Brain Teaser: ವೃತ್ತದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ಗಣಿತ ಪ್ರೇಮಿಗಳು 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕೆ ಪ್ರಯತ್ನಿಸಿ
ಗಣಿತದ ಸೂತ್ರಗಳಿಗೆ ಉತ್ತರ ಹುಡುಕಲು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಆದರೆ ಕೆಲವು ಗಣಿತಪ್ರೇಮಿಗಳು ಈ ಸೂತ್ರಗಳಿಗೆ ಥಟ್ಟಂತ ಉತ್ತರ ಹೇಳುತ್ತಾರೆ. ಇಲ್ಲೊಂದು ಗಣಿತದ ಪಜಲ್ ಇದೆ. ಇದರಲ್ಲಿ ಒಂದು ನಂಬರ್ ಮಿಸ್ ಆಗಿದೆ. ಆ ನಂಬರ್ ಯಾವುದು ಎಂದು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು.
ಸಾಮಾಜಿಕ ಜಾಲತಾಣ ತೆರೆದು ನೋಡಿದಾಗ ಸಾಕಷ್ಟು ಬ್ರೈನ್ ಟೀಸರ್, ಆಪ್ಟಿಕಲ್ ಇಲ್ಯೂಷನ್‌ಗಳು ಕಣ್ಣಿಗೆ ಬೀಳುತ್ತವೆ. ಇವುಗಳು ನಮ್ಮನ್ನು ಹಿಡಿದು ನಿಲ್ಲಿಸುವುದು ಮಾತ್ರವಲ್ಲ, ಇದಕ್ಕೆ ಉತ್ತರ ಕಂಡುಹಿಡಿಯದೇ ಬೇರೆ ಪೋಸ್ಟ್ ನೋಡಲು ಮನಸ್ಸು ಒಪ್ಪುವುದಿಲ್ಲ. ಇದರ ಉತ್ತರಕ್ಕಾಗಿ ನಾವು ಸಾಕಷ್ಟು ಬುದ್ಧಿ ಖರ್ಚು ಮಾಡುತ್ತೇವೆ. ಇದರಿಂದ ನಮ್ಮಲ್ಲಿ ಯೋಚನಾಶಕ್ತಿಯು ಬೆಳೆಯುತ್ತದೆ.
ನೀವು ಗಣಿತಪ್ರೇಮಿ ಅಂತಾದ್ರೆ ನಿಮಗಾಗಿ ಹಲವು ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತವೆ. ಈ ಬ್ರೈನ್ ಟೀಸರ್‌ಗಳಿಗೆ ನೀವು ಕ್ಯಾಲ್ಕುಲೆಟರ್ ಬಳಸದೇ ಉತ್ತರ ಹೇಳಬೇಕು. ಅದು ಕೇವಲ ಇಂತಿಷ್ಟು ಸೆಕೆಂಡ್ ಒಳಗೆ ಹೇಳಬೇಕು ಎನ್ನುವುದು ನಿಯಮ. ಇಲ್ಲೊಂದು ಅಂಥದ್ದೇ ಬ್ರೈನ್ ಟೀಸರ್ ಇದೆ. ಇದೊಂದು ಗಣಿತದ ಪಜಲ್ ಆಗಿದ್ದು ವೃತ್ತದಲ್ಲಿ ಮಿಸ್ ಆಗಿರುವ ನಂಬರ್ ಯಾವುದು ಎಂದು ಮನಸ್ಸಲ್ಲೇ ಲೆಕ್ಕಾಚಾರ ಮಾಡಿ ಉತ್ತರ ಹೇಳಬೇಕು.
Pro Brain Teaser ಎಂಬ ಟ್ವಿಟರ್ ಪುಟ ನಿರ್ವಹಿಸುತ್ತಿರುವವರು ಈ ಬ್ರೈನ್ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಇಲ್ಲೊಂದು ವೃತ್ತವಿದೆ. ಅದರ ಸುತ್ತಲೂ ಒಂದಿಷ್ಟು ನಂಬರ್‌ಗಳನ್ನು ಬರೆಯಲಾಗಿದೆ. 60, 10 ? 9 45 5 30 6 ಎಂಬುದು ಪ್ರಶ್ನೆಯಾಗಿದೆ. ಹಾಗಾದರೆ ಈ ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ಇದನ್ನು ನೀವು 10 ಸೆಕೆಂಡ್ ಒಳಗೆ ಮನಸ್ಸಲ್ಲೇ ಲೆಕ್ಕಾಚಾರ ಮಾಡಿ ಕಂಡುಹಿಡಿಯಬೇಕು.
ಆಗಸ್ಟ್ 12 ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಲಾಗಿತ್ತು. ಈಗಾಗಲೇ 12 ಸಾವಿರಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಹಲವರು ಈ ಗಣಿತದ ಪಜಲ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿದ್ದಾರೆ.
ಬಹುತೇಕರು ಉತ್ತರ 90 ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದಕ್ಕೆ 15 ಎಂದು ಕೆಲವರು 75 ಎಂದು ಕಾಮೆಂಟ್ ಮಾಡಿದ್ದಾರೆ. ಈ ಬ್ರೈನ್ ಟೀಸರ್‌ಗೆ ಕ್ಯಾಲ್ಕುಲೆಟರ್ ಬಳಸದೇ ಎಷ್ಟು ಸಮಯದಲ್ಲಿ ಉತ್ತರ ಕಂಡುಹಿಡಿಯಲು ಸಾಧ್ಯವಾಯ್ತು ಹೇಳಿ, ಹಾಗೆಯೇ ನಿಮ್ಮ ಉತ್ತರ ಕಾಮೆಂಟ್ ಮಾಡಿ ತಿಳಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಈ ಚಿತ್ರದಲ್ಲಿ ಯಾವ ನಂಬರ್ ಕಾಣುತ್ತಿದೆ? 8 ಸೆಕೆಂಡ್ ಒಳಗೆ ಉತ್ತರ ಹೇಳಿ, ನಿಮ್ಮ ಕಣ್ಣಿಗೊಂದು ಪರೀಕ್ಷೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಮಾತ್ರವಲ್ಲ, ಕಣ್ಣಿಗೂ ನೋವಾಗುವಂತೆ ಮಾಡುತ್ತದೆ. ಈ ಬ್ರೈನ್ ಟೀಸರ್‌ನಲ್ಲಿ ಅಡಗಿರುವ ನಂಬರ್ ಯಾವುದು ಎಂಬುದನ್ನು ನೀವು 8 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು. ನಿಮ್ಮ ಕಣ್ಣಿಗಿದು ಚಾಲೆಂಜ್.