ಕನ್ನಡ ಸುದ್ದಿ  /  ಜೀವನಶೈಲಿ  /  ಮಗನ ಮದುವೆಗೆ ಅಂಬಾನಿ ಮಾಡಿಸಿದ್ರು ಚಿನ್ನ-ಬೆಳ್ಳಿ ಅಲಂಕೃತ ಆಹ್ವಾನಪತ್ರಿಕೆ; ಅನಂತ್‌-ರಾಧಿಕಾ ಮದುವೆ ಇನ್ವಿಟೇಷನ್‌ನಲ್ಲಿ ಏನೇನಿದೆ?

ಮಗನ ಮದುವೆಗೆ ಅಂಬಾನಿ ಮಾಡಿಸಿದ್ರು ಚಿನ್ನ-ಬೆಳ್ಳಿ ಅಲಂಕೃತ ಆಹ್ವಾನಪತ್ರಿಕೆ; ಅನಂತ್‌-ರಾಧಿಕಾ ಮದುವೆ ಇನ್ವಿಟೇಷನ್‌ನಲ್ಲಿ ಏನೇನಿದೆ?

ಅದ್ಧೂರಿ ಪ್ರೀ ವೆಡ್ಡಿಂಗ್‌ ಕಾರ್ಯಕ್ರಮದ ಮೂಲಕ ಸದ್ದು ಮಾಡಿದ್ದ ಅಂಬಾನಿ ಕುಟುಂಬದ ಮದುವೆ ಇದೀಗ ಮದುವೆ ಇನ್ವಿಟೇಷನ್‌ ಮೂಲಕ ಮತ್ತೆ ಸದ್ದು ಮಾಡುತ್ತಿದೆ. ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಜೆಂಟ್‌ ಮದುವೆ ಇನ್ವಿಟೇಷನ್‌ ವೈರಲ್‌ ಆಗಿದ್ದು ಜನ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ಹಾಗಾದ್ರೆ ಅದರಲ್ಲಿ ಅಂಥದ್ದೇನಿದೆ ನೋಡಿ.

ಮಗನ ಮದುವೆಗೆ ಅಂಬಾನಿ ಮಾಡಿಸಿದ್ರು ಚಿನ್ನ-ಬೆಳ್ಳಿ ಅಲಂಕೃತ ಆಹ್ವಾನಪತ್ರಿಕೆ; ಅನಂತ್‌-ರಾಧಿಕಾ ಮದುವೆ ಇನ್ವಿಟೇಷನ್‌ನಲ್ಲಿ ಏನೇನಿದೆ?
ಮಗನ ಮದುವೆಗೆ ಅಂಬಾನಿ ಮಾಡಿಸಿದ್ರು ಚಿನ್ನ-ಬೆಳ್ಳಿ ಅಲಂಕೃತ ಆಹ್ವಾನಪತ್ರಿಕೆ; ಅನಂತ್‌-ರಾಧಿಕಾ ಮದುವೆ ಇನ್ವಿಟೇಷನ್‌ನಲ್ಲಿ ಏನೇನಿದೆ?

ದೇಶದ ಶ್ರೀಮಂತ ಉದ್ಯಮಿಗಳ ಪೈಕಿ ಅಗ್ರಸ್ಥಾನದಲ್ಲಿರುವ ಅಂಬಾನಿ ಕುಟುಂಬವು ಇದೀಗ ಮಗನ ಮದುವೆ ಸಿದ್ಧತೆಯಲ್ಲಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಅದ್ಧೂರಿ ಪ್ರಿವೆಡ್ಡಿಂಗ್‌ ಕಾರ್ಯಕ್ರಮ ನೆರವೇರಿಸಿತ್ತು ಕುಟುಂಬ. ಇದೀಗ ಅಂಬಾನಿ ಮಗನ ಮದುವೆ ಇನ್ವಿಟೇಷನ್‌ ವೈರಲ್‌ ಆಗಿದ್ದು, ಇನ್ವಿಟೇಷನ್‌ ಕಂಡವರೆಲ್ಲಾ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ, ಅಬ್ಬಾ ಇದೇನು ಹೀಗಿದೆ ಎಂದು ಉದ್ಗಾರ ತೆಗೆಯುತ್ತಿದ್ದಾರೆ. ಹಾಗಾದರೆ ಅಂಬಾನಿ ಮಗನ ಮದುವೆ ಇನ್ವಿಟೇಷನ್‌ನಲ್ಲಿ ಅಂತದ್ದೇನಿದೆ ಎಂಬ ಕುತೂಹಲ ನಿಮಗೂ ಮೂಡಿರಬಹುದು.

ಟ್ರೆಂಡಿಂಗ್​ ಸುದ್ದಿ

ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಜೆಂಟ್‌ ಅವರ ವಿವಾಹದ ಆಮಂತ್ರಣ ಪತ್ರಿಕೆಯು ಐಷಾರಾಮಿಯಾಗಿದೆ ಹಾಗೂ ಇದು ಸಖತ್‌ ಬೆಲೆಬಾಳುವ ವೆಡ್ಡಿಂಗ್‌ ಕಾರ್ಡ್‌ ಆಗಿದೆ. ಆಮಂತ್ರಣ ಪತ್ರಿಕೆ ಸ್ವೀಕರಿಸಿದ ವ್ಯಕ್ತಿಯೊಬ್ಬರು ಕಾರ್ಡ್‌ ಪ್ರದರ್ಶಿಸುವ ವಿಡಿಯೊ ಹಂಚಿಕೊಂಡು ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ಹೇಗಿದೆ ಅನಂತ್‌ ಅಂಬಾನಿ ಮದುವೆ ಕಾರ್ಡ್‌?

ವೈರಲ್‌ ಆಗಿರುವ ವಿಡಿಯೊ ಪ್ರಕಾರ ಪೆಟ್ಟಿಗೆಯಂತಿರುವ ಆಮಂತ್ರಣ ಪತ್ರಿಕೆ ತೆರೆದ ಕೂಡಲೇ , ಭಗವಾನ್ ವಿಷ್ಣುವಿನ ಮಂತ್ರಗಳನ್ನು ಪಠಿಸುತ್ತಾ ಆಡಿಯೋ ರೆಕಾರ್ಡಿಂಗ್ ಪ್ಲೇ ಆಗಲು ಪ್ರಾರಂಭಿಸುತ್ತದೆ. ಒಳಗೆ, ವೈಕುಂಠದ ಚಿತ್ರವಿದೆ. ಇದು ಭಗವಾನ್ ಮಹಾವಿಷ್ಣು ಮತ್ತು ಲಕ್ಷ್ಮೀದೇವಿಯ ಸ್ವರ್ಗೀಯ ವಾಸಸ್ಥಾನವಾಗಿದೆ. ಜೊತೆಗೆ ಗೋಲ್ಡನ್‌ ಬಣ್ಣದ ಪುಸ್ತಕವಿದೆ. ಆ ಪುಸ್ತಕದಂತಹ ಪೆಟ್ಟಿಗೆಯ ಒಳಗೆ ಸುಂದರವಾಗಿ ಅಲಂಕರಿಸಿದ ಮದುವೆಯ ಆಮಂತ್ರಣ ಪತ್ರವಿದೆ. ಆಮಂತ್ರಣದ ಮೊದಲ ಪುಟವು ಗಣೇಶನ ಡಿಟ್ಯಾಚೇಬಲ್ ಫ್ರೇಮ್ ಅನ್ನು ಹೊಂದಿದೆ, ಆದರೆ ಎರಡನೇ ಪುಟವು 'ನಿಮಂತ್ರಣ ಪತ್ರ' ಜೊತೆಗೆ ಕೃಷ್ಣನ ಚಿತ್ರವನ್ನು ಪ್ರದರ್ಶಿಸುತ್ತದೆ. ಇದರಲ್ಲಿ ಅಂಬಾನಿ ಕುಟುಂಬದ ಕೈಬರಹದ ಪ್ರತಿಯನ್ನೂ ಗಮನಿಸಬಹುದು, ಪುಟಗಳನ್ನು ತಿರುಗಿಸಿದಾಗ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಚಿತ್ರವಿದೆ. ಅದರ ನಂತರ ಅಂಬೆ ದೇವಿಯ ಡಿಟ್ಯಾಚೇಬಲ್ ಫ್ರೇಮ್ ಕಾಣಬಹುದು. ಈ ಆಮಂತ್ರಣ ಪತ್ರಿಕೆಯ ಪ್ರತಿಪುಟವು ಚಿನ್ನದಂತೆ ಹೊಳೆಯುತ್ತದೆ.

ಮತ್ತೊಂದು ಕಿತ್ತಳೆ ಬಣ್ಣದ ಸಣ್ಣ ಪೆಟ್ಟಿಗೆಯಲ್ಲಿ, ಪ್ರಯಾಣಿಸುವ ಜೊತೆ ತೆಗೆದುಕೊಂಡು ಹೋಗಲು ಸೂಕ್ತವಾದ ಪೋರ್ಟಬಲ್ ದೇವಾಲಯವಿದೆ. ಇದರೊಂದಿಗೆ ಇರುವ ಹೆಚ್ಚುವರಿ ಚೀಲದೊಳಗೆ ಕಾಶ್ಮೀರದಿಂದ ಕರಕುಶಲ ಪಾಶ್ಮಿನಾ ಶಾಲ್ ಕೂಡ ಇರಿಸಲಾಗಿದೆ.

ಕೆಂಪು ಕ್ಲೋಸೆಟ್‌ನಲ್ಲಿ ಇರಿಸಲಾಗಿರುವ ಆಮಂತ್ರಣವು, ಗಣೇಶ ಮತ್ತು ರಾಧಾ ಕೃಷ್ಣನ ಚಿನ್ನದ ವಿಗ್ರಹಗಳಿಂದ ಅಲಂಕರಿಸಲ್ಪಟ್ಟ ಬೆಳ್ಳಿಯ ದೇವಾಲಯವನ್ನು ಒಳಗೊಂಡಿದೆ. ಇದು ಆಮಂತ್ರಣ ಪತ್ರ, ಸಿಹಿತಿಂಡಿಗಳು ಮತ್ತು ಒಣ ಹಣ್ಣುಗಳನ್ನು ಒಳಗೊಂಡಿರುವ ಬೆಳ್ಳಿಯ ಪೆಟ್ಟಿಗೆಯನ್ನು ಸಹ ಒಳಗೊಂಡಿದೆ. ಆಯ್ದ ವಿವಿಐಪಿಗಳು ಮತ್ತು ವಿಐಪಿಗಳಿಗೆ ಈ ವಿಶೇಷ ಆಹ್ವಾನಗಳನ್ನು ಕಳುಹಿಸಲಾಗಿದೆ.

ಭಿನ್ನ ಆಹ್ವಾನ್‌ ಪತ್ರಿಕೆ

ಅಮಿತಾಭ್ ಬಚ್ಚನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್, ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರಂತಹ ಪ್ರಸಿದ್ಧ ಸೆಲೆಬ್ರಿಟಿಗಳು ಆಹ್ವಾನದ ವಿಭಿನ್ನ ಆವೃತ್ತಿಯನ್ನು ಸ್ವೀಕರಿಸಿದ್ದಾರೆ. ಈ ಆವೃತ್ತಿಯು ದೊಡ್ಡ ಬೆಳ್ಳಿಯ ದೇವಾಲಯಕ್ಕಿಂತ ಹೆಚ್ಚಾಗಿ ಚಿನ್ನದ ವಿಗ್ರಹಗಳೊಂದಿಗೆ ಬೆಳ್ಳಿಯಿಂದ ಮಾಡಿದ ಪ್ರಯಾಣ ಮಂದಿರವನ್ನು ಒಳಗೊಂಡಿದೆ.

ಈ ಮದುವೆ ಕಾರ್ಡ್‌ಗೆ ನಿಖರವಾದ ಮೊತ್ತ ಅಂದಾಜಿಸಿಲ್ಲ. ಆದರೂ ಒಂದು ಕಾರ್ಡ್‌ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದು ಎದ್ದು ಕಾಣುತ್ತದೆ.

ಜುಲೈ 12 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್‌-ರಾಧಿಕಾ ಮದುವೆಯಾಗಲಿದ್ದಾರೆ. ಜುಲೈ 13 ರಂದು 'ಶುಭ್ ಆಶೀರ್ವಾದ್' ಮತ್ತು 'ಮಂಗಲ್ ಉತ್ಸವ' ಹಾಗೂ ಜುಲೈ 14 ರಂದು ಮದುವೆಯ ಆರತಕ್ಷತೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ವಿಭಾಗ