Optical Illusion: ಅರೇ ಇದೇನಿದು, ಚಿತ್ರದಲ್ಲಿನ ಚೌಕ ಅಲುಗಾಡ್ತಾ ಇದ್ಯಾ; ಸರಿಯಾಗಿ ನೋಡಿ; ನಿಮಗೂ ಹಂಗೆ ಅನ್ನಿಸ್ತಾ; ಕಣ್ಣಿಗೊಂದು ಸವಾಲ್
A Challenge To The Eyes: ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಚಿತ್ರವೊಂದು ಈಗ ಜನರನ್ನು ದಿಗ್ಭ್ರಮೆಗೊಳಿಸಿದೆ. ಈ ಆಪ್ಟಿಕಲ್ ಇಮೇಜ್ ನೋಡಿದವರೆಲ್ಲಾ ಶಾಕ್ ಆಗುತ್ತಿದ್ದಾರೆ. ಹಾಗಾದರೆ ಚಿತ್ರದಲ್ಲಿ ಅಂಥದ್ದೇನಿದೆ ನೀವು ನೋಡಿ.
ಆಪ್ಟಿಕಲ್ ಇಲ್ಯೂಷನ್ ಅಥವಾ ಭ್ರಾಮಕ ಚಿತ್ರಗಳು ಕೆಲವೊಮ್ಮೆ ತಲೆ ಕೆಡಿಸುತ್ತವೆ, ಮಾತ್ರವಲ್ಲ ಇವು ಮನರಂಜನೆಯನ್ನೂ ನೀಡುತ್ತವೆ. ಏಕೆಂದರೆ ಇವು ಮೆದುಳಿಗೆ ಆವಿಷ್ಕಾರ ಮತ್ತು ಉತ್ಸಾಹವನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಆ ಕಾರಣಕ್ಕೆ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳಿರುವ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಸದಾ ಜನರನ್ನು ಸೆಳೆಯುತ್ತವೆ. ಇಲ್ಲೊಂದು ಅಪರೂಪ ಆಪ್ಟಿಕಲ್ ಇಲ್ಯೂಷನ್ ಚಿತ್ರವಿದೆ. ಬೂದು ಬಣ್ಣದ ಈ ಚಿತ್ರದಲ್ಲಿನ ಚೌಕಗಳು ಅಲುಗಿದಂತೆ ಭಾಸವಾಗುತ್ತಿವೆ. ಇದು ಅಲುಗಾಡುತ್ತಿದೆಯೇ ಅಥವಾ ನಿಶ್ಚಲವಾಗಿದೆಯೇ ಎಂದು ಪ್ರಶ್ನಿಸುವ ಮೂಲಕ ಪೋಸ್ಟ್ ಹಂಚಿಕೊಂಡಿದೆ ರೆಡ್ಡಿಟ್.
ʼಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಚಲಿಸುತ್ತಿವೆಯೇ? ಸರಿಯಾಗಿ ನೋಡಿ, ನಿಮ್ಮ ಮೆದುಳು ನಿಮಗೆ ಮೋಸ ಮಾಡುತ್ತಿರಬಹುದುʼ ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದೆ. ಈ ಚಿತ್ರವು ಒಂದೇ ಬಣ್ಣವನ್ನು ಹೊಂದಿದ್ದು, ಬ್ಯಾಕ್‌ಗ್ರೌಂಡ್‌ನಲ್ಲಿ ಹಲವು ಸಣ್ಣ ಸಣ್ಣ ಬೂದು ಬಣ್ಣದ ಚೌಕಗಳಿವೆ.
ಈ ಚಿತ್ರವು ನಿಮಗೆ ಗೊಂದಲ ಉಂಟು ಮಾಡಿದ್ಯಾ? ಖಂಡಿತ ನಿಮಗೊಬ್ಬರಿಗೆ ಮಾತ್ರವಲ್ಲ, ಈ ಚಿತ್ರವನ್ನು ನೋಡಿದ ಹಲವರು ಇದೇ ರೀತಿ ಗೊಂದಲಕ್ಕೆ ಒಳಗಾಗಿದ್ದಾರೆ. ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದಾರೆ.
ಕಾಮೆಂಟ್‌ಗಳು ಹೀಗಿವೆ ನೋಡಿ
ʼಇದು ನಿಜಕ್ಕೂ ಹುಚ್ಚು ಹಿಡಿಸಿತುʼ ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಇದು ಜಿಫ್ ಇಮೇಜ್ ಆ, ಪ್ಲೀಸ್ ತಿಳಿಸಿʼ ಎಂದು ಇನ್ನೊಬರು ಕಾಮೆಂಟ್ ಮಾಡಿದ್ದಾರೆ. ʼನಾನು ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದೇನೆ, ಆದರೂ ಗೊಂದಲವಾಗುತ್ತಿದೆʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಇದು ವಿಚಿತ್ರವಾಗಿ, ನನಗೆ ಇಷ್ಟವಾಗಿಲ್ಲʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ʼಮೊದಲ ಬಾರಿ ನೋಡಿದಾಗ ಖುಷಿಯಾಗಿತ್ತು, ಈಗ ಇದು ಕಿರಿಕಿರಿಯುಂಟು ಮಾಡುತ್ತಿದೆʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮೂರು ತಿಂಗಳ ಹಿಂದೆ ಈ ಪೋಸ್ಟ್ ಅನ್ನು ಶೇರ್ ಮಾಡಲಾಗಿತ್ತು. ಇದಕ್ಕೆ 5000ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ನೀವು ನೋಡಿ ಚಿತ್ರ ಅಲುಗ್ತಾ ಇದ್ಯಾ ಹೇಳಿ.
ಇದನ್ನೂ ಓದಿ
Viral News: ನೆರೆಹೊರೆಯವರಿಗೆ ವಿನಂತಿ ಪತ್ರ ಬರೆದು ಕಾರಿನ ಗಾಜಿನ ಮೇಲೆ ಅಂಟಿಸಿದ ಬೆಂಗಳೂರು ವ್ಯಕ್ತಿ; ವೈರಲ್ ಆದ ಪತ್ರದಲ್ಲೇನಿತ್ತು ನೋಡಿ
Social Media Viral: ಬೆಂಗಳೂರಿನ ವ್ಯಕ್ತಿಯೊಬ್ಬರು ಕಾರು ಪಾರ್ಕಿಂಗ್ ವಿಚಾರವಾಗಿ ತಮ್ಮ ನೆರೆಕೆರೆಯವರಿಗೆ ಬರೆದ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಾರ್ಕಿಂಗ್ ವಿಚಾರವಾಗಿ ನೆರೆಹೊರೆಯವರಿಗೆ ವಿನಂತಿ ಪತ್ರ ಬರೆದು ವ್ಯಕ್ತಿ ಅದನ್ನು ತಮ್ಮ ಕಾರಿನ ಗಾಜಿಗೆ ಅಂಟಿಸಿಕೊಂಡಿದ್ದರು. ಹಾಗಾದರೆ ಈ ಪತ್ರದಲ್ಲೇನಿತ್ತು, ನೋಡಿ.
ಐಬಿ ಹಬ್ ಎಂದೇ ಕರೆಸಿಕೊಳ್ಳುವ ಬೆಂಗಳೂರು ಆಗಾಗ ಹಲವು ವಿಚಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುತ್ತದೆ. ಇತ್ತೀಚೆಗೆ ಬೆಂಗಳೂರಿಗೆ ಸಂಬಂಧಿಸಿದ ಟ್ವಿಟರ್ ಪೋಸ್ಟ್‌ವೊಂದು ಸಾಕಷ್ಟು ಸದ್ದು ಮಾಡುತ್ತಿದೆ. ಈ ಪೋಸ್ಟ್ ಒಂದು ರೀತಿ ವಿಚಿತ್ರ ಅನ್ನಿಸಿದರೂ ಆಸಕ್ತಿದಾಯಕವಾಗಿದೆ.
ವಿಭಾಗ