Brain Teaser: ನೀವು ಅತಿ ಬುದ್ಧಿವಂತರಾದ್ರೆ ನಿಮಗಾಗಿ ಇಲ್ಲೊಂದು ಸವಾಲಿದೆ, ಈ ಗಣಿತದ ಪಜಲ್‌ಗೆ ಉತ್ತರವೇನು ಹೇಳಿ
ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನೆಟ್ಟಿಗರ ಮೆದುಳಿಗೆ ಹುಳ ಬಿಟ್ಟಿದೆ. ಇಲ್ಲಿರುವ ಗಣಿತದ ಪಜಲ್‌ಗೆ ನೀವು ಉತ್ತರ ಹೇಳಬೇಕು. 5*6 ಎಷ್ಟು ಅಂತ ಹೇಳಿದ್ರೆ ಖಂಡಿತ ನಿಮ್ಮಷ್ಟು ಬುದ್ಧಿವಂತರು ಬೇರೆ ಯಾರಿಲ್ಲ.
ರಸಪ್ರಶ್ನೆಗಳು, ಪಜಲ್‌ಗಳು ಹಾಗೂ ಬ್ರೈನ್ ಟೀಸರ್‌ಗಳು ನೋಡಿದ ತಕ್ಷಣ ನಮ್ಮನ್ನು ಸೆಳೆಯುತ್ತವೆ. ಉತ್ತರ ಏನಿರಬಹುದು ಎಂದು ನಾವು ಕೊಂಚ ಯೋಚಿಸುವಂತೆ ಮಾಡುತ್ತವೆ. ಉತ್ತರ ಗೊತ್ತಿಲ್ಲ ಅಂದ್ರು ಉತ್ತರ ಸಿಗುವವರೆಗೂ ಬಿಡದೇ ಉತ್ತರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತೇವೆ. ಯಾಕೆಂದರೆ ಇಂತಹ ಬ್ರೈನ್ ಟೀಸರ್ ಚಿತ್ರಗಳು ಮೆದುಳಿಗೆ ಹುಳ ಬಿಡುತ್ತವೆ.
ಬ್ರೈನ್ ಟೀಸರ್‌ಗಳು ನಮ್ಮ ಟೈಮ್‌ಪಾಸ್‌ಗೆ ಬೆಸ್ಟ್ ಆಯ್ಕೆ ಎಂದರೆ ತಪ್ಪಲ್ಲ. ಇದರಿಂದ ಸಮಯ ಕಳೆಯೋದು ಮಾತ್ರವಲ್ಲ, ಮೆದುಳು ಚುರುಕಾಗುತ್ತದೆ. ಬ್ರೈನ್ ಟೀಸರ್‌ನಲ್ಲಿರುವ ಪ್ರಶ್ನೆಗೆ ಉತ್ತರಿಸಲು ನಾವು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಇದರಿಂದ ನಮ್ಮಲ್ಲಿ ಏಕಾಗ್ರತೆಯೂ ಬೆಳೆಯುತ್ತದೆ. ಇಂದಿನ ಬ್ರೈನ್ ಟೀಸರ್ ಗಣಿತದ ಪಜಲ್‌ಗೆ ಸಂಬಂಧಿಸಿದ್ದಾಗಿದ್ದು ಇದರಿಂದ ಇದರಲ್ಲಿ ಗುಣಿಸುವ ಲೆಕ್ಕಾಚಾರವಿದೆ.
ಬ್ರೈನ್ ಟೀಸರ್‌ನಲ್ಲಿ ಏನಿದೆ?
ಇಂದಿನ ಬ್ರೈನ್ ಟೀಸರ್‌ನಲ್ಲಿ 5 ತರಗತಿ ಮಕ್ಕಳ ಗಣಿತದ ಲೆಕ್ಕಾಚಾರವಿದೆ. ಇದರಲ್ಲಿ "5 x 3 = 51, 5 x 5 = 52, 5 x 4 = 02, ಆದ್ರೆ 5 x 6 = ಎಷ್ಟು ಎಂದು ನೀವು ಕಂಡುಹಿಡಿಯಬೇಕು. Maths with Zia ಎನ್ನುವ ಎಕ್ಸ್ ಪುಟದಲ್ಲಿ ಶೇರ್ ಮಾಡಲಾದ ಬ್ರೈನ್ ಟೀಸರ್ ಇದಾಗಿದೆ.
ನವೆಂಬರ್ 1 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 5 ಸಾವಿರದಷ್ಟು ಮಂದಿ ವೀಕ್ಷಿಸಿದ್ದಾರೆ. 330ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡುವ ಮೂಲಕ ಈ ಪಜಲ್‌ಗೆ ತಾವು ಕಂಡುಕೊಂಡ ಉತ್ತರ ತಿಳಿಸಿದ್ದಾರೆ. ಹಲವರು ಈ ಬ್ರೈನ್ ಟೀಸರ್‌ಗೆ ಉತ್ತರ 3 ಎಂದು ಕಾಮೆಂಟ್ ಮಾಡಿದ್ದಾರೆ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: ಗಣಿತಪ್ರೇಮಿಗಳಿಗಾಗಿ ಇಲ್ಲಿದೆ ಚಾಲೆಂಜ್, ಈ ಬ್ರೈನ್ ಟೀಸರ್‌ಗೆ 15 ಸೆಕೆಂಡ್‌ನಲ್ಲಿ ಉತ್ತರ ಹೇಳಬೇಕು, ನಿಮ್ಮ ಸಮಯ ಈಗ ಶುರು
ಪಜಲ್ ಪ್ರೇಮಿ ನೀವಾದ್ರೆ ಒಮ್ಮೆ ಇತ್ತ ಗಮನ ಹರಿಸಿ. ಮೆದುಳಿಗೆ ಹುಳ ಬಿಡುವ ಪ್ರಶ್ನೆಯೊಂದು ಇಲ್ಲಿದೆ. ಬ್ರೈನ್ ಟೀಸರ್‌ಗೆ ಉತ್ತರ ಹೇಳೋದ್ರಲ್ಲಿ ನೀವು ಎಕ್ಸ್‌ಪರ್ಟ್ ಆದ್ರೆ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯ, ನಿಮಗಿರೋದು ಕೇವಲ 15 ಸೆಕೆಂಡ್ ಸಮಯ. ಅಷ್ಟ್ರಲ್ಲಿ M+N*O= ಎಷ್ಟು ಎಂದು ನೀವು ಕಂಡುಹಿಡಿಯಬೇಕು.
Brain Teaser: ಗೂಗಲ್ ಸಂದರ್ಶನದಲ್ಲಿ ಕೇಳಿದ ಈ ಬ್ರೈನ್ ಟೀಸರ್ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯವೇ? ನಿಮಗಿರೋದು 3 ಸೆಕೆಂಡ್ ಸಮಯ
ಗೂಗಲ್ ಕಂಪನಿಯು ಸಂದರ್ಶನವೊಂದರಲ್ಲಿ ಅಭ್ಯರ್ಥಿಗಳಿಗೆ ಕೇಳಿದ ಪ್ರಶ್ನೆಯು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯಲು ಮೆದುಳಿಗೆ ಹುಳ ಬಿಟ್ಟು ಕೊಂಡಿದ್ದಾರೆ ನೆಟ್ಟಿಗರು. ಪ್ರಶ್ನೆ ಸುಲಭ ಎನ್ನಿಸಿದರೂ ಉತ್ತರ ಕಂಡುಹಿಡಿಯುವುದು ನಿಜಕ್ಕೂ ಸುಲಭವಲ್ಲ. ಈ ಪ್ರಶ್ನೆಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವೇ ಪ್ರಯತ್ನಿಸಿ.