Brain Teaser: ಗಣಿತದ ಸೂತ್ರಗಳನ್ನು ಬಿಡಿಸುವಲ್ಲಿ ನೀವು ನಿಸ್ಸೀಮರೇ, ಹಾಗಿದ್ರೆ 11 ಸೆಕೆಂಡ್ ಇಲ್ಲಿರುವ ಪ್ರಶ್ನೆಗೆ ಉತ್ತರ ಹೇಳಿ
ಶಾಲಾ ದಿನಗಳಲ್ಲಿ ನಿಮ್ಮಿಷ್ಟದ ಸಬ್ಜೆಕ್ಟ್ ಯಾವುದು? ಗಣಿತ ಅಂತಾದ್ರೆ ಲೆಕ್ಕದಲ್ಲಿ ನಿಮ್ಮ ಜಾಣತನ ಪರೀಕ್ಷಿಸಲು ಇಲ್ಲಿದೆ ಒಂದು ಬ್ರೈನ್ ಟೀಸರ್, ಈ ಗಣಿತದ ಪಜಲ್‌ಗೆ ನೀವು 11 ಸೆಕೆಂಡ್ ಒಳಗೆ ಉತ್ತರ ಹೇಳಬೇಕು, ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ನೋಡೋಣ.
ಗಣಿತದ ಲೆಕ್ಕಾಚಾರ ಇರುವ ಬ್ರೈನ್ ಟೀಸರ್‌ಗಳು ಒಂಥರಾ ಮಜಾ ಇರುತ್ತದೆ. ಈ ಚಿತ್ರಗಳನ್ನು ನೋಡಿದಾಗ ಉತ್ತರ ಹೇಳೋದು ಬಹಳ ಸುಲಭ ಎನ್ನಿಸುತ್ತದೆ. ಯಾಕಂದ್ರೆ ಇದರಲ್ಲಿ ಹೆಚ್ಚಾಗಿ ಕೂಡಿಸುವ ಗುಣಿಸುವ ಲೆಕ್ಕಾಚಾರವೇ ಇರುತ್ತದೆ. ಆದರೆ ಇದನ್ನು ಗಮನಿಸಿ ನೋಡಿ, ಉತ್ತರ ಹೇಳಲು ಹೊರಟಾಗ ಮೆದುಳಿಗೆ ಹುಳ ಬಿಟ್ಟಂತಾಗುವುದು ಸುಳ್ಳಲ್ಲ.
ನೀವು ಗಣಿತದಲ್ಲಿ ಎಕ್ಸ್‌ಪರ್ಟ್ ಅಂತಾದ್ರೆ ನಿಮಗಾಗಿ ಇಲ್ಲಿದೆ ಒಂದು ಬ್ರೈನ್ ಟೀಸರ್. ಇದರಲ್ಲಿ ಕೇವಲ ಕೂಡಿಸುವ ಲೆಕ್ಕಾಚಾರವಿದೆ. ತ್ರಿಭುಜ, ಚೌಕ, ವೃತ್ತ ಇರುವ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ನಿಮ್ಮಿಂದ ಸಾಧ್ಯವೇ ಎಂದು ಟ್ರೈ ಮಾಡಿ.
ವೈರಲ್ ಆಗಿರುವ ಈ ಬ್ರೈನ್ ಟೀಸರ್‌ನಲ್ಲಿ 1 ತ್ರಿಭುಜ, 1 ಚೌಕ ಹಾಗೂ 1 ವೃತ್ತ ಸೇರಿದ್ರೆ 12 ಆಗುತ್ತೆ, 2 ವೃತ್ತ ಸೇರಿದ್ರೆ 10 ಆಗುತ್ತೆ, 2 ಚೌಕ ಹಾಗೂ 1 ವೃತ್ತ ಸೇರಿದ್ರೆ 11 ಆಗುತ್ತೆ, ಹಾಗಾದ್ರೆ ಪ್ರತಿ ತ್ರಿಭುಜ, ಚೌಕ ಹಾಗೂ ವೃತ್ತದ ಬೆಲೆ ಎಷ್ಟು? ಇದಕ್ಕೆ ನೀವು ಕೇವಲ 11 ಸೆಕೆಂಡ್ ಒಳಗೆ ಉತ್ತರ ಕಂಡುಹಿಡಿಯಬೇಕು.
ಇಂತಹ ಬ್ರೈನ್ ಟೀಸರ್‌ಗೆ ಉತ್ತರ ಹುಡುಕುವುದರಿಂದ ಮೆದುಳು ಚುರುಕಾಗುತ್ತದೆ. ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. ನಮ್ಮ ಯೋಚನಾಶಕ್ತಿ ಬೆಳೆಯುತ್ತದೆ. ಸಮಸ್ಯೆ ಪರಿಹರಿಸುವ ಗುಣವೂ ವೃದ್ಧಿಯಾಗುತ್ತದೆ. ಇನ್ನೇಕೆ ತಡ ಯೋಚಿಸಲು ಶುರು ಮಾಡಿ. ಇಲ್ಲಿರುವ ಬ್ರೈನ್ ಟೀಸರ್‌ಗೆ ಉತ್ರರವೇನು ತಿಳಿಸಿ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ‘M‘ ರಾಶಿ ನಡುವೆ ಅಡಗಿ ಕುಳಿತಿರುವ 'N' ಅಕ್ಷರವನ್ನು ಹುಡುಕಿ, ನಿಮಗಿರೋದು ಕೇವಲ 11 ಸೆಕೆಂಡ್ ಸಮಯ
ನಿಮ್ಮ ಕಣ್ಣು, ಮೆದುಳು ತುಂಬಾನೇ ಶಾರ್ಪ್ ಆಗಿದ್ಯಾ? ಇಂತಹ ಸೂಕ್ಷ್ಮವನ್ನಾದ್ರೂ ನಿಮ್ಮ ಕಣ್ಣು ಗುರುತಿಸುತ್ತಾ, ಹಾಗಾದ್ರೆ ಇಲ್ಲಿರುವ M ಅಕ್ಷರಗಳ ನಡುವೆ ಅಡಗಿ ಕುಳಿತಿರುವ N ಹುಡುಕಿ. ನಿಮಗಿರೋದು ಕೇವಲ 11 ಸೆಕೆಂಡ್ ಸಮಯ, ನಿಮ್ಮ ಕಣ್ಣು ಎಷ್ಟು ಚುರುಕಿದೆ ನೋಡೋಣ.
Brain Teaser: 2+3=10, 6+5=66, 7+2=63 ಆದ್ರೆ 4+7= ಎಷ್ಟು? ಲೆಕ್ಕದಲ್ಲಿ ಪಕ್ಕಾ ಇದ್ರೆ ಪಟ್ ಅಂತ ಉತ್ತರ ಹೇಳಿ
ಸಂಡೇ ಹೇಗಪ್ಪಾ ಟೈಮ್ ಪಾಸ್ ಮಾಡೋದು, ಹೊರಗಡೆ ಹೋಗೋಕು ಬೇಜಾರು ಅನ್ನೋರ ಲಿಸ್ಟ್‌ನಲ್ಲಿ ನೀವೂ ಇದ್ರೆ ನಿಮಗಾಗಿ ಇಲ್ಲಿದೆ ಒಂದು ಬೇಸರ ಕಳೆಯುವ ಪಜಲ್. ಇದೊಂದು ಕೂಡಿಸುವ ಲೆಕ್ಕವಾದ್ರೂ 4+7 ಎಷ್ಟು ಎಂದು ಹೇಳೋಕೆ ನೀವು ಖಂಡಿತ ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತೆ, ಗಣಿತಪ್ರೇಮಿಗಳು ಟ್ರೈ ಮಾಡಿ ನೋಡೋಣ.