ಕನ್ನಡ ಸುದ್ದಿ  /  Lifestyle  /  Viral News Kentaky Dosa Chicken Corner Kfc Long Lost Brother Found In Bengaluru Social Media Viral X Post Rst

ಕಾಣೆಯಾದ ಕೆಎಫ್‌ಸಿ ಸಹೋದರ ಬೆಂಗಳೂರಲ್ಲಿ ಪತ್ತೆ, ವೈರಲ್‌ ಪೋಸ್ಟ್‌ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು; ಏನಿದು ಸ್ಟೋರಿ

ಬೆಂಗಳೂರಿನ ಸ್ಪೆಷಲ್‌ ಕೆಎಫ್‌ಸಿ ಔಟ್‌ಲೆಟ್‌ನ ಫೋಟೊವೊಂದನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ಸಾಕಷ್ಟು ವೈರಲ್‌ ಆಗಿದೆ. ಅಲ್ಲದೆ ಈ ಫೋಟೊ ನೋಡಿದ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗ್ತಿದಾರೆ. ʼಕಾಣೆಯಾದ ಕೆಎಫ್‌ಸಿ ಸಹೋದರ ಸಿಕ್ಕಿದ್ದಾನೆʼ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಏನಿದು ಫೋಟೊ, ಏನು ವಿಚಾರ? ಮುಂದೆ ನೋಡಿ.

ಬೆಂಗಳೂರಿನಲ್ಲಿ ಪತ್ತೆಯಾದ ಕೆಎಫ್‌ಸಿ ಸಹೋದರ, ವೈರಲ್‌ ಪೋಸ್ಟ್‌ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು; ಏನಿದು ಸ್ಟೋರಿ
ಬೆಂಗಳೂರಿನಲ್ಲಿ ಪತ್ತೆಯಾದ ಕೆಎಫ್‌ಸಿ ಸಹೋದರ, ವೈರಲ್‌ ಪೋಸ್ಟ್‌ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು; ಏನಿದು ಸ್ಟೋರಿ

ಬೆಂಗಳೂರಿನಲ್ಲಿ ತಿರುಗಾಡುವಾಗ ಕಣ್ಣಿಗೆ ಬೀಳುವ ಕೆಲವೊಂದು ವಿಚಾರಗಳು ನಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುವುದು ಸುಳ್ಳಲ್ಲ. ಕ್ರಿಯೇಟಿವಿಯ ನೆಕ್ಸ್ಟ್‌ ಲೆವೆಲ್‌ ನೋಡಬೇಕು ಅಂದ್ರೆ ನೀವು ಆಟೊಗಳ ಮೇಲೆ ಬರೆಯುವ ಬರಹಗಳು, ಚಿಕ್ಕ ಚಿಕ್ಕ ಹೋಟೆಲ್‌ಗಳು, ತಳ್ಳುಗಾಡಿಯ ಮೇಲೆ ಬರೆದ ಬರಹಗಳನ್ನು ಓದಬೇಕು. ಈ ಬರಹಗಳನ್ನು ಓದಿದಾಗ ಭಗವಂತ ಹಿಂಗೆಲ್ಲಾ ಆಗುತ್ತಾ, ಹಿಂಗೆಲ್ಲಾ ಬರಿಯೋಕೆ ಸಾಧ್ಯಾನಾ ಅಂತ ಅನ್ನಿಸದೇ ಇರದು. ಇದೀಗ ಅಂತಹದ್ದೇ ಬೋರ್ಡ್‌ನ ಫೋಟೊವೊಂದು ವೈರಲ್‌ ಆಗಿದೆ. ಅದು ಏನ್‌ ಬೋರ್ಡ್‌ ಅಂತ ಊಹೆ ಮಾಡೋಕೆ ಸಾಧ್ಯನಾ? ಖಂಡಿತ ನಿಮ್ಮಿಂದ ಸಾಧ್ಯವಿಲ್ಲ.

ಸಾಮಾನ್ಯವಾಗಿ ಸ್ಪೆಷಲ್‌ ಚಿಕನ್‌ ಖಾದ್ಯಗಳನ್ನು ತಿನ್ನಬೇಕು ಅನ್ನಿಸಿದಾಗ ನಮಗೆ ಮೊದಲು ನೆನಪಾಗೋದು ಕೆಎಫ್‌ಸಿ. ಕೆಂಟುಕಿ ಫ್ರೈಡ್‌ ಚಿಕನ್‌ ಮಾಂಸಾಹಾರಿ ಪ್ರೇಮಿಗಳಿಗೆ ಅಚ್ಚುಮೆಚ್ಚು. ಇದು ಜಗತ್ಪ್ರಸಿದ್ಧ ಕೂಡ. ಬಹುತೇಕ ಎಲ್ಲಾ ಪಟ್ಟಣಗಳಲ್ಲೂ ಕೆಎಫ್‌ಸಿ ಔಟ್‌ಲೆಟ್‌ಗಳನ್ನು ನೀವು ನೋಡಿರುತ್ತೀರಿ. ಬೆಂಗಳೂರಿನ ಬೋರ್ಡ್‌ ಬಗ್ಗೆ ಹೇಳುತ್ತಿದ್ದವರು ಇದ್ಯಾಕೆ ಒಂದೇ ಸಾರಿ ಕೆಎಫ್‌ಸಿ ಬಗ್ಗೆ ಹೇಳ್ತಾ ಇದಾರೆ ಅಂತ ನಿಮಗೂ ಅನ್ನಿಸಬಹುದು. ಖಂಡಿತ ವಿಷಯ ಇದೆ. ಕೆಂಟುಕಿ ಫ್ರೈಡ್‌ ಚಿಕನ್‌ ನಿಮಗೆ ಗೊತ್ತು, ಆದ್ರೆ ಕೆಂಟುಕಿ ದೋಸಾ ಚಿಕನ್‌ ಕಾರ್ನರ್‌ ಗೊತ್ತಾ, ಖಂಡಿತ ಗೊತ್ತಿರೋಕೆ ಸಾಧ್ಯವಿಲ್ಲ ಬಿಡಿ. ಇದಿರೋದು ಬೆಂಗಳೂರಲ್ಲಿ ಮಾತ್ರ ಅನ್ನೋದು ಮರಿಬೇಡಿ. ಈ ಔಟ್‌ಲೆಟ್‌ ನೋಡಿದ ನೆಟ್ಟಿಗರು ಇವನು ಬಹಳ ದಿನಗಳ ಹಿಂದೆ ಕಾಣಿಯಾಗಿದ್ದ ಕೆಎಫ್‌ಸಿಯ ಸಹೋದರ ಎನ್ನುತ್ತಿದ್ದಾರೆ ನೆಟ್ಟಿಗರು.

ಎಕ್ಸ್‌ ಬಳಕೆದಾರ ಪ್ರತ್ಯುಷ್‌ ಎನ್ನುವವರು ಬೆಂಗಳೂರಿನ ದೋಸೆ ಕಾರ್ನರ್‌ವೊಂದರ ಫೋಟೊ ಹಂಚಿಕೊಂಡಿದ್ದಾರೆ. ಈ ದೋಸೆ ಕಾರ್ನರ್‌ ಹೆಸರು ಕೆಂಟುಕಿ ಚಿಕನ್‌ ದೋಸೆ ಕಾರ್ನರ್‌. ದಕ್ಷಿಣ ಭಾರತದಲ್ಲಿ ಫೇಮಸ್‌ ಖಾದ್ಯ ದೋಸೆ ಪಾಯಿಂಟ್‌ಗೆ ಕೆಂಟುಕಿ ಹೆಸರಿಡುವ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ ಈ ದೋಸೆ ಕಾರ್ನರ್‌ನ ಮಾಲೀಕರು. ಈ ದೋಸೆ ಕಾರ್ನರ್‌ಗೂ ಕೆಎಫ್‌ಸಿಗೂ ವ್ಯತ್ಯಾಸ ಅಂದ್ರೆ ಅದು ಕೇವಲ ಸ್ಪೆಲಿಂಗ್‌ ಮಾತ್ರ.

ಈ ಫೋಟೊ ಹಂಚಿಕೊಂಡ ಪ್ರತ್ಯುಷ್‌ ಇದು ಬಹಳ ಹಿಂದೆಗಳ ಹಿಂದೆ ಕಾಣೆಯಾದ ಕೆಎಫ್‌ಸಿಯ ಸಹೋದರ ಇರಬಹುದೇ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ನೀವು ಬೆಂಗಳೂರಿನ ನಿವಾಸಿಗಳಾಗಿದ್ದು, ಸ್ಪೆಷಲ್‌ ದೋಸೆ, ಚಿಕನ್‌ ಅನ್ನು ಕೆಂಟುಕಿಯಲ್ಲಿ ತಿನ್ನುವ ಆಸೆ ಹೊಂದಿದ್ರೆ ಈ ಜಾಗಕ್ಕೆ ಭೇಟಿ ನೀಡಬಹುದು ನೋಡಿ. ಕೆಲವೊಂದು ಅಂಗಡಿಗಳ ಹೆಸರು ಮಾತ್ರವಲ್ಲ, ಅಲ್ಲಿರುವ ಮೆನುವಿನಲ್ಲಿರುವ ಭಕ್ಷ್ಯಗಳ ಹೆಸರೂ ಭಿನ್ನವಾಗಿಯೇ ಇರುತ್ತದೆ. ಬೆಂಗಳೂರಿನಲ್ಲಿ ಮಾತ್ರವಲ್ಲ, ಹಲವಾರು ಊರುಗಳಲ್ಲಿ ಇಂತಹ ವಿಭಿನ್ನ ನಾಮಫಲಕ ಇರುವ ಹೋಟೆಲ್‌ಗಳನ್ನು ನೋಡುತ್ತೇವೆ. ಇವುಗಳನ್ನು ನೋಡಿದಾಗ ಅವರ ಕ್ರಿಯೆಟಿವಿ ಬಗ್ಗೆ ಮೆಚ್ಚಿಕೊಳ್ಳುವುದು ಮಾತ್ರವಲ್ಲ, ಆ ಹೆಸರು ನೋಡಿ ಬಿದ್ದು ಬಿದ್ದು ನಗುವುದು ಬರುವುದೂ ಸುಳ್ಳಲ್ಲ.

ಈ ಕೆಳಗಿನ ವೈರಲ್‌ ಸ್ಟೋರಿಗಳನ್ನೂ ಓದಿ

Viral News: ಐಸ್‌ಕ್ರೀಮ್‌ ಇಡ್ಲಿ ವಿಡಿಯೊ ವೈರಲ್‌; ಇಡ್ಲಿಗೆ ನ್ಯಾಯ ಸಿಗ್ಲೇಬೇಕು ಅಂದ್ರು ನೆಟ್ಟಿಗರು; ಏನಿದು ಕಥೆ ನೋಡಿ

ಜಗತ್ತಲ್ಲಿ ಜನ ಏನೇನೆಲ್ಲಾ ಪ್ರಯೋಗ ಮಾಡ್ತಾರೆ ಅಂತ ಊಹಿಸೋಕು ಸಾಧ್ಯ ಇಲ್ಲ. ಕೆಲವೊಮ್ಮೆ ಇದೆಲ್ಲಾ ಸಾಧ್ಯಾನಾ ಅಂತಾನೂ ಅನ್ನಿಸುತ್ತೆ, ಇಲ್ಲೊಬ್ಬ ವ್ಯಾಪಾರಿ ಐಸ್‌ಕ್ರೀಮ್‌ ಇಡ್ಲಿ ಮಾಡುವ ಮೂಲಕ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ. ಮಾತ್ರವಲ್ಲ ನೆಟ್ಟಿಗರೆಲ್ಲಾ ಸೇರಿ ಇಡ್ಲಿಗೆ ನ್ಯಾಯ ಕೊಡಿಸುವ ಹೋರಾಟದಲ್ಲಿ ತೊಡಗಿದ್ದಾರೆ.

Viral: ಪಾರ್ಲೆ-ಜಿ ಬಿಸ್ಕತ್‌ನಿಂದ ಆಮ್ಲೇಟ್‌ ತಯಾರಿಸಿದ ವ್ಯಾಪಾರಿ; ಮೊಯೆ ಮೊಯೆ ಎಂದು ಛೇಡಿಸಿದ್ರು ನೆಟ್ಟಿಗರು; ವಿಡಿಯೊ ವೈರಲ್‌

ಇತ್ತೀಚೆಗೆ ಬೀದಿ ಬದಿ ವ್ಯಾಪಾರಿಯೊಬ್ಬ ಹೊಸ ರೆಸಿಪಿಯೊಂದನ್ನು ಟ್ರೈ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಈ ರೆಸಿಪಿ ನೋಡಿದವರು, ಭಗವಂತಾ ಇದನ್ನೆಲ್ಲಾ ನೋಡೋಕೆ ನಮಗೆ ಇನ್ನೂ ಕಣ್ಣು ಕೊಟ್ಟಿದ್ದೀಯಾ ಎಂದು ಕೆಲವರು ಕೇಳಿದ್ರೆ, ಇನ್ನೂ ಕೆಲವರು ಮೊಯೇ ಮೊಯೇ ಹಾಡು ಹೇಳಿದ್ದಾರೆ. ಹಾಗಾದ್ರೆ ಈ ರೆಸಿಪಿ ಆದ್ರೂ ಏನು?

ವಿಭಾಗ