Brain Teaser: 4+4=8, 6+6=24 ಆದ್ರೆ 9+9= ಎಷ್ಟು? ಈ ಪ್ರಶ್ನೆ ನಿಮ್ಮ ಮೆದುಳಿಗೆ ಹುಳ ಬಿಡೋದು ಪಕ್ಕಾ; ಇದಕ್ಕೆ ಉತ್ತರ ಹೇಳಲು ಪ್ರಯತ್ನಿಸಿ
ಗಣಿತದಲ್ಲಿ ಎಕ್ಸ್‌ಪರ್ಟ್ ಅನ್ನೋರು ಕೂಡ ಒಮ್ಮೆ ಮೆದುಳು ಕೆರೆದುಕೊಳ್ಳುವ ಹಾಗೆ ಮಾಡುವ ಪಜಲ್‌ವೊಂದು ಇಲ್ಲಿದೆ. ಇದರಲ್ಲಿ ಇರುವುದು ಸುಲಭದ ಕೂಡಿಸುವ ಲೆಕ್ಕಾಚಾರ, ಆದ್ರೂ ಇಲ್ಲಿ 4 + 4 = 8 ಆದ್ರೆ 6+6= 12 ಖಂಡಿತ ಆಗೊಲ್ಲ. ಈಗ 9+9= ಎಷ್ಟು ಎಂದು ಕಂಡು ಹಿಡಿಯಬೇಕಾಗಿರುವುದು ನಿಮಗಿರುವ ಸವಾಲು.

ಬ್ರೈನ್ ಟೀಸರ್‌ಗಳನ್ನು ನೋಡಿದಾಗ ಒಮ್ಮೆ ಮೆದುಳು ಬ್ಲ್ಯಾಂಕ್ ಆಗೋದು ಸಹಜ. ಇದೇನಪ್ಪಾ ಇದು, ಹೀಗಿದೆ ಎಂದು ಅನ್ನಿಸೋಕೆ ಶುರುವಾಗುತ್ತೆ. ಯಾಕಂದ್ರೆ ಅದರಲ್ಲಿ ಇರುವ ಪ್ರಶ್ನೆಯು ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇಲ್ಲೊಂದು ಅಂಥದ್ದೇ ಗಣಿತದ ಪಜಲ್ ಇದೆ.
ಗಣಿತದಲ್ಲಿ ಎಕ್ಸ್‌ಪರ್ಟ್ ಅಂತ ಕರೆಸಿಕೊಳ್ಳೋರು ಕೂಡ ಒಮ್ಮೆ ತಲೆ ಕೆಡಿಸಿಕೊಳ್ಳಬೇಕು ಅಂತಹ ಪ್ರಶ್ನೆ ಇದು. ಇದರಲ್ಲಿ ಸುಲಭದ ಕೂಡಿಸುವ ಲೆಕ್ಕವಿದೆ. ಆದರೂ ಉತ್ತರ ಹೇಳೋದು ಖಂಡಿತ ಸುಲಭವಲ್ಲ. ಇದಕ್ಕಾಗಿ ನೀವು ಸ್ವಲ್ಪ ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಯಾಕಂದ್ರೆ ಇಲ್ಲಿ 6+6=12 ಆಗದೇ 24 ಆಗುತ್ತದೆ. ಹಾಗೆಯೇ 9+9 ಎಷ್ಟು ಎಂದು ನೀವು ಕಂಡುಹಿಡಿಯಬೇಕು.
@Brainy_Bits_Hub ಎಂಬ ಎಕ್ಸ್ ಪುಟದಲ್ಲಿ ಶೇರ್ ಮಾಡಲಾಗಿರುವ ಈ ಬ್ರೈನ್ ಟೀಸರ್‌ನಲ್ಲಿರುವ ಗಣಿತದ ಪಜಲ್ ನೆಟ್ಟಿಗರ ಮೆದುಳಿನಲ್ಲಿ ಹುಳ ಹರಿಯುವಂತೆ ಮಾಡಿದೆ. ‘ನಿಮ್ಮಿಂದ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವೇ‘ ಎಂದು ಶೀರ್ಷಿಕೆ ಬರೆದುಕೊಂಡು ಈ ಪಜಲ್ ಅನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿರುವ ಪ್ರಶ್ನೆ ಹೀಗಿದೆ 4+4=8, 5+5=15, 6+6=24 ಆದರೆ 9+9= ಎಷ್ಟು, ಇದಕ್ಕೆ ಕೇವಲ 30 ಸೆಕೆಂಡ್ ಒಳಗೆ ನೀವು ಉತ್ತರ ಹೇಳಬೇಕು.
ಈ ಪೋಸ್ಟ್‌ಗೆ ಹಲವರು ಲೈಕ್ ಕಾಮೆಂಟ್ ಮಾಡಿದ್ದಾರೆ. ಕೆಲವರು ಗಣಿತ ಪ್ರಿಯರು ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದು, ತಮಗೆ ತೋಚಿದ ಉತ್ತರವನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ.
ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹುಡುಕುವುದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಬುದ್ಧಿ ಸಾಕಷ್ಟು ಕೆಲಸ ಮಾಡುತ್ತದೆ. ಮೋಜು ಸಿಗುವ ಜೊತೆಗೆ ಮೆದುಳು ಒಂದಿಷ್ಟು ಕಾಲ ಇದಕ್ಕಾಗಿ ಯೋಚಿಸುತ್ತಾ ಬೇರೆಲ್ಲಾ ಯೋಚನೆಗಳನ್ನು ಮರೆಯುವಂತೆ ಮಾಡುತ್ತದೆ. ಹಾಗಾದರೆ ಇನ್ನೇಕೆ ತಡ ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ಹೇಳಿ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: ಶೇ 97ರಷ್ಟು ಮಂದಿಗೆ ಉತ್ತರಿಸಲು ಸಾಧ್ಯವಾಗದ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯವೇ, ಟ್ರೈ ಮಾಡಿ
ಇಲ್ಲೊಂದು ಗಣಿತದ ಸೂತ್ರವಿದ್ದು, ಇದು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗೆ ಉತ್ತರ ಹೇಳಲು ಶೇ 97ರಷ್ಟು ಮಂದಿಗೆ ಸಾಧ್ಯವಾಗಿಲ್ಲ. ಯಾಕೆಂದರೆ ಇಲ್ಲಿ 3+6=21 ಆದ್ರೆ 5+8 ಎಷ್ಟು ಎಂದು ನೀವು ಕಂಡುಹಿಡಿಯಬೇಕು.
Brain Teaser: ಬೀಗದ ರಾಶಿ ಇರುವ ಈ ಚಿತ್ರದಲ್ಲಿ ಯಾವೆಲ್ಲಾ ಬೀಗಗಳು ತೆರೆದಿವೆ? 7 ಸೆಕೆಂಡ್‌ನಲ್ಲಿ ಉತ್ತರ ಹೇಳಿ, ನಿಮಗೊಂದು ಹೊಸ ಚಾಲೆಂಜ್
ಇಂದಿನ ಬ್ರೈನ್ ಟೀಸರ್ ಚಿತ್ರಕ್ಕೆ ಉತ್ತರ ಹೇಳಬೇಕು ಎಂದರೆ ನಿಮ್ಮ ಕಣ್ಣು ಸೂಕ್ಷ್ಮವಾಗಿರಬೇಕು. ಕೆಲವೇ ಕೆಲವು ಸೆಕೆಂಡುಗಳಲ್ಲಿ ಇಲ್ಲಿರುವ ಚಿತ್ರದಲ್ಲಿ ಎಷ್ಟು ಬೀಗಗಳು ತೆರೆದಿವೆ ಎಂಬುದನ್ನು ನೀವು ಕಂಡುಹಿಡಿಯಬೇಕು. ನಿಮಗಿರೋದು ಕೇವಲ 7 ಸೆಕೆಂಡ್ ಸಮಯ.