Brain Teaser: ಜೇಮ್ಸ್‌ನ 4ನೇ ಮಗ ಜನಿಸಿದ್ದು ಯಾವಾಗ, ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ಗೆ ಉತ್ತರವೇನು ಹೇಳಿ-viral news brain teaser you are a puzzle master if you can find the birth year of the kid in this mind social media rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಜೇಮ್ಸ್‌ನ 4ನೇ ಮಗ ಜನಿಸಿದ್ದು ಯಾವಾಗ, ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ಗೆ ಉತ್ತರವೇನು ಹೇಳಿ

Brain Teaser: ಜೇಮ್ಸ್‌ನ 4ನೇ ಮಗ ಜನಿಸಿದ್ದು ಯಾವಾಗ, ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ಗೆ ಉತ್ತರವೇನು ಹೇಳಿ

ಇಂದಿನ ಬ್ರೈನ್ ಟೀಸರ್‌ನಲ್ಲಿ ಒಂದು ಟ್ರಿಕ್ಕಿ ಪ್ರಶ್ನೆ ಇದೆ. ಈ ಪ್ರಶ್ನೆಗೆ ನೀವು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಜೇಮ್ಸ್‌ನ 4ನೇ ಮಗ ಜನಿಸಿದ್ದು ಯಾವಾಗ ಎಂದು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮ ಸಮಯ ಈಗ ಶುರು, ನಿಮ್ಮ ಉತ್ತರವೇನು ತಿಳಿಸಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವ ಅಭ್ಯಾಸ ನಿಮಗೂ ಇದ್ಯಾ, ಇದರಿಂದ ನಿಮ್ಮ ಮನಸ್ಸಿಗೆ ಖುಷಿ ಸಿಗುತ್ತಾ, ಇದರಿಂದ ನೀವು ಕ್ರಿಯೆಟಿವ್ ಆಗಿ ಯೋಚನೆ ಮಾಡ್ತೀರಿ ಅನ್ನೋ ಫೀಲ್ ನಿಮಗಿದ್ಯಾ, ಹಾಗಾದರೆ ನಿಮಗಾಗಿಯೇ ಇಲ್ಲೊಂದು ಸಖತ್ ಫನ್ನಿ ಅಂಡ್ ಟ್ರಿಕ್ಕಿ ಆಗಿರೋ ಬ್ರೈನ್ ಟೀಸರ್ ಇದೆ. ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಟ್ರೈ ಮಾಡಿ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್ ಒಂಥರಾ ಮಜಾ ಇದೆ. ಇದರಲ್ಲಿ ಎಂದಿನಿಂತೆ ಗಣಿತದ ಲೆಕ್ಕಾಚಾರವಿಲ್ಲ, ಆದರೂ ಒಂದು ರೀತಿ ಮೆದುಳಿಗೆ ಹುಳ ಬಿಡುವಂತಿರುವ ಪ್ರಶ್ನೆ ಇರುವುದು ಸುಳ್ಳಲ್ಲ. ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಹಲವರು ಸಾಕಷ್ಟು ಬುದ್ಧಿ ಉಪಯೋಗಿಸಿರುವುದು ಸುಳ್ಳಲ್ಲ. ನೀವು ಬ್ರೈನ್ ಟೀಸರ್ ಪ್ರೇಮಿಯಾಗಿದ್ರೆ ಇದಕ್ಕೆ ಉತ್ತರ ಹೇಳಲು ಟ್ರೈ ಮಾಡಿ.

ಬ್ರೈನ್ ಟೀಸರ್‌ನಲ್ಲಿ ಏನಿದೆ?

ಜೇಮ್ಸ್‌ಗೆ 2012ರಲ್ಲಿ ಮೊದಲ ಮಗ ಹುಟ್ಟುತ್ತಾನೆ, 2014ರಲ್ಲಿ ಎರಡನೇ ಮಗ ಹುಟ್ಟುತ್ತಾನೆ. 2018ರಲ್ಲಿ ಜೇಮ್ಸ್‌ನ ಮೂರನೇ ಮಗ ಜನಿಸುತ್ತಾನೆ, ಹಾಗಾದರೆ ಜೇಮ್ಸ್‌ನ ಮಗ ಜನಿಸಿದ್ದು ಯಾವಾಗ? ಎಂಬುದು ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆ.

ಈ ಬ್ರೈನ್ ಟೀಸರ್ ಅನ್ನು ಥ್ರೆಡ್‌ನಲ್ಲಿ ಪೋಸ್ಟ್‌ ಮಾಡಿದಾಗಿನಿಂದ ಹಲವರು ಮಂದಿ ವೀಕ್ಷಿಸಿದ್ದಾರೆ. 1000ಕ್ಕೂ ಹೆಚ್ಚು ಲೈಕ್‌ ಬಂದಿದ್ದು, 1700ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಹಲವರು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.

‘ಪ್ರತಿ 2 ವರ್ಷಗಳಿಗೊಮ್ಮೆ ಒಂದು ಮಗು ಆದ ಕಾರಣ 2020ರಲ್ಲಿ 4ನೇ ಮಗ ಜನಿಸಿದ‘ ಎಂದು ಥ್ರೆಡ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಇಲ್ಲ 2022ರಲ್ಲಿ ಜೇಮ್ಸ್‌ನ ನಾಲ್ಕನೇ ಮಗ ಜನಿಸುತ್ತಾನೆ, ಯಾಕೆಂದರೆ 2012 ಆದ ಬಳಿಕ ನಾಲ್ಕು ವರ್ಷಗಳ ಅಂತರವಿತ್ತು‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ನಂಗನ್ನಿಸುತ್ತೆ, ನಾಲ್ಕನೇ ಮಗ ಹುಟ್ಟೇ ಇಲ್ಲ ಅಂತ, ಇದೊಂಥರ ಮೆದುಳಿಗೆ ಹುಳ ಬಿಡೋದು ಸುಳ್ಳಲ್ಲ‘ ಅಂತ ಇನ್ನೊಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

ಸರಿ ಈ ಎಲ್ಲಾ ಉತ್ತರಗಳನ್ನು ನೋಡಿದ ಮೇಲೆ ನಿಮಗೆ ಯಾವುದು ಸರಿ ಅನ್ನಿಸುತ್ತಿದೆ. ಅವರೆಲ್ಲರೂ ಕಾಮೆಂಟ್‌ನಲ್ಲಿ ಹೇಳಿದ್ದು ಸರಿನಾ, ನಿಮಗೆ ಬೇರೆ ಉತ್ತರ ತಿಳಿದಿದ್ಯಾ ಕಾಮೆಂಟ್ ಮಾಡಿ.

ಈ ಬ್ರೈನ್ ಟೀಸರ್ ಅನ್ನೂ ಓದಿ

Brain Teaser: ಚಿತ್ರದಲ್ಲಿ ಖೈದಿ ಎಲ್ಲಿ ಅಡಗಿದ್ದಾನೆ, ನಿಮ್ಮ ಮೆದುಳು ಚುರುಕಿದ್ರೆ 15 ಸೆಕೆಂಡ್ ಒಳಗೆ ಕಂಡುಹಿಡಿಯಿರಿ, ನಿಮಗೊಂದು ಸವಾಲು

ಇಂದಿನ ಬ್ರೈನ್ ಟೀಸರ್ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ, ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧಾರಣದವರಿಗೆ ಸಾಧ್ಯವಿಲ್ಲ. ಯಾಕೆಂದರೆ ಇದು ಅಸಾಮಾನ್ಯ ಬ್ರೈನ್ ಟೀಸರ್. ಚಿತ್ರದಲ್ಲಿ ಮೂರು ಕಾರು ಹಾಗೂ ಎ,ಬಿ,ಸಿ ಮೂರು ಬಿಲ್ಡಿಂಗ್ ಇದ್ದು, ಇದರಲ್ಲಿ ಖೈದಿ ಎಲ್ಲಿದ್ದಾನೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮಿಂದ ಖೈದಿಯನ್ನು ಹುಡುಕಲು ಸಾಧ್ಯವೇ ನೋಡಿ.

mysore-dasara_Entry_Point