Brain Teaser: 20 ವರ್ಷಗಳ ನಂತರ ಗುಂಡನ ವಯಸ್ಸು ಎಷ್ಟಾಗುತ್ತೆ; ಮೆದುಳಿಗೆ ಹುಳ ಬಿಡುವ ಈ ಪ್ರಶ್ನೆಗೆ ನಿಮ್ಮ ಉತ್ತರವೇನು?
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 20 ವರ್ಷಗಳ ನಂತರ ಗುಂಡನ ವಯಸ್ಸು ಎಷ್ಟಾಗುತ್ತೆ; ಮೆದುಳಿಗೆ ಹುಳ ಬಿಡುವ ಈ ಪ್ರಶ್ನೆಗೆ ನಿಮ್ಮ ಉತ್ತರವೇನು?

Brain Teaser: 20 ವರ್ಷಗಳ ನಂತರ ಗುಂಡನ ವಯಸ್ಸು ಎಷ್ಟಾಗುತ್ತೆ; ಮೆದುಳಿಗೆ ಹುಳ ಬಿಡುವ ಈ ಪ್ರಶ್ನೆಗೆ ನಿಮ್ಮ ಉತ್ತರವೇನು?

ಇಂದಿನ ಬ್ರೈನ್ ಟೀಸರ್ ಪ್ರಶ್ನೆ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಈ ಪ್ರಶ್ನೆಗೆ ಉತ್ತರ ಹೇಳಲು ನಿಮ್ಮ ಐಕ್ಯೂ ಲೆವೆಲ್ ಜಾಸ್ತಿ ಇರಬೇಕು. ನೀವು ನಿಜಕ್ಕೂ ಬುದ್ಧಿವಂತರಾದ್ರೆ 20 ವರ್ಷದ ನಂತರ ಗುಂಡನ ವಯಸ್ಸು ಎಷ್ಟಾಗುತ್ತದೆ ಎಂಬುದನ್ನು ಕಂಡುಹಿಡಿಯಿರಿ.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಬ್ರೈನ್ ಟೀಸರ್‌ಗಳು ಮೆದುಳಿಗೆ ಹುಳ ಬಿಡೋದು ಖಂಡಿತ. ಇದರಲ್ಲಿರುವ ಪ್ರಶ್ನೆಗೆ ಉತ್ತರ ಹೇಳಲು ನಾವು ಸಾಕಷ್ಟು ಬುದ್ಧಿ ಉಪಯೋಗಿಸಬೇಕಾಗುತ್ತದೆ. ಇದರಿಂದ ಕೆಲ ಹೊತ್ತು ಯೋಚಿಸಬೇಕಾಗುತ್ತದೆ. ಕೆಲವೊಮ್ಮೆ ಅಷ್ಟೆಲ್ಲಾ ಮಾಡಿದ ನಂತರವೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಬುದ್ಧಿವಂತರು ಮಾತ್ರ ಇಂತಹ ಪ್ರಶ್ನೆಗಳಿಗೆ ಥಟ್ ಅಂತ ಉತ್ತರ ಕಂಡುಕೊಳ್ಳುತ್ತಾರೆ.

ಬ್ರೈನ್ ಟೀಸರ್‌ಗಳೆಂದರೆ ಕೇವಲ ಗಣಿತದ ಪಜಲ್‌ಗಳು ಮಾತ್ರವಲ್ಲ, ಟ್ರಿಕ್ಕಿ ಪ್ರಶ್ನೆಗಳು, ಕಣ್ಣಿಗೆ ಸವಾಲು ಹಾಕುವ ಚಿತ್ರಗಳು ಕೂಡ ಇರುತ್ತವೆ. ಈ ಎಲ್ಲವೂ ನಮ್ಮ ಬುದ್ಧಿವಂತಿಕೆಯನ್ನು ಚಾಲೆಂಜ್ ಮಾಡುವಂತೆ ಇರುವುದು ಸುಳ್ಳಲ್ಲ.

ಇದೀಗ ಎಕ್ಸ್‌ನಲ್ಲಿ ಒಂದು ಬ್ರೈನ್ ಟೀಸರ್‌ ವೈರಲ್ ಆಗಿದೆ. ಆ ಬ್ರೈನ್ ಟೀಸರ್‌ನಲ್ಲಿ ಒಂದು ಟ್ರಿಕ್ಕಿ ಪ್ರಶ್ನೆ ಇದೆ. ಇದಕ್ಕೆ ನೀವು ಥಟ್ಟಂತ ಉತ್ತರ ಹೇಳಬೇಕು. ಆ ಪ್ರಶ್ನೆ ಹೀಗಿದೆ. ‘20 ವರ್ಷಗಳ ಹಿಂದೆ ಗುಂಡನಿಗೆ 20 ವರ್ಷ. ಹಾಗಾದರೆ 20 ವರ್ಷಗಳ ನಂತರ ಗುಂಡನಿಗೆ ಎಷ್ಟು ವರ್ಷವಾಗುತ್ತದೆ‘ ಎಂದು ಪ್ರಶ್ನೆಗೆ ನೀವು ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡಬೇಕು.

ಈ ಬ್ರೈನ್ ಟೀಸರ್ ಪೋಸ್ಟ್ ಅನ್ನು ಹಲವರು ವೀಕ್ಷಿಸಿದ್ದಾರೆ. ಕೆಲವರು ಕಾಮೆಂಟ್ ಮಾಡುವ ಮೂಲಕ ಇದಕ್ಕೆ ಉತ್ತರ ಹೇಳುವ ಪ್ರಯತ್ನ ಮಾಡಿದ್ದಾರೆ. ‘ಗುಂಡನಿಗೆ ಆಗ 60 ವರ್ಷವಾಗುತ್ತದೆ. ಗಣಿತ ಎಂದಿಗೂ ಸುಳ್ಳು ಹೇಳುವುದಿಲ್ಲ‘ ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು 40 ಎಂದು ಉತ್ತರ ಹೇಳಿದ್ದಾರೆ. ಹಾಗಾದರೆ ಈ ಪ್ರಶ್ನೆಗೆ ನಿಮ್ಮ ಉತ್ತರವೇನು.

ಇದಕ್ಕೆ ಸರಿಯಾದ ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ಇದನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆಗೂ ಹಂಚಿಕೊಳ್ಳಿ. ಅವರಿಂದ ಯಾವ ಉತ್ತರ ಬರುತ್ತದೆ ನೋಡಿ. ಅವರೆಷ್ಟು ಜಾಣರು ಎಂಬುದನ್ನು ಕಂಡುಕೊಳ್ಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಕಿಟಕಿ ಬಾಗಿಲುಗಳಿಲ್ಲದ ರೂಮ್ ಯಾವುದು; ಬುದ್ಧಿವಂತರಾದ್ರೆ ಯೋಚಿಸಿ ಉತ್ತರ ಹೇಳಿ, ನಿಮ್ಮ ಮೆದುಳಿಗೊಂದು ಸವಾಲ್‌

ಎಕ್ಸ್‌ನಲ್ಲಿ ವೈರಲ್ ಆದ ಪ್ರಶ್ನೆಯೊಂದು ಮೆದುಳಿಗೆ ಹುಳ ಬಿಡೋದು ಪಕ್ಕಾ. ಈ ಪ್ರಶ್ನೆಗೆ ನೀವು 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ನಿಮ್ಮಲ್ಲಿ ಅಸಾಧಾರಣ ಬುದ್ಧಿವಂತಿಕೆ ಇದ್ರೆ ಮಾತ್ರ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯ. ಹಾಗಾದರೆ ಕಿಟಕಿ, ಬಾಗಿಲುಗಳಿಲ್ಲದ ರೂಮ್ ಯಾವುದು ಉತ್ತರ ಹೇಳಿ.

Brain Teaser: 66ರ ನಡುವೆ ಒಂದೇ ಒಂದು ಕಡೆ 69 ಇದೆ, ಅದು ಎಲ್ಲಿದೆ? 6 ಸೆಕೆಂಡ್‌ನಲ್ಲಿ ಹೇಳಿ; ನಿಮ್ಮ ಕಣ್ಣಿಗೊಂದು ಚಾಲೆಂಜ್‌

ಇಂದಿನ ಬ್ರೈನ್ ಟೀಸರ್ ಚಿತ್ರದಲ್ಲಿ ರಾಶಿ 66 ಅನ್ನು ಬರೆಯಲಾಗಿದೆ. ಈ 66ರ ನಡುವೆ ಒಂದೇ ಒಂದು ಕಡೆ 69 ಅಡಗಿದೆ. ಅದು ಎಲ್ಲಿದೆ ಎಂದು ಕೇವಲ 6 ಸೆಕೆಂಡ್ ಒಳಗೆ ನೀವು ಕಂಡುಹಿಡಿಯಬೇಕು. ನಿಮ್ಮ ಕಣ್ಣು ಚುರುಕಾಗಿದ್ರೆ ಥಟ್ಟಂತ ಉತ್ತರ ಹೇಳಿ, ನಿಮಗೊಂದು ಹೊಸ ಚಾಲೆಂಜ್‌.

Whats_app_banner