Brain Teaser: ಈ ಬಾಕ್ಸ್‌ನಲ್ಲಿ ಮಿಸ್ ಆಗಿರುವ ನಂಬರ್ ಯಾವುದು, ಕ್ಯಾಲ್ಕುಲೆಟರ್ ಬಳಸದೇ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ತಲೆಗೆ ಹುಳ ಬಿಡುವುದು ಖಂಡಿತ. ಇದೊಂದು ಗಣಿತ ಪಜಲ್ ಆಗಿದ್ದು, ಕ್ಯಾಲ್ಕುಲೇಟರ್ ಬಳಸದೇ ನೀವು ಇದಕ್ಕೆ 20 ಸೆಕೆಂಡ್‌ನಲ್ಲಿ ಉತ್ತರ ಕಂಡುಹಿಡಿಯಬೇಕು. ಹಾಗಾದ್ರೆ ಬಾಕ್ಸ್‌ನಲ್ಲಿ ಮಿಸ್ ಆಗಿರುವ ನಂಬರ್ ಯಾವುದು ತಿಳಿಸಿ.

ಗಣಿತದ ಪಜಲ್‌ಗಳನ್ನು ಬಿಡಿಸುವುದು ಕಷ್ಟ ಎನ್ನಿಸಿದರೂ ಕೂಡ ಅವುಗಳು ನಮ್ಮ ಮೆದುಳನ್ನು ಚುರುಕುಗೊಳಿಸುವುದು ಸುಳ್ಳಲ್ಲ. ಹಲವರಿಗೆ ಶಾಲಾ ದಿನಗಳಿಂದಲೂ ಗಣಿತ ಎಂದರೆ ಕಬ್ಬಿಣದ ಕಡಲೆ. ಹಾಗಾಗಿ ಗಣಿತದಿಂದ ದೂರವೇ ಇರುತ್ತಾರೆ. ಆದರೆ ಇನ್ನೂ ಕೆಲವರಿಗೆ ಗಣಿತ ಎಂದರೆ ಸಖತ್ ಇಷ್ಟ. ಕಣ್ಣುಮುಚ್ಚಿ ಕಣ್ಣು ತೆರೆಯುವುದರ ಒಳಗೆ ಸೂತ್ರಗಳಿಗೆ ಪಟ್ ಅಂತ ಉತ್ತರ ಹೇಳುತ್ತಾರೆ. ನೀವು ಗಣಿತಪ್ರೇಮಿಯಾಗಿದ್ರೆ ನಾವು ನಿಮಗೆ ಪ್ರತಿದಿನ ಇಲ್ಲಿ ಗಣಿತದ ಪಜಲ್ ಇರುವ ಬ್ರೈನ್ ಟೀಸರ್‌ಗಳನ್ನು ಪ್ರಕಟ ಮಾಡುತ್ತೇವೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಈ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದು ಸವಾಲು ಎನ್ನಿಸಿದರೂ ಒಂದಷ್ಟು ಹೊತ್ತು ನಿಮ್ಮ ಕಣ್ಣು, ಮೆದುಳನ್ನು ಅದರ ಮೇಲೆ ಹರಿಸುವಂತೆ ಮಾಡುತ್ತವೆ. ಟೈಮ್ ಪಾಸ್ ಮಾಡಲು ಇದು ಪಜಲ್‌ಗಳು ಹೇಳಿ ಮಾಡಿಸಿದಂತವು. ನೀವು ಗಣಿತದ ಪಜಲ್‌ಗಾಗಿ ಎದುರು ನೋಡುತ್ತಿದ್ದರೆ ನಿಮಗಾಗಿ ಇಲ್ಲಿದೆ ಒಂದು ಹೊಸ ಬ್ರೈನ್ ಟೀಸರ್.
@sonukg4india ಎಂಬ ಎಕ್ಸ್ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಹಂಚಿಕೊಳ್ಳಲಾಗಿತ್ತು. ನಿಮ್ಮಿಂದ ಉತ್ತರ ಹುಡುಕಲು ಸಾಧ್ಯವೇ? ಎಂದು ಶೀರ್ಷಿಕೆ ಬರೆದುಕೊಂಡಿರುವ ಬ್ರೈನ್ ಟೀಸರ್ ಇದಾಗಿದೆ. ಮೇ 9ರಂದು ಪೋಸ್ಟ್ ಮಾಡಲಾಗಿರುವ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 9 ಸಾವಿರದಷ್ಟು ಮಂದಿ ವೀಕ್ಷಿಸಿದ್ದಾರೆ. 50ಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದರೆ, 140 ಮಂದಿ ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರ ತಿಳಿಸಿದ್ದಾರೆ.
ಈ ಬ್ರೈನ್ ಟೀಸರ್‌ನ ಬಾಕ್ಸ್‌ನ ಮೊದಲ ಸಾಲಿನಲ್ಲಿ 1,4,7,27 ಸಂಖ್ಯೆಗಳಿದ್ದರೆ, 2,5,8,38 ಎರಡನೇ ಸಾಲಿನಲ್ಲಿದೆ. 3,6,9 ಮೂರನೇ ಸಾಲಿನಲ್ಲಿದ್ದರೆ ಮೂರನೇ ಸಾಲಿನ ಕೊನೆಯ ನಂಬರ್ ಮಾತ್ರ ಮಿಸ್ ಆಗಿದೆ. ಈ ನಂಬರ್ ಯಾವುದು ಎಂದು ನೀವು ಕಂಡುಹಿಡಿಯಬೇಕು.
ಕಾಮೆಂಟ್‌ನಲ್ಲಿ ಬಂದ ಉತ್ತರಗಳು ಹೀಗಿವೆ
ʼಉತ್ತರ 51, b•c-a=dʼ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ʼ(4x7)-1 = 27. (8x5)-2 = 38. (6x9)-3 = 51.ʼ ಎಂದು ಎರಡನೇ ವ್ಯಕ್ತಿ ವಿವರಿಸಿದ್ದಾರೆ. ʼ6x9=54. 54-1=53ʼ ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಬಹುತೇಕರು ಈ ಬ್ರೈನ್ ಟೀಸರ್‌ಗೆ 51 ಎಂದು ಉತ್ತರ ಹೇಳಿದ್ದರೆ, ಕೆಲವರು 49 ಎಂದು ಉತ್ತರ ತಿಳಿಸಿದ್ದಾರೆ.
ಇದನ್ನೂ ಓದಿ
Brain Teaser: 3 ಲಿಪ್‌ಸ್ಟಿಕ್ ಸೇರಿ 30 ಆದ್ರೆ 1 ಕಾಂಪ್ಯಾಕ್ಟ್, 1 ನೈಲ್‌ಪಾಲಿಶ್, 1 ಲಿಪ್‌ಸ್ಟಿಕ್ ಸೇರಿದ್ರೆ ಎಷ್ಟಾಗುತ್ತೆ?
ಮೆದುಳಿಗೆ ಹುಳ ಬಿಡುವ ಗಣಿತದ ಪಜಲ್‌ಗಳನ್ನು ಬಿಡಿಸುವುದು ಎಂದರೆ ಮ್ಯಾಥ್ಸ್ ಲವರ್ಸ್‌ಗೆ ಅದೇನೋ ಖುಷಿ. ಇದಕ್ಕಾಗಿ ಖಂಡಿತ ಒಂದಿಷ್ಟು ಸಮಯ ಮೀಸಲಿಡುತ್ತಾರೆ. ನೀವು ಗಣಿತ ಪ್ರೇಮಿಯಾಗಿದ್ರೆ ನಿಮವಾಗಿ ಇಲ್ಲಿದೆ ಒಂದು ಬ್ರೈನ್ ಟೀಸರ್. ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕು ಪ್ರಯತ್ನ ಮಾಡಿ.
Brain Teaser: ಈ ಬೀಗ ತೆಗೆಯಲು ಕೋಡ್ ಏನಿರಬಹುದು? ಬುದ್ಧಿವಂತರಾಗಿದ್ರೆ 10 ಸೆಕೆಂಡ್‌ನಲ್ಲಿ ಪತ್ತೆಹಚ್ಚಿ ನೋಡೋಣ
ಬುದ್ಧಿವಂತರಿಗಾಗಿ ಇಲ್ಲೊಂದು ಬ್ರೈನ್ ಟೀಸರ್ ಸವಾಲಿದೆ. ಚಿತ್ರದಲ್ಲಿ ಒಂದು ಬೀಗವಿದ್ದು ಆ ಬೀಗ ತೆಗೆಯಲು ಕೋಡ್ ಅನಿವಾರ್ಯವಾಗಿದೆ. ಕೆಳಗೆ ಕೊಟ್ಟಿರುವ ಲಿಂಕ್ ಗಮನಿಸಿ, ಈ ಬೀಗದ ಕೋಡ್ ಅನ್ನು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ. ನಿಮ್ಮ ಮೆದುಳಿಗೆ ಚಾಲೆಂಜ್ ಮಾಡುವ ಬ್ರೈನ್ ಟೀಸರ್ ಇದು.