ಪಿಕಪ್‌ ವಾಹನಕ್ಕೆ ಡಿಕ್ಕಿ ಹೊಡೆದು ಬ್ಯಾನೆಟ್ ಮೇಲಿಂದ ಎದ್ದು ಬಂದ! ಭೀಕರ ಅಪಘಾತದಲ್ಲಿ ಪವಾಡಸದೃಶವಾಗಿ ಜೀವ ಉಳಿಸಿಕೊಂಡ ಯುವಕ; ವಿಡಿಯೊ ವೈರಲ್
ಕನ್ನಡ ಸುದ್ದಿ  /  ಜೀವನಶೈಲಿ  /  ಪಿಕಪ್‌ ವಾಹನಕ್ಕೆ ಡಿಕ್ಕಿ ಹೊಡೆದು ಬ್ಯಾನೆಟ್ ಮೇಲಿಂದ ಎದ್ದು ಬಂದ! ಭೀಕರ ಅಪಘಾತದಲ್ಲಿ ಪವಾಡಸದೃಶವಾಗಿ ಜೀವ ಉಳಿಸಿಕೊಂಡ ಯುವಕ; ವಿಡಿಯೊ ವೈರಲ್

ಪಿಕಪ್‌ ವಾಹನಕ್ಕೆ ಡಿಕ್ಕಿ ಹೊಡೆದು ಬ್ಯಾನೆಟ್ ಮೇಲಿಂದ ಎದ್ದು ಬಂದ! ಭೀಕರ ಅಪಘಾತದಲ್ಲಿ ಪವಾಡಸದೃಶವಾಗಿ ಜೀವ ಉಳಿಸಿಕೊಂಡ ಯುವಕ; ವಿಡಿಯೊ ವೈರಲ್

ಬೈಕ್‌ ಸವಾರನೊಬ್ಬ ವೇಗವಾಗಿ ಬಂದು ಪಿಕಪ್‌ ವಾಹನಕ್ಕೆ ಡಿಕ್ಕಿ ಹೊಡೆಯುತ್ತಾನೆ. ಆ ಅಪಘಾತದ ಕ್ಷಣ ಹೇಗಿತ್ತು ಎಂದರೆ ಆ ಹುಡುಗನ ಪ್ರಾಣ ಉಳಿದಿರಲು ಸಾಧ್ಯವೇ ಇಲ್ಲ ಎನ್ನುವಂತಿತ್ತು. ಆದರೆ ಆಶ್ವರ್ಯ ಎಂಬಂತೆ ಆ ಹುಡುಗ ಪಿಕಪ್‌ ಬ್ಯಾನೆಟ್‌ನಿಂದ ಕೆಳಗಿಳಿದು ಬರುತ್ತಾನೆ. ಇಂತಹ ಭೀಕರ ಅಪಘಾತದ ನಡುವೆಯೂ ಪವಾಡಸದೃಶವಾಗಿ ಜೀವ ಉಳಿಸಿಕೊಂಡ ಯುವಕ ವೈರಲ್ ವಿಡಿಯೊ ಇಲ್ಲಿದೆ.

ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಯುವಕ, ಅಪಘಾತದ ನಂತರದ ದೃಶ್ಯ
ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಯುವಕ, ಅಪಘಾತದ ನಂತರದ ದೃಶ್ಯ

ಮನುಷ್ಯ ಅದೃಷ್ಟ, ಆಯುಷ್ಯ ಗಟ್ಟಿ ಇದ್ರೆ ಕಲ್ಲು ಬಂಡೆ ಗುದ್ದಿದ್ರು ಏನೂ ಆಗೊಲ್ಲ ಅನ್ನೋ ಗಾದೆ ಮಾತಿದೆ. ಈ ಗಾದೆ ಮಾತು ನಿಜವಾಗಿಸುವ ವಿಡಿಯೊವೊಂದು ಈಗ ವೈರಲ್ ಆಗಿದೆ. ಈ ವಿಡಿಯೊ ನೋಡಿದ್ರೆ ಎಂಥವರ ಎದೆಯು ನಡುಗುತ್ತೆ. ಆದರೆ ವಿಡಿಯೊದ ಕೊನೆ ಕೆಲವು ಕ್ಷಣಗಳನ್ನು ನೋಡಿದ್ರೆ ನಿಮಗೆ ಅಚ್ಚರಿಯಾಗುತ್ತೆ, ಇದು ಹೇಗೆ ಸಾಧ್ಯ ಆಯ್ತು, ಇದಕ್ಕೆ ಆಯುಷ್ಯ ಗಟ್ಟಿ ಇರಬೇಕು ಅಂತ ಹೇಳೋದೇನು ಅಂತ ಅನ್ನಿಸುತ್ತೆ. ಅಷ್ಟಕ್ಕೂ ಅದೆಂಥ ವಿಡಿಯೊ ಅಂತೀರಾ. ಹಾಗಾದರೆ ಮುಂದೆ ಓದಿ.

ಇದು ಸ್ಕೂಟರ್ ಸವಾರನ್ನೊಬ್ಬನ ಭೀಕರ ಅಪಘಾತದ ದೃಶ್ಯ. ಎದೆ ಜಲ್ಲೆನ್ನಿಸುವ ಅಪಘಾತದಲ್ಲಿ ಆತ ಪವಾಡ ಸದೃಶ್ಯವಾಗಿ ಬದುಕಿ ಬಂದಿದ್ದಾನೆ. ಈ ಅಪಘಾತದ ವಿಡಿಯೊವನ್ನು ಸೆರೆ ಹಿಡಿದಿರುವ ಛಾಯಾಗ್ರಾಹಕರೊಬ್ಬರು ಇದನ್ನು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಎಕ್ಸ್ ಬಳಕೆದಾರರಾದ Mikku ಎನ್ನುವವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊ ಕೇವಲ 10 ಸೆಕೆಂಡ್‌ವರೆಗೆ ಇದೆ. ಬೈಕ್ ಆಪಘಾತವಾದ ಯುವಕನ ಅದೃಷ್ಟ ಹಾಗೂ ಅವರ ಶಾಂತ ವರ್ತನೆ ಸುತ್ತಲೂ ನೆರೆದಿದ್ದವರಿಗೆ ಶಾಕ್ ನೀಡಿದೆ.

ವೇಗವಾಗಿ ಸ್ಕೂಟರ್ ಓಡಿಸಿಕೊಂಡು ಬರುತ್ತಿದ್ದಾಗ ಆ ಯುವಕನಿಗೆ ನಿಯಂತ್ರಣ ತಪ್ಪಿದೆ. ನೇರವಾಗಿ ಎದುರುಗಡೆ ಇರುವ ಪಿಕಪ್‌ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸ ಹೇಗಿತ್ತು ಎಂದರೆ ಅವರ ಮೂಳೆ ಕೂಡ ಸಿಗುವುದು ಕಷ್ಟವಿತ್ತು. ಆದರೆ ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಪಿಕಪ್ ವಾಹನದ ಬ್ಯಾನೆಟ್ ಮೇಲಿಂದ ಎದ್ದು ಬರುವುದು ಕಾಣಿಸುತ್ತದೆ.

ಇಂತಹ ಭೀಕರ ಅಪಘಾತವಾದ್ರೂ ಬ್ಯಾನೆಟ್‌ ಮೇಲಿಂದ ನಿಧಾನಕ್ಕೆ ಇಳಿದು ಏನೂ ಆಗಿಲ್ಲ ಎಂಬಂತೆ ತನ್ನ ಬೈಕ ಎತ್ತಲ ಬರುತ್ತಾನೆ ಆಗ ಹುಡುಗ. ಈ ಎಲ್ಲಾ ದೃಶ್ಯಗಳು ಥೇಟ್‌ ಆ್ಯಕ್ಷನ್ ಸಿನಿಮಾದ ದೃಶ್ಯದಂತೆ ಕಾಣುತಿತ್ತು. ಒಂದು ಕ್ಷಣ ಏನಾಯಿತು ಎಂದೇ ತಿಳಿಯದ ಜನರು ಅಚ್ಚರಿಯಿಂದ ನೋಡುತ್ತಲೇ ಇರುವುದನ್ನು ಈ ವಿಡಿಯೊದಲ್ಲಿ ಕಾಣಬಹುದು.

ನವೆಂಬರ್ 28 ರಂದು ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, 3 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಹಲವರು ಕಾಮೆಂಟ್ ಮಾಡುವ ಮೂಲಕ ಯುವಕನ ಅದೃಷ್ಟವನ್ನು ಕೊಂಡಾಡಿದ್ದಾರೆ. ಹಾಗಾದರೆ ಈ ಮಿರ‍್ಯಾಕಲ್ ಆಕ್ಸಿಡೆಂಟ್ ವಿಡಿಯೊ ಏನೆಲ್ಲಾ ಕಾಮೆಂಟ್‌ಗಳು ಬಂದಿವೆ ನೋಡಿ.

‘ಆ ಯುವಕನ ಅದೃಷ್ಟದ ಬಗ್ಗೆ ಈಗಲೂ ನಂಬಲಾಗುತ್ತಿಲ್ಲ‘ ಎಂದು ಎಕ್ಸ್ ಬಳಕೆದಾರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ‘ಬಹುಶಃ ದೇವರೇ ಬಂದು ಈ ವ್ಯಕ್ತಿಯನ್ನು ಕಾಪಾಡಿದ ಎಂದೆನಿಸುತ್ತದೆ. ಅವನು ಹೇಗೆ ಪಾರಾದ ಎಂದು ಊಹಿಸಲೂ ಆಗುತ್ತಿಲ್ಲ‘ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಪಿಕಪ್ ಚಾಲಕ ಅಲರ್ಟ್‌ ಆಗಿದ್ದಕ್ಕೆ ಸರಿ ಹೋಯ್ತು, ಇಲ್ಲ ಅಂದಿದ್ರೆ ಏನಾಗುತ್ತಿತ್ತು ಊಹಿಸಲು ಆಗುತ್ತಿಲ್ಲ‘ ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಇನ್ನು ಹಲವರು ಈ ಘಟನೆಯ ಬಗ್ಗೆ ಆ ಹುಡುಗ ಅದೃಷ್ಟದ ಬಗ್ಗೆ ಕಾಮೆಂಟ್ ಮಾಡಿದ್ದಾರೆ, ಕೆಲವರು ರಸ್ತೆ ಅಸಮರ್ಪಕವಾಗಿರುವುದು, ಡಿವೈಡರ್ ಬಳಿ ರ‍್ಯಾಂಪ್ ಇಟ್ಟಿರುವುದು ಈ ಎಲ್ಲದರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Whats_app_banner