ಕನ್ನಡ ಸುದ್ದಿ  /  Lifestyle  /  Viral News I Want Female Flat Mate Bengaluru Girl Creative Post Goes Viral X Post Social Media Viral Rst

Viral: ನಂಗ್‌ ಒಬ್ಳು ಫ್ಲ್ಯಾಟ್‌ಮೇಟ್‌ ಬೇಕು, ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಯ್ತು ಬೆಂಗ್ಳೂರು ಹುಡ್ಗಿಯ ಕ್ರಿಯೇಟಿವ್‌ ಪೋಸ್ಟ್‌

ʼನಂಗ್‌ ಒಬ್ಳು ರೂಮ್‌ಮೇಟ್‌ ಬೇಕುʼ ಎಂದು ಬೆಂಗಳೂರಿನ ಹುಡುಗಿ ಒಬ್ಬಳು ಹಾಕಿದ ಪೋಸ್ಟ್‌ ಈಗ ಸಖತ್‌ ವೈರಲ್‌ ಆಗಿದೆ. ಡಿಫ್ರೆಂಟ್‌ ಆಗಿ ಪೋಸ್ಟ್‌ ಹಾಕಿರುವ ಈಕೆಯ ಕ್ರಿಯೇಟಿವಿಯನ್ನು ಮೆಚ್ಚಿ ನೆಟ್ಟಿಗರು ಮೆಚ್ಚಿ ಕೊಂಡಾಡಿದ್ದಾರೆ. ಅಂಥದ್ದೇನಿದೆ ಆ ಪೋಸ್ಟ್‌ನಲ್ಲಿ ನೋಡಿ.

ನಂಗ್‌ ಒಬ್ಳು ಫ್ಲಾಟ್‌ಮೇಟ್‌ ಬೇಕು, ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಯ್ತು ಬೆಂಗ್ಳೂರು ಹುಡುಗಿಯ ಕ್ರಿಯೇಟಿವ್‌ ಪೋಸ್ಟ್‌
ನಂಗ್‌ ಒಬ್ಳು ಫ್ಲಾಟ್‌ಮೇಟ್‌ ಬೇಕು, ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಯ್ತು ಬೆಂಗ್ಳೂರು ಹುಡುಗಿಯ ಕ್ರಿಯೇಟಿವ್‌ ಪೋಸ್ಟ್‌

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಪ್ರಪಂಚದ ಎಲ್ಲಾ ಭಾಗದ ಜನರು ನೆಲೆಸಿದ್ದಾರೆ. ಬೆಂಗಳೂರು ನಗರ ವಿಶಾಲವಾಗಿ ಬೆಳೆದಿದ್ರೂ ಇಲ್ಲಿ ಮನೆ ಹುಡುಕೋದು ಖಂಡಿತ ಕಷ್ಟ. ಏರಿಯಾ ಚೆನ್ನಾಗಿದ್ರೆ ಮನೆ ಚೆನ್ನಾಗಿರೊಲ್ಲ, ಮನೆ ಚೆನ್ನಾಗಿದ್ರೆ ಬೆಳಕೇ ಬರೋಲ್ಲ. ಹೀಗೆ ಬೆಂಗಳೂರಲ್ಲಿ ಮನೆ ಹುಡುಕೋ ಪಜೀತಿ ಸುಲಭವಲ್ಲ ಬಿಡಿ. ನೀವು ಬೆಂಗಳೂರಲ್ಲಿ ವಾಸ ಮಾಡೋಕೆ ಮನೆ ಹುಡುಕ್ತಾ ಇದ್ರೆ ಇಲ್ಲಿರುವ ಪೋಸ್ಟ್‌ ನಿಮಗೆ ಖಂಡಿತ ಸಹಾಯ ಆಗುತ್ತೆ, ಅಂದ್‌ ಹಾಗೆ, ಇದು ಹುಡುಗೀರಿಗೆ ಮಾತ್ರ ಅನ್ನೋದು ಮರಿಬೇಡಿ. ಹೌದು, ಬೆಂಗಳೂರಿನ ಕೋರಮಂಗಲದಲ್ಲಿ ನೆಲೆಸಿರುವ ಹುಡುಗಿಯೊಬ್ಬಳು ಫ್ಯಾಟ್‌ಮೇಟ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಅವಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಆ ಪೋಸ್ಟ್‌ ಈಗ ಸಖತ್‌ ವೈರಲ್‌ ಆಗಿದೆ.

ಏನಿದು ಸ್ಟೋರಿ?

ಬೆಂಗಳೂರಿನ ಕೋರಮಂಗಲದಲ್ಲಿ ಉದಿಶಾ ಎನ್ನುವವರು 2ಬಿಎಚ್‌ಕೆ ಫ್ಲ್ಯಾಟ್‌ ನೋಡಿದ್ದಾರೆ. ಅವರೀಗ ಈ ಫ್ಲ್ಯಾಟ್‌ನಲ್ಲಿ ಇನ್ನೊಬ್ಬರೊಂದಿಗೆ ಶೇರ್‌ ಮಾಡಿಕೊಳ್ಳಲು ಬಯಸಿದ್ದು ಫ್ಲ್ಯಾಟ್‌ಮೇಟ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಉದಿಶಾ ಹಾಕಿರುವ ಪೋಸ್ಟ್‌ ಇದೀಗ ಸಾಕಷ್ಟು ವೈರಲ್‌ ಆಗಿದೆ. ಸಖತ್‌ ಕ್ರಿಯೇಟಿವ್‌ ಆಗಿ ಪೋಸ್ಟ್‌ ರಚಿಸಿದ್ದಾರೆ ಆಕೆ.

ಪೋಸ್ಟ್‌ನಲ್ಲಿ ಏನಿದೆ?

ತಾವು ಇನ್ನಷ್ಟೇ ಶಿಫ್ಟ್‌ ಆಗಿಬೇಕಿರುವ ಫ್ಲ್ಯಾಟ್‌ನ ಫೋಟೊ ಹಂಚಿಕೊಂಡಿರುವ ಉದಿಶಾ ಆ ಮನೆಯ ಪ್ರತಿ ಮೂಲೆಯ ಬಗ್ಗೆಯೂ ವಿವರವಾಗಿ ಫೋಟೊಗಳ ಮೇಲೆ ಬರೆದಿದ್ದಾರೆ. ಎಲ್ಲಾ ಮಾಹಿತಿಯನ್ನು ಫೋಟೊಗಳ ಸಮೇತ ಹಂಚಿಕೊಂಡಿದ್ದಾರೆ. ಫ್ಲ್ಯಾಟ್‌ಮೇಟ್‌ ಅಲರ್ಟ್‌!, ಹಾಯ್‌ ಫ್ರೆಂಡ್ಸ್‌. ಕೋರಮಂಗಲ 8ನೇ ಬ್ಲಾಕ್‌ನಲ್ಲಿ 2ಬಿಎಚ್‌ಕೆ ಫ್ಲ್ಯಾಟ್‌ನಲ್ಲಿರುವ ನನಗೆ ನನ್ನ ಜೊತೆ ಇರಲು ಫ್ಲ್ಯಾಟ್‌ಮೇಟ್‌ ಒಬ್ಬರು ಬೇಕು. ಇದು ಡಿವೈಯು ಆರ್ಟ್‌ ಕೆಫೆಯಿಂದ 5 ನಿಮಿಷಗಳ ದೂರದಲ್ಲಿದೆʼ ಎಂದು ಬರೆದುಕೊಂಡಿದ್ದಾರೆ. ಫ್ಲ್ಯಾಟ್‌ನ ಬಾಡಿಗೆ, ಡೆಪಾಸಿಟ್‌ ಹಣ, ಆಕೆ ಯಾವತ್ತು ಫ್ಲ್ಯಾಟ್‌ಗೆ ಶಿಫ್ಟ್‌ ಆಗಲಿದ್ದಾರೆ ಎಲ್ಲವನ್ನೂ ವಿವರವಾಗಿ ಬರೆದುಕೊಂಡಿದ್ದಾರೆ.

ಫೆ. 26 ರಂದು ಈಕೆ ಪೋಸ್ಟ್‌ ಮಾಡಿದ್ದರು. ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ಪೋಸ್ಟ್‌ ನೋಡಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದರೆ, 88 ಮಂದಿ ರೀಪೋಸ್ಟ್‌ ಮಾಡಿದ್ದಾರೆ. ಹಲವರು ಇವರ ಕ್ರಿಯೇಟಿವ್‌ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವರು ಈಕೆ ಯೂನಿಕ್‌ ಡಿಸೈನ್‌ಗೆ ಮಾರು ಹೋಗಿದ್ದಾರೆ. ʼನಂಗೆ ಈ ಡಿಸೈನ್‌ ತುಂಬಾ ಇಷ್ಟ ಆಯ್ತು, ಮ್ಯಾಟ್ರಿಮೋನಿಗಾಗಿ ನಂಗೊಂದು ಈ ರೀತಿಯ ಡಿಸೈನ್‌ ಮಾಡಿಕೊಡ್ತೀರಾʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼರೂಮ್‌ಮೇಟ್‌ ಹುಡುಕಲು ಇದಕ್ಕಿಂತ ಬೆಸ್ಟ್‌ ದಾರಿ ಇನ್ನೊಂದಿಲ್ಲ. ನಿಮ್ಮ ಎಡಿಟಿಂಗ್‌ ನಂಗೆ ತುಂಬಾ ಇಷ್ಟ ಆಯ್ತುʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ನೋಡಿ ಉದಿಶಾಗೆ ಫ್ಲ್ಯಾಟ್‌ಮೇಟ್‌ ಆಗಿ ನೀವು ಹೋಗ್ತೀರಾ ಅಂದ್ರೆ ಅವರ ಪೋಸ್ಟ್‌ ನೋಡಿ ಅವರನ್ನ ಕಾಂಟ್ಯಾಕ್‌ ಮಾಡಿ.

ಇದನ್ನೂ ಓದಿ

ನಾಯಿಮರಿಯನ್ನ ತೊಡೆ ಮೇಲೆ ಕೂರಿಸಿಕೊಂಡು ಸವಾರಿ; ಬೆಂಗಳೂರಿನ ಆಟೊ ಡ್ರೈವರ್‌ಗೆ ಸಿಕ್ತು ನೆಟ್ಟಿಗರ ಭಾರಿ ಮೆಚ್ಚುಗೆ: Video

ಬೆಂಗಳೂರಿನ ಟ್ರಾಫಿಕ್‌ನಲ್ಲಿ ಆಗಾಗ ನಿಮ್ಮ ಕಣ್ಣಿಗೆ ಕಾಣುವ ದೃಶ್ಯಗಳು ಆಪ್ತ ಎನ್ನಿಸುತ್ತವೆ. ಇದೀಗ ಬೆಂಗಳೂರು ಟ್ರಾಫಿಕ್‌ನಲ್ಲಿ ಎಲ್ರೂ ಮೆಚ್ಚುವಂತ ಫೋಟೊವೊಂದು ಸಿಕ್ಕಿದ್ದು, ವೈರಲ್‌ ಆಗಿದೆ. ನಾಯಿಮರಿಯನ್ನು ತೊಡೆ ಮೇಲೆ ಕೂರಿಸಿಕೊಂಡ ಆಟೊ ಚಾಲಕನ ಫೋಟೊ ಇದಾಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.