ಕನ್ನಡ ಸುದ್ದಿ  /  ಜೀವನಶೈಲಿ  /  Optical Illusion: ಚಿತ್ರದಲ್ಲಿ ಒಟ್ಟು ಎಷ್ಟು 8 ಇದೆ, 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ; ನಿಮ್ಮ ಕಣ್ಣಿಗಿಲ್ಲಿದೆ ಸವಾಲು

Optical Illusion: ಚಿತ್ರದಲ್ಲಿ ಒಟ್ಟು ಎಷ್ಟು 8 ಇದೆ, 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ; ನಿಮ್ಮ ಕಣ್ಣಿಗಿಲ್ಲಿದೆ ಸವಾಲು

ಆಪ್ಟಿಕಲ್‌ ಇಲ್ಯೂಷನ್‌ಗಳು ನಮ್ಮ ಕಣ್ಣಿಗೆ ಸವಾಲು ಹಾಕುವುದು ಮಾತ್ರವಲ್ಲ, ಸಮಸ್ಯೆ ಪರಿಹರಿಸುವ ಮಾರ್ಗಗಳನ್ನು ಕಲಿಸುತ್ತವೆ. ಮೆದುಳು ಹಾಗೂ ಕಣ್ಣಿಗೆ ಸಾಕಷ್ಟು ಕೆಲಸ ಕೊಡುವ ಮೂಲಕ ಚುರುಕು ಮಾಡುತ್ತವೆ. ಇಲ್ಲೊಂದು ಅಂಥದ್ದೇ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಿದೆ. ಇದರಲ್ಲಿ ಎಷ್ಟು 8 ಸಂಖ್ಯೆ ಇದೆ ಎಂಬದನ್ನು ನೀವು ಕಂಡುಹಿಡಿಯಬೇಕು.

ಚಿತ್ರದಲ್ಲಿ ಒಟ್ಟು ಎಷ್ಟು 8 ಇದೆ, 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಚಿತ್ರದಲ್ಲಿ ಒಟ್ಟು ಎಷ್ಟು 8 ಇದೆ, 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಕಣ್ಣು ಹಾಗೂ ಮೆದುಳಿಗೆ ಸವಾಲು ಹಾಕುವುದು ಸುಳ್ಳಲ್ಲ. ಇವು ನಾವು ಕಂಡಿದ್ದನ್ನೇ ನಮಗೆ ಮೋಸ ಮಾಡುವಂತೆ ಮಾಡುವ ಚಿತ್ರಗಳಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಹರಿದಾಡುತ್ತವೆ. ಇದಕ್ಕೆ ಉತ್ತರ ಹುಡುಕುವ ಮೂಲಕ ನಮ್ಮಲ್ಲಿ ಸಮಸ್ಯೆ ಹರಿಸುವ ಗುಣವು ವೃದ್ಧಿಯಾಗುತ್ತದೆ. ಆಪ್ಟಿಕಲ್‌ ಇಲ್ಯೂಷನ್‌ಗಳನ್ನು ಡಿಕೋಡ್‌ ಮಾಡುತ್ತಾ ಮಾಡುತ್ತಾ ನಮ್ಮಲ್ಲಿ ಅರಿವಿನ ಸಾಮರ್ಥ್ಯ ವೃದ್ಧಿಯಾಗುತ್ತದೆ, ಜೊತೆಗೆ ಸೃಜನಶೀಲ ಚಿಂತನೆ ಬೆಳೆಯುತ್ತದೆ.

ಟ್ರೆಂಡಿಂಗ್​ ಸುದ್ದಿ

ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ ಹಾಗೂ ಮ್ಯಾಥ್ಸ್‌ ಪಜಲ್‌ಗಳಿಗೆ ನಾವು ಉತ್ತರ ಹುಡುಕುವಾಗ ನಮ್ಮಲ್ಲಿ ಯೋಚನಾ ಶಕ್ತಿಯು ವೃದ್ಧಿಯಾಗುತ್ತದೆ. ಇದು ನಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಇಲ್ಲೊಂದು ಅಂಥದ್ದೇ ಚಿತ್ರವಿದೆ. ಇದರಲ್ಲಿ ಒಂದಿಷ್ಟು ಅಂಕೆಗಳಿವೆ. 8 ಅಂಕೆಯ ದಪ್ಪನಾಗಿ ಬರೆಯಲಾಗಿದೆ. ಚಿತ್ರದಲ್ಲಿ ಒಟ್ಟು ಎಷ್ಟು 8 ಅಂಕೆಯಿದೆ ಎಂಬುದನ್ನು ಕಂಡುಹಿಡಿಯುವುದು ನಿಮಗಿರುವ ಸವಾಲು.

ಮೇಲ್ನೋಟಕ್ಕೆ ಮೇಲೆ ಕೆಳಗೆ, ಎಡ ಬಲಕ್ಕೆ ಒಟ್ಟು ನಾಲ್ಕು 8 ಅಂಕೆಯನ್ನು ಜೋಡಿಸಿ ಇಟ್ಟಂತೆ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಖಂಡಿತ ಇಲ್ಲಿರುವುದು ಬರೀ 4 ಮಾತ್ರ 8 ಅಲ್ಲ ಎಂಬುದು ನಿಮಗೆ ಅರಿವಾಗುತ್ತದೆ. ಹಾಗಾದರೆ ಚಿತ್ರದಲ್ಲಿ ಒಟ್ಟು ಎಷ್ಟು 8 ಇರಬಹುದು, ನಿಮ್ಮ ಕಣ್ಣು, ಮೆದುಳು ಎರಡನ್ನೂ ಉಪಯೋಗಿಸಿ ಇಲ್ಲಿರುವ ಆಪ್ಟಿಕಲ್‌ ಇಲ್ಯೂಷನ್‌ಗೆ ಉತ್ತರ ಹೇಳಿ, ನೀವೆಷ್ಟು ಜಾಣರು ಎಂಬುದನ್ನು ತೋರಿಸಿ.

ಉತ್ತರಕ್ಕೆ ಇಲ್ಲಿದೆ ಕ್ಲೂ 

ಮೇಲಿನಿಂದ ಪ್ರಾರಂಭಿಸಿ; ಒಂದು, ಎರಡು, ಮೂರು ಮತ್ತು ನಾಲ್ಕು '8'ಗಳನ್ನು ಲಂಬವಾಗಿ ಎಣಿಸಿ. ಮಧ್ಯದಲ್ಲಿ ನೋಡಿ, ಅಲ್ಲಿ ಕೆಳಭಾಗದಲ್ಲಿ ಮತ್ತು ಮೇಲಿನಿಂದ '8' ರಚನೆಯಾಗುತ್ತದೆ. ಈಗ, ನಿಮ್ಮ ತಲೆಯನ್ನು ಸ್ವಲ್ಪ ಬಲಕ್ಕೆ ಓರೆಯಾಗಿಸಿ, ಮತ್ತು ನೀವು ನಾಲ್ಕು '8'ಗಳನ್ನು ಪರಸ್ಪರ ಅಡ್ಡಲಾಗಿ ಜೋಡಿಸಿರುವುದನ್ನು ಗುರುತಿಸಲು ಸಾಧ್ಯವಾಗುತ್ತದೆ.

ಅಭಿನಂದನೆಗಳು! ಚಿತ್ರದಲ್ಲಿ ಅಡಗಿರುವ ಎಲ್ಲಾ ಒಂಬತ್ತು '8'ಗಳನ್ನು ನೀವು ಯಶಸ್ವಿಯಾಗಿ ಎಣಿಸಿರುವಿರಿ. ಈ ಒಗಟು ನಿಮಗೆ ಸವಾಲಿನದ್ದಾಗಿದ್ದರೆ, ಚಿಂತಿಸಬೇಡಿ. ಅಭ್ಯಾಸವನ್ನು ಮುಂದುವರಿಸಿ ಮತ್ತು ನೀವು ಶೀಘ್ರದಲ್ಲೇ ಇನ್ನೊಂದನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ.

ಈ ಆಪ್ಟಿಕಲ್‌ ಇಲ್ಯೂಷನ್‌ ಅನ್ನೂ ಓದಿ

Optical Illusion: ಇಲ್ಲಿರುವ ನಾಲ್ಕು ಬಾಕ್ಸ್‌ಗಳಲ್ಲಿ ಒಂದು ಮಾತ್ರ ಭಿನ್ನವಾಗಿದೆ, ಅದು ಯಾವುದು? ನಿಮ್ಮ ಕಣ್ಣು ಶಾರ್ಪ್‌ ಇದ್ರೆ ಉತ್ತರ ಹೇಳಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವ ಆಪ್ಟಿಕಲ್‌ ಇಲ್ಯೂಷನ್‌ಗಳು, ಬ್ರೈನ್‌ ಟೀಸರ್‌ಗಳು, ಮ್ಯಾಥ್ಸ್‌ ಪಜಲ್‌ಗಳು ನಮ್ಮ ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ. ಇಲ್ಲೊಂದು ಅಂಥದ್ದೇ ಚಿತ್ರವಿದೆ. ಚಿತ್ರದಲ್ಲಿ 4 ಬಾಕ್ಸ್‌ಗಳು ಒಂದೇ ರೀತಿಯಿದ್ದರೂ ಒಂದು ಭಿನ್ನವಾಗಿದೆ. ಅದು ಯಾವುದು ತಿಳಿಸಿ.

ವಿಭಾಗ