Brain Teaser: ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ನಲ್ಲಿ 'ಎ'ಗೂ 'ಡಿ'ಗೂ ಇರುವ ಸಂಬಂಧವೇನು ಹೇಳಿ? ಬುದ್ಧಿ ಉಪಯೋಗಿಸಿ ಉತ್ತರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ನಲ್ಲಿ 'ಎ'ಗೂ 'ಡಿ'ಗೂ ಇರುವ ಸಂಬಂಧವೇನು ಹೇಳಿ? ಬುದ್ಧಿ ಉಪಯೋಗಿಸಿ ಉತ್ತರಿಸಿ

Brain Teaser: ಮೆದುಳಿಗೆ ಹುಳ ಬಿಡುವ ಈ ಬ್ರೈನ್ ಟೀಸರ್‌ನಲ್ಲಿ 'ಎ'ಗೂ 'ಡಿ'ಗೂ ಇರುವ ಸಂಬಂಧವೇನು ಹೇಳಿ? ಬುದ್ಧಿ ಉಪಯೋಗಿಸಿ ಉತ್ತರಿಸಿ

ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ಬ್ರೈನ್ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆಯಂತಿರುವ ಈ ಬ್ರೈನ್ ಟೀಸರ್ ಸಂಬಂಧಗಳ ರಹಸ್ಯವನ್ನು ಬಿಚ್ಚಿಡುವಂಥದ್ದು. ಎ ಹಾಗೂ ಡಿ ನಡುವೆ ಇರುವ ಸಂಬಂಧ ಏನು ಎಂಬುದನ್ನು ನೀವು ಹೇಳಬೇಕು.

ಬ್ರೈನ್ ಟೀಸರ್
ಬ್ರೈನ್ ಟೀಸರ್

ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಇದರಲ್ಲಿ ಒಂದು ಪ್ರಶ್ನೆ ಇದೆ. ಈ ಪ್ರಶ್ನೆಯನ್ನು ನೋಡಿದಾಗ ಸ್ಪರ್ಧಾತ್ಮಕ ಪರೀಕ್ಷೆಗಳು ನೆನಪಾಗುವುದು ಸುಳ್ಳಲ್ಲ. ಯಾಕೆಂದರೆ ಸಾಮಾನ್ಯವಾಗಿ ಇಂತಹ ಪ್ರಶ್ನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುತ್ತದೆ. ಈ ಪ್ರಶ್ನೆ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ.

ಸಂಬಂಧಗಳ ರಹಸ್ಯ ಬಿಚ್ಚಿಡುವ ಈ ಬ್ರೈನ್ ಟೀಸರ್‌ನಲ್ಲಿ ಎ ಹಾಗೂ ಡಿ ನಡುವಿನ ಸಂಬಂಧ ಏನು ಎಂಬುದನ್ನು ನೀವು ಕಂಡುಹಿಡಿಯಬೇಕು. ಈ ಪ್ರಶ್ನೆ ಮೇಲ್ನೋಟಕ್ಕೆ ನಿಮಗೆ ಸುಲಭ ಎನ್ನಿಸಬಹುದು. ಆದರೆ ಪೂರ್ಣ ಪ್ರಶ್ನೆ ಓದಿದಾಗ ತಲೆ ಕೆಡೋದು ಖಂಡಿತ. ಹಾಗಾದರೆ ಪೂರ್ಣ ಪ್ರಶ್ನೆಯಲ್ಲಿ ಅಂಥದ್ದೇನಿದೆ ಅಂತೀರಾ, ಇಲ್ಲಿದೆ ನೋಡಿ ಉತ್ತರ.

@Abhisheksisodialearning ಎನ್ನುವ ಫೇಸ್‌ಬುಕ್ ಪುಟ ನಿರ್ವಹಿಸುತ್ತಿರುವ ವ್ಯಕ್ತಿ ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ಬ್ರೈನ್ ಟೀಸರ್ ಪ್ರಶ್ನೆ ಹೀಗಿದೆ: ಎ ಯು ಬಿಯ ಸಹೋದರಿ, ಸಿಯು ಬಿ ಯ ಅಮ್ಮ, ಡಿ ಯು ಸಿಯ ಅಪ್ಪ, ಆದರೆ ಎ ಗೂ, ಡಿಗೂ ಇರುವ ಸಂಬಂಧವೇನು?. ಇದಕ್ಕೆ ನೀವು ಯೋಚಿಸಿ ಉತ್ತರ ಹೇಳಿ.

ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವುದು ಖಂಡಿತ ಸುಲಭವಲ್ಲ. ಇದಕ್ಕಾಗಿ ನೀವು ಸಾಕಷ್ಟು ಯೋಚನೆ ಮಾಡಬೇಕಾಗುತ್ತದೆ. ಇದರಿಂದ ನಿಮ್ಮಲ್ಲಿ ಯೋಚನಾಶಕ್ತಿ ವೃದ್ಧಿಯಾಗುತ್ತದೆ, ನಿಮ್ಮ ಮೆದುಳು ಚುರುಕಾಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಈ ಎಲ್ಲದರ ಜೊತೆಗೆ ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಒಂದು ರೀತಿಯ ಮೋಜು ನೀಡುತ್ತದೆ. ಹಾಗಾದರೆ ಇನ್ನೇಕೆ ತಡ, ಎ ಗೂ ಡಿಗೂ ಇರುವ ಸಂಬಂಧವೇನು ಹೇಳಿ. ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾದರೆ ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರಿಗೂ ಈ ಬ್ರೈನ್ ಟೀಸರ್ ಚಿತ್ರವನ್ನು ಶೇರ್ ಮಾಡಿ ಅವರ ಉತ್ತರ ಏನು, ಅವರೆಷ್ಟು ಬುದ್ಧಿವಂತರು ಎಂಬುದನ್ನ ತಿಳಿದುಕೊಳ್ಳಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: 888ರ ಸಾಲಿನಲ್ಲಿ ಒಂದೇ ಒಂದು ಕಡೆ 808 ಇದೆ, ಅದು ಎಲ್ಲಿದೆ ಎಂದು 10 ಸೆಕೆಂಡ್‌ನಲ್ಲಿ ಹುಡುಕಬೇಕು, ನಿಮಗಿದು ಚಾಲೆಂಜ್

ಮೇಲಿಂದ ಕೆಳಗೆ ಉದ್ದದಿಂದ ಅಡ್ಡಕ್ಕೆ 888 ಎಂದು ಬರೆಯಲಾಗಿರುವ ಈ ಚಿತ್ರದಲ್ಲಿ ಒಂದೇ ಒಂದು ಕಡೆ 808 ಸಂಖ್ಯೆ ಇದೆ. ಅದು ಎಲ್ಲಿದೆ ಎಂಬದನ್ನು ನೀವು 10 ಸೆಕೆಂಡ್ ಒಳಗೆ ಕಂಡುಹಿಡಿಯುವುದು ನಿಮಗಿರುವ ಸವಾಲು. ನಿಮ್ಮ ಕಣ್ಣು ನಿಜಕ್ಕೂ ಚುರುಕಾಗಿದೆ ಅಂದ್ರೆ 808 ಎಲ್ಲಿದೆ ಹೇಳಿ.

Brain Teaser: ನಿಮ್ಮ ಕಣ್ಣು ಎಷ್ಟು ಚುರುಕಾಗಿದೆ ಪರೀಕ್ಷೆ ಮಾಡ್ಬೇಕಾ, ಹಾಗಾದ್ರೆ ಈ ಚಿತ್ರದಲ್ಲಿ ಕಿರೀಟ ಎಲ್ಲಿದೆ ಹುಡುಕಿ, ನಿಮಗಿದು ಸವಾಲು

ಇಲ್ಲೊಂದು ಬೆಡ್‌ರೂಮ್ ದೃಶ್ಯದ ಚಿತ್ರವಿದೆ. ಇದರಲ್ಲಿ ಬೆಡ್, ಬೆಡ್‌ಶೀಟ್‌ ಜೊತೆಗೆ ಒಂದಿಷ್ಟು ಇತರ ವಸ್ತುಗಳೂ ಇವೆ. ಈ ಎಲ್ಲಾ ವಸ್ತುಗಳ ನಡುವೆ ಕಿರೀಟವೊಂದು ಅಡಗಿದೆ. ಆ ಕಿರೀಟ ಎಲ್ಲಿದೆ ಎಂದು ಹುಡುಕುವುದು ನಿಮಗಿರುವ ಸವಾಲು. ನಿಮಗಿರುವುದು ಕೇವಲ 10 ಸೆಕೆಂಡ್ ಸಮಯ. ನಿಮ್ಮಿಂದ ಕಿರೀಟ ಹುಡುಕಲು ಸಾಧ್ಯವೇ ನೋಡಿ.

Whats_app_banner