Viral: ತನ್ನ ಮೂವರು ಹೆಣ್ಣುಮಕ್ಕಳ ಮದುವೆಗೆ ಸ್ವಯಂವರ ಏರ್ಪಡಿಸಿದ ಜಾದುಗಾರ; ಎತ್ತರ, ಸ್ಪುರದ್ರೂಪಿ, ಸ್ಥಿತಿವಂತ ಗಂಡಸರಿಗೆ ಮಾತ್ರ ಅವಕಾಶ
ಕೊಲ್ಕತ್ತಾದಲ್ಲಿ ಪ್ರಕಟವಾದ ಜಾಹೀರಾತೊಂದು ಇದೀಗ ಭಾರಿ ಸದ್ದು ಮಾಡುತ್ತಿದೆ. ಇಲ್ಲಿನ ಖ್ಯಾತ ಜಾದುಗಾರ ಪಿಸಿ ಸೊರ್ಕಾರ್ ಜೂನಿಯರ್ ತಮ್ಮ ಮೂವರು ಹೆಣ್ಣುಮಕ್ಕಳಿಗೆ ಸ್ವಯಂವರ ಮಾಡಿಸುವ ಯೋಚನೆ ಮಾಡಿದ್ದಾರೆ. ಅದಕ್ಕಾಗಿ ಅವರು ಎತ್ತರವಾಗಿರುವ, ಸುಂದರವಾದ ಹುಡುಗರು ಹುಡುಕಲು ಸ್ವಯಂವರದ ಜಾಹೀರಾತನ್ನು ನೀಡಿದ್ದಾರೆ, ಅದು ಈಗ ವೈರಲ್ ಆಗಿದೆ.
ರಾಮಾಯಣದಲ್ಲಿ ಸೀತಾ ಸ್ವಯಂವರವನ್ನು ನಾವು ಕೇಳಿರುತ್ತೇವೆ. ಶ್ರೀರಾಮನು ಸೀತೆಯನ್ನು ಸ್ವಯಂವರದಲ್ಲಿ ವರಿಸುತ್ತಾನೆ ಎಂಬುದು ಹಳೆ ಮಾತಾಯ್ತು, ರಾಮಾಯಣ ಕಾಲದ ಸ್ವಯಂವರದ ಮಾತು ಈಗ್ಯಾಕೆ ಅಂತೀರಾ, ಈಗಿನ ಕಾಲದಲ್ಲೂ ಸ್ವಯಂವರ ಮಾಡೋರು ಇದಾರೆ ಸ್ವಾಮಿ. ಇದೀಗ ಕೊಲ್ಕತ್ತಾದ ಮಾಂತ್ರಿಕರೊಬ್ಬರು ತಮ್ಮ ಮಕ್ಕಳಿಗೆ ಸ್ವಯಂವರ ಮಾಡಿಸಲು ಹೊರಟಿದ್ದಾರೆ.
ಕೊಲ್ಕತ್ತಾದ ಖ್ಯಾತ ಜಾದುಗಾರ ಪಿಸಿ ಸೊರ್ಕಾರ್ ಪತ್ರಿಕೆಗೆ ನೀಡಿರುವ ಜಾಹೀರಾತು ಇದೀಗ ಭಾರಿ ಸದ್ದು ಮಾಡುತ್ತಿದೆ. ಕೊಲ್ಕತ್ತಾ ಮಾತ್ರವಲ್ಲ ದೇಶದದಾದ್ಯಂತ ಸಂಚಲನ ಎಬ್ಬಿಸಿದೆ. ಈ ಜಾಹೀರಾತು ಸೊರ್ಕಾರ್ ಅವರ ಮೂವರು ಹೆಣ್ಣುಮಕ್ಕಳ ಮದುವೆಗೆ ಸಂಬಂಧಿಸಿದ್ದು. ಈ ಜಾಹೀರಾತನ್ನು ನೋಡಿದ ಕೆಲವರು ಇದನ್ನು ಫೇಕ್ ಎಂದುಕೊಂಡಿದ್ದರು. ಹಾಗಾದರೆ ಅಂಥದ್ದೇನಿದೆ ಜಾಹೀರಾತಿನಲ್ಲಿ ಅಂತೀರಾ. ಮ್ಯಾಜಿಷಿಯನ್ ಸೊರ್ಕಾರ್ ತಮ್ಮ ಮೂವರು ಹೆಣ್ಣುಮಕ್ಕಳಿಗೆ ಸ್ವಯಂವರ ಮಾಡಿಸುವ ಬಗ್ಗೆ ಯೋಚಿಸಿದ್ದಾರೆ. ತಮ್ಮ ಮಕ್ಕಳಿಗೆ ಸ್ವಯಂವರ ಮಾಡಿಸಲು ಸೊರ್ಕಾರ್ ನೀಡಿರುವ ಜಾಹೀರಾತು ಇದೀಗ ಹಲವರ ಹುಬ್ಬೇರುವಂತೆ ಮಾಡಿದೆ. ಇದರಲ್ಲಿ ಜಾತಿ, ಮತದ ಬಗ್ಗೆ ಏನೂ ಇಲ್ಲ. ಹೊರತಾಗಿ 38 ರಿಂದ 45 ವರ್ಷದ ಎತ್ತರವಾಗಿರುವ ಸುಂದರ ಸೆಟಲ್ ಆಗಿರುವ ಹುಡುಗರು ಬೇಕು ಎಂದು ಅವರು ಜಾಹೀರಾತಿನಲ್ಲಿ ತಿಳಿಸಿದ್ದಾರೆ.
ಪಿಸಿ ಸೊರ್ಕಾರ್ ಜೂನಿಯರ್ ಕೊಲ್ಕತ್ತಾದಲ್ಲಿ ಹೆಸರಾಂತ ಜಾದೂಗಾರ. ಮೇನಕಾ, ಮುಮ್ತಾಜ್ ಮತ್ತು ಮೌಬಾನಿ ಇವರ ಮೂವರು ಮಕ್ಕಳು. ಇವರು ಕೂಡ ತಮ್ಮದೇ ಆದ ರೀತಿಯಲ್ಲಿ ಹೆಸರು ಮಾಡಿದ್ದಾರೆ. ಹಿರಿಯಳಾದ ಮೇನಕಾ ತನ್ನ ತಂದೆಯ ಹಾದಿಯಲ್ಲಿ ಸಾಗಿ, ಮ್ಯಾಜಿಷಿಯನ್ ಆಗಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದಾಳೆ. ಏತನ್ಮಧ್ಯೆ, ಮುಮ್ತಾಜ್ ಮತ್ತು ಮೌಬಾನಿ ಇಬ್ಬರೂ ನಟನಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.
ಆತ್ಮಸಂಗಾತಿಯನ್ನ ಮದುವೆಯಾದರೆ ಬದುಕು ಸುಂದರ
ಹಿಂದೂಸ್ತಾನ್ ಟೈಮ್ಸ್ ಬಾಂಗ್ಲಾಗೆ ನೀಡಿದ ಸಂದರ್ಶನದಲ್ಲಿ ಕಿರಿಯ ಮಗಳು ಮೌಬಾನಿ ಮದುವೆಯ ಬಗ್ಗೆ ತಮ್ಮ ಕುಟುಂಬದ ಅಸಾಂಪ್ರದಾಯಿಕ ವಿಧಾನದ ಬಗ್ಗೆ ಮಾತನಾಡಿದ್ದಾರೆ. ಸೋಲ್‌ಮೇಟ್ ಅಥವಾ ನಮ್ಮ ಆತ್ಮಕ್ಕೆ ಹತ್ತಿರವಾಗುವ ಸಂಗಾತಿಯನ್ನು ಮದುವೆಯಾಗುವುದು ಮುಖ್ಯ ಎಂದು ಆಕೆ ನಂಬುತ್ತಾಳೆ. ಲವ್ ಮ್ಯಾರೇಜ್ ಆಗಿರಲಿ, ಅರೇಂಜ್ ಮ್ಯಾರೇಜ್ ಆಗಿರಲಿ ಮದುವೆ ಎನ್ನುವುದು ಹೃದಯಗಳನ್ನ ಬೆಸೆಯಬೇಕು ಎಂಬುದು ಆಕೆಯ ಅಭಿಪ್ರಾಯ. ಸ್ವಯಂವರ ಪರಿಕಲ್ಪನೆ ಬಗ್ಗೆ ಮಾತನಾಡಿರುವ ಆಕೆ ಹುಡುಗಿಯರಿಗೆ ತಮ್ಮನ್ನು ಮದುವೆಯಾಗುವ ಹುಡುಗನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಇರಬೇಕು ಎಂದಿದ್ದಾರೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಂದು ಸುಂದರ ಪ್ರಕ್ರಿಯೆ. ನಾನು ಮದುವೆಯನ್ನು ಆ ಸುಂದರ ಪ್ರಕ್ರಿಯೆಯ ಚೌಕಟ್ಟಿನೊಳಗೆ ನೋಡಲು ಬಯಸುತ್ತೇನೆ ಎಂದು ಆಕೆ ಹೇಳುತ್ತಾಳೆ.
ಮದುವೆ ಬಗ್ಗೆ ಮೌಬಾನಿ ಪರಿಕಲ್ಪನೆ
ಕೆಲವು ದಿನಗಳಿಂದ ಒಂಟಿಯಾಗಿದ್ದಾರೆ ಮೌಬಾನಿ. ಯಾರ ಸಮಯವನ್ನು ವ್ಯರ್ಥ ಮಾಡುವುದು ಸರಿಯಲ್ಲ ಎಂಬ ಭಾವನೆ ಆಕೆ ಹೊಂದಿದ್ದಾಳೆ. ತನ್ನ ಭಾವಿ ಪತಿ ಹೃದಯವಂತನಾಗಿರಬೇಕು ಎಂದು ಆಕೆ ಹೇಳುತ್ತಾಳೆ. ಇಂದಿನ ಮಾಧ್ಯಮ ಜಗತ್ತಿನಲ್ಲಿ ಬಾಹ್ಯ ಸೌಂದರ್ಯ ಬಹಳ ಮುಖ್ಯ ನಿಜ, ಆದರೆ ಅದಕ್ಕಿಂತಲೂ ಮುಖ್ಯವಾದುದದು ಪ್ರಮಾಣಿಕತೆ ಮತ್ತು ಹೃದಯವಂತಿಕೆ ಎಂದಿರುವ ಅವರು ಸುಂದರವಾದ ಹೃದಯವನ್ನ ಹೊಂದಿರುವ ವ್ಯಕ್ತಿಯೊಂದಿಗೆ ಮಾತ್ರ ಒಂದೇ ಸೂರಿನಡಿ ಖುಷಿಯಿಂದ ಬದುಕಲು ಸಾಧ್ಯ ಎಂದಿದ್ದಾರೆ.
ವಿವಾಹ ವಿಚ್ಛೇದನದ ಬಗ್ಗೆ ಮಾತನಾಡಿರುವ ಮೌಬಾನಿ ಮದುವೆ ಒಂದು ದೊಡ್ಡ ನಿರ್ಧಾರ. ಆದರೆ ಕೆಲವೊಮ್ಮೆ ಟಾಕ್ಸಿಕ್ ರಿಲೇಷನ್ ಎನ್ನುವುದು ನಮ್ಮನ್ನು ಬದುಕಿದ್ದಲ್ಲೇ ಸಾಯುವಂತೆ ಮಾಡಬಹುದು. ಅಂತಹ ಸಂಬಂಧದಲ್ಲಿ ಅತೃಪ್ತಿಯಿಂದ ಬಾಳುವುದಕ್ಕಿಂತ ಹೊರಬರುವುದೇ ಉತ್ತಮ ಎಂದು ಆಕೆ ಹೇಳುತ್ತಾಳೆ. ವಿಚ್ಛೇದನವನ್ನು ಕೀಳಾಗಿ ಕಾಣಬಾರದು. ಇದು ನಮ್ಮ ಆತ್ಮ ಸಂಗಾತಿಯನ್ನು ಹುಡುಕಲು ಉತ್ತಮ ಮಾರ್ಗವಾಗಿದೆ. ಜೀವನದಲ್ಲಿ ಮುನ್ನಡೆಯಲು ಸಮಾಜವು ವಿಚ್ಛೇದಿತರನ್ನು ಬೆಂಬಲಿಸಬೇಕು ಎಂದು ಮೌಬಾನಿ ಹೇಳುತ್ತಾರೆ.
ಪಿಸಿ ಸೊರ್ಕಾರ್ ತನ್ನ ಮಗಳಿಗೆ ಸೂಕ್ತವಾದ ವರಗಳ ಹುಡುಕಾಟವನ್ನು ಜಾಹೀರಾತು ಮಾಡುವ ನಿರ್ಧಾರವು ಆಧುನಿಕ ಜಗತ್ತಿನಲ್ಲಿಯೂ ಸಹ ಎಲ್ಲರಿಗೂ ಪರಿಪೂರ್ಣ ಹೊಂದಾಣಿಕೆ ಇದೆ ಎಂಬ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.