Optical Illusion: ರಾಶಿ ನಗುವಿನ ಇಮೋಜಿಗಳ ಮಧ್ಯೆ ಒಂದು ಇಮೋಜಿ ಮಾತ್ರ ಆಳ್ತಿದೆ, ಯಾವುದದು? 4 ಸೆಕೆಂಡ್‌ನಲ್ಲಿ ಹುಡುಕಿ
ಇಲ್ಲಿರುವ ಚಿತ್ರದಲ್ಲಿ ಒಂದಿಷ್ಟು ನಗುವಿನ ಇಮೋಜಿಗಳಿವೆ. ಇವುಗಳ ಮಧ್ಯೆ ಒಂದು ಇಮೋಜಿ ಮಾತ್ರ ಆಳ್ತಿದೆ. ಆ ಇಮೋಜಿ ಯಾವುದು, 4 ಸೆಕೆಂಡ್‌ನಲ್ಲಿ ಹುಡುಕಿದ್ರೆ ನಿಮ್ಮ ಕಣ್ಣು ನಿಜಕ್ಕೂ ಶಾರ್ಪ್. ಮತ್ಯಾಕೆ ತಡ, ಟ್ರೈ ಮಾಡಿ.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಹಾಗೂ ಬ್ರೈನ್ ಟೀಸರ್‌ಗಳು ಹರಿದಾಡುತ್ತಿವೆ. ಇವುಗಳು ನಮ್ಮ ಮೆದುಳಿನ ಕೌಶಲವನ್ನು ಪರೀಕ್ಷಿಸುತ್ತವೆ. ಅಲ್ಲದೆ ಮನಸ್ಸಿಗೆ ಮೋಜು ಸಿಗುವಂತೆ ಮಾಡುತ್ತವೆ. ಇದನ್ನು ಬಿಡಿಸುವುದರಿಂದ ನಮ್ಮ ಕಣ್ಣು ಹಾಗೂ ಮೆದುಳು ಕೂಡ ಶಾರ್ಪ್ ಆಗುತ್ತದೆ. ನಾವು ಒಂದಿಷ್ಟು ಹೊತ್ತು ನಮ್ಮ ಮೆದುಳು ಹಾಗೂ ಕಣ್ಣನ್ನು ಅದರ ಮೇಲೆ ಹರಿಸುವ ಕಾರಣ ಕೆಲ ಹೊತ್ತು ಬೇರೆ ಯೋಚನೆಯೂ ಮನಸ್ಸಿನಲ್ಲಿ ಸುಳಿಯುವುದಿಲ್ಲ.
ಇಂದಿನ ಆಪ್ಟಿಕಲ್ ಇಲ್ಯೂಷನ್‌ನಲ್ಲಿ ಏನಿದೆ?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ನಿಮ್ಮ ಕಣ್ಣಿಗೆ ಸವಾಲು ಹಾಕುವಂತಿದೆ. ಇದು ಇಮೋಜಿಗಳ ಕಾಲ, ಇಲ್ಲಿ ಮಾತಿಗಿಂತ ಇಮೋಜಿಗಳೇ ಹೆಚ್ಚು ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ನೀವೂ ಇಮೋಜಿ ಲವರ್ ಆದ್ರೆ ಇಲ್ಲಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರಕ್ಕೆ ನೀವು ಉತ್ತರ ಕಂಡು ಹಿಡಿಯಲು ಟ್ರೈ ಮಾಡಬಹುದು. ಇದಕ್ಕೆ ಕಣ್ಣು ಹಾಗೂ ಮೆದುಳು ಎರಡೂ ಚುರುಕಿರಬೇಕು ಎನ್ನುವುದು ಸುಳ್ಳಲ್ಲ.
ಆ ಆಪ್ಟಿಕಲ್ ಚಿತ್ರವನ್ನು ನೋಡಿದಾಗ ನಿಮಗೆ ಎಲ್ಲವೂ ನಗುತ್ತಲೇ ಇವೆ ಅನ್ನಿಸುತ್ತದೆ. ದಿಟ್ಟಿಸಿ ನೋಡಿದ್ರ ಎಲ್ಲಾ ಕಡೆ ನಗುವ ಇಮೋಜಿಗಳೇ ಕಾಣಿಸುತ್ತವೆ. ಆದರೆ ಈ ಆಪ್ಟಿಕಲ್ ಇಲ್ಯೂಷನ್‌ಗಳು ಸದಾ ನಮ್ಮ ಕಣ್ಣು ಹಾಗೂ ಮೆದುಳಿಗೆ ಮೋಸ ಮಾಡುವುದು ಸುಳ್ಳಲ್ಲ. ಚಿತ್ರದಲ್ಲಿ ಖಂಡಿತ ಅಳುತ್ತಿರುವ ಇಮೋಜಿ ಇದೆ. ಆದ್ರೆ 4 ಸೆಕೆಂಡ್‌ನಲ್ಲಿ ಹುಡುಕೋದು ಸ್ವಲ್ಪ ಕಷ್ಟಾನೆ. ಆಪ್ಟಿಕಲ್ ಇಲ್ಯೂಷನ್‌ಗಳನ್ನು ಮನೋವಿಜ್ಞಾನಿಗಳು ಕೂಡ ಬಳಸುತ್ತಾರೆ, ಕಾರಣ ಇವು ನಮ್ಮ ಮೆದುಳಿನ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಆಗಾಗ ಆಪ್ಟಿಕಲ್ ಇಲ್ಯೂಷನ್ ಸಮಸ್ಯೆಗಳನ್ನು ಬಿಡಿಸುವುದರಿಂದ ಮೆದುಳು ಚುರುಕಾಗುತ್ತದೆ. ಇದು ಸಮಸ್ಯೆಗಳನ್ನು ಥಟ್ಟನೆ ಪರಿಹರಿಸಿಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ.
ಈ ಆಪ್ಟಿಕಲ್ ಇಲ್ಯೂಷನ್‌ಗೆ ನೀವು ಉತ್ತರ ಕಂಡುಕೊಳ್ಳುವುದು ಮಾತ್ರವಲ್ಲ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಕಳುಹಿಸಿ ಅವರ ಮೆದುಳಿಗೂ ಹುಳ ಬಿಡುವಂತೆ ಮಾಡಬಹುದು.
ಸರಿ ನಿಮ್ಮ ಸಮಯ ಈಗ ಶುರು… 1…. 2…. 3…4 ಮುಗಿತು ನಾಲ್ಕು ಸೆಕೆಂಡ್ ಅಳುವ ಇಮೋಜಿ ಎಲ್ಲಿದೆ ಸಿಕ್ತಾ? ಸಿಕ್ತು ಅಂದ್ರೆ ನಿಮ್ಮ ಕಣ್ಣು ನಿಜಕ್ಕೂ ಹದ್ದಿನ ಕಣ್ಣು ಅನ್ನುವುದರಲ್ಲಿ ಅನುಮಾನವಿಲ್ಲ. ಒಂದು ವೇಳೆ ಸಿಕ್ಕಿಲ್ಲ ಅಂದ್ರೂ ಬೇಸರ ಮಾಡಿಕೊಳ್ಳಬೇಡಿ. ನಾನು ನಿಮಗೆ ಉತ್ತರ ಹುಡುಕಲು ಸಹಾಯ ಮಾಡುತ್ತೇವೆ.
ಅಳುವ ಇಮೋಜಿ ಎರಡನೇ ರೋನಲ್ಲಿ ಲಾಸ್ಟ್‌ಗಿಂತ ಮೊದಲು ಇದೆ ಗಮನಿಸಿ, ನೀವು ಆ ಇಮೋಜಿಯನ್ನು ಗುರುತಿಸಿಲ್ಲ ಎಂದು ಅದು ಇನ್ನೂ ಜೋರಾಗಿ ಅಳುತ್ತಿದೆ ನೋಡಿ. ಸರಿ ಅದೆಲ್ಲಾ ಬಿಡಿ. ಉತ್ತರ ಸಿಕ್ತು ಅಲ್ವಾ.. ಇನ್ಯಾಕೆ ತಡ ಈಗಲೇ ನಿಮ್ಮ ಸ್ನೇಹಿತರು ಹಾಗೂ ಪರಿಚಯದವರಿಗೆ ಕಳುಹಿಸಲು ಶುರು ಮಾಡಿ.
ಇದನ್ನೂ ಟ್ರೈ ಮಾಡಿ
Optical Illusion: ಚಿತ್ರದಲ್ಲಿರುವ ಕಾಡಿನಲ್ಲಿ 8 ಪ್ರಾಣಿಗಳಿವೆ, 60 ಸೆಕೆಂಡ್‌ನಲ್ಲಿ ಅದನ್ನು ಹುಡುಕೋದು ನಿಮಗಿರುವ ಚಾಲೆಂಜ್
ಇಲ್ಲಿರುವ ಚಿತ್ರವನ್ನು ನೋಡಿದ್ರೆ ನಿಮಗೆ ಒಂದಿಷ್ಟು ಗಿಡಗಳ ರಾಶಿ ಕಾಣಬಹುದು. ಆದರೆ ಖಂಡಿತ ನಿಮ್ಮ ಕಣ್ಣೋಟಕ್ಕೂ ಮೀರಿದ್ದು ಈ ಚಿತ್ರದಲ್ಲಿದೆ. ಅದೇನೆಂದರೆ ಈ ಗಿಡಗಳ ಮಧ್ಯೆ ಪ್ರಾಣಿಗಳು ಅಡಗಿವೆ. ಅವುಗಳನ್ನು 60 ಸೆಕೆಂಡ್‌ನಲ್ಲಿ ಕಂಡುಹಿಡಿಯಬೇಕು. ಇದು ನಿಮಗಿರುವ ಸವಾಲು.