Brain Teaser: ವೃತ್ತದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ
ಗಣಿತದ ಸೂತ್ರಗಳು ಕೆಲವೊಮ್ಮೆ ನಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಇಲ್ಲೊಂದು ವೃತ್ತವಿದೆ, ಈ ವೃತ್ತದಲ್ಲಿ ಒಂದಿಷ್ಟು ಸಂಖ್ಯೆಗಳಿವೆ. ಒಂದು ಸಂಖ್ಯೆ ಮಾತ್ರ ಮಿಸ್ ಆಗಿದೆ. ಆ ನಂಬರ್ ಯಾವುದು ಎಂಬುದನ್ನು ಕಂಡುಹಿಡಿಯಬೇಕು. ಗಣಿತ ಪ್ರೇಮಿಗಳು ಉತ್ತರ ಹೇಳಲು ಟ್ರೈ ಮಾಡಿ.
ಗಣಿತದ ಸೂತ್ರಗಳಿಗೆ ಉತ್ತರ ಹುಡುಕುವುದರಲ್ಲಿ ನೀವು ಎಕ್ಸ್‌ಪರ್ಟ್ ಆ? ಗಣಿತದ ಪ್ರಶ್ನೋತ್ತರಗಳಿಗೆ ನೀರು ಕುಡಿದಷ್ಟು ಸರಾಗವಾಗಿ ಉತ್ತರ ಹೇಳುತ್ತೀರಾ? ಹಾಗಾದರೆ ನಿಮಗಾಗಿ ಇಲ್ಲೊಂದು ಗಣಿತ ಪಜಲ್ ಇದೆ. ಇದು ಸುಲಭ ಗಣಿತ ಎನ್ನಿಸಿದ್ರು ಕೂಡ ಕ್ಯಾಲ್ಕುಲೇಟರ್ ಬಳಸದೇ ಥಟ್ಟಂತ ಉತ್ತರ ಹೇಳಬೇಕು. ನೀವು ಗಣಿತಪ್ರೇಮಿಯಾದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹುಡುಕಲು ಟ್ರೈ ಮಾಡಿ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿರುವ ಗಣಿತದ ಪಜಲ್ ಇದು. @MZH_Maths ಎಂಬ ಎಕ್ಸ್ ಪುಟದಲ್ಲಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿದೆ. ಮಿಸ್ಸಿಂಗ್ ನಂಬರ್ ಎಂದು ಬರೆದುಕೊಂಡಿರುವ ಗಣಿತದ ಪಜಲ್ ಇದಾಗಿದೆ. ಈ ಚಿತ್ರದಲ್ಲಿ ಒಂದು ವೃತ್ತವಿದೆ. ಅದರಲ್ಲಿ 8,13,18,24 ಹಾಗೂ 39 ನಂಬರ್‌ಗಳಿವೆ. ಇದರಲ್ಲಿ ಒಂದು ನಂಬರ್ ಮಿಸ್ ಆಗಿದೆ. ಆ ನಂಬರ್ ಯಾವುದು ಎಂದು ಕಂಡುಹಿಡಿಯಬೇಕು.
ಮೇ 17ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 1,250ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಬ್ರೈನ್ ಟೀಸರ್‌ಗೆ ಕೆಲವರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡಿದ್ದಾರೆ.
ʼಉತ್ತರ 3ʼ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ʼ3×18=54ʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 54 ಅಥವಾ 6 ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಈ ಬ್ರೈನ್ ಟೀಸರ್‌ಗೆ ಹಲವರು 54 ಉತ್ತರ ಎಂದು ಕಾಮೆಂಟ್ ಮಾಡಿದ್ದಾರೆ.
ಸರಿ ಹಾಗಾದ್ರೆ, ಇಲ್ಲಿರುವ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು? ನೀವು ನಿಜಕ್ಕೂ ಗಣಿತದಲ್ಲಿ ಶಾರ್ಪ್ ಇದ್ದರೆ ಉತ್ತರ ಹೇಳಿ. 54 ಉತ್ತರ ಎಂದಾದರೆ ಹೇಗೆ ಎಂಬುದನ್ನು ವಿವರಿಸಿ. ಆದರೆ ಕ್ಯಾಲ್ಕುಲೆಟರ್ ಬಳಸುವ ಹಾಗಿಲ್ಲ ನೆನಪಿರಲಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಗಣಿತದಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ ನಿಮಗಾಗಿ ಇಲ್ಲದೆ ಒಂದು ಹೊಸ ಮ್ಯಾಥ್ಸ್ ಪಜಲ್. ಇಲ್ಲಿರುವ ಸುಲಭ ಗಣಿತಕ್ಕೆ ನೀವು ಕ್ಯಾಲ್ಕುಲೇಟರ್ ಬಳಸದೇ 10 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು...
Brain Teaser: ಈ ಬಾಕ್ಸ್‌ನಲ್ಲಿ ಮಿಸ್ ಆಗಿರುವ ನಂಬರ್ ಯಾವುದು, ಕ್ಯಾಲ್ಕುಲೆಟರ್ ಬಳಸದೇ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ತಲೆಗೆ ಹುಳ ಬಿಡುವುದು ಖಂಡಿತ. ಇದೊಂದು ಗಣಿತ ಪಜಲ್ ಆಗಿದ್ದು, ಕ್ಯಾಲ್ಕುಲೇಟರ್ ಬಳಸದೇ ನೀವು ಇದಕ್ಕೆ 20 ಸೆಕೆಂಡ್‌ನಲ್ಲಿ ಉತ್ತರ ಕಂಡುಹಿಡಿಯಬೇಕು. ಹಾಗಾದ್ರೆ ಬಾಕ್ಸ್‌ನಲ್ಲಿ ಮಿಸ್ ಆಗಿರುವ ನಂಬರ್ ಯಾವುದು ತಿಳಿಸಿ.