Brain Teaser: ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು, ಥಟ್ಟಂತ ಅಂತ ಉತ್ತರ ಹೇಳಿ, ನೀವೆಷ್ಟು ಜಾಣರು ನೋಡೋಣ
ಮೆದುಳಿಗೆ ಸಾಕಷ್ಟು ಕೆಲಸ ಕೊಡೋಕೆ ನಿಮಗೆ ತುಂಬಾ ಇಷ್ಟನಾ, ನಿಮ್ಮ ಮೆದುಳು ತುಂಬಾ ಚುರುಕು ಅಂತ ಅನ್ನಿಸ್ತಾ ಇದ್ಯಾ, ಹಾಗಾದರೆ ಇಲ್ಲಿರುವ ಬ್ರೈನ್ ಟೀಸರ್‌ಗೆ ಥಟ್ಟಂತ ಉತ್ತರ ಹೇಳಿ. ನೀವು ಎಷ್ಟು ಜಾಣರು ಎಂಬುದನ್ನು ಚೆಕ್ ಮಾಡೋಣ.
ಖಾಲಿ ಕೂತು ಬೋರ್ ಆಗ್ತಾ ಇದ್ಯಾ, ಮೆದುಳಿಗೆ ಏನಾದ್ರೂ ಕೆಲಸ ಕೊಡಬೇಕು ಅನ್ನಿಸ್ತಾ ಇದ್ಯಾ, ಹಾಗಾದ್ರೆ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇದರಿಂದ ನಿಮ್ಮ ಮೆದುಳು ಚುರುಕಾಗುತ್ತೆ, ಬೇಸರವೂ ಕಳೆಯುತ್ತೆ. ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಇದಕ್ಕೆ ನೀವು ಥಟ್ಟಂತ ಉತ್ತರ ಹೇಳಬೇಕು. ನೋಡೋಣ ನಿಮ್ಮ ಜಾಣತನ ಪರೀಕ್ಷೆ ಮಾಡೋಣ.
ಇಲ್ಲೊಂದು ಹೂವಿನ ಪಕಳೆಯಂತಹ ಚಿತ್ರವಿದೆ. ಇದರಲ್ಲಿ ಒಂದೊಂದು ಪಕಳೆಯಲ್ಲೂ ಒಂದೊಂದು ನಂಬರ್ ಇದೆ. ಆದರೆ ಒಂದು ಪಕಳೆಯಲ್ಲಿ ಮಾತ್ರ ನಂಬರ್ ಇಲ್ಲ. ಆ ನಂಬರ್ ಯಾವುದು ಎಂದು ನೀವು ಕಂಡುಹಿಡಿಯಬೇಕು. ನಿಮ್ಮ ಮೆದುಳು ನಿಜಕ್ಕೂ ಚುರುಕು ಅಂತಾದ್ರೆ ಥಟ್ಟಂತ ಮಿಸ್ ಆಗಿರುವ ನಂಬರ್ ಯಾವುದು ಎಂದು ಕಂಡುಹಿಡಿಯಿರಿ.
Train your Brain ಎಂಬ ಟ್ವಿಟರ್ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಹಂಚಿಕೊಳ್ಳಲಾಗಿದೆ. 5,11, 23,47,95 ನಂಬರ್‌ಗಳನ್ನು ಕ್ರಮವಾಗಿ ಬರೆಯಲಾಗಿದೆ. ಈಗ ನೀವು ಮಿಸ್ ಆಗಿರುವ ನಂಬರ್ ಯಾವುದು ಎಂದು ಕಂಡುಹಿಡಿಯಬೇಕು.
ಕೆಲವು ಗಂಟೆಗಳ ಹಿಂದಷ್ಟೇ ಪೋಸ್ಟ್ ಮಾಡಲಾಗಿರುವ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 1500ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರ ತಿಳಿಸಿದ್ದಾರೆ. ಈ ಬ್ರೈನ್ ಟೀಸರ್‌ಗೆ ಹಲವರು 191 ಉತ್ತರ ಎಂದು ಕಾಮೆಂಟ್ ಮಾಡಿದ್ದರೆ ಕೆಲವರು 195 ಎಂದು ಹೇಳಿದ್ದಾರೆ. ಕೆಲವರು 2 ಎಂದೂ ಹೇಳಿದ್ದಾರೆ. ಹಾಗಾದರೆ ಇದಕ್ಕೆ ಸರಿಯಾದ ಉತ್ತರವೇನು? ನಿಮ್ಮ ಉತ್ತರ ಹೇಳಲು ಟ್ರೈ ಮಾಡಿ.
ಈ ಬ್ರೈನ್ ಟೀಸರ್‌ಗಳನ್ನು ಓದಿ
Brain Teaser: ಚಿತ್ರದಲ್ಲಿ ಒಟ್ಟು ಎಷ್ಟು 9 ಇದೆ, 6 ಸೆಕೆಂಡ್‌ನಲ್ಲಿ ಉತ್ತರ ಹೇಳಿ; ನಿಮ್ಮ ಕಣ್ಣಿಗೊಂದು ಸವಾಲ್
ನಿಮ್ಮ ಕಣ್ಣು ಹಾಗೂ ಮೆದುಳು ಎರಡೂ ಸಖತ್ ಶಾರ್ಪ್ ಅಂತ ನಿಮಗೆ ಅನ್ನಿಸುತ್ತಾ, ಹಾಗಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಇದೆ. ಈ ಚಿತ್ರದಲ್ಲಿ ಒಂಭತ್ತರಲ್ಲಿ ಒಂದಿಷ್ಟು ಒಂಭತ್ತಿದೆ. 6 ಸೆಕೆಂಡ್‌ನಲ್ಲಿ ಒಟ್ಟು ಎಷ್ಟು 9 ಇದೆ ಎಂಬುದನ್ನು ಕಂಡುಹಿಡಿಯಬೇಕು.
Brain Teaser: ಗುಂಡನ ಬಳಿ ಎಷ್ಟು ಮೊಟ್ಟೆ ಉಳಿಯಿತು, 8 ಸೆಕೆಂಡ್ ಒಳಗೆ ಉತ್ತರ ಹೇಳಿ, ಈ ಲೆಕ್ಕ ಮೆದುಳಿಗೆ ಹುಳ ಬಿಡೋದು ಪಕ್ಕಾ
ಗುಂಡನ ಬಳಿ 6 ಮೊಟ್ಟೆಗಳಿವೆ. ಅದರಲ್ಲಿ ಎರಡು ಒಡೆದು ಹೋಯ್ತು, ಎರಡನ್ನು ಗುಂಡ ಫ್ರೈ ಮಾಡುತ್ತಾನೆ ಹಾಗೂ 2 ಮೊಟ್ಟೆಯನ್ನು ತಿನ್ನುತ್ತಾನೆ. ಹಾಗಾದರೆ ಗುಂಡನ ಬಳಿ ಒಟ್ಟು ಎಷ್ಟು ಮೊಟ್ಟೆಗಳು ಉಳಿದಿವೆ. 8 ಸೆಕೆಂಡ್ ಒಳಗೆ ಉತ್ತರ ಹೇಳೋಕೆ ಟ್ರೈ ಮಾಡಿ.