Optical Illusion: ಇಲ್ಲಿರುವ ನಾಲ್ಕು ಬಾಕ್ಸ್‌ಗಳಲ್ಲಿ ಒಂದು ಮಾತ್ರ ಭಿನ್ನವಾಗಿದೆ, ಅದು ಯಾವುದು? ನಿಮ್ಮ ಕಣ್ಣು ಶಾರ್ಪ್ ಇದ್ರೆ ಉತ್ತರ ಹೇಳಿ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಆಪ್ಟಿಕಲ್ ಇಲ್ಯೂಷನ್‌ಗಳು, ಬ್ರೈನ್ ಟೀಸರ್‌ಗಳು, ಮ್ಯಾಥ್ಸ್ ಪಜಲ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ. ಇಲ್ಲೊಂದು ಅಂಥದ್ದೇ ಚಿತ್ರವಿದೆ. ಚಿತ್ರದಲ್ಲಿ 4 ಬಾಕ್ಸ್‌ಗಳು ಒಂದೇ ರೀತಿಯಿದ್ದರೂ ಒಂದು ಭಿನ್ನವಾಗಿದೆ. ಅದು ಯಾವುದು ತಿಳಿಸಿ.
ಕೆಲವೊಮ್ಮೆ ನಮ್ಮ ಕಣ್ಣು ಸಖತ್ ಶಾರ್ಪ್ ಎಂದು ನಾವು ಅಂದುಕೊಂಡರು ನಾವು ಅಂದುಕೊಂಡಂತೆ ಕಣ್ಣುಗಳು ಶಾರ್ಪ್ ಇರುವುದಿಲ್ಲ. ಕೆಲವೊಮ್ಮೆ ಕಣ್ಣಿಗೆ ಕಾಣಿಸುವ ವಸ್ತುಗಳು ನಮಗೆ ಮೋಸ ಮಾಡುತ್ತವೆ. ನಮ್ಮ ಕಣ್ಣು ಶಾರ್ಪ್ ಎಷ್ಟಿದೆ ಎಂದು ತಿಳಿಯಬೇಕು ಅಂದ್ರೆ ನಾವು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳಿಗೆ ಉತ್ತರ ಕಂಡುಹಿಡಿಯಬೇಕು. ಆ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಕಣ್ಣಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ.
ಇತ್ತೀಚಿಗೆ ಎಕ್ಸ್‌ನಲ್ಲಿ ಇಂಥದ್ದೇ ಒಂದು ಆಪ್ಟಿಕಲ್ ಇಲ್ಯೂಷನ್ ಚಿತ್ರ ವೈರಲ್ ಆಗುತ್ತಿದೆ. ಇದರಲ್ಲಿ 4 ಬಾಕ್ಸ್‌ಗಳಿವೆ. ಪ್ರತಿ ಬಾಕ್ಸ್‌ನಲ್ಲಿ ವಿವಿಧ ಬಣ್ಣದ ಚಿಕ್ಕ ಚಿಕ್ಕ ಚುಕ್ಕಿಗಳಿವೆ. ನೋಡಲು ಎಲ್ಲವೂ ಒಂದೇ ರೀತಿ ಕಂಡರೂ ಇವುಗಳಲ್ಲಿ ಒಂದು ಮಾತ್ರ ಭಿನ್ನವಾಗಿದೆ. ಆ ಭಿನ್ನವಾಗಿರುವ ಬಾಕ್ಸ್ ಯಾವುದು ಎಂಬದನ್ನು ನೀವು ಕಂಡುಹಿಡಿಯಬೇಕು, ಇದು ನಿಮಗಿರುವ ಚಾಲೆಂಜ್.
ಮೇ 2 ರಂದು ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ನಿಮ್ಮ ಕಣ್ಣುಗಳಿಗೆ ಪರೀಕ್ಷೆ, ಯಾವುದು ಭಿನ್ನವಾಗಿದೆ ಪರೀಕ್ಷಿಸಿ ಎಂದು ಬರೆದುಕೊಂಡು ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಮೇ 2 ರಿಂದ ಇಲ್ಲಿಯವರೆಗೆ 80 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವರು ಲೈಕ್ ಕಾಮೆಂಟ್ ಮಾಡಿದ್ದಾರೆ.
ʼಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿದೆʼ ಎಂದು ವ್ಯಕ್ತಿಯೊಬ್ಬರು ತಮಾಷೆಯಾಗಿ ಉತ್ತರಿಸಿದ್ದಾರೆ. ಹಲವರು ಈ ಆಪ್ಟಿಕಲ್ ಇಲ್ಯೂಷನ್‌ಗೆ ಉತ್ತರ ಡಿ ಎಂದು ಕಾಮೆಂಟ್ ಮಾಡಿದ್ದಾರೆ. ಸರಿ ನಿಮ್ಮ ಕಣ್ಣು ಶಾರ್ಪ್ ಇದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರವೇನು ತಿಳಿಸಿ.
ಈ ಆಪ್ಟಿಕಲ್ ಇಲ್ಯೂಷನ್‌ಗಳನ್ನು ಓದಿ
Optical Illusion: ರಾಶಿ ನಗುವಿನ ಇಮೋಜಿಗಳ ಮಧ್ಯೆ ಒಂದು ಇಮೋಜಿ ಮಾತ್ರ ಆಳ್ತಿದೆ, ಯಾವುದು? 4 ಸೆಕೆಂಡ್‌ನಲ್ಲಿ ಹುಡುಕಿ
ಇಲ್ಲಿರುವ ಚಿತ್ರದಲ್ಲಿ ಒಂದಿಷ್ಟು ನಗುವಿನ ಇಮೋಜಿಗಳಿವೆ. ಇವುಗಳ ಮಧ್ಯೆ ಒಂದು ಇಮೋಜಿ ಮಾತ್ರ ಆಳ್ತಿದೆ. ಆ ಇಮೋಜಿ ಯಾವುದು, 4 ಸೆಕೆಂಡ್‌ನಲ್ಲಿ ಹುಡುಕಿದ್ರೆ ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್. ಮತ್ಯಾಕೆ ತಡ, ಟ್ರೈ ಮಾಡಿ.
Optical Illusion: ಈ ಚಿತ್ರವನ್ನು ನೋಡಿದಾಕ್ಷಣ ನಿಮಗೆ ಕಂಡಿದ್ದೇನು? ನಿಮ್ಮ ಪ್ರೇಮಜೀವನವನ್ನು ನಿರ್ಧರಿಸುತ್ತೆ ಈ ಚಿತ್ರ
ಈ ಚಿತ್ರವನ್ನು ನೋಡಿದ ಕೂಡಲೇ ನಿಮಗೆ ಮೊದಲು ಏನು ಕಾಣಿಸಿತು..? ಮೊದಲು ನಿಮ್ಮ ಕಣ್ಣ ಮುಂದೆ ಯಾವ ಚಿತ್ರ ಕಾಣಿಸಿತೋ ಆ ಚಿತ್ರವು ನಿಮ್ಮ ಪ್ರೇಮ ಜೀವನ ಹೇಗಿದೆ ಎಂಬುದನ್ನು ತಿಳಿಸುತ್ತದೆ. ಈಗ ಹೇಳಿ ನಿಮ್ಮ ಕಣ್ಣಿಗೆ ಕಂಡ ಆ ಮೊದಲ ಚಿತ್ರ ಯಾವುದು?