Brain Teaser: ನಿಮ್ಮ ಮೆದುಳಿಗೊಂದು ಸವಾಲ್‌, ಚಿತ್ರದಲ್ಲಿ ಎಷ್ಟು ನಂಬರ್ ಕಾಣುತ್ತಿದೆ? 11 ಸೆಕೆಂಡ್ ಒಳಗೆ ಹೇಳಿ-viral news how many numbers can you see in this viral brain teaser shared on instagram social media viral rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನಿಮ್ಮ ಮೆದುಳಿಗೊಂದು ಸವಾಲ್‌, ಚಿತ್ರದಲ್ಲಿ ಎಷ್ಟು ನಂಬರ್ ಕಾಣುತ್ತಿದೆ? 11 ಸೆಕೆಂಡ್ ಒಳಗೆ ಹೇಳಿ

Brain Teaser: ನಿಮ್ಮ ಮೆದುಳಿಗೊಂದು ಸವಾಲ್‌, ಚಿತ್ರದಲ್ಲಿ ಎಷ್ಟು ನಂಬರ್ ಕಾಣುತ್ತಿದೆ? 11 ಸೆಕೆಂಡ್ ಒಳಗೆ ಹೇಳಿ

Brain Teaser: ನಿಮ್ಮ ಕಣ್ಣು ಹಾಗೂ ಮೆದುಳು ಎರಡೂ ಸಖತ್ ಶಾರ್ಪ್ ಆಗಿದೆ ಅಂತ ನಿಮಗೆ ಅನ್ನಿಸುತ್ತಾ? ಹಾಗಾದ್ರೆ ಚಿತ್ರದಲ್ಲಿ ಒಟ್ಟು ಎಷ್ಟು ನಂಬರ್‌ಗಳಿವೆ ಎಂದು ಕಂಡುಹಿಡಿಯಿರಿ, ಅದು ಕೇವಲ 11 ಸೆಕೆಂಡ್ ಒಳಗೆ. ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ತಿಳಿಸಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಸೋಮವಾರದ ಬಂತಂದ್ರೆ ಬಹುತೇಕರಿಗೆ ಹಿಂಸೆ ಅನ್ನಿಸುತ್ತೆ, ಅದಕ್ಕೆ ಕಾರಣ ಹಿಂದಿನ ಎರಡು ದಿನಗಳ ರಜೆ. ನಿಮಗೂ ಮಂಡೆ ಬ್ಲೂಸ್‌ ಕಾಡ್ತಾ ಇದ್ರೆ ನಿಮ್ಮ ಮೆದುಳನ್ನು ಚುರುಕಾಗಿಸಲು ನೀವು ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಬಹುದು. ಇಲ್ಲೊಂದು ಮೆದುಳಿಗೆ ಸವಾಲು ಹಾಕುವ ಬ್ರೈನ್ ಟೀಸರ್ ಚಿತ್ರವಿದೆ. ಇದಕ್ಕೆ ನೀವು 11 ಸೆಕೆಂಡ್ ಒಳಗೆ ಉತ್ತರ ಹೇಳಬೇಕು.

ಮೇಲ್ನೋಟಕ್ಕೆ ಕಂಡಾಗ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವುದು ದೊಡ್ಡ ವಿಷಯ ಎಂದೆನಿಸುವುದಿಲ್ಲ. ಆದರೆ ಇದನ್ನು ಡೀಪಾಗಿ ನೋಡಿದಾಗ ನಿಮಗೆ ತಲೆ ಕೆಡೋದು ಖಂಡಿತ. ಹಾಗಾದ್ರ ಅಂಥದ್ದೇನಿದೆ ಈ ಬ್ರೈನ್ ಟೀಸರ್‌ನಲ್ಲಿ ಎಂಬುದನ್ನ ನೋಡಿ.

“@brainteaser_hub” ಎಂಬ ಇನ್‌ಸ್ಟಾಗ್ರಾಂ ಪುಟ ನಿರ್ವಹಿಸುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಒಂದು ಮುಖದ ಆಕೃತಿ ಸುತ್ತಲೂ ಸಂಖ್ಯೆಗಳನ್ನು ಬರೆಯಲಾಗಿದೆ. ಆ ಮುಖದ ಮೇಲೆ ಒಟ್ಟು ಎಷ್ಟು ಸಂಖ್ಯೆಗಳಿವೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು. ಆರಂಭದಲ್ಲಿ ಕಂಡಾಗ ಐದಾರು ನಂಬರ್ ಕಾಣಿಸಿದ್ರೂ ಖಂಡಿತ ಇದರಲ್ಲಿ ಅದಕ್ಕಿಂತ ಹೆಚ್ಚಿನ ನಂಬರ್‌ಗಳಿವೆ. ಒಟ್ಟು ಎಷ್ಟು ನಂಬರ್ ಇದೆ ಅಂತ 11 ಸೆಕೆಂಡ್ ಒಳಗೆ ಹೇಳಬೇಕು.

ಕಳೆದ ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಬ್ರೈನ್ ಟೀಸರ್‌ಗೆ ಹಲವರು ಲೈಕ್‌, ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ಈ ಬ್ರೈನ್‌ ಟೀಸರ್‌ಗೆ ಉತ್ತರ ಕಂಡುಕೊಂಡು ಕಾಮೆಂಟ್ ಮಾಡಿದವರಿಗೆ ಎಷ್ಟು ನಂಬರ್ ಕಾಣಿಸಿದೆ ನೋಡೋಣ.

ಕಾಮೆಂಟ್‌ಗಳು ಹೀಗಿವೆ

‘14 ಎಂದು ನನಗೆ ಅನ್ನಿಸುತ್ತಿದೆ. ಚಿತ್ರದಲ್ಲಿ 2 ಸೊನ್ನೆ ಇದೆ. 95, 96 ಕಾಂಬೋ ನಂಬರ್ ಕೂಡ ಇದೆ‘ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ. ‘14 ಸೊನ್ನೆ ಸೇರಿ 15‘ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ‘11 ಬಹುಶಃ‘ ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಹಲವರು 11, 12, 13 ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಹಾಗಾದರೆ ನಿಮ್ಮ ಕಣ್ಣಿಗೆ ಚಿತ್ರದಲ್ಲಿ ಎಷ್ಟು ನಂಬರ್ ಕಾಣಿಸಿತು ಹೇಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: ‘E‘ ಬಂಡೆ ಉರುಳಿಸಿದರೆ ಸಾಯೋದು ಯಾರು? ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ನಿಮ್ಮಿಂದ ಸಾಧ್ಯನಾ ಟ್ರೈ ಮಾಡಿ

ರೆಡ್ಡಿಟ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ, ಇಲ್ಲೊಂದು ಪಜಲ್ ಇದ್ದು 'E' ಬಂಡೆಯನ್ನು ಕೆಳಗೆ ತಳ್ಳಿದರೆ ಸಾಯೋದು ಯಾರು ಎಂದು ನೀವು ಕಂಡುಹಿಡಿಯಬೇಕು. ನಿಮ್ಮ ಮೆದುಳು ಬಹಳ ಶಾರ್ಪ್ ಇದ್ದರಷ್ಟೇ ಈ ಬ್ರೈನ್ ಟೀಸರ್‌ಗೆ ಉತ್ತರ ಕಂಡುಹಿಡಿಯಲು ಸಾಧ್ಯ.

Brain Teaser: ಇಲ್ಲಿರುವ 5 ಜನರಲ್ಲಿ ಎಡಗೈ ಬಳಸುವ ವ್ಯಕ್ತಿ ಯಾರು? ಮೆದುಳು ಶಾರ್ಪ್ ಇದ್ರೆ 11 ಸೆಕೆಂಡ್ ಒಳಗೆ ಕಂಡುಹಿಡಿಯಿರಿ

Brain Teaser: ಸ್ಪರ್ಧಾತ್ಮಕ ಪರೀಕ್ಷೆಗಳನ್ನ ನೀವು ಎದುರಿಸಿದ್ದರೆ ಲಾಜಿಕಲ್ ರಿಸನಿಂಗ್ ಪ್ರಶ್ನೆಗಳನ್ನು ನೋಡಿರುತ್ತೀರಿ. ಇಲ್ಲೊಂದು ಅಂಥದ್ದೇ ಪ್ರಶ್ನೆ ಇದೆ. ಇದು ನಿಮ್ಮ ಐಕ್ಯೂ ಹಂತವನ್ನು ಪರೀಕ್ಷೆ ಮಾಡುತ್ತದೆ. ಚಿತ್ರದಲ್ಲಿರುವ ಅಷ್ಟೂ ಜನರಲ್ಲಿ ಎಡಗೈ ಬಳಸುವ ವ್ಯಕ್ತಿ ಯಾರು ಎಂಬುದನ್ನು 11 ಸೆಕೆಂಡ್ ಒಳಗೆ ಕಂಡುಹಿಡಿಯಬೇಕು.

 

mysore-dasara_Entry_Point