ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ಮೈದಾನದಲ್ಲಿ ಆಟಗಾರರು ಫುಟ್‌ಬಾಲ್‌ ಕಳೆದುಕೊಂಡಿದ್ದಾರೆ; ನಿಮ್ಮ ಸೂಕ್ಷ್ಮವಾಗಿದ್ರೆ 60 ಸೆಕೆಂಡ್‌ನಲ್ಲಿ ಹುಡುಕಿ ಕೊಡಿ

Optical Illusion: ಮೈದಾನದಲ್ಲಿ ಆಟಗಾರರು ಫುಟ್‌ಬಾಲ್‌ ಕಳೆದುಕೊಂಡಿದ್ದಾರೆ; ನಿಮ್ಮ ಸೂಕ್ಷ್ಮವಾಗಿದ್ರೆ 60 ಸೆಕೆಂಡ್‌ನಲ್ಲಿ ಹುಡುಕಿ ಕೊಡಿ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮೈದಾನವೊಂದರಲ್ಲಿ ಒಂದಿಷ್ಟು ಮಂದಿ ಫುಟ್‌ಬಾಲ್‌ ಆಟಗಾರರು, ಕಾರ್ಡ್‌ಗಳು, ಗೋಲ್‌ಗಳು ಇದ್ದಾರೆ. ಆದರೆ ಇವರಿಗೆ ಆಡಲು ಫುಟ್‌ಬಾಲ್‌ಯೇ ಕಾಣುತ್ತಿಲ್ಲ. ಈ ಕಳೆದು ಹೋಗಿರುವ ಫುಟ್‌ಬಾಲ್‌ ಅನ್ನು 60 ಸೆಕೆಂಡ್‌ನಲ್ಲಿ ಹುಡುಕಿ ಕೊಡಬೇಕಾಗಿರುವುದು ನಿಮಗಿರುವ ಸವಾಲು.

ಚಿತ್ರದಲ್ಲಿ ಫುಟ್‌ಬಾಲ್‌ ಎಲ್ಲಿದೆ ಹುಡುಕಿ
ಚಿತ್ರದಲ್ಲಿ ಫುಟ್‌ಬಾಲ್‌ ಎಲ್ಲಿದೆ ಹುಡುಕಿ

ಇಲ್ಲೊಂದು ಆಟದ ಮೈದಾನದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ಎಲ್ಲರ ಗಮನ ಸೆಳೆದಿದೆ. ಮೇಲ್ನೋಟಕ್ಕೆ ಇದರಲ್ಲೇನಿದೆ ಎಂದು ಅನ್ನಿಸಬಹುದು. ಆದರೆ ಚಿತ್ರವನ್ನು ಸರಿಯಾಗಿ ಗಮನಿಸಿದ್ರೆ ನಿಮಗೆ ಫುಟ್‌ಬಾಲ್‌ ಕಳೆದು ಹೋಗಿರುವುದು ಗಮನಕ್ಕೆ ಬರುತ್ತದೆ.

ಟ್ರೆಂಡಿಂಗ್​ ಸುದ್ದಿ

ಫುಟ್‌ಬಾಲ್‌ ಮೈದಾನದಲ್ಲಿ ಒಂದಿಷ್ಟು ಆಟಗಾರರು, ಕಾರ್ಡ್ಸ್‌, ಗೋಲ್ಸ್‌ ಎಲ್ಲವೂ ಕಾಣುತ್ತದೆ. ಆದರೆ ಆಡಲು ಫುಟ್‌ಬಾಲ್‌ಯೇ ಇಲ್ಲ ಎಂದರೆ ಹೇಗೆ ಅಲ್ವಾ? ನಿಮ್ಮದು ನಿಜಕ್ಕೂ ಹದ್ದಿನ ಕಣ್ಣಾಗಿದ್ದರೆ ನೀವು ಚಿತ್ರದಲ್ಲಿರುವ ಫುಟ್‌ಬಾಲ್‌ ಅನ್ನು ಕಂಡುಹಿಡಿಯಬೇಕು. ಆದರೆ ನಿಮಗೆ ಸಮಯ ಇದೆ ಎಂದು ದಿನವಿಡೀ ಕುಳಿತು ಹುಡುಕಿ ನೋಡುವ ಹಾಗಿಲ್ಲ, ಕೇವಲ 60 ಸೆಕೆಂಡ್‌ನಲ್ಲಿ ಫುಟ್‌ಬಾಲ್‌ ಅನ್ನು ಹುಡುಕಬೇಕು. ಹಲವರಿಗೆ ಈ ಆಪ್ಟಿಕಲ್‌ ಇಲ್ಯೂಷನ್‌ಗೆ ಉತ್ತರ ಕಂಡುಹಿಡಿಯುವುದು ಕಷ್ಟವಾಗಿತ್ತು. ಇನ್ನೂ ಕೆಲವರು 50 ಸೆಕೆಂಡ್‌ ಒಳಗೆ ಫುಟ್‌ಬಾಲ್‌ ಕಂಡುಹಿಡಿಯುವ ಮೂಲಕ ಆಟಗಾರರಿಗೆ ಸಹಾಯ ಮಾಡಿದ್ದಾರೆ.

ಈ ಚಿತ್ರವನ್ನು ರಚಿಸಿದವರು ಬಹಳ ಬುದ್ಧಿವಂತಿಕೆಯಿಂದ ಫುಟ್‌ಬಾಲ್‌ ಅನ್ನು ಅಡಗಿಸಿ ಇಟ್ಟಿದ್ದಾರೆ.

ಸರಿ, ಈ ಚಿತ್ರವನ್ನು ಸರಿಯಾಗಿ ಗಮನಿಸಿ, ನಿಮಗೆ ಕಣ್ಣಿಗೆ ಫುಲ್‌ಬಾಲ್‌ ಕಾಣಿಸಬಹುದು. ಒಂದು ವೇಳೆ ಕಾಣಿಸಿಲ್ಲ ಅಂದರೆ ಬೇಸರ ಮಾಡಬೇಡಿ. ನಾವು ನಿಮಗೆ ಫುಟ್‌ಬಾಲ್‌ ಕಂಡುಹಿಡಿಯಲು ಸಹಾಯ ಮಾಡುತ್ತೇವೆ. ಬಲವಾಗಿ ಮೇಲಿಂದ ಕೆಂಪು ಬಟ್ಟೆ ಹಾಕಿದ ಆಟಗಾರನ ಹಿಂದೆ ಫುಟ್‌ಬಾಲ್‌ ಅಡಗಿದೆ.

ಇಲ್ಲಿದೆ ನೋಡಿ ಫುಟ್‌ಬಾಲ್‌
ಇಲ್ಲಿದೆ ನೋಡಿ ಫುಟ್‌ಬಾಲ್‌

ಇದನ್ನೂ ಓದಿ

Optical Illusion: ಬೆಂಕಿ ಜ್ವಾಲೆ, ಪೆಂಗ್ವಿನ್‌ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವ ಪರಿಚಯ ಮಾಡಲಿದೆ ಈ ಚಿತ್ರ

ದೀಪಾವಳಿ ಸಂಭ್ರಮದ ಕಾರಣ ಮನೆಮಂದಿಯೆಲ್ಲಾ ಸೇರುತ್ತೀರಿ. ಈ ಸಂದರ್ಭದಲ್ಲಿ ನೀವು ಮನೆಯವರೆಲ್ಲರ ವ್ಯಕ್ತಿತ್ವ ಪರೀಕ್ಷೆ ಮಾಡಬೇಕು ಎಂದರೆ ಈ ಆಪ್ಟಿಕಲ್‌ ಇಲ್ಯೂಷನ್‌ ನಿಮಗೆ ಸಹಾಯ ಮಾಡಬಲ್ಲದು. ಈ ಚಿತ್ರದಲ್ಲಿ ಮೊದಲು ಕಂಡಿದ್ದೇನು ಎನ್ನುವುದರ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ನೀವು ದಯಾಮಾಯಿಯೇ ಅಥವಾ ಮಹತ್ವಾಕಾಂಕ್ಷೆ ಉಳ್ಳವರೇ ಎಂಬುದನ್ನು ಈ ಚಿತ್ರ ನಿರ್ಧಾರ ಮಾಡಲಿದೆ. ಚಿತ್ರವನ್ನು ಸರಿಯಾಗಿ ಗಮನಿಸಿ. ಇದರಲ್ಲಿ ಪ್ವೆಂಗಿನ್‌ ಹಾಗೂ ಬೆಂಕಿಯ ಜ್ವಾಲೆ ಇದೆ. ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಯಾವುದು ಕಾಣಿಸುತ್ತದೆ ಅದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ.

ಈ ಆಪ್ಟಿಕಲ್‌ ಇಲ್ಯೂಷನ್‌ ಲೇಖನವನ್ನು ಪೂರ್ತಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

Optical Illusion: ಬೆಕ್ಕು, ಇಲಿ ಚಿತ್ರದಲ್ಲಿ ಮೊದಲು ಕಾಣಿಸಿದ್ದೇನು; ಈ ಚಿತ್ರ ನೋಡಿ, ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಇಲ್ಲೊಂದು ಅಪರೂಪದ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಿದೆ. ಈ ಚಿತ್ರದಲ್ಲಿ ಎರಡು ಪ್ರಾಣಿಗಳಿವೆ. ಚಿತ್ರವನ್ನು ಕಂಡಾಕ್ಷಣ ನಿಮಗೆ ಯಾವ ಪ್ರಾಣಿ ಕಾಣಿಸಿತು, ಇದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ಹಾಗಾದರೆ ಸರಿ ನಿಮ್ಮ ಸಮಯ ಈಗ ಶುರು, ಚಿತ್ರ ನೋಡಿ, ಮೊದಲು ಕಾಣಿಸಿದ್ದು ಬೆಕ್ಕೋ, ಇಲಿಯೋ?

ವಿಭಾಗ