ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಪ್ರಶ್ನಾರ್ಥಕ ಚಿಹ್ನೆ ಇರುವ ಜಾಗಕ್ಕೆ ಯಾವ ಸಂಖ್ಯೆ ಬರಬೇಕು? 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕಾಗುತ್ತಾ ಟ್ರೈ ಮಾಡಿ

Brain Teaser: ಪ್ರಶ್ನಾರ್ಥಕ ಚಿಹ್ನೆ ಇರುವ ಜಾಗಕ್ಕೆ ಯಾವ ಸಂಖ್ಯೆ ಬರಬೇಕು? 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕಾಗುತ್ತಾ ಟ್ರೈ ಮಾಡಿ

ಇಲ್ಲಿರುವ ಚಿತ್ರದಲ್ಲಿ ಒಂದಿಷ್ಟು ಸಂಖ್ಯೆಗಳಿವೆ. ಇದೊಂದು ಗಣಿತದ ಪಜಲ್‌ ಆಗಿದ್ದು, ಮಿಸ್‌ ಆಗಿರುವ ನಂಬರ್‌ ಅನ್ನು ಕಂಡುಹಿಡಿಯಬೇಕು. ಟ್ವಿಟರ್‌ನಲ್ಲಿ ವೈರಲ್‌ ಆಗಿರುವ ಈ ಬ್ರೈನ್‌ ಟೀಸರ್‌ಗೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಲು ಸಾಧ್ಯವೇ ಪ್ರಯತ್ನಿಸಿ.

ಚಿತ್ರದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕಾಗುತ್ತಾ?
ಚಿತ್ರದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? 10 ಸೆಕೆಂಡ್‌ನಲ್ಲಿ ಉತ್ತರ ಹೇಳೋಕಾಗುತ್ತಾ? (PC: @pickover)

ಲಾಜಿಕಲ್‌ ಗಣಿತ ಎಂದರೆ ನಿಜಕ್ಕೂ ಕಬ್ಬಿಣದ ಕಡಲೆಯೇ ಸರಿ. ಲಾಜಿಕಲ್‌ ಗಣಿತಕ್ಕೆ ಉತ್ತರ ಹುಡುಕುವುದು ಸುಲಭದ ಮಾತಲ್ಲ. ಇದಕ್ಕೆ ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಆದರೆ ಕೆಲವೊಮ್ಮೆ ಎಷ್ಟೇ ಬುದ್ಧಿ ಖರ್ಚು ಮಾಡಿದ್ರು ಈ ಬ್ರೈನ್‌ ಟೀಸರ್‌ ಅಥವಾ ಪಜಲ್‌ಗೆ ಉತ್ತರ ಹುಡುಕುವುದು ಕಷ್ಟವಾಗುತ್ತದೆ. ಅಂತಹ ಬ್ರೈನ್‌ ಟೀಸರ್‌ಗೆ ಮೆದುಳು ಶಾರ್ಪ್‌ ಇದ್ದರಷ್ಟೇ ಉತ್ತರ ಕಂಡುಹಿಡಿಯಲು ಸಾಧ್ಯವಾಗುತ್ತದೆ.

ನೀವು ಗಣಿತ ಪ್ರೇಮಿಯಾಗಿದ್ದರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳಿ, ಮಾತ್ರವಲ್ಲ ಇದನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹಂಚಿಕೊಂಡು ಅವರ ಐಕ್ಯೂ ಲೆವೆಲ್‌ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿ.

@pickover ಎಂಬ ಟ್ವಿಟರ್‌ ಪುಟ ನಿರ್ವಹಿಸುತ್ತಿರುವ ವ್ಯಕ್ತಿ ಈ ಬ್ರೈನ್‌ ಟೀಸರ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. ಪ್ರಶ್ನಾರ್ಥಕ ಚಿಹ್ನೆ ಇರುವ ಜಾಗದಲ್ಲಿ ಯಾವ ನಂಬರ್‌ ಬರಬೇಕು? ಬಹುತೇಕರು ತಪ್ಪು ಉತ್ತರ ನೀಡಿದ್ದಾರೆ ಎಂದು ಅವರು ಶೀರ್ಷಿಕೆ ಬರೆದುಕೊಂಡಿದ್ದಾರೆ. ಪಜಲ್‌ ರೀತಿಯ ಬ್ರೈನ್‌ ಟೀಸರ್‌ನ ಮೊದಲ ಚೌಕದಲ್ಲಿ 1,3,6,8 ಅಂಕೆಗಳಿವೆ. ಎರಡನೇ ಚೌಕದಲ್ಲಿ 6,9,7,3 ಅಂಕೆಗಳಿವೆ. ಮೂರನೇ ಚೌಕದಲ್ಲಿ 2,4,6,4 ಅಂಕೆಗಳಿವೆ. ನಾಲ್ಕನೇ ಚೌಕದಲ್ಲಿ 7,6,2 ಇದೆ, ಹಾಗಾದರೆ ಇನ್ನೊಂದು ಸಂಖ್ಯೆ ಯಾವುದಿರಬೇಕಿತ್ತು ಎಂಬುದನ್ನು ನೀವು ಕಂಡುಹಿಡಿಯಬೇಕು.

ಟ್ರೆಂಡಿಂಗ್​ ಸುದ್ದಿ

ಜುಲೈ 2 ರಂದು ಈ ಬ್ರೈನ್‌ ಟೀಸರ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಎರಡು ದಿನಗಳಲ್ಲಿ 3000 ಮಂದಿ ಈ ಪೋಸ್ಟ್‌ ಅನ್ನು ವೀಕ್ಷಿಸಿದ್ದಾರೆ. ಕೆಲವರು ಈ ಬ್ರೈನ್‌ ಟೀಸರ್‌ಗೆ ಹೇಳುವ ಪ್ರಯತ್ನವನ್ನೂ ಮಾಡಿದ್ದಾರೆ. ಕೆಲವರು 5 ಎಂದರೆ ಇನ್ನೂ ಕೆಲವರು ನಾಲ್ಕು ಎಂದು ಉತ್ತರಿಸಿದ್ದಾರೆ. ಹಾಗಾದರೆ ಇದಕ್ಕೆ ನಿಮ್ಮ ಉತ್ತರವೇನು?.

ಇದನ್ನೂ ಓದಿ

Brain Teaser: 1+4=5, 2+5=12 ಆದ್ರೆ 8+11 = ಎಷ್ಟು? ಗಣಿತದಲ್ಲಿ ನೀವು ನಿಜಕ್ಕೂ ಪಂಟರಾದ್ರೆ 5 ಸೆಕೆಂಡ್‌ ಒಳಗೆ ಉತ್ತರ ಹೇಳಿ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀಡುವ ಲಾಜಿಕಲ್‌ ಗಣಿತ ನಮ್ಮ ತಲೆಗೆ ಹುಳ ಬಿಟ್ಟ ಫೀಲಿಂಗ್‌ ನೀಡುವುದು ಸುಳ್ಳಲ್ಲ. ಅಂತಹ ಲಾಜಿಕಲ್‌ ಗಣಿತಗಳನ್ನೇ ಬ್ರೈನ್‌ ಟೀಸರ್‌ಗಳಲ್ಲೂ ಬಳಸಲಾಗುತ್ತದೆ. ಇಲ್ಲಿರುವ ಇಂದಿನ ಬ್ರೈನ್‌ ಟೀಸರ್‌ ಕೂಡ ಗಣಿತದ ಪಜಲ್‌ ಹೊಂದಿದೆ. ಇದಕ್ಕೆ 5 ಸೆಕೆಂಡ್‌ ಒಳಗೆ ಉತ್ತರ ಹೇಳಬೇಕು.

Brain Teaser: 4 ಚೌಕ ಕೂಡಿಸಿದ್ರೆ 5 ಆದ್ರೆ, 9 ಚೌಕ ಸೇರಿ ಎಷ್ಟಾಗುತ್ತೆ? ನಿಮ್ಮ ಮೆದುಳು ಚುರುಕಿದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಟ್ವಿಟರ್‌ನಲ್ಲಿ ವೈರಲ್‌ ಆದ ಬ್ರೈನ್‌ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಖಂಡಿತ. ಲಾಜಿಕಲ್‌ ಗಣಿತ ಬಲ್ಲವರಷ್ಟೇ ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳಲು ಸಾಧ್ಯ. ನಿಮ್ಮ ಮೆದುಳು ಸಖತ್‌ ಶಾರ್ಪ ಅನ್ನಿಸಿದ್ರೆ ಈ ಬ್ರೈನ್‌ ಟೀಸರ್‌ಗೆ ತಟ್ಟಂತ ಉತ್ತರ ಹೇಳಿ. ನಿಮ್ಮ ಸಮಯ ಈಗ ಶುರು.