Viral News: ಶ್ವಾನಗಳಿಗೂ ಸೆಲ್ಫಿ ಕ್ಲಿಕ್ಕಿಸಲು ಬರುತ್ತಿದ್ದರೆ ಹೇಗಿರುತ್ತಿತ್ತು..? ಎಐ ತಂತ್ರಜ್ಞಾನ ಇದನ್ನೂ ಮಾಡಿ ತೋರಿಸಿದೆ ನೋಡಿ
Viral News: ಶ್ವಾನಗಳು ಏನು ಮಾಡಿದರೂ ಪ್ರಾಣಿಪ್ರಿಯರಿಗೆ ಚೆಂದ. ಆದರೆ ಶ್ವಾನಗಳು ತಾವೇ ಮೊಬೈಲ್ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಹೇಗಿರುತ್ತೆ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರೇ..?ಈ ವೈರಲ್ ಆಗಿರುವ ಫೋಟೋಗಳನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

Viral News: ನಕ್ಕರೆ ಅದುವೇ ಆಭರಣ ಎನ್ನುತ್ತಾರೆ. ಮುಖಕ್ಕೆ ನಗು ನೀಡುವ ಕಳೆಯನ್ನು ಇನ್ಯಾವುದರಿಂದಲೂ ನೀಡಲೂ ಸಾಧ್ಯವಿಲ್ಲ. ಇದೆಲ್ಲ ಮನುಷ್ಯರಿಗೆ ಹೇಳೋಕೆ ಸರಿಯಿದೆ. ಆದರೆ ಎಂದಾದರೂ ನಾಯಿಗಳು, ಬೆಕ್ಕುಗಳು, ಹಸುಗಳು ನಕ್ಕರೆ ಹೇಗಿರಬಹುದು ಎಂದು ಯೋಚಿಸಿದ್ದೀರೇ..? ನಗುವುದು ಹಾಗಿರಲಿ. ಮನುಷ್ಯರಂತೆ ಶ್ವಾನಗಳು ಕೂಡಾ ನಗುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸಾಧ್ಯವಾಗುತ್ತಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಅಲ್ಲವೇ..?
ಪ್ರಾಣಿಗಳೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋದಾ? ಇವನ್ನೆಲ್ಲಾ ನೋಡುವ ಭಾಗ್ಯ ಎಲ್ಲಿದೆ..? ಕೇವಲ ಕಲ್ಪನೆ ಮಾಡಿಕೊಳ್ಳಬೇಕು ಎಂದು ಮನಸ್ಸಿನಲ್ಲೇ ಗೊಣಗಿಕೊಳ್ಳುತ್ತಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಈಗ ಎಐ ತಂತ್ರಜ್ಞಾನದಡಿಯಲ್ಲಿ ಅಸಾಧ್ಯಗಳನ್ನೂ ಸಾಧ್ಯವಾಗಿಸಬಹುದಾಗಿದೆ. ಹಾಗಾದರೆ ಮತ್ಯಾಕೆ ತಡ..! ಶ್ವಾನಗಳು ಸೆಲ್ಫಿಗೆ ಪೋಸ್ ಕೊಟ್ಟರೆ ಹೇಗಿರುತ್ತೆ ಎನ್ನುವುದನ್ನು ನೋಡೇ ಬಿಡೋಣ
ಅಫೆನ್ಪಿನ್ಷರ್ಸ್ ಶ್ವಾನದ ಸೆಲ್ಫಿ ನೋಟ
ಅಫೆನ್ಪಿನ್ಷರ್ಸ್ ತಳಿಯ ಶ್ವಾನಗಳು ಕಪ್ಪು ಬಣ್ಣದಲ್ಲಿದ್ದು ಚಿಕ್ಕದಾಗಿರುತ್ತದೆ. ಇವುಗಳ ದೇಹದಿಂದ ಕೂದಲು ಉದುರುವುದು ಕಡಿಮೆ ಅನ್ನೋದು ಈ ಶ್ವಾನದ ಒಂದು ವಿಶೇಷ. ಅಂದಹಾಗೆ ನಮ್ಮ ಈ ಅಫೆನ್ಪಿನ್ಷರ್ಸ್ ಶ್ವಾನ ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಹೇಗಿರುತ್ತೆ ಅನ್ನೋದನ್ನು ನೀವೇ ನೋಡಿ .
ಬೀಗಲ್ ಶ್ವಾನ ಪೊಲೀಸ್ ಅಧಿಕಾರಿಯಾದರೆ ಹೇಗಿರುತ್ತೆ..?
ಮನೆಯ ಒಳಗೆ ಹೆಚ್ಚಾಗಿ ಸಾಕಲ್ಪಡುವ ಶ್ವಾನದ ತಳಿಗಳಲ್ಲಿ ಬೀಗಲ್ ಕೂಡ ಒಂದು. ಕಂದು ಹಾಗೂ ಬಿಳಿ ಬಣ್ಣದ ಮಿಶ್ರಣ ಕೂದಲನ್ನು ಹೊಂದಿರುವ ಈ ಶ್ವಾನಗಳ ದೊಡ್ಡದಾದ ಕಿವಿಗಳೇ ಆಕರ್ಷಣೆ. ಈ ಬೀಗಲ್ ಜಾತಿಗೆ ಸೇರಿದ ಶ್ವಾನಗಳು ವಾಸನೆಗಳನ್ನು ಪತ್ತೆ ಹಚ್ಚುವಲ್ಲಿ ಬಹಳ ಚುರುಕು. ಇದೇ ಕಾರಣಕ್ಕೆ ಅಮೆರಿಕದಲ್ಲಿ ಸೂಕ್ತ ತರಬೇತಿಯನ್ನು ಪಡೆದ ಬೀಗಲ್ ಶ್ವಾನಗಳನ್ನು ಕೃಷಿ ಇಲಾಖೆಯಲ್ಲಿ ಸಿಬ್ಬಂದಿಯಾಗಿ ನೇಮಿಸಿಕೊಳ್ಳಲಾಗುತ್ತದೆ. ಇವುಗಳು ಹಾನಿಕಾರಕ ಕಾಯಿಲೆಗಳನ್ನು ತರಬಲ್ಲ ನಿಷೇಧಿತ ಸಸ್ಯಗಳ ವಾಸನೆಯನ್ನು ನೋಡಿ ಅವುಗಳನ್ನು ಪತ್ತೆ ಹಚ್ಚಲು ನೆರವಾಗುತ್ತವೆ.
ಗೆಳೆಯರ ಜೊತೆ ಸೇರಿ ಸೆಲ್ಫಿ ಕ್ಲಿಕ್ಲಿಸಿದಂತಿದೆ ಬೆಲ್ಕಿಯನ್ ಮೆಲಿನಿಯೋಸ್ ಶ್ವಾನ: ಇವುಗಳು ಅತ್ಯಂತ ಪ್ರಾಮಾಣಿಕ ಹಾಗೂ ಚುರುಕು ತಳಿಗೆ ಸೇರಿದ ಶ್ವಾನಗಳು. ನಿಮ್ಮ ಕುಟುಂಬದ ರಕ್ಷಣೆಗಾಗಿ ಈ ತಳಿಯ ಶ್ವಾನಗಳನ್ನು ನೀವು ಕಣ್ಮುಚ್ಚಿ ನಂಬಬಹುದು. ಈ ಶ್ವಾನವು ಮೊಬೈಲ್ ಹಿಡಿದು ಸೆಲ್ಫಿ ಕ್ಲಿಕ್ಕಿಸಿದರೆ ಈ ರೀತಿ ಇರುತ್ತೆ ನೋಡಿ .
ಕಾನ್ಫರೆನ್ಸ್ ಹಾಲ್‌ನಲ್ಲಿ ಶ್ವಾನದ ಸೆಲ್ಫಿ ನೋಡಿ
ನೀವು ಶ್ವಾನಕ್ಕೆ ತರಹೇವಾರಿ ರೀತಿಯಲ್ಲಿ ತರಬೇತಿ ನೀಡಬಹುದು. ಶ್ವಾನದ ಮೂಗಿನ ಗ್ರಹಿಕೆಯ ಶಕ್ತಿಯು ಎಷ್ಟೋ ಪ್ರಕರಣಗಳಲ್ಲಿ ಸಾಕ್ಷಿಯಾಗಿ ಪರಿಗಣಿಸಲ್ಪಟ್ಟಿದೆ. ಅದೆಲ್ಲ ಇರಲಿ..! ಶ್ವಾನವೇನಾದ್ರೂ ಯಾವುದಾದರೂ ಕಾನ್ಫರೆನ್ಸ್ ಹಾಲ್‌ನಲ್ಲಿ ಸೆಲ್ಫಿ ತೆಗೆದರೆ ಹೇಗಿರುತ್ತೆ..? ಇಲ್ಲಿ ನೋಡಿ.
ರೆಡ್ ಕಾರ್ಪೆಟ್‌ನಲ್ಲೊಂದು ಶ್ವಾನದ ಸೆಲ್ಫಿ
ಶ್ವಾನವೇನಾದರೂ ಸೆಲೆಬ್ರಿಟಿಯಾಗಿದ್ದರೆ ಹೇಗಿರುತಿತ್ತು..? ಕಪ್ಪು ಬಿಳುಪು ಬಣ್ಣದ ಬೋಸ್ಟನ್ ಟೆರಿಯರ್ ಶ್ವಾನಗಳು ಕಪ್ಪು ಕೋಟು ಧರಿಸಿ ರೆಡ್ ಕಾರ್ಪೆಟ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸುವ ರೀತಿಯಲ್ಲಿದೆ ಈ ಎಐ ಚಿತ್ರ.
ವೆಕೇಷನ್ ಮೂಡ್‌ನಲ್ಲೊಂದು ಸೆಲ್ಫಿ
ಸಾಮಾನ್ಯವಾಗಿ ಸೆಲೆಬ್ರಿಟಿಗಳು ಸಾಕುವ ಚಿಹೋವಾ ಶ್ವಾನಗಳನ್ನು ನೀವು ನೋಡಿದ್ದರಬಹುದು. ಆದರೆ ಈ ಶ್ವಾನಗಳು ಕನ್ನಡಕ ಧರಿಸಿ ಗುಲಾಬಿ ಬಣ್ಣದ ಬಟ್ಟೆಯನ್ನೂ ಹಾಕಿ ಸ್ವಿಮ್ಮಿಂಗ್ ಪೂಲ್‌ನಲ್ಲೊಂದು ಸೆಲ್ಫಿಗೆ ಪೋಸ್ ಕೊಟ್ಟರೆ ಹೇಗಿರುತ್ತೆ ಎಂದು ನೀವೇ ನೋಡಿ.
