Brain Teaser: ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನು ಉಳಿಯಿತು? ನೀವು ನಿಜಕ್ಕೂ ಬುದ್ಧಿವಂತರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನು ಉಳಿಯಿತು? ನೀವು ನಿಜಕ್ಕೂ ಬುದ್ಧಿವಂತರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Brain Teaser: ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನು ಉಳಿಯಿತು? ನೀವು ನಿಜಕ್ಕೂ ಬುದ್ಧಿವಂತರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಶನಿವಾರದ ಹೊತ್ತು ಮೆದುಳಿಗೆ ಹುಳ ಬಿಟ್ಕೋಬೇಕಾ, ಹಾಗಿದ್ರೆ ನಿಮಗಾಗಿ ಇಲ್ಲಿದೆ ಒಂದು ಸವಾಲು. ಈ ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗೆ ನೀವು ಉತ್ತರ ಹೇಳಬೇಕು, ಅದು ಕೇವಲ 10 ಸೆಕೆಂಡ್‌ನಲ್ಲಿ. ನೀವು ನಿಜಕ್ಕೂ ಜಾಣರಾಗಿದ್ರೆ ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನು ಉಳಿದಿವೆ ಹೇಳಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ನೀವು ಬ್ರೈನ್ ಟೀಸರ್ ಪ್ರೇಮಿಯಾದ್ರೆ ಈ ಬ್ರೈನ್ ಟೀಸರ್‌ ಖಂಡಿತ ನಿಮಗೆ ಇಷ್ಟವಾಗುತ್ತದೆ. ಇದ್ರಲ್ಲಿರುವ ಪ್ರಶ್ನೆ ಸುಲಭವಾಗಿದ್ರೂ ಉತ್ತರ ಕಂಡುಹಿಡಿಯೋಕೆ ನೀವು ಖಂಡಿತ ಕಷ್ಟಪಡಬೇಕಾಗುತ್ತೆ. ಇದಕ್ಕಾಗಿ ನೀವು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಇದು ನಿಮ್ಮ ಮೆದುಳಿಗೆ ಕೆಲಸ ಕೊಡುವುದು ಸುಳ್ಳಲ್ಲ. ಈ ಬ್ರೈನ್ ಟೀಸರ್‌ನಿಂದ ನಿಮ್ಮ ಬುದ್ಧಿಶಕ್ತಿಯೂ ವೃದ್ಧಿಯಾಗುತ್ತದೆ.

ಹಾಗಾದರೆ ಈ ಬ್ರೈನ್ ಟೀಸರ್‌ನಲ್ಲಿ ಅಂಥದ್ದೇನಿದೆ ಅಂತೀರಾ, ಖಂಡಿತ ಇದೆ. ಇದೊಂದು ಮೀನಿಗೆ ಸಂಬಂಧಿಸಿದ ಪ್ರಶ್ನೆಯಾಗಿದೆ. Brainy Bits Hub ಎಂಬ ಎಕ್ಸ್ ಖಾತೆ ಹೊಂದಿರುವವರು ಈ ಮೆದುಳಿಗೆ ಹುಳ ಬಿಡುವ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಬ್ರೈನ್ ಟೀಸರ್ ಈಗ ಸಾಕಷ್ಟು ವೈರಲ್ ಆಗಿದ್ದು, ಉತ್ತರ ಕಂಡುಹಿಡಿಯುವ ಸಲುವಾಗಿ ಹಲವರು ತಲೆ ಕೆಡಿಸಿಕೊಂಡಿದ್ದಾರೆ. ನೀವು ಬುದ್ಧಿವಂತರ ಸಾಲಿಗೆ ಸೇರಿದವರಾಗಿದ್ರೆ ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಪ್ರಯತ್ನಿಸಿ.

ಬ್ರೈನ್‌ ಟೀಸರ್ ಪ್ರಶ್ನೆ ಹೀಗಿದೆ

ಒಂದು ಟ್ಯಾಂಕ್‌ನಲ್ಲಿ 10 ಮೀನುಗಳಿವೆ. ಇದರಲ್ಲಿ 2 ಮುಳುಗುತ್ತವೆ, 4 ಮೀನುಗಳು ಈಜಿಕೊಂಡು ಹೋಗುತ್ತವೆ. 3 ಮೀನುಗಳು ಸಾಯುತ್ತವೆ. ಹಾಗಾದರೆ ಟ್ಯಾಂಕ್‌ನಲ್ಲಿ ಒಟ್ಟು ಎಷ್ಟು ಮೀನುಗಳು ಉಳಿಯುತ್ತವೆ ಎಂಬ ಪ್ರಶ್ನೆ ಈ ಬ್ರೈನ್ ಟೀಸರ್‌ನಲ್ಲಿದೆ. ಇದಕ್ಕೆ 10 ಸೆಕೆಂಡ್‌ ಒಳಗೆ ಉತ್ತರ ಹೇಳಬೇಕು.

ಮೇಲ್ನೋಟಕ್ಕೆ ಇದೊಂದು ಸುಲಭ ಗಣಿತದ ಪಜಲ್‌ನಂತೆ ಕಾಣಿಸುತ್ತದೆ. ಆದರೆ ಖಂಡಿತ ಇದಕ್ಕೆ ಸುಲಭವಾಗಿ ಉತ್ತರ ಹೇಳಲು ಸಾಧ್ಯವಿಲ್ಲ. ಇದಕ್ಕಾಗಿ ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಹಾಗಾದರೆ ಇನ್ಯಾಕೆ ತಡ ನಿಮಗಿರೋದು 10 ಸೆಕೆಂಡ್ ಸಮಯ, ಅಷ್ಟರಲ್ಲಿ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಗಣಿತಪ್ರೇಮಿಗಳಿಗಾಗಿ ಇಲ್ಲಿದೆ ಚಾಲೆಂಜ್‌, ಈ ಬ್ರೈನ್ ಟೀಸರ್‌ಗೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು, ನಿಮ್ಮ ಸಮಯ ಈಗ ಶುರು

ಪಜಲ್‌ ಪ್ರೇಮಿ ನೀವಾದ್ರೆ ಒಮ್ಮೆ ಇತ್ತ ಗಮನ ಹರಿಸಿ. ಮೆದುಳಿಗೆ ಹುಳ ಬಿಡುವ ಪ್ರಶ್ನೆಯೊಂದು ಇಲ್ಲಿದೆ. ಬ್ರೈನ್ ಟೀಸರ್‌ಗೆ ಉತ್ತರ ಹೇಳೋದ್ರಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯ, ನಿಮಗಿರೋದು ಕೇವಲ 15 ಸೆಕೆಂಡ್ ಸಮಯ. ಅಷ್ಟ್ರಲ್ಲಿ M+N*O= ಎಷ್ಟು ಎಂದು ನೀವು ಕಂಡುಹಿಡಿಯಬೇಕು.

Brain Teaser: ಒಂದೇ ರೀತಿ ಕಾಣುವ ಈ ಚಿತ್ರಗಳಲ್ಲಿ 3 ವ್ಯತ್ಯಾಸಗಳಿವೆ; ಅದೇನು ಎಂದು 13 ಸೆಕೆಂಡ್‌ಗಳಲ್ಲಿ ಕಂಡುಹಿಡಿಯಿರಿ, ನಿಮಗಿದು ಚಾಲೆಂಜ್‌

ಇಲ್ಲಿ ಎರಡು ಒಂದೇ ರೀತಿಯ ಚಿತ್ರಗಳಿವೆ. ಇದರಲ್ಲಿ ಹುಡುಗಿಯೊಬ್ಬಳು ಕೇಕ್ ಮಾಡುತ್ತಿರುವುದು ಕಾಣಬಹುದು. ಆದರೆ ಈ ಎರಡು ಚಿತ್ರಗಳಲ್ಲಿ 3 ವ್ಯತ್ಯಾಸಗಳಿವೆ. ಅದೇನು ಎಂದು 13 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ನಿಮ್ಮ ಮೆದುಳು, ಕಣ್ಣು ಶಾರ್ಪ್ ಇದ್ರೆ ಈ ಚಾಲೆಂಜ್ ಸ್ವೀಕರಿಸಿ, ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯವೇ ಪ್ರಯತ್ನಿಸಿ.

Whats_app_banner