ ಎಂದು ಕಂಡುಹಿಡಯಬೇಕು.

ಚಿತ್ರವನ್ನು ಸರಿಯಾಗಿ ಗಮನಿಸಿ, ಲಾಕ್‌ ಓಪನ್‌ ಆಗಿರುವ ಬೀಗ ನಿಮ್ಮ ಕಣ್ಣಿಗೂ ಕಾಣಿಸಬಹುದು. ಇನ್ನೂ ಕಾಣಿಸ್ತಾ ಇಲ್ವಾ, ನಿಮಗೆ ನೀಡುವ 11 ಸೆಕೆಂಡ್‌ ಮುಗಿತಾ, ಇನ್ನೂ ನಿಮಗೆ ಲಾಕ್‌ ಓಪನ್‌ ಇರುವ ಬೀಗ ಯಾವುದು ಅಂತ ಗೊತ್ತಾಗಿಲ್ವಾ? ಹಾಗಾದರೆ ನಾವು ನಿಮಗೆ ಕ್ಲೂ ಕೊಡ್ತೀವಿ. ಈ ಬೀಗ ಕೆಳಗಿನಿಂದ 5ನೇ ಸಾಲಿನಲ್ಲಿದೆ. ಈ ಆದ್ರೂ ಬೀಗ ನಿಮ್ಮ ಕಣ್ಣಿಗೆ ಕಾಣಿಸಿರಬಹುದು ಅಲ್ವಾ, ಈ ಬ್ರೈನ್‌ ಟೀಸರ್‌ ಚಿತ್ರವನ್ನು ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರಿಗೂ ಕಳುಹಿಸಿ. ಓಪನ್‌ ಇರುವ ಲಾಕ್‌ ಕಂಡುಹಿಡಿಯುವಂತೆ ಅವರಿಗೆ ಚಾಲೆಂಜ್‌ ಮಾಡಿ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ

Brain Teaser: ಬುದ್ಧಿವಂತರಿಗೆ ಮಾತ್ರ! ಚಿತ್ರದಲ್ಲಿ ಅಡಗಿರುವ ನಂಬರ್‌ ಪತ್ತೆ ಮಾಡಲು ನಿಮ್ಮಿಂದ ಸಾಧ್ಯವೇ, ಪ್ರಯತ್ನಿಸಿ

ಕಣ್ಣು ಮಂಜಾಗಿಸುವ ಈ ಚಿತ್ರದಲ್ಲಿ ಗುಪ್ತ ಸಂಖ್ಯೆಯೊಂದು ಅಡಗಿದೆ. ಆ ಸಂಖ್ಯೆ ಯಾವುದು ಎಂದು ಕಂಡುಹಿಡಿಯಬೇಕು. ಇದಕ್ಕೆ ಕಣ್ಣಷ್ಟೇ ಅಲ್ಲ, ಮೆದುಳು ಕೂಡ ಚುರುಕಾಗಿರಬೇಕು. ನೀವು ಬುದ್ಧಿವಂತರಾದ್ರೆ ಟ್ರೈ ಮಾಡಿ.

Brain Teaser: 44ರ ಸಾಲಿನಲ್ಲಿ ಒಂದೇ ಒಂದು ಕಡೆ 45 ಇದೆ, ಅದು ಎಲ್ಲಿದೆ? ನಿಮ್ಮ ಕಣ್ಣು ಶಾರ್ಪ್‌ ಇದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಬ್ರೈನ್‌ ಟೀಸರ್‌ ಹೆಸರೇ ಹೇಳುವಂತೆ ನಮ್ಮ ಮೆದುಳಿಗೆ ಸಾಕಷ್ಟು ಕೆಲಸ ಕೊಡುವ ಚಿತ್ರವಿದು. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಬ್ರೈನ್‌ ಟೀಸರ್‌ ಚಿತ್ರಗಳು ವೈರಲ್‌ ಆಗುತ್ತವೆ. ಇಂತಹ ಬ್ರೈನ್‌ ಟೀಸರ್‌ಗಳು ನಮ್ಮ ಕಣ್ಣು, ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇಂದಿನ ಬ್ರೈನ್‌ ಟೀಸರ್‌ನಲ್ಲಿ 44ರ ರಾಶಿಯಲ್ಲಿರುವ 45 ಅನ್ನು ಕಂಡುಹಿಡಿಯಬೇಕು.

Whats_app_banner